ಡೆಸ್ಕ್‌ಟಾಪ್ ವರ್ಸನ್ ಯೂಟ್ಯೂಬ್‌ ಅನ್ನು ಆಂಡ್ರಾಯ್ಡ್‌ನಲ್ಲಿ ಬಳಸುವುದು ಹೇಗೆ?

Written By:

ಇಂಟರ್ನೆಟ್ ಟ್ರಾಫಿಕ್ ಹೆಚ್ಚು ದಟ್ಟಣೆ ಪಡೆಯುವುದೇ ಹೆಚ್ಚು ಯೂಟ್ಯೂಬ್‌ ಬಳಕೆಯಿಂದ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಟ್ಯಾರಿಫ್‌ ವಾರ್ ಹೆಚ್ಚಾಗಿ ಈಗ ಕೈಗೆಟಕುವ ಬೆಲೆಯಲ್ಲಿ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ದೊರೆಯುತ್ತಿದೆ. ಇನ್ನೂ ಜಿಯೋ ಬಳಕೆದಾರರಂತೂ ಯೂಟ್ಯೂಬ್‌ ಬಳಕೆ ಅನುಭವ ಹೆಚ್ಚಾಗೆ ಪಡೆಯುತ್ತಿದ್ದಾರೆ.

ಅಂದಹಾಗೆ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್‌ ಬಳಸುವವರಿಗೆ ಸಿಂಪಲ್‌ ಟ್ರಿಕ್‌ ಒಂದನ್ನು ಪರಿಚಯಿಸುತ್ತಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯೂಟ್ಯೂಬ್ ಡೆಸ್ಕ್‌ಟಾಪ್‌(ಪಿಸಿ)ಗಳಲ್ಲಿ ಒಂದು ರೀತಿಯಲ್ಲಿ ಓಪನ್‌ ಆದ್ರೆ ಮೊಬೈಲ್‌ನಲ್ಲೇ ಬೇರೆ ರೀತಿಯಲ್ಲಿ ಓಪನ್‌ ಆಗುತ್ತದೆ. ಡೆಸ್ಕ್‌ಟಾಪ್ ಯೂಟ್ಯೂಬ್‌ ವರ್ಸನ್‌ ಎಲ್ಲರಿಗೂ ಇಷ್ಟವಾಗುವ ವಿಶಾಲ ಶೈಲಿಯದ್ದು. ಹಾಗೆ ಕಫರ್ಟ್‌ ಸಹ. ಆದ್ದರಿಂದ ಡೆಸ್ಕ್‌ಟಾಪ್ ಯೂಟ್ಯೂಬ್‌ ವರ್ಸನ್‌ ಸ್ಮಾರ್ಟ್‌ಫೋನ್‌ನಲ್ಲಿ ಓಪನ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮುಂದೆ ಓದಿರಿ.

ಡೆಸ್ಕ್‌ಟಾಪ್‌ ವೆಬ್‌ಸೈಟ್‌ ಅನ್ನು ಮೊಬೈಲ್‌ನಲ್ಲಿ ಓಪನ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಓಪನ್ ಮಾಡಿ ಸೆಟ್ಟಿಂಗ್ಸ್‌ಗೆ ಹೋಗಿ. ನಂತರ 'App' ಆಪ್ಶನ್‌ ಆಯ್ಕೆ ಮಾಡಿ.

ಹಂತ 2

ಹಂತ 2

ಆಪ್ ಆಪ್ಶನ್‌ ಆಯ್ಕೆ ಮಾಡಿದ ನಂತರ ಓಪನ್ ಆಗುವ ಪೇಜ್‌ನಲ್ಲಿ ಯೂಟ್ಯೂಬ್ ಆಪ್ ಆಯ್ಕೆ ಮಾಡಿ, ಆಪ್‌ನ ಕ್ಯಾಚಿ ಕ್ಲಿಯರ್ ಮಾಡಿ. ಆಪ್‌ ಡೀಪಾಲ್ಟ್ ಆನ್‌ ಆಗಿರದಿರಲಿ. ಗೂಗಲ್ ಕ್ರೋಮ್ ಆಪ್‌ ಅನ್ನು ಹೀಗೆಯೇ ಮಾಡಿ. ನಂತರ ಯೂಟ್ಯೂಬ್ ಓಪನ್ ಮಾಡಿ.

ಹಂತ 3

ಹಂತ 3

ನಿಮ್ಮ ಬ್ರೌಸರ್‌ನಲ್ಲಿ ಯೂಟ್ಯೂಬ್ ವೆಬ್‌ಸೈಟ್ ವಿಳಾಸ ಟೈಪಿಸಿ ಎಂಟರ್‌ ಮಾಡಿ. ಯೂಟ್ಯೂಬ್ ವೆಬ್‌ಸೈಟ್ ಓಪನ್ ಆದ ನಂತರ ಎಡಭಾಗದಲ್ಲಿ ಕಸ್ಟಮೈಜ್‌ ಆಪ್ಶನ್‌ಗಳನ್ನು ಓಪನ್ ಮಾಡಲು ಕ್ಲಿಕ್ ಮಾಡಿ. ಅಥವಾ ಸ್ಕ್ರೀನ್ ಎಡದಿಂದ ಬಲಕ್ಕೆ ಸ್ವೈಪ್ ಮಾಡಿ.

ಹಂತ 4

ಹಂತ 4

ಓಪನ್ ಆದ ಆಪ್ಶನ್‌ಗಳ ಲೀಸ್ಟ್‌ನಲ್ಲಿ "Desktop" ಎಂಬುದನ್ನು ಆಯ್ಕೆ ಮಾಡಿ ಟ್ಯಾಪ್ ್ಮಾಡಿ. ನಂತರ ನಿಮ್ಮ ನೆಚ್ಚಿನ ಬ್ರೌಸರ್ ಅನ್ನು ಸೆಲೆಕ್ಟ್ ಮಾಡಿ. ಯೂಟ್ಯೂಬ್ ಡೆಸ್ಕ್‌ಟಾಪ್‌ ವರ್ಸನ್‌ನಲ್ಲಿ ನಿಮ್ಮ ಮೊಬೈಲ್‌ನಲ್ಲಿ ಓಪನ್ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How to Use the Desktop Version of YouTube on Android. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot