ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯನ್ನು ನಿರ್ಬಂಧಿಸುವುದು ಹೇಗೆ?

Posted By:

ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ (ಸಾಮಾಜಿಕ ಮಾಧ್ಯಮ) ಈಗ ಹೆಚ್ಚು ಜನಪ್ರಿಯವಾಗಿರುವ ಮತ್ತು ನಿಮ್ಮನ್ನು ಇನ್ನಷ್ಟು ನಿಮ್ಮ ಗೆಳೆಯರೊಂದಿಗೆ ಸಮೀಪದಲ್ಲಿರಿಸುವ ಮಾಧ್ಯಮವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಈ ಜಾಲತಾಣಗಳು ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತವೆ. ಟ್ವಿಟ್ಟರ್, ಫೇಸ್‌ಬುಕ್, ಗೂಗಲ್ ಪ್ಲಸ್, ಯಾಹೂ, ಜಿಮೇಲ್ ಹೀಗೆ ನಿಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಈ ಜಾಲತಾಣಗಳು ಎಷ್ಟು ಉಪಕಾರಿಯೋ ಅಷ್ಟೇ ಅಪಕಾರಿಯೂ ಹೌದು.

ಉದಾಹರಣೆಗೆ ಫೇಸ್‌ಬುಕ್ ಅನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಳಸುತ್ತಾರೆ. ಇದನ್ನು ವ್ಯವಹಾರದ ದೃಷ್ಟಿಯಿಂದ ನೋಡುವವರ ಸಂಖ್ಯೆ ಕಡಿಮೆ ಆದರೆ ಮೋಜಿಗಾಗಿ ಫೇಸ್‌ಬುಕ್ ಅನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚು. ಈ ಮೋಜು ಒಮ್ಮೊಮ್ಮೆ ಅಪಾಯಕಾರಿಯಾಗಿಯೂ ಪರಿಣಮಿಸುತ್ತದೆ ಅಂದರೆ ಒಬ್ಬರ ಪ್ರೊಫೈಲ್ ಅನ್ನು ಅನಾವಶ್ಯಕವಾಗಿ ಪ್ರವೇಶಿಸಿ ಅವರಿಗೆ ಕಿರಿಕಿರಿ ಉಂಟುಮಾಡುವುದು ಇವೇ ಮುಂತಾದುವು. ಹಾಗಿದ್ದರೆ ಈ ಅಪಾಯವನ್ನು ಮಟ್ಟ ಹಾಕುವ ವಿದ್ಯೆ ಕೂಡ ನಮ್ಮಲ್ಲಿ ಅಡಗಿದೇ ಎಂಬುದು ನಿಮಗೆ ಗೊತ್ತೇ?

ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಿಂದ ಅನಾವಶ್ಯಕ ಕಿರಿಕಿರಿಯನ್ನು ಉಂಟುಮಾಡುವ ವ್ಯಕ್ತಿಯನ್ನು ತೆಗೆದು ಹಾಕುವುದು ಹೇಗೆ ಎಂಬುದನ್ನು ಕುರಿತು ಸಲಹೆಗಳನ್ನು ನೀಡುತ್ತಿದ್ದೇವೆ. ಇದು ನಿಜಕ್ಕೂ ಹೆಚ್ಚು ಪರಿಣಾಮಕಾರಿ ಮತ್ತು ಬಳಸಲು ಕಾರ್ಯರೂಪಕ್ಕೆ ತರಲು ಹೆಚ್ಚು ಸುಲಭವಾಗಿರುವ ವಿಧಾನಗಳಾಗಿದ್ದು ಇದನ್ನು ನಿಮಗೆ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#1

ಯಾವುದೇ ಫೇಸ್‌ಬುಕ್ ಪುಟದಲ್ಲಿ ಹೀಗೆ ಕ್ಲಿಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#2

ನಂತರ ಹೌ ಡು ಐ ಸ್ಟಾಪ್ ಸಮ್‌ಒನ್ ಫ್ರಮ್ ಬೋದರಿಂಗ್ ಮಿ ಇದನ್ನು ಕ್ಲಿಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#3

ನೀವು ಬ್ಲಾಕ್ ಮಾಡಲು ಬಯಸುವ ವ್ಯಕ್ತಿಯ ಹೆಸರು ಅಥವಾ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಬ್ಲಾಕ್ ಕ್ಲಿಕ್ ಮಾಡಿ.

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#4

ನೀವು ಹೆಸರನ್ನು ನಮೂದಿಸಿದ್ದರೆ, ಅದು ಗೋಚರಿಸುವ ಪಟ್ಟಿಯಿಂದ ನೀವು ನಿರ್ಬಂಧಿಸಲು ಬಯಸುವ ನಿರ್ದಿಷ್ಟ ವ್ಯಕ್ತಿಯನ್ನು ಆಯ್ಕೆ ಮಾಡಿ.

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#5

ನೀವು ಬ್ಲಾಕ್ ಮಾಡುತ್ತಿರುವ ವ್ಯಕ್ತಿಗೆ ಈ ವಿಷಯ ಗೊತ್ತಿರುವುದಿಲ್ಲ.
ಈ ವಿಧಾನವನ್ನು ಬಳಸುತ್ತಿರುವ ವ್ಯಕ್ತಿ ನಿಮಗೆ ದೊರಕಿಲ್ಲ ಎಂದಾದಲ್ಲಿ, ವ್ಯಕ್ತಿಯ ಪ್ರೊಫೈಲ್‌ಗೆ ಹೋಗಲು ಪ್ರಯತ್ನಿಸಿ ಮತ್ತು ಅವರ ಕವರ್ ಫೋಟೋದಲ್ಲಿ ಮೆನುವಿನಿಂದ ಬ್ಲಾಕ್ ಅನ್ನು ಆಯ್ಕೆಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

ಅಪರಿಚಿತ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬ್ಲಾಕ್ ಮಾಡಿ

#6

ನೀವು ಬ್ಲಾಕ್ ಮಾಡಲು ಬಯಸುತ್ತಿರುವ ವ್ಯಕ್ತಿ ಇನ್ನೂ ದೊರಕಿಲ್ಲ ಎಂದಾದಲ್ಲಿ ಈ ವ್ಯಕ್ತಿ ಫೇಸ್‌ಬುಕ್ ಅನ್ನು ಬಳಸುತ್ತಿಲ್ಲ ಎಂದಾಗುತ್ತದೆ ಅಥವಾ ಅವರ ಖಾಸಗಿ ಸೆಟ್ಟಿಂಗ್‌ನಿಂದ ನಿರ್ಬಂಧಿಸಲಾಗಿದೆ ಎಂದಾಗುತ್ತದೆ. ನೀವು ಹಂಚಿಕೊಳ್ಳುತ್ತಿರುವ ವಿಷಯದ ಪ್ರೇಕ್ಷಕರನ್ನು ನಿಮಗೆ ಯಾವಾಗಲೂ ನಿಯಂತ್ರಿಸಬಹುದು ಎಂಬುದು ನಿಮ್ಮ ಗಮನದಲ್ಲಿರಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about In Facebook How Do I Block Someone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot