ಫೋನ್ ನಿಧಾನವಾಗಿ ಚಾರ್ಜ್ ಆಗುತ್ತಿದೆಯೇ? ಹೀಗೆ ಮಾಡಿ ನೋಡಿ

Written By:

ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಮಸ್ಯೆ ದೊಡ್ಡದಾಗುವುದು ನೀವು ಮಾಡುವ ಅತ್ಯಂತ ಸಣ್ಣ ತಪ್ಪಿನಿಂದಾಗಿದೆ ಎಂಬ ಸತ್ಯವನ್ನು ನೀವು ಕಂಡುಕೊಂಡಿದ್ದೀರಾ? ಫೋನ್ ಚಾರ್ಜ್ ಆಗುತ್ತಿಲ್ಲ ಎಂದಾಗ ಬಳಕೆದಾರರು ಅಂದುಕೊಳ್ಳುವುದೇ ಬ್ಯಾಟರಿ ಡೆಡ್ ಆಗಿದೆ ಇಲ್ಲವೇ ತಮ್ಮ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗಿದೆ.

ಇದಕ್ಕಾಗಿ ಸರ್ವೀಸ್ ಸೆಂಟರ್‌ಗೆ ಹೋಗುವ ಮುನ್ನ ಈ ಸಣ್ಣ ದೋಷಗಳನ್ನು ನೀವೇ ಪರಿಹರಿಸಿಕೊಳ್ಳಬಹುದಾಗಿದೆ. ಈ ಫೋನ್ ಚಾರ್ಜಿಂಗ್ ಸಮಸ್ಯೆ ಅತಿ ದೊಡ್ಡದೇನು ಆಗಿರದೇ ನಿಮ್ಮಷ್ಟಕ್ಕೇ ನೀವು ಪರಿಹರಿಸಿಕೊಳ್ಳಬಹುದಾಗಿದೆ ಬನ್ನಿ ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಎಸ್‌ಬಿ ಪೋರ್ಟ್ ಫಿಕ್ಸ್ ಮಾಡಿಕೊಳ್ಳಿ

ಯುಎಸ್‌ಬಿ ಪೋರ್ಟ್ ಫಿಕ್ಸ್ ಮಾಡಿಕೊಳ್ಳಿ

#1

ನಿಮ್ಮ ಡಿವೈಸ್ ಅನ್ನು ಆಫ್ ಮಾಡಿಕೊಳ್ಳಿ ಸಾಧ್ಯವಾದಲ್ಲಿ ಬ್ಯಾಟರಿ ಹೊರತೆಗೆಯಿರಿ ಅಂತೆಯೇ ಸಣ್ಣ ಹುಕ್ ಮಾದರಿಯ ಪಿನ್ ಅನ್ನು ಬಳಸಿಕೊಂಡು ಆ ಭಾಗವನ್ನು ಕ್ಲಿಯರ್ ಮಾಡಿಕೊಳ್ಳಿ.

ಧೂಳು ಹೊರತೆಗೆಯಿರಿ

ಧೂಳು ಹೊರತೆಗೆಯಿರಿ

#2

ನಿಮ್ಮ ಫೋನ್ ಅನ್ನು ನೀವು ಜೀನ್ಸ್ ಪ್ಯಾಂಟ್‌ನಲ್ಲೇ ಇರಿಸಿಕೊಳ್ಳುವುದರಿಂದ ಅದರಲ್ಲಿರುವ ಧೂಳು ಫೋನ್‌ನಲ್ಲಿ ಕುಳಿತಿರುತ್ತದೆ. ಆದ್ದರಿಂದ ಈ ಧೂಳು ಅನ್ನು ಕ್ಲೀನ್ ಮಾಡಿಕೊಳ್ಳಿ.

ಕೇಬಲ್ಸ್ ಬದಲಾಯಿಸಿಕೊಳ್ಳಿ

ಕೇಬಲ್ಸ್ ಬದಲಾಯಿಸಿಕೊಳ್ಳಿ

#3

ನಿಮ್ಮ ಚಾರ್ಜಿಂಗ್ ಕೇಬಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಅದನ್ನು ಬದಲಾಯಿಸಿ. ಹೊಸದು ನಿಮ್ಮ ಡಿವೈಸ್‌ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಕೊಳ್ಳಿ.

ಅಡಾಪ್ಟರ್ ಬದಲಿಸಿ

ಅಡಾಪ್ಟರ್ ಬದಲಿಸಿ

#4

ಬೇರೆ ಬೇರೆ ಡಿವೈಸ್‌ಗಳಲ್ಲಿ ಒಂದೇ ಚಾರ್ಜರ್ ಅಥವಾ ಕೇಬಲ್ ಕಾಂಬಿನೇಶನ್ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಕಂಡುಕೊಳ್ಳಿ ಇದರಿಂದ ಡೀಫಾಲ್ಟ್ ಉತ್ಪನ್ನದ ಸಾಧ್ಯತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಬ್ಯಾಟರಿ ಬದಲಾಯಿಸಿ

ಬ್ಯಾಟರಿ ಬದಲಾಯಿಸಿ

#5

ಫೋನ್ ಬ್ಯಾಟರಿ ಯಾವತ್ತೂ ದೀರ್ಘಕಾಲದವರೆಗೆ ಬಾಳಿಕೆ ಬರುವುದಿಲ್ಲ. ಸ್ವಲ್ಪ ವರ್ಷಗಳ ನಂತರ ಬ್ಯಾಟರಿಗಳು ಚಾರ್ಜಿಂಗ್ ಸಮಸ್ಯೆಯನ್ನು ತಂದೊಡ್ಡುತ್ತವೆ. ಆದ್ದರಿಂದ ಫೋನ್ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ.

ಗೋಡೆ ಚಾರ್ಜರ್ ಬಳಸಿ

ಗೋಡೆ ಚಾರ್ಜರ್ ಬಳಸಿ

#6

ಹೆಚ್ಚು ವೇಗದ ಚಾರ್ಜಿಂಗ್‌ಗಾಗಿ, ಗೋಡೆ ಚಾರ್ಜರ್ ಅನ್ನು ಬಳಸಿಕೊಂಡು ಚಾರ್ಜ್ ಮಾಡಿ. ನಿಮ್ಮ ಡಿವೈಸ್ ಯುಎಸ್‌ಬಿ ಕೇಬಲ್ ಅನ್ನು ಮಾತ್ರ ಹೊಂದಿದೆ ಎಂದಾದಲ್ಲಿ ವಾಲ್ ಔಟ್‌ಲೆಟ್‌ಗಾಗಿ ಪ್ರಮಾಣಿತ ಏಸಿ ಸ್ಟ್ಯಾಂಡರ್ಡ್ ಅಡಾಪ್ಟರ್ ಅನ್ನು ಖರೀದಿಸಿ.

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡುವುದು ಕಡಿಮೆ ಮಾಡಿ

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡುವುದು ಕಡಿಮೆ ಮಾಡಿ

#7

ಯುಎಸ್‌ಬಿ ಮೂಲಕ ಫೋನ್ ಚಾರ್ಜ್ ಮಾಡುವುದು ಚಾರ್ಜಿಂಗ್ ಅವಧಿಯನ್ನು 50 ಶೇಕಡಾದಷ್ಟು ಕಡಿಮೆ ಮಾಡುತ್ತದೆ.

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡುವುದು

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡುವುದು

#8

ಲ್ಯಾಪ್‌ಟಾಪ್‌ಗಿಂತಲೂ ಡೆಸ್ಕ್‌ಟಾಪ್ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಆದ್ದರಿಂದ ಡೆಸ್ಕ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್ ಬಳಸಿ ಫೋನ್ ಚಾರ್ಜ್ ಮಾಡುವುದು ನಿಮ್ಮ ಚಾರ್ಜಿಂಗ್ ಅನ್ನು ವೇಗಗೊಳಿಸುತ್ತದೆ.

ಡಾಕಿಂಗ್ ಸ್ಟೇಶನ್ ಬಳಸಿ

ಡಾಕಿಂಗ್ ಸ್ಟೇಶನ್ ಬಳಸಿ

#9

ವಾಲ್ ಚಾರ್ಜರ್‌ನಂತೆ ಡಾಕಿಂಗ್ ಸ್ಟೇಶನ್ಸ್ ವೇಗವಾಗಿ ಫೋನ್ ಚಾರ್ಜ್ ಮಾಡುವುದಿಲ್ಲ, ಆದರೆ ಇದು ಸಾಧ್ಯವಾದಷ್ಟು ವೇಗವಾಗಿ ಫೋನ್ ಚಾರ್ಜ್ ಮಾಡುತ್ತದೆ.

ಬಳಕೆಯಲ್ಲಿಲ್ಲದ ಸೆಟ್ಟಿಂಗ್ಸ್ ಆಫ್ ಮಾಡಿ

ಬಳಕೆಯಲ್ಲಿಲ್ಲದ ಸೆಟ್ಟಿಂಗ್ಸ್ ಆಫ್ ಮಾಡಿ

#10

ವೇಗವಾದ ಚಾರ್ಜಿಂಗ್‌ಗಾಗಿ ಆದಷ್ಟು ವೈಫೈ, ಬ್ಲ್ಯೂಟೂತ್, ಜಿಪಿಎಸ್ ಅನ್ನು ಆಫ್ ಮಾಡಿ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಲೇಖನಗಳು

ಇನ್ನಷ್ಟು ಲೇಖನಗಳಿಗೆ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
instead of rushing to the service center, you Simple fix the charging issues in your smartphone. The problem occurs in various degrees, either your phone won't charge at all or it will only charge very slowly.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot