ಜಿಯೋ ಎಮರ್ಜೆನ್ಸಿ ಡೇಟಾ ಲೋನ್ ಪಡೆಯಲು ಈ ಕ್ರಮ ಅನುಸರಿಸಿ!

|

ರಿಲಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಹಲವು ಆಕರ್ಷಕ ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಜಿಯೋ ಇತ್ತೀಚಿಗೆ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ Emergency Data Loan 'ತುರ್ತು ಡೇಟಾ ಸಾಲ' ಸೌಲಭ್ಯವನ್ನು ಅನಾವರಣಗೊಳಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಡೇಟಾ ಮುಗಿದು ಹೋದಾಗ ತಕ್ಷಣಕ್ಕೆ ರೀಚಾರ್ಜ್ ಮಾಡಿ, ನಂತರ ಶುಲ್ಕ ಪಾವತಿಸಬಹುದಾದ ಸೌಲಭ್ಯ ದೊರೆಯುತ್ತದೆ.

ಟೆಲಿಕಾಂನ

ಹೌದು, ಜಿಯೋ ಟೆಲಿಕಾಂನ ಹೊಸ ತುರ್ತು ಡೇಟಾ ಸಾಲ ಸೌಲಭ್ಯವು ಜಿಯೋ ಚಂದಾದಾರರಿಗೆ ತಮ್ಮ ಹೈ ಸ್ಪೀಡ್ ದೈನಂದಿನ ಡೇಟಾ ಕೋಟಾ ಮುಗಿದ ಬಳಿಕ ವಿವಿಧ ಕಾರಣಗಳಿಂದಾಗಿ ತಕ್ಷಣ ರೀಚಾರ್ಜ್ ಮಾಡಲು ಸಾಧ್ಯವಾಗದವರಿಗೆ 'ರೀಚಾರ್ಜ್ ನೌ ಮತ್ತು ಪೇ ಲೇಟರ್' ಆಯ್ಕೆಯು ಹೆಚ್ಚು ಅನುಕೂಲಕರವಾಗಲಿದೆ. ಮೈಜಿಯೊ ಆ್ಯಪ್ ಮೂಲಕ ತುರ್ತು ಡೇಟಾ ಸಾಲ ಸೇವೆಯನ್ನು ಪಡೆಯಬಹುದು.

ಪ್ರೀಪೇಯ್ಡ್

ಈ ಸೌಲಭ್ಯದಡಿಯಲ್ಲಿ, ಜಿಯೋ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ 1 ಜಿಬಿಯ (ಪ್ರತಿ ಪ್ಯಾಕ್‌ಗೆ 11ರೂ ಮೌಲ್ಯ) ಐದು ತುರ್ತು ಡೇಟಾವರೆಗಿನ ಸಾಲ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಡೇಟಾ ಸೌಲಭ್ಯವನ್ನು ಮೈ ಜಿಯೊ ಆಪ್ (MyJio App) ಮೂಲಕ ಪಡೆದುಕೊಳ್ಳಬಹುದಾಗಿದೆ. 'ತುರ್ತು ಡೇಟಾ ಸಾಲ' ಸೌಲಭ್ಯವು, ತನ್ನ ಬಳಕೆದಾರರಿಗೆ ನಿರಂತರ ಮತ್ತು ತಡೆರಹಿತ ಹೈಸ್ಪೀಡ್ ಡೇಟಾ ಬಳಕೆಯ ಅನುಭವವನ್ನು ಪಡೆಯಲು ಜಿಯೊ ನೀಡಿದ ಸರಳ ಮತ್ತು ಅಷ್ಟೇ ಪರಿಣಾಮಕಾರಿ ದಾರಿಯಾಗಿದೆ.

ನೆಟ್‌ವರ್ಕ್

ಜಿಯೋ ಬಳಕೆದಾರರು ಈಗಾಗಲೇ ಉತ್ತಮ ನೆಟ್‌ವರ್ಕ್ ಸಂಪರ್ಕ ಮತ್ತು ಹೈ ಸ್ಪೀಡ್‌ಗಳನ್ನು ಅನುಭವಿಸಲು ಶುರುಮಾಡಿದ್ದಾರೆ. ಹಲವು ಬಳಕೆದಾರರು ದಿನದಲ್ಲಿ ಬಹುಬೇಗನೇ ತಮ್ಮ ಹೈ ಸ್ಪೀಡ್‌ ಡೇಟಾ ಕೋಟಾವನ್ನು ಬಳಸಿ ಮುಗಿಸಿಬಿಡುತ್ತಾರೆ. ಅವರು ದಿನದ ಉಳಿದ ಸಮಯದಲ್ಲಿ ಹೈ ಸ್ಪೀಡ್‌ ಡೇಟಾ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಬಳಕೆದಾರರೂ ತಮ್ಮ ದೈನಂದಿನ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌-ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಜಿಯೊ ಅರಿತಿದೆ. ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.

ಜಿಯೋ ಟೆಲಿಕಾಂನ ತುರ್ತು ಡೇಟಾ ಸಾಲ: ಮೈ ಜಿಯೋ ಆಪ್‌ ಮೂಲಕ ಈ ಸೌಲಭ್ಯ ಪಡೆಯಲು ಹೀಗೆ ಮಾಡಿ:

ಜಿಯೋ ಟೆಲಿಕಾಂನ ತುರ್ತು ಡೇಟಾ ಸಾಲ: ಮೈ ಜಿಯೋ ಆಪ್‌ ಮೂಲಕ ಈ ಸೌಲಭ್ಯ ಪಡೆಯಲು ಹೀಗೆ ಮಾಡಿ:

* ನಿಮ್ಮ ಮೊಬೈಲ್ ಫೋನ್‌ನಲ್ಲಿ ಮೈಜಿಯೊ ಅಪ್ಲಿಕೇಶನ್ ತೆರೆಯಿರಿ.
* ‘ಮೆನು' ಆಯ್ಕೆಗೆ ಹೋಗಿ.
* ಈಗ, ‘ತುರ್ತು ಡೇಟಾ ಸಾಲ' ಆಯ್ಕೆಯನ್ನು ಟ್ಯಾಪ್ ಮಾಡಿ.
* ತುರ್ತು ಡೇಟಾ ಸಾಲ ಬ್ಯಾನರ್‌ನಲ್ಲಿ 'ಮುಂದುವರಿಯಿರಿ' ಕ್ಲಿಕ್ ಮಾಡಿ.
* ಈಗ, ‘ತುರ್ತು ಡೇಟಾ ಪಡೆಯಿರಿ' ಆಯ್ಕೆಯನ್ನು ಟ್ಯಾಪ್ ಮಾಡಿ.
* ತುರ್ತು ಸಾಲದ ಲಾಭ ಪಡೆಯಲು ‘ಈಗ ಸಕ್ರಿಯಗೊಳಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಜಿಯೋ ತುರ್ತು ಡೇಟಾ ಸಾಲ: ಬೆಲೆ, ಡೇಟಾ ಮಿತಿ ಎಷ್ಟು?

ಜಿಯೋ ತುರ್ತು ಡೇಟಾ ಸಾಲ: ಬೆಲೆ, ಡೇಟಾ ಮಿತಿ ಎಷ್ಟು?

ಜಿಯೋ ಪ್ರಿಪೇಯ್ಡ್ ಬಳಕೆದಾರರು ತಲಾ 1 ಜಿಬಿಯ 5 ತುರ್ತು ಡೇಟಾ ಸಾಲ ಪ್ಯಾಕ್‌ಗಳನ್ನು ಎರವಲು ಪಡೆಯಬಹುದು. (ಪ್ರತಿ ಪ್ಯಾಕ್‌ಗೆ 11 ರೂ. ಮೌಲ್ಯ). ಗರಿಷ್ಠ ಸಾಲ ಮೊತ್ತ 55 ಅಥವಾ 5 ಪ್ಯಾಕ್‌ಗಳು ಮಾತ್ರ.

ಜಿಯೋ ತುರ್ತು ಡೇಟಾ ಸಾಲ: ಪೇಮೆಂಟ್ ಹೇಗೆ?

ಜಿಯೋ ತುರ್ತು ಡೇಟಾ ಸಾಲ: ಪೇಮೆಂಟ್ ಹೇಗೆ?

- ನಿಮ್ಮ ಮೊಬೈಲ್ ಫೋನ್‌ನಲ್ಲಿ ಮೈಜಿಯೊ ಅಪ್ಲಿಕೇಶನ್ ತೆರೆಯಿರಿ ಮತ್ತು ಪುಟದ ಮೇಲಿನ ಎಡಭಾಗದಲ್ಲಿರುವ ‘ಮೆನು' ಗೆ ಹೋಗಿ.
- ಮೊಬೈಲ್ ಸೇವೆಗಳ ಅಡಿಯಲ್ಲಿ ‘ತುರ್ತು ಡೇಟಾ ಸಾಲ' ಟ್ಯಾಪ್ ಮಾಡಿ.
- ಈಗ, ತುರ್ತು ಡೇಟಾ ಸಾಲ ಬ್ಯಾನರ್‌ನಲ್ಲಿ ‘ಮುಂದುವರಿಯಿರಿ' ಕ್ಲಿಕ್ ಮಾಡಿ.
- ‘ತುರ್ತು ಡೇಟಾ ಸಾಲ' ಆಯ್ಕೆಗೆ ಪಾವತಿಸು ಆಯ್ಕೆಮಾಡಿ. ಪಾವತಿಗಾಗಿ ಪ್ರತಿಫಲಿಸಿದ ಒಟ್ಟು ಸಾಲದ ಮೊತ್ತ.
- ಡೇಟಾ ಸಾಲಕ್ಕಾಗಿ ಯಾವುದೇ ಆನ್‌ಲೈನ್ ಪಾವತಿ ಮೋಡ್ ಅನ್ನು ಆಯ್ಕೆ ಮಾಡಿ.

Best Mobiles in India

English summary
The emergency data loan service can be availed through MyJio App. Here's how you can avail it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X