ವೇಗವಾಗಿ ಟೈಪ್ ಮಾಡಲು ಸೂಪರ್ ಟ್ರಿಕ್ಸ್

Written By:

ವೇಗವಾಗಿ ಟೈಪ್ ಮಾಡುವುದು ಇಂದಿನ ದಿನದಲ್ಲಿ ಅತ್ಯವಶ್ಯಕ ಎಂದೆನಿಸಿದೆ. ನೀವು ಎಷ್ಟೋ ಸಲ ವೇಗವಾಗಿ ಟೈಪ್ ಮಾಡಬೇಕೆಂದುಕೊಂಡು ನಂತರ ನಿಧಾನ ಗತಿಯನ್ನು ಹಿಡಿದ ಎಷ್ಟೋ ಘಟನೆಗಳಿವೆ ಅಲ್ಲವೇ? ವೇಗವಾಗಿ ಟೈಪ್ ಮಾಡಲು ಕೆಲವೊಂದು ಟ್ರಿಕ್ಸ್‌ಗಳಿದ್ದು ಇಂದಿನ ಲೇಖನದಲ್ಲಿ ಅದನ್ನೇ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಈ ಸಲಹೆಗಳು ನಿಮ್ಮ ಟೈಪಿಂಗ್ ಕುಶಲತೆಯನ್ನು ವೃದ್ಧಿಪಡಿಸಲು ನೆರವು ನೀಡಲಿದ್ದು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನಿಮಗೆ ವೇಗವಾಗಿ ಟೈಪ್ ಮಾಡಲು ಸಾಧ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಕ್ತ ಕೆಲಸ ಮಾಡುವ ಸ್ಥಳ

ಸೂಕ್ತ ಕೆಲಸ ಮಾಡುವ ಸ್ಥಳ

#1

ಮೊದಲಿಗೆ ನೀವು ಕೆಲಸ ಮಾಡಲು ಆರಿಸಿರುವ ಸ್ಥಳ ಸೂಕ್ತವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ. ನಿಮಗೆ ಟೈಪ್ ಮಾಡಲು ಟೇಬಲ್ ಉತ್ತಮವೇ ಇಲ್ಲದೆಯೇ ನಿಮ್ಮ ತೊಡೆ ಒಳ್ಳೆಯದೇ ಎಂಬುದನ್ನು ಕಂಡುಕೊಳ್ಳಿ.

ನಿಮ್ಮ ದೇಹದ ಭಂಗಿ

ನಿಮ್ಮ ದೇಹದ ಭಂಗಿ

#2

ನೇರವಾಗಿ ಕುಳಿತುಕೊಂಡು ನಿಮ್ಮ ಮಣಿಗಂಟನ್ನು ಕೀಬೋರ್ಡ್‌ಗೆ ಸಮಾನಾಂತರವಾಗಿ ಇರಿಸಿ. ಇದರಿಂದ ನಿಮ್ಮ ಕೈಬೆರಳುಗಳು ಸಲೀಸಾಗಿ ಕೀಬೋರ್ಡ್ ಮೇಲೆ ಹರಿದಾಡುತ್ತದೆ.

ಕೈ ಸ್ಥಿತಿ ಸರಿಯಾಗಿರಲಿ

ಕೈ ಸ್ಥಿತಿ ಸರಿಯಾಗಿರಲಿ

#3

ತಪ್ಪಾದ ಕೈ ಸ್ಥಿತಿಯನ್ನು ಜನರು ಆರಿಸಿಕೊಳ್ಳುವುದರಿಂದ ಕೂಡ ವೇಗವಾಗಿ ಟೈಪ್ ಮಾಡಲು ಸಾಧ್ಯವಾಗುವುದಿಲ್ಲ. ಕೆಳಗೆ ನಾವು ಕೆಲವೊಂದು ಟೈಪಿಂಗ್ ಟ್ರಿಕ್ಸ್‌ಗಳನ್ನು ನೀಡಿದ್ದೇವೆ.
*ಎಫ್ ಅಕ್ಷರದ ಮೇಲೆ ಎಡ ತೋರುಬೆರಳು
*ಡಿ ಅಕ್ಷರದ ಮೇಲೆ ಎಡ ಮಧ್ಯ ಬೆರಳು
*ಎಸ್ ಅಕ್ಷರದ ಮೇಲೆ ಎಡ ಉಂಗುರ ಬೆರಳು
*ಎ ಅಕ್ಷರದ ಮೇಲೆ ಎಡ ಕಿರುಬೆರಳು
*ಜೆ ಅಕ್ಷರದ ಮೇಲೆ ಬಲ ತೋರುಬೆರಳು
*ಕೆ ಅಕ್ಷರದ ಮೇಲೆ ಬಲ ಮಧ್ಯಬೆರಳು
*ಎಲ್ ಅಕ್ಷರದ ಮೇಲೆ ಬಲ ಉಂಗುರಬೆರಳು
ಕಾಲನ್/ಸೆಮಿಕಾಲನ್ ಮೇಲೆ ಬಲ ಕಿರುಬೆರಳು
ಸ್ಪೇಸ್ ಬಾರ್ ಮೇಲೆ ಬಲ ಹಾಗೂ ಎಡ ಹೆಬ್ಬೆರಳು ಇರುವಂತೆ ನೋಡಿಕೊಳ್ಳಿ.

ಸರಳ ವ್ಯಾಯಾಮಗಳನ್ನು ಅನುಸರಿಸಿ

ಸರಳ ವ್ಯಾಯಾಮಗಳನ್ನು ಅನುಸರಿಸಿ

#4

ಹೋಮ್ ಕೀಗಳಿಂದ ಆರಂಭಿಸಿ ನಂತರ ಹೋಮ್ ಕೀಗಳನ್ನು ಕ್ಯಾಪಿಟಲ್ ಲೆಟರ್‌ನಲ್ಲಿ ಟೈಪ್ ಮಾಡಿ. ಶಿಫ್ಟ್ ಕೀಯನ್ನು ಬಳಸಿಕೊಂಡು ASDF JKL; ಈ ರೀತಿ ಟೈಪ್ ಮಾಡಿ. ಈಗ ಕೆಳಬಾಗದ ಅಕ್ಷರಗಳಿಗೆ ಬನ್ನಿ ಮತ್ತು ಕೆಳಸಾಲುಗಳನ್ನು ಟೈಪ್ ಮಾಡಿ zxcvbnm,.
ಮೇಲ್ಭಾಗದ ಸಾಲಿಗೆ ಹೋಗಿ: qwertyuiop
ಕೀಬೋರ್ಡ್ ಅನ್ನು ನೋಡದೆಯೇ ಸಂಪೂರ್ಣ ಅಕ್ಷರಗಳನ್ನು ಟೈಪ್ ಮಾಡಿರಿ

ಕೀಬೋರ್ಡ್ ನೋಡದೆಯೇ ಟೈಪ್ ಮಾಡುವುದು

ಕೀಬೋರ್ಡ್ ನೋಡದೆಯೇ ಟೈಪ್ ಮಾಡುವುದು

#5

ಇದು ಸ್ವಲ್ಪ ಕಷ್ಟ ಎಂದೆನಿಸಿದರೂ ನೀವು ಕೀಬೋರ್ಡ್ ನೋಡದೆಯೇ ಟೈಪ್ ಮಾಡಲು ಕಲಿತಿರಿ ಎಂದರೆ ವೇಗವಾಗಿ ಟೈಪ್ ಮಾಡಲು ನಿಮ್ಮಿಂದ ಸಾಧ್ಯವಾಗುತ್ತದೆ. ನಿಧಾನವಾಗಿ ಆರಂಭಿಸಿ ಆದಷ್ಟು ಕೀಬೋರ್ಡ್ ನೋಡದೆಯೇ ಟೈಪ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ವೇಗವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳಿ ನಂತರ ನೋಡಿ ನಿಮ್ಮ ಟೈಪಿಂಗ್ ಸ್ಪೀಡ್

ಅಭ್ಯಾಸವೊಂದೇ ನಿಮ್ಮ ಗುರಿಯಾಗಲಿ

ಅಭ್ಯಾಸವೊಂದೇ ನಿಮ್ಮ ಗುರಿಯಾಗಲಿ

#6

ನಿಮಗೆ ವೇಗವಾಗಿ ಟೈಪ್ ಮಾಡಲು ಕಲೆ ಸಿದ್ಧಿಯಾಗಬೇಕು ಎಂದಾದಲ್ಲಿ ಅಭ್ಯಾಸವೊಂದೇ ಉತ್ತಮ ಮಾರ್ಗವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are ways, which with can help you improve your typing skills with regular practice.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot