ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೋಗಿದೆಯೇ?..ಹಾಗಿದ್ರೆ ಹೀಗೆ ಮಾಡಿ!

|

ಪ್ರಮುಖ ದಾಖಲಾತಿಗಳ ಪೈಕಿ ಪ್ಯಾನ್‌ ಕಾರ್ಡ್‌ (PAN Card) ಸಹ ಒಂದಾಗಿದ್ದು, ಬ್ಯಾಂಕ್ ಖಾತೆಯನ್ನು ತೆರೆಯುವುದು, ಹೂಡಿಕೆ ಮಾಡುವುದು ಇತ್ಯಾದಿ ಯಾವುದೇ ಹಣಕಾಸಿನ ವಹಿವಾಟನ್ನು ಕೈಗೊಳ್ಳಲು ಕಡ್ಡಾಯವಾಗಿದೆ. ಅಲ್ಲದೇ ಪ್ಯಾನ್‌ ಕಾರ್ಡ್‌ ಭಾರತೀಯ ನಾಗರೀಕರಿಗೆ ಗುರುತಿನ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಪ್ಯಾನ್‌ ಕಾರ್ಡ್ ಕಳೆದುಹೋದರೆ ಅಥವಾ ಹಾನಿಯಾದರೆ ಮತ್ತೆ ಪಡೆಯಬಹುದೇ?

ಅಕೌಂಟ್‌

ಹೌದು, ಪ್ಯಾನ್‌ ಕಾರ್ಡ್ ಕಳೆದುಹೋದರೆ ಅಥವಾ ಹಾನಿಯಾದರೆ ಬಳಕೆದಾರರು ಆನ್‌ಲೈನ್‌ ಮೂಲಕ ಮರುಮುದ್ರಣ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ. ಪ್ಯಾನ್‌ ಕಾರ್ಡ್‌ ಅಂದರೆ ಪರ್ಮನೆಂಟ್‌ ಅಕೌಂಟ್‌ ನಂಬರ್‌ ಕಾರ್ಡ್‌ ಹತ್ತು ಅಂಕಿಗಳನ್ನು ಹೊಂದಿರುವ ಕಾರ್ಡ್‌ ಆಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಡುಪ್ಲಿಕೇಟ್ ಪ್ಯಾನ್‌ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸಬಹುದು ಹೇಗೆ? ಅದರ ಶುಲ್ಕ ಎಷ್ಟು? ಅಗತ್ಯವಿರುವ ದಾಖಲೆಗಳು ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಏನಿದು ಡುಪ್ಲಿಕೇಟ್ ಪ್ಯಾನ್ ಕಾರ್ಡ್?

ಏನಿದು ಡುಪ್ಲಿಕೇಟ್ ಪ್ಯಾನ್ ಕಾರ್ಡ್?

ಮೂಲ ಪ್ಯಾನ್‌ ಕಾರ್ಡ್‌ ಹಾನಿ ಅಥವಾ ಕಳ್ಳತನ ಆದ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಬಳಕೆದಾರರಿಗೆ ನಕಲಿ/ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದು ಅದೇ 10-ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಹೊಂದಿರುವ ಮೂಲ ಪ್ಯಾನ್‌ ಕಾರ್ಡ್‌ನ ನಿಖರವಾದ ಪ್ರತಿರೂಪವಾಗಿರುತ್ತದೆ. ಇನ್ನು ಈ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಮೂಲ ಕಾರ್ಡ್‌ನಂತೆ ಮಾನ್ಯವಾಗಿದೆ. ಅಲ್ಲದೇ ಯಾವುದೇ ಸಮಸ್ಯೆಯಿಲ್ಲದೆ ಅಗತ್ಯ ಸಂದರ್ಭಗಳಲ್ಲಿ ಬಳಸಬಹುದು.

ಯಾವ ಸಂದರ್ಭದಲ್ಲಿ ಡುಪ್ಲಿಕೇಟ್ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು?

ಯಾವ ಸಂದರ್ಭದಲ್ಲಿ ಡುಪ್ಲಿಕೇಟ್ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು?

* ಮೂಲ ಪ್ಯಾನ್‌ ಕಾರ್ಡ್‌ನ ಹಾನಿ ಅಥವಾ ಕಳ್ಳತನ ಆದಾಗ
* ಮೂಲ ಪ್ಯಾನ್‌ ಕಾರ್ಡ್ ತಪ್ಪಿಹೋಗಿದ್ದರೆ,(misplaced) ಅರ್ಜಿ ಸಲ್ಲಿಸಬಹುದು
* ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ಗೆ ಹಾನಿ (Damage) ಆಗಿದ್ದರೆ ಅರ್ಜಿ ಸಲ್ಲಿಸಬಹುದು

ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ರೀಪ್ರಿಂಟ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ:

ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ರೀಪ್ರಿಂಟ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ:

* ವೆಬ್ ಬ್ರೌಸರ್‌ಗೆ ಹೋಗಿ ಮತ್ತು UTI ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವೀಸಸ್ ಲಿಮಿಟೆಡ್‌ನ (ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಹಣಕಾಸು ಸೇವಾ ಪೂರೈಕೆದಾರ) ಪ್ಯಾನ್‌ ಸೇವಾ ಪೋರ್ಟಲ್ ತೆರೆಯಲು www.pan.utiitsl.com ಎಂದು ಟೈಪ್ ಮಾಡಿ.

ಷರತ್ತುಗಳನ್ನು

* ತೆರೆಯುವ ಪುಟದಲ್ಲಿ, ನೀವು ಮಾನದಂಡಗಳನ್ನು ಪೂರೈಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ನಿಯಮಗಳು ಮತ್ತು ಷರತ್ತುಗಳನ್ನು ಓದಿ ಮತ್ತು ನಂತರ, ಮರುಮುದ್ರಣ ಪ್ಯಾನ್‌ ಕಾರ್ಡ್ ಅನ್ನು ಕ್ಲಿಕ್ ಮಾಡಿ. (ಗಮನಿಸಿ: ನೀವು ಇ-ಪ್ಯಾನ್ ಪಡೆಯಲು ಬಯಸಿದರೆ, ಡೌನ್‌ಲೋಡ್ ಇ-ಪ್ಯಾನ್ ಅನ್ನು ಕ್ಲಿಕ್ ಮಾಡಿ).

ದಿನಾಂಕ

* ನಿಮ್ಮ ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಸೇರಿದಂತೆ ಕಡ್ಡಾಯ (*) ಎಂದು ಗುರುತಿಸಲಾದ ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ. ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು GSTIN ಸಂಖ್ಯೆಯನ್ನು ಸಹ ನಮೂದಿಸಬಹುದು (ಅನ್ವಯಿಸಿದರೆ).

ಸಲ್ಲಿಸಲಾಗುತ್ತದೆ

* ನಂತರ ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ ಮತ್ತು ನೀವು ಪ್ಯಾನ್‌ ಮರುಮುದ್ರಣ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ಭವಿಷ್ಯದ ಬಳಕೆಗಾಗಿ ಈ ಸಂಖ್ಯೆಯನ್ನು ಸೇವ್ ಮಾಡಿರಿ.

ಅಪ್ಲಿಕೇಶನ್

* ನಿಮ್ಮ ಪ್ಯಾನ್ ಕಾರ್ಡ್ ಮರುಮುದ್ರಣ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನೀವು ಅಪ್ಲಿಕೇಶನ್ ಸಂಖ್ಯೆಯನ್ನು ಬಳಸಬಹುದು. ಸಾಮಾನ್ಯವಾಗಿ, ಅರ್ಜಿಯನ್ನು ಸ್ವೀಕರಿಸಿದ 2 ವಾರಗಳಲ್ಲಿ ನಕಲಿ ಪ್ಯಾನ್‌ ಅನ್ನು ನೀಡಲಾಗುತ್ತದೆ.

ಪ್ಯಾನ್‌ ಕಾರ್ಡ್ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಪ್ಯಾನ್‌ ಕಾರ್ಡ್ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

* ಗುರುತಿನ ಪುರಾವೆಯ ಸ್ವಯಂ-ದೃಢೀಕರಿಸಿದ ಪ್ರತಿ (ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಇತ್ಯಾದಿ)
* ವಿಳಾಸದ ಪುರಾವೆಯ ಸ್ವಯಂ-ದೃಢೀಕರಿಸಿದ ಪ್ರತಿ (ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಯುಟಿಲಿಟಿ ಬಿಲ್‌ಗಳು, ಬ್ಯಾಂಕ್ ಖಾತೆ ಹೇಳಿಕೆ, ಇತ್ಯಾದಿ)
* ಜನ್ಮ ದಿನಾಂಕದ ಪುರಾವೆಯ ಸ್ವಯಂ-ದೃಢೀಕರಿಸಿದ ಪ್ರತಿ (ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಜನನ ಪ್ರಮಾಣಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಪಾಸ್‌ಪೋರ್ಟ್, ಇತ್ಯಾದಿ)
* ಪ್ಯಾನ್‌ ಹಂಚಿಕೆ ಪತ್ರ ಅಥವಾ ಮೂಲ ಪ್ಯಾನ್ ಕಾರ್ಡ್‌ನ ಸ್ವಯಂ-ದೃಢೀಕರಿಸಿದ ಪ್ರತಿ

Best Mobiles in India

English summary
Lost PAN Card? Dont Worry, Apply For A Reprint Of Your PAN Card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X