ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯಾ?..ಮತ್ತೆ DL ಪಡೆಯಲು ಹೀಗೆ ಮಾಡಿ!

|

ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯ ಇದೆ. ಹಾಗೆಯೇ ಡ್ರೈವಿಂಗ್ ಲೈಸೆನ್ಸ್‌ ಸಹ ಪ್ರಮುಖ ದಾಖಲೆಯಾಗಿದೆ. ದ್ವಿಚಕ್ರ ವಾಹನ ಅಥವಾ ಫೋರ್ ವೀಲರ್ ಚಾಲನೆ ಮಾಡಿದರೂ ಡ್ರೈವಿಂಗ್ ಲೈಸೆನ್ಸ್ ಹೊಂದಿರಲೇಬೇಕು. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ಓರಿಜಿನಲ್ DL- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೇ, ಅಥವಾ ಹರಿದರೇ ಅಥವಾ ಹಾಳಾದರೇ ಚಿಂತೆ ಮಾಡುವ ಅಗತ್ಯ ಇಲ್ಲ. ಏಕೆಂದರೇ ನಕಲಿ ಡಿಎಲ್‌ ಪಡೆಯಲು ಅವಕಾಶ ಇದೆ.

ಹೋದರೇ

ಹೌದು, ಓರಿಜಿನಲ್ ಡಿಎಲ್‌ ಕಳೆದು ಹೋದರೇ, ಅಥವಾ ಹರಿದರೇ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವಕಾಶ ಇದೆ. ಆನ್‌ಲೈನ್‌ ಮೂಲಕ ನಕಲಿ ಡಿಎಲ್‌ ಪಡೆಯಬಹುದು ಅಥವಾ ಆಫ್‌ಲೈನ್‌ ಮೂಲಕ ಸಹ ನಕಲಿ ಡಿಎಲ್‌ ಪಡೆಯಬಹುದಾಗಿದೆ. ಹಾಗಾದರೇ ಆನ್‌ಲೈನ್‌ ಮೂಲಕ ನಕಲಿ ಡಿಎಲ್‌ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಎಫ್‌ಐಆರ್ ಅಗತ್ಯ:

ಎಫ್‌ಐಆರ್ ಅಗತ್ಯ:

ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ, ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ FIR ಮಾಡಬೇಕಾಗುತ್ತದೆ. ನಕಲಿ ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದಾಗ, ನಿಮಗೆ ಈ ಎಫ್‌ಐಆರ್‌ನ ನಕಲು ಅಗತ್ಯ ಇರುತ್ತದೆ. ಆದರೆ ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹರಿದು ಹೋಗಿದ್ದರೇ ಅಥವಾ ಹಾಳಾಗಿದ್ದರೇ, ಇಂತಹ ಸಂದರ್ಭದಲ್ಲಿ ನಕಲಿ ಡಿಎಲ್‌ ಪಡೆಯಲು, ಅರ್ಜಿ ಜೊತೆಗೆ ಓರಿಜಿನಲ್ ಡಿಎಲ್ ಅನ್ನು ಸಲ್ಲಿಸಬೇಕಾಗುತ್ತದೆ.

ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿರಿ:

ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿರಿ:

* ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ವೆಬ್‌ಸೈಟ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, LLD ಫಾರ್ಮ್ ಅನ್ನು ಭರ್ತಿ ಮಾಡಿ
* ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿ
* ಇದರೊಂದಿಗೆ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
* ಬಳಿಕ ಈ ಫಾರ್ಮ್ ಅನ್ನು RTO ಕಚೇರಿಗೆ ಹೋಗಿ ಸಲ್ಲಿಸಬೇಕು
* ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.
* ಆನ್‌ಲೈನ್ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.

ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಇದೆ

ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಇದೆ

ನಕಲಿ ಡಿಎಲ್‌ ಪಡೆಯಲು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದಕ್ಕಾಗಿ, ಮೊದಲು RTO ಆಫೀಸ್‌ಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನೀವು RTO ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸುವ ಮೂಲಕ ಎಲ್‌ಎಲ್‌ಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು 30 ದಿನಗಳ ನಂತರ ನಿಮ್ಮ ನಕಲಿ ಚಾಲನಾ ಪರವಾನಗಿಯನ್ನು ಪಡೆಯುತ್ತೀರಿ. ಈ ವೇಳೆ, ನೀವು ರಶೀದಿಯನ್ನು ಸಹ ಪಡೆಯುತ್ತೀರಿ, ಅದನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ನಕಲು DL ಅನ್ನು ಸ್ವೀಕರಿಸಿದಾಗ, ಈ ರಶೀದಿಯ ಅಗತ್ಯವಿರುತ್ತದೆ. ಈ ರಸೀದಿಯ ಮೂಲಕ ನಿಮ್ಮ ನಕಲಿ DL ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದು.

ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಅರ್ಜಿ ಸಲ್ಲಿಸಲು ಈ ದಾಖಲಾತಿ ಅಗತ್ಯ

ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಅರ್ಜಿ ಸಲ್ಲಿಸಲು ಈ ದಾಖಲಾತಿ ಅಗತ್ಯ

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR
ಡ್ರೈವಿಂಗ್ ಲೈಸನ್ಸ್‌ ಪಡೆಯಲು ಮೊದಲು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆದುಕೊಳ್ಳಬೇಕು. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟಿರಬೇಕು. ಅಂತಹ ಅರ್ಜಿದಾರರು ಮಾತ್ರ ಅರ್ಹರಾಗಿರುತ್ತಾರೆ.

ವಯಸ್ಸಿನ ಪ್ರಮಾಣ ಪತ್ರ

ವಯಸ್ಸಿನ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ವಯಸ್ಸಿನ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಅಂದರೇ ಡ್ರೈವಿಂಗ್ ಲೈಸನ್ಸ್‌ ಪಡೆಯಲು ಅರ್ಜಿದಾರರು 18 ವರ್ಷ ಪೂರೈಸಿರುವುದನ್ನು ದೃಢಿಕರಿಸಲು ವಯಸ್ಸಿನ ಪ್ರಮಾಣ ಪತ್ರ ಅಗತ್ಯ. ಅರ್ಜಿದಾರರು ವಯಸ್ಸಿನ ದೃಢಿಕರಣಕ್ಕಾಗಿ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳು ಅಥವಾ ಪಾನ್ ಕಾರ್ಡ್‌ ನೀಡಬಹುದಾಗಿದೆ.

ವಿಳಾಸ ಪುರಾವೆ

ವಿಳಾಸ ಪುರಾವೆ

ಅರ್ಜಿದಾರರು ತಮ್ಮ ವಿಳಾಸ ಪುರಾವೆಯ ದಾಖಲೆಯನ್ನು ಸಲ್ಲಿಸಬೇಕಿರುತ್ತದೆ. ಅದಕ್ಕಾಗಿ ಪಡಿತರ ಚೀಟಿ, ಪಾಸ್‌ಪೋರ್ಟ್, ಜೀವ ವಿಮೆ ಪಾಲಿಸಿ, ಚುನಾವಣಾ ಗುರುತಿನ ಚೀಟಿ, ದೂರವಾಣಿ ಬಿಲ್, ನೀರಿನ ಬಿಲ್ ಅಥವಾ ದಂಡಾಧಿಕಾರಿಗಳ ಅಥವಾ ನೋಟರಿಯವರ ಮುಂದೆ ದೃಢೀಕರಿಸಿದ ವಯಸ್ಸು ಮತ್ತು ವಿಳಾಸದ ಪ್ರಮಾಣ ಪತ್ರವನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬಹುದಾಗಿದೆ.

ಅರ್ಜಿ ನಮೂನೆ -2 (CMVR-2)

ಅರ್ಜಿ ನಮೂನೆ -2 (CMVR-2)

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಆನ್‌ಲೈನ್‌ನಲ್ಲಿ ನಮೂನೆ -2 (CMVR-2) ಅನ್ನು ತುಂಬಿದಬೇಕು. ಈ ಅರ್ಜಿಯಲ್ಲಿ ಯಾವ ವಾಹನದ ಮಾದರಿಯ(LMV/Motor Cycle without gear/Motor Cycle with gear ) ಲೈಸನ್ಸ್ ಪಡೆಯಲು ಅರ್ಜಿಸಲಿಸುತ್ತಿರಿ ಎನ್ನುವ ಅಂಶಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿರಿ. ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.

ವೈದ್ಯಕೀಯ ಪ್ರಮಾಣ ಪತ್ರ

ವೈದ್ಯಕೀಯ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ 40 ವರ್ಷ ವಯಸ್ಸು ಪೂರ್ಣಗೊಂಡಿರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯಾಧಿಕಾರಿರವರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಬೇಕು. (ಇದು ಸಾರಿಗೇತರ ವಾಹನಗಳಿಗೆ ಸಂಬಂಧಿಸಿರುತ್ತದೆ). ಹಾಗೂ ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

ಸಾರಿಗೆ ವಾಹನಗಳಿಗೆ

ಸಾರಿಗೆ ವಾಹನಗಳಿಗೆ

ಯಲ್ಲೊ ಬೋರ್ಡ್‌ ವಾಹನಗಳು ಎಂದು ಹೇಳಲಾಗುವ ಮೋಟಾರ್ ಕ್ಯಾಬ್, ಆಟೋ ರಿಕ್ಷಾ ಕ್ಯಾಬ್ ಸಾರ್ವಜಿನಿಕ ಸೇವಾ ವಾಹನಗಳು (ಪಿ. ಎಸ್. ವಿ), ಭಾರಿ ಸಾರಿಗೆ ವಾಹನಗಳು (ಹೆಚ್.ಟಿ. ವಿ) ಮತ್ತು ಇತರ ನಿರ್ದಿಷ್ಟ ವಾಹನಗಳ ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಿದ್ದರೇ, ಅರ್ಜಿದಾರರ ವಯಸ್ಸು 20 ವರ್ಷ ತುಂಬಿರಬೇಕು ಅಥವಾ 20 ವರ್ಷ ಮೇಲ್ಪಟ್ಟಿರಬೇಕು.

Best Mobiles in India

Read more about:
English summary
Lost Your Driving License? Follow These Steps For Duplicate DL.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X