ಮಾಸ್ಟರ್ ಮೈಕ್ರೊಸಾಫ್ಟ್ ಎಡ್ಜ್ ಬ್ರೌಸರ್: 10 ಉತ್ತಮ ಸಲಹೆ ಮತ್ತು ತಂತ್ರಗಳು

ವಿಂಡೊಸ್ 10 ಒಎಸ್ ಅನ್ನು ಪರಿಚಯಿಸುವಾಗ ಮೈಕ್ರೊಸಾಫ್ಟ್ ಅದರ ಜೊತೆಗೆ ಮೈಕ್ರೊಸಾಫ್ಟ್ ಎಡ್ಜ್ ಬ್ರೌಸರ್ ಕೂಡ ಪರಿಚಯಿಸಿತು ಇಂಟರ್‍ನೆಟ್ ಎಕ್ಸ್‍ಪ್ಲೊರರ್ ನನ್ನು ಬದಲಾಯಿಸುವ ನಿಟ್ಟಿನಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೊರ್ಟಾನಾ

ಕೊರ್ಟಾನಾ

ಎಡ್ಜ್ ಬ್ರೌಸರ್ ನೊಂದಿಗೆ, ಮೈಕ್ರೊಸಾಫ್ಟ್ ಧ್ವನಿ ಸಹಾಯಕ ಕೊರ್ಟಾನಾ ಇದೆ ಸಹಾಯ ಮಾಡಲು. ಕೊರ್ಟಾನಾ ಚಾಲು ಮಾಡಿದರೆ, ವಿಂಡೊಸ್ ಟಾಸ್ಕ್ ಬಾರ್ ನಲ್ಲಿ ಕೊರ್ಟಾನಾ ಮೇಲೆ ನೀವು ಕ್ಲಿಕ್ ಮಾಡಬೇಕು ಸರ್ಚ್ ಬಾರ್ ನಲ್ಲಿ ಮತ್ತು ಸೆಟಪ್ ಗೆ ಹೆಸರು ನೀಡಬೇಕು. ಅದನ್ನು ಉಪಯೋಗಿಸಲು, ಪ್ರಶ್ನೆಯನ್ನು ಎಡ್ಜ್ ಬಾರ್ ನಲ್ಲಿರುವ ಲೊಕೆಷನ್ ಬಾರ್ ನಲ್ಲಿ ಬರೆಯಬಹುದು.

ಹಂಚಿಕೊಳ್ಳುವುದು

ಹಂಚಿಕೊಳ್ಳುವುದು

ಈ ಬ್ರೌಸರ್ ತನ್ನೊಂದಿಗೆ ಹಂಚಿಕೊಳ್ಳುವ ಆಯ್ಕೆ ಹೊಂದಿದೆ. ಇದನ್ನು ಟೂಲ್‍ಬಾರ್ ನಲ್ಲಿ ಬಟನ್ ಮೂಲಕ ಗುರುತಿಸಬಹುದು. ನೀವು ತಟ್ಟಿದಾಗ ಬಟನ್ ಶೇರ್ ಪ್ಯಾನೆಲ್ ತೆರೆಯುತ್ತದೆ. ನೀವು ವಿಂಡೊಸ್ ಸ್ಟೊರ್ ನಿಂದ ಸಹಾಯ ಮಾಡುವ ಆಪ್ಸ್ ಇನ್ಸ್‍ಟಾಲ್ ಮಾಡಿ ಇನ್ನೂ ಹೆಚ್ಚಿನ ಸೇವೆ ಪಡೆಯಬಹುದು.

ರೀಡಿಂಗ್ ವ್ಯು

ರೀಡಿಂಗ್ ವ್ಯು

ಮ್ಯಾಕ್ ಒಎಸ್ ಎಕ್ಸ್ ನ ಸಫಾರಿ ಯಂತೆ ಮೈಕ್ರೊಸಾಫ್ಟ್ ಎಡ್ಜ್ ರೀಡಿಂಗ್ ವ್ಯು ನೊಂದಿಗೆ ಕೂಡ ಬರುವುದು. ಇದು ಅನಾವಶ್ಯಕ ಸುದ್ದಿಗಳನ್ನು ತೆಗೆದು ಓದಲು ಅನುವು ಮಾಡಿಕೊಡುತ್ತದೆ. ಇದನ್ನು ಎಡ್ರೆಸ್ ಬಾರ್ ನಲ್ಲಿ ರೀಡಿಂಗ್ ವ್ಯು ಐಕೊನ್ ಮೇಲೆ ಕ್ಲಿಕ್ ಮಾಡಿ ಚಾಲ್ತಿ ಗೊಳಿಸಬಹುದು.

ಕಸ್ಟಮೈಜ್ ಟ್ಯಾಬ್

ಕಸ್ಟಮೈಜ್ ಟ್ಯಾಬ್

ಮೈಕ್ರೊಸಾಫ್ಟ್ ಎಡ್ಜ್ ಅನ್ನು ಕಸ್ಟಮೈಜ್ ಮಾಡಬಹುದು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಟ್ಯಾಬ್ ತೆರೆದಾಗ ಏನು ನೋಡಲು ಇಷ್ಟ ಪಡುತ್ತೀರಿ ಎಂದು. ಇದನ್ನು ಮಾಡಬಹುದು ಈ ರೀತಿ ಕ್ಲಿಕ್ ಮಾಡುವ ಮೂಲಕ ಮೇನ್ ಮೆನು -> ಸೆಟ್ಟಿಂಗ್ಸ್ -> ಓಪನ್ ನ್ಯು ಟ್ಯಾಬ್ ಆಯ್ಕೆ ಮಾಡಿ ಮತ್ತು ನಿಮಗೆ ಬೇಕಾದದ್ದು ಆಯ್ಕೆ ಮಾಡಿ.

ಬುಕ್‍ಮಾಕ್ರ್ಸ್ ಆಮದು

ಬುಕ್‍ಮಾಕ್ರ್ಸ್ ಆಮದು

ಈ ಬ್ರೌಸರ್ ಬೇರೆ ಬ್ರೌಸರ್ ಗಳಿಂದ ಬುಕ್‍ಮಾರ್ಕ್ ಗಳನ್ನು ಇಂಪೊರ್ಟ್ ಮಾಡಲು ಅವಕಾಶ ನೀಡುವುದು. ಕ್ರೊಮ್, ಫೈರ್‍ಫಾಕ್ಸ್ ಮತ್ತು ಇತ್ಯಾದಿ ಬ್ರೌಸರ್ ಗಳದ್ದು. ಇದನ್ನು ಮಾಡಲು ನೀವು ಮೇಲೆ ಬಲಗಡೆ ಮೂಲೆಯಲ್ಲಿ ಇರುವ ಹಬ್ ಬಟನ್ ನಲ್ಲಿ ಇಂಪೊರ್ಟ್ ಫೇವರೇಟ್ಸ್ ಒತ್ತಿರಿ.

ರೀಡಿಂಗ್ ಲಿಸ್ಟ್

ರೀಡಿಂಗ್ ಲಿಸ್ಟ್

ನಿಮ್ಮ ಮೆಚ್ಚಿನ ಲೇಖನಗಳನ್ನು ಬುಕ್‍ಮಾರ್ಕ್ ಮಾಡುವ ಬದಲು ನೀವು ಅದನ್ನು ಓದುವ ಪಟ್ಟಿಯಲ್ಲಿ ಉಳಿಸಬಹುದು. ನಿಮಗೆ ಲಿಂಕ್ ಉಳಿಸಬೇಕು ಎನಿಸಿದರೆ ಮೇಲಿರುವ ಸ್ಟಾರ್ ಐಕೊನ್ ಮೇಲೆ ಒತ್ತಿರಿ ಮತ್ತು ರೀಡಿಂಗ್ ಲಿಸ್ಟ್ ಗೆ ಹೋಗುವುದು ಮತ್ತು ಆಗ ಪಟ್ಟಿಗೆ ಸೇರಿಸಲು ‘ಆಡ್' ಮೇಲೆ ಒತ್ತಿರಿ.

 ಥೀಮ್ ಬದಲಾವಣೆ

ಥೀಮ್ ಬದಲಾವಣೆ

ಈ ಬ್ರೌಸರ್ ಎರಡು ಥೀಮ್ ನೊಂದಿಗೆ ಬರುತ್ತದೆ - ಕಡು ಹಾಗೂ ನಸು. ನಿಮಗೆ ಬೇಕಾದದ್ದು ಆರಿಸಬಹುದು. ಇದನ್ನು ಮಾಡಲು ಮೇನ್ ಮೆನು -> ಸೆಟ್ಟಿಂಗ್ಸ್ -> ಥೀಮ್ -> ಚೂಸ್ ಎ ಥೀಮ್ ಅನ್ನು ಕ್ಲಿಕ್ ಮಾಡಿ.

ಫ್ಲ್ಯಾಷ್

ಫ್ಲ್ಯಾಷ್

ಕ್ರೊಮ್ ನಂತೆ ಎಡ್ಜ್ ಕೂಡ ಫ್ಲ್ಯಾಷ್ ಪ್ಲೇಯರ್ ನೊಂದಿಗೆ ಬರುತ್ತದೆ ಕೆಲ ಫ್ಲ್ಯಾಷ್ ಆಧಾರಿತ ಅಂತರ್ಜಾಲದ ವೀಡಿಯೊಗಳನ್ನು ಪ್ಲೇ ಮಾಡಲು. ಇದಕ್ಕಾಗಿ ಮೇನ್ ಮೆನು ವಿನಿಂದ ಸೆಟ್ಟಿಂಗ್ಸ್ ಗೆ ಹೋಗಿ ಮತ್ತು ಅಡ್ವಾನ್ಸ್‍ಡ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅದರಲ್ಲಿ ಯುಸ್ ಅಡೊಬಿ ಫ್ಲ್ಯಾಷ್ ಪ್ಲೇಯರ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಆನ್/ಆಫ್ ಮಾಡಿ.

ಹೋಮ್ ಬಟನ್

ಹೋಮ್ ಬಟನ್

ಇದರಲ್ಲಿ, ಹೋಮ್ ಬಟನ್ ಡಿಫೊಲ್ಟ್ ಆಗಿ ಡಿಸೆಬಲ್ ಆಗಿರುತ್ತೆ ಅದನ್ನು ಪುನಃ ಚಾಲ್ತಿ ಗೊಳಿಸಬಹುದು. ಇದಕ್ಕಾಗಿ ಸೆಟ್ಟಿಂಗ್ಸ್ -> ಅಡ್ವಾನ್ಸ್‍ಡ್ ಸೆಟ್ಟಿಂಗ್ಸ್ -> ಎನೆಬಲ್/ಡಿಸೆಬಲ್ ಹೋಮ್ ಬಟನ್ ಆಯ್ಕೆ ಮಾಡಿ.

ಪ್ರೈವಸಿ ಸೆಟ್ಟಿಂಗ್ಸ್

ಪ್ರೈವಸಿ ಸೆಟ್ಟಿಂಗ್ಸ್

ಪ್ರೈವಸಿ ಸೆಟ್ಟಿಂಗ್ಸ್ ಗಾಗಿ ಸೆಟ್ಟಿಂಗ್ಸ್ -> ಅಡ್ವಾನ್ಸ್‍ಡ್ ಸೆಟ್ಟಿಂಗ್ಸ್ -> ಪ್ರೈವಸಿ ಮತ್ತು ಸರ್ವಿಸಸ್ ಗೆ ಹೋಗಿ. ಈ ಟ್ಯಾಬ್ ಹಲವಾರು ಆಯ್ಕೆಗಳನ್ನು ಹೊಂದಿದೆ ಉದಾಹರಣೆಗೆ ಪಾಸ್ವರ್ಡ್ ಉಳಿಸುವುದು, ಫಾರ್ಮ್ ಎನಟ್ರೀಸ್ ಉಳಿಸುವುದು ಇತ್ಯಾದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While introducing Windows 10 OS, the Redmond giant Microsoft also introduced Microsoft Edge browser replacing the Internet Explorer. In an attempt to enhance the experience, the interface of the browser has been rewritten from the scratch.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot