ಸರ್ಕಾರದ 'ಮೇರಾ ರೇಷನ್ ಆಪ್‌' ಡೌನ್‌ಲೋಡ್ ಮಾಡುವುದು ಹೇಗೆ?..ಉಪಯೋಗಳೇನು?

|

ಭಾರತ ಸರ್ಕಾರವು ಈಗಾಗಲೇ ಹಲವು ಸೇವೆಗಳಿಗೆ ಡಿಜಿಟಲ್‌ ರೂಪ ನೀಡಿದ್ದು, ಮತ್ತೆ ಅದೇ ಮಾರ್ಗದಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 'ಒನ್ ನೇಷನ್-ಒನ್ ರೇಷನ್ ಕಾರ್ಡ್'ಗೆ ಈಗ ಹೊಸದಾಗಿ ಮೇರಾ ರೇಷನ್ ಎಂಬ ಹೊಸ ಪಡಿತರ ಆಪ್‌ ಅನ್ನು ಬಿಡುಗಡೆ ಮಾಡಿದೆ. ವಲಸೆ ಹೋಗುವ ಜನರಿಗೆ ದೇಶದ ಯಾವುದೇ ಭಾಗದಲ್ಲಿ ಸುಲಭವಾಗಿ ಪಡಿತರ ಪಡೆಯಲು ನೆರವಾಗಲಿದೆ.

ಸರ್ಕಾರದ 'ಮೇರಾ ರೇಷನ್ ಆಪ್‌' ಡೌನ್‌ಲೋಡ್ ಮಾಡುವುದು ಹೇಗೆ?..ಉಪಯೋಗಳೇನು?

ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯ ಸಹಾಯದಿಂದ ಸರ್ಕಾರವು ಭಾರತದಲ್ಲಿ 69 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಫಲಾನುಭವಿಗಳನ್ನು ಒಳಗೊಂಡಿದೆ. ಎನ್‌ಎಫ್‌ಎಸ್‌ಎ ಫಲಾನುಭವಿಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ 81 ಕೋಟಿಗೂ ಹೆಚ್ಚು ಜನರಿಗೆ 'ಹೆಚ್ಚು ಸಬ್ಸಿಡಿ ನೀಡುವ ಆಹಾರ ಧಾನ್ಯಗಳನ್ನು' ಒದಗಿಸಲು ಸರ್ಕಾರ ಬಳಸುತ್ತದೆ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯು ಸುಗಮವಾಗಿ ನಿರ್ವಹಿಸಲು ಮೇರಾ ರೇಷನ್ ಅಪ್ಲಿಕೇಶನ್ ಸರ್ಕಾರಕ್ಕೆ ಮತ್ತು ನಾಗರಿಕರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ, ಈ ಅಪ್ಲಿಕೇಶನ್ ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಹಾಗಾದರೇ ಮೇರಾ ರೇಷನ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡುವುದು ಹೇಗೆ ಮತ್ತು ಈ ಆಪ್‌ನ ಇತರೆ ಪ್ರಯೋಜನಗಳೇನು ಎಂಬುದನ್ನು ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ ಬನ್ನಿರಿ.

ಸರ್ಕಾರದ 'ಮೇರಾ ರೇಷನ್ ಆಪ್‌' ಡೌನ್‌ಲೋಡ್ ಮಾಡುವುದು ಹೇಗೆ?..ಉಪಯೋಗಳೇನು?

ಏನಿದು ಒನ್ ನೇಷನ್, ಒನ್ ರೇಷನ್ ಕಾರ್ಡ್?
ಒನ್ ನೇಷನ್, ಒನ್ ರೇಷನ್ ಕಾರ್ಡ್ ಕೇಂದ್ರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ ಒಂದೇ ರೀತಿಯ ಪಡಿತರ ಕಾರ್ಡ್‌ ವ್ಯವಸ್ಥೆ ಅನುಷ್ಠಾನ ಇದರ ಉದ್ದೇಶ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಮೇರಾ ರೇಷನ್ ಅಪ್ಲಿಕೇಶನ್
ದೇಶಾದ್ಯಂತ ಪಡಿತರ ಕಾರ್ಡುದಾರರ ಅನುಕೂಲಕ್ಕಾಗಿ ಮೇರಾ ರೇಷನ್ ಆಪ್ ಅನ್ನು ಪರಿಚಯಿಸಲಾಗಿದೆ. ಈಗ, ಬಳಕೆದಾರರು ಕೇವಲ ಟ್ಯಾಪ್ ಮೂಲಕ ಹತ್ತಿರದ ನ್ಯಾಯ ಬೆಲೆ ಅಂಗಡಿಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಅರ್ಹತೆಯ ವಿವರಗಳನ್ನು ಮತ್ತು ಇತ್ತೀಚಿನ ವಹಿವಾಟುಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, ಅಪ್ಲಿಕೇಶನ್ ಇಂಟರ್ಫೇಸ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ ಆದರೆ ಶೀಘ್ರದಲ್ಲೇ ಸರ್ಕಾರವು ಇತರ 14 ಭಾರತೀಯ ಭಾಷೆಗಳನ್ನು ಸೇರಿಸಲು ಯೋಜಿಸಿದೆ.

ಸರ್ಕಾರದ 'ಮೇರಾ ರೇಷನ್ ಆಪ್‌' ಡೌನ್‌ಲೋಡ್ ಮಾಡುವುದು ಹೇಗೆ?..ಉಪಯೋಗಳೇನು?

ಹೊಸ ಮೊಬೈಲ್ ಅಪ್ಲಿಕೇಶನ್ ಎನ್‌ಎಫ್‌ಎಸ್‌ಎಯ ಫಲಾನುಭವಿಗಳು, ವಿಶೇಷವಾಗಿ ವಲಸೆ ಫಲಾನುಭವಿಗಳು, ನ್ಯಾಯಯುತ ಬೆಲೆ ಅಂಗಡಿ (ಎಫ್‌ಪಿಎಸ್) ನಡುವೆ ಒನೋರ್ಕ್ ಸಂಬಂಧಿತ ಸೇವೆಗಳನ್ನು ಸುಗಮಗೊಳಿಸುವ ಗುರಿ ಹೊಂದಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ವಿಭಾಗದ ಕಾರ್ಯದರ್ಶಿ ಸುಧಂಶು ಪಾಂಡೆ ಹೇಳಿದ್ದಾರೆ.

ಮೇರಾ ರೇಷನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ?
* ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಹುಡುಕಾಟ ಪೆಟ್ಟಿಗೆಯನ್ನು ಬಳಸಿಕೊಂಡು ಮೇರಾ ರೇಷನ್ ಅಪ್ಲಿಕೇಶನ್‌ಗಾಗಿ ಹುಡುಕಿ.
* ಸೆಂಟ್ರಲ್ ಏಪ್ಸ್ ತಂಡ ಅಪ್‌ಲೋಡ್ ಮಾಡಿದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ.
* ನಿಮ್ಮ ಪಡಿತರ ಚೀಟಿ ವಿವರಗಳನ್ನು ಬಳಸಿಕೊಂಡು ಅಪ್ಲಿಕೇಶನ್ ತೆರೆಯಿರಿ ಮತ್ತು ನೋಂದಾಯಿಸಿ.

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ
* ಕಾರ್ಮಿಕರು, ದಿನಗೂಲಿ ನೌಕರರು, ಬಡ ಜನರು, ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಸಹಾಯಕ.

* ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಅರೆಕಾಲಿಕ ಖಾಸಗಿ ನೌಕರರು, ಅಸಂಘಟಿತ ವಲಯದ ಕಾರ್ಮಿಕ ವರ್ಗದ ಜನರಿಗೆ ಹೆಚ್ಚು ನೆರವಾಗಿದೆ.

ಸರ್ಕಾರದ 'ಮೇರಾ ರೇಷನ್ ಆಪ್‌' ಡೌನ್‌ಲೋಡ್ ಮಾಡುವುದು ಹೇಗೆ?..ಉಪಯೋಗಳೇನು?

* ನಕಲಿ ಕಾರ್ಡ್ ಮೂಲಕ ಪಡಿತರ ಸೋರಿಕೆ ತಡೆಯಲು ನೆರವಾಗಲಿದೆ.

* ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಪಡಿತರ ಪಡೆಯಲು ಅನುಕೂಲ.

* ಬಡವರಿಗೆ ಹೆಚ್ಚಿನ ಲಾಭ ದೊರೆಯಲಿದೆ.

* ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡವರಿಗೆ ಪಡಿತರ ಪಡೆಯಲು ಅನುಕೂಲವಾಗಲಿದೆ.

* ನಕಲಿ ಪಡಿತರ ಚೀಟಿಗಳಿಗೆ ಬ್ರೇಕ್‌ ಮಾಡಲು ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಸಹಾಯಕ.

* ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ನಲ್ಲಿ ಸೇರಲಿದೆ.

Best Mobiles in India

English summary
Mera Ration app will help the government as well as the citizens to manage the One Nation One Ration Card system better.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X