ವಾಟ್ಸಾಪ್ ಮೂಲಕ ಫೇಸ್‌ಬುಕ್ ಮೆಸೆಂಜರ್ ರೂಮ್ ಶಾರ್ಟ್‌ಕಟ್ ಅನ್ನು ಬಳಸುವುದು ಹೇಗೆ?

|

ವಿಶ್ವದ ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಾಪ್‌. ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇತ್ತೀಚಗಷ್ಟೇ ಪೇಸ್‌ಬಯಕ್‌ ಒಡೆತನದ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಮೆಸೆಂಜರ್ ರೂಮ್ಸ್ ಶಾರ್ಟ್‌ಕಟ್ ಅನ್ನು ಪರಿಚಯಿಸಲು ಸಿದ್ದತೆ ನಡೆಸಿರೋದು ನಿಮಗೆಲ್ಲಾ ತಿಳಿದೆ ಇದೆ. ಸದ್ಯ ಈ ಫೀಚರ್ಸ್‌ ಸ್ವಲ್ಪ ಇನ್ನು ಪರೀಕ್ಷೆಯ ಅವಧಿಯಲ್ಲಿದ್ದರೂ , ಇದು ಇದೀಗ ವಾಟ್ಸಾಪ್ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರಿಗೆ ಲಭ್ಯವಾದರೆ ಮೆಸೆಂಜರ್ ರೂಮ್ಸ್ ವೀಡಿಯೊ ಕರೆಯನ್ನು ಪ್ರಾರಂಭಿಸಲು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕವೂ ಮೆಸೆಂಜರ್‌ ರೂಮ್ಸ್‌ ವೀಡಿಯೋ ಕಾಲ್‌ ಅನ್ನು ಮಾಡುವುದಕ್ಕೆ ಅವಕಾಶವನ್ನ ಫೇಸ್‌ಬುಕ್‌ ಕಲ್ಪಿಸಲಿದೆ. ಸದ್ಯ ವಾಟ್ಸಾಪ್‌ ಶಾರ್ಟ್‌ಕಟ್ ಮೂಲಕ ಫೇಸ್‌ಬುಕ್‌ ಮೆಸೆಂಜರ್‌ ರೂಮ್ಸ್‌ ಕಾಲ್‌ ಅನ್ನು ಬೆಂಬಲಿಸಲಿದೆ. ಸದ್ಯ ಮೆಸೆಂಜರ್ ರೂಮ್‌ಗಳು ಏಕಕಾಲದಲ್ಲಿ 50 ಜನರು ಮಾತ್ರ ಬಾಗವಹಿಸಬಹುದಾಗದ ವೀಡಿಯೊ ಕರೆಗಳನ್ನು ಬೆಂಬಲಿಸುತ್ತವೆ. ಆದರೆ ವಾಟ್ಸಾಪ್‌ನಲ್ಲಿಯೇ ದೊಡ್ಡ ವೀಡಿಯೊ ಕಾಲ್‌ಗಳನ್ನು ಸಕ್ರಿಯಗೊಳಿಸುವುದಿಲ್ಲ. ಆದರೂ ವಾಟ್ಸಾಪ್‌ ಮೂಲಕ ಮೆಸೆಂಜರ್‌ ರೂಮ್ಸ್‌ ಅನ್ನು ಪ್ರವೇಶಿಸಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಫೇಸ್‌ಬುಕ್‌ ಮೆಸೆಂಜರ್ ರೂಮ್ಸ್‌ ಶಾರ್ಟ್‌ ಕಟ್‌ ಅನ್ನು ಪ್ರವೇಶಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ ಫೇಸ್‌ಬುಕ್‌ ರೂಮ್ಸ್‌ ಶಾರ್ಟ್‌ಕಟ್‌ ಅನ್ನು ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಫೇಸ್‌ಬುಕ್‌ ರೂಮ್ಸ್‌ ಶಾರ್ಟ್‌ಕಟ್‌ ಅನ್ನು ಬಳಸುವುದು ಹೇಗೆ?

ಹಂತ 1: ವೆಬ್ ಆವೃತ್ತಿಯಲ್ಲಿ ವಾಟ್ಸಾಪ್ ಚಾಟ್ ಥ್ರೆಡ್ ತೆರೆಯಿರಿ.

ಹಂತ 2: ಮೇಲಿನ ಬಲ ಮೂಲೆಯಲ್ಲಿರುವ ಪೇಪರ್‌ಕ್ಲಿಪ್ attachment ಐಕಾನ್ ಕ್ಲಿಕ್ ಮಾಡಿ.
ಹಂತ 3: Messenger Room shortcut ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ದೃಡೀಕರಣಕ್ಕಾಗಿ Continue in Messenger ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಇದು Messenger Rooms platformಗೆ ನ್ಯಾವಿಗೇಟ್ ಮಾಡುತ್ತದೆ
ಹಂತ 6: ನಂತರ Create a Room ಮತ್ತು ಇಮೇಲ್, ಪಠ್ಯ ಅಥವಾ ಇತರ ಅಪ್ಲಿಕೇಶನ್‌ಗಳ ಮೂಲಕ ಲಿಂಕ್ ಅನ್ನು ಇತರರಿಗೆ ಹಂಚಿಕೊಳ್ಳಬಹುದು.
ಹಂತ 7: ನಂತರ ಅವರು ವೀಡಿಯೊ ಕರೆಗಾಗಿ ನಿಮ್ಮೊಂದಿಗೆ ಸೇರಬಹುದು.

ಮೆಸೆಂಜರ್‌

ಹೌದು ಈ ಮೇಲಿನ ಹಂತಗಳು ಮೆಸೆಂಜರ್‌ ರೂಮ್‌ಗಳಿಗೆ ಹೋಗಲು ಸುಲಭವಾದ ಪ್ರಕ್ರಿಯೆ ಆಗಿದೆ. ಇದರಿಂದ ಬಳಕೆದಾರರನ್ನು ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ನ್ಯಾವಿಗೇಟ್ ಮಾಡಲು ಸಾಕಷ್ಟು ತ್ವರಿತ ಮಾರ್ಗವಾಗಿದೆ. ಆದಾಗ್ಯೂ, ಬಳಕೆದಾರರು ಮೆಸೆಂಜರ್ ರೂಮ್ಸ್‌ಗಳಿಗೆ ವಾಟ್ಸಾಪ್‌ ಮೂಲಕ ತೆರಳಿದರೆ ಆ ಸಮಯದಲ್ಲಿ ವಾಟ್ಸಾಪ್ ಗ್ರೂಪ್ ವೀಡಿಯೊ ಕರೆಯನ್ನು ಸ್ವಿಕರಿಸುವುದಕ್ಕೆ ಅವಕಾಶವನ್ನು ನೀಡದಿರುವ ಸಾದ್ಯತೆ ಇದೆ. ಅಲ್ಲದೆ ವಾಟ್ಸಾಪ್ ವಿಡಿಯೋ ಕಾಲ್‌ ಒಂದೇ ವೀಡಿಯೊ ಕಾಲ್‌ ಕಡಿಮೆ ಸಂಖ್ಯೆಯ ಜನರನ್ನು ಬೆಂಬಲಿಸುತ್ತದೆ. ಆದರೆ ದೈನಂದಿನ ಸಕ್ರಿಯ ಬಳಕೆದಾರ ಮೊತ್ತವನ್ನು ಹೊಂದಿದೆ.

ವಾಟ್ಸಾಪ್

ಸದ್ಯ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನೊಂದಿಗೆ ಫೇಸ್‌ಬುಕ್‌ನ ಮೆಸೆಂಜರ್ ರೂಮ್‌ಗಳ ಶಾರ್ಟ್‌ಕಟ್ ಅನ್ನು ಎಲ್ಲಾ ಮೂರು ಪ್ಲಾಟ್‌ಫಾರ್ಮ್‌ಗಳನ್ನು ಸಂಯೋಜಿಸುವ ಪ್ಲ್ಯಾನ್‌ ಅನ್ನು ಫೇಸ್‌ಬುಕ್ ಸಿದ್ದತೆ ನಡೆಸುತ್ತಿದೆ. ಆದರೂ ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಅಪ್ಲಿಕೇಶನ್‌ಗಳಿಂದ ಪರಸ್ಪರ ಚಾಟ್ ಮಾಡಲು ಅವಕಾಶ ನೀಡುವುದು ಅಂತಿಮ ಗುರಿಯಾಗಿದೆ.

Best Mobiles in India

English summary
The aim of this feature is to make it easier for users to start a Messenger Rooms video call. It’s only a shortcut and doesn’t enable larger video calls on WhatsApp itself.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X