ಸ್ವಂತ ಆಂಡ್ರಾಯ್ಡ್ ಆಪ್‌ ಕ್ರಿಯೇಟ್ ಮಾಡುವುದು ಹೇಗೆ?

ಕೋಡಿಂಗ್ ಡಿಕೋಡಿಂಗ್ ವ್ಯವಸ್ಥೆ ಬಗ್ಗೆ ನಮಗೇನು ತಿಳಿಯುತ್ತದೆ ಎಂದು ಎಲ್ಲರೂ ಸುಮ್ಮನಾಗುತ್ತಾರೆ!. ಹಾಗಾಗಿ, ಇಂತವರ ಆಸೆಯನ್ನು ಪೋರೈಸಲು "ಆಪಿ ಪೈ" (Appy Pie) ಎನ್ನುವ ವೆಬ್‌ಸೈಟ್‌ ಒಂದು ಹುಟ್ಟಿಕೊಂಡಿದೆ!

|

ಜೀವನವನ್ನು ಸರಳೀಕರಿಸುವಂತಹ ಸಾವಿರಾರು ಆಪ್‌ಗಳು ಹುಟ್ಟುವ ಕಾಲದಲ್ಲಿ ಸ್ಮಾರ್ಟ್‌ಫೊನ್‌ಗೆ ಯಾವ ಯಾವ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಸಮಸ್ಯೆ! ಅದರ, ಜೊತೆಯಲ್ಲಿ ಸಮೀಕ್ಷೆಯೊಂದರ ಪ್ರಕಾರ ಸ್ಮಾರ್ಟ್‌ಫೊನ್ ಬಳಕೆದಾರರಲ್ಲಿ ಶೇಖಡ 80% ರಷ್ಟು ಜನರಿಗೆ ತಮ್ಮದೇ ಆಪ್‌ ಹೊಂದುವ ಆಸೆ ಇರುತ್ತದೆ ಎನ್ನಲಾಗಿದೆ!!

ವಾಟ್ಸ್ಆಪ್, ಫೇಸ್‌ಬುಕ್ ಆಪ್‌ಗಳಂತೆ ನಾವು ಕೂಡ ತಮ್ಮದೇ ಕಲ್ಪನೆ ಇರುವ ಸ್ವಂತ ಆಪ್‌ ತಯಾರಿಸಬೇಕು ಎಂಬುದು ಸ್ಮಾರ್ಟ್‌ಫೊನ್‌ ಬಳಕೆದಾರರದ ಬಹುದೊಡ್ಡ ಆಸೆಗಳಲ್ಲೊಂದು ಎಂದು ಈ ಸಮೀಕ್ಷೇ ತಿಳಿಸಿದೆ!! ಇನ್ನು ಮೊಬೈಲ್‌ ತಂತ್ರಜ್ಞಾನದಲ್ಲಿ ಏನು ತಿಳಿಯದ ನಮಗೆ ಇದೆಲ್ಲಾ ಸಾಧ್ಯವೆ? ಕೋಡಿಂಗ್ ಡಿಕೋಡಿಂಗ್ ವ್ಯವಸ್ಥೆ ಬಗ್ಗೆ ನಮಗೇನು ತಿಳಿಯುತ್ತದೆ ಎಂದು ಎಲ್ಲರೂ ಸುಮ್ಮನಾಗುತ್ತಾರೆ!. ಹಾಗಾಗಿ, ಇಂತವರ ಆಸೆಯನ್ನು ಪೋರೈಸಲು "ಆಪಿ ಪೈ" (Appy Pie) ಎನ್ನುವ ವೆಬ್‌ಸೈಟ್‌ ಒಂದು ಹುಟ್ಟಿಕೊಂಡಿದೆ!

ಮೊದಲಿಗಿಂತಲೂ ಸುರಕ್ಷಿತವಾದ ಪೇಟಿಎಂ!! ಇ-ವಾಲೆಟ್ ಹೊಸ ಫೀಚರ್ ಏನು?

ಈ ಆಪ್‌ ಮೂಲಕ ನಿಮ್ಮದೇ ಆಪ್‌ ಒಂದನ್ನು ಕ್ರಿಯೇಟ್‌ ಮಾಡಿ ಸಾರ್ವಜನಿಕವಾಗಿ ಅದನ್ನು ಬಳಕೆಮಾಡಿಕೊಳ್ಳಬಹುದಾಗಿದೆ. ಹಾಗಾದರೆ, "ಆಪಿ ಪೈ" (Appy Pie) ಮೂಲಕ ನಮ್ಮದೇ ಸ್ವಂತ ಆಪ್‌ ಅನ್ನು ಹೇಗೆ ಕ್ರಿಯೇಟ್ ಮಾಡುವುದು ಎಂಬುದನ್ನು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1

#1 "ಆಪಿ ಪೈ" (Appy Pie) ಅಫಿಷಿಯಲ್ ವೆಬ್‌ಸೈಟ್‌ ತೆರೆಯಿರಿ.

"ಆಪಿ ಪೈ" (Appy Pie) ಅಫಿಶಿಯಲ್ ತೆರೆಯಿರಿ ಮತ್ತು "create an app for free " ಎನ್ನುವ ಐಕಾನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ಯಾವ ರೀತಿಯ ವೆಬ್‌ಸೈಟ್ ಬೇಕೆಂದು ಆಯ್ಕೆ ಮಾಡಿ.

#2 ಯಾವ ರೀತಿಯ ವೆಬ್‌ಸೈಟ್ ಬೇಕೆಂದು ಆಯ್ಕೆ ಮಾಡಿ.

"create an app for free " ಎನ್ನುವ ಐಕಾನ್ ಕ್ಲಿಕ್ ಮಾಡಿದ ನಂತರ ನಿಮಗೆ ಯಾವ ವರ್ಗದ ಆಪ್‌ ಬೇಕು ಎಂಬುದನ್ನು ನಿರ್ಧರಿಸಿ. ಆನ್‌ಲೈನ್‌ ಬ್ಯುಸಿನೆಸ್, ಫೋಟೊಗ್ರಫಿ, ನ್ಯೂಸ್, ಮಾಹಿತಿ ಯಂತಹ ಹಲವು ವರ್ಗಗಳು ನಿಮಗೆ ಲಭ್ಯವಿದೆ.

#3 ಆಪ್‌ ಥೀಮ್ ಆಯ್ಕೆ ಮಾಡಿ.

#3 ಆಪ್‌ ಥೀಮ್ ಆಯ್ಕೆ ಮಾಡಿ.

ನಿಮ್ಮ ಇಷ್ಟದ ಆಪ್‌ ವರ್ಗವನ್ನು ಕ್ಲಿಕ್ ಮಾಡಿದ ನಂತರ "ಆಪಿ ಪೈ" (Appy Pie) ನಿಮಗೆ ಹಲವು ರೀತಿಯ ಆಪ್‌ ಥೀಮ್‌ಗಳನ್ನು ತೋರಿಸುತ್ತದೆ. ನಿಮ್ಮ ಆಯ್ಕೆಯ ಥೀಮ್ ಸೆಲೆಕ್ಟ್ ಮಾಡಿ. Appy Pie ನಿಮಗೆ ಡೆಮೊ ತೋರಿಸುತ್ತದೆ. ನಂತರ "Next" ಐಕಾನ್‌ ಕ್ಲಿಕ್ ಮಾಡಿ.

#4 ಆಪ್‌ ವಿವರಗಳನ್ನು ತುಂಬಿರಿ.

#4 ಆಪ್‌ ವಿವರಗಳನ್ನು ತುಂಬಿರಿ.

ಥೀಮ್ ಸೆಲೆಕ್ಟ್ ಮಾಡಿದ ನಂತರ ನೀವು ಆಪ್‌ ಡಿಸ್ಕ್ರಿಪ್ಟನ್, ಕಾಂಟ್ಯಾಕ್ಟ್ ಡಿಟೇಲ್ಸ್ ವಿವರಗಳನ್ನು ತುಂಬಿರಿ. ಜೊತೆಯಲ್ಲಿಯೇ ಆಪ್‌ ಕಲರ್, ಫಾಂಟ್‌ ಸ್ಟೈಲ್, ವಿವಿಧ ರೀತಿಯ ಐಕಾನ್‌ಗಳು ನೀವು ಆಪ್‌ಗೆ ಆಯ್ಕೆ ಮಾಡಿಕೊಳ್ಳಿ.

#5 ಸೈನ್‌ಅಪ್ ಆಗಿ ಆಪ್‌ ಕ್ರಿಯೇಟ್ ಮಾಡಿ.

#5 ಸೈನ್‌ಅಪ್ ಆಗಿ ಆಪ್‌ ಕ್ರಿಯೇಟ್ ಮಾಡಿ.

ನಿಮ್ಮ ಆಯ್ಕೆಯ ಆಪ್‌ ಅನ್ನು ರಚಿಸಿದ ನಂತರ '' Build" ಎನ್ನುವ ಐಕಾನ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ನಂತರ ನಿಮ್ಮ ಹೆಸರು ಮತ್ತು ನಿಮ್ಮ ಇ-ಮೇಲ್ ಮಾಹಿತಿಗಳ ಮೂಲಕ ಸೈನ್‌ಅಪ್ ಆಗಿ. ನಿಮಗೆ ಆಪಿ ಪೈ" (Appy Pie) ವೆಬ್‌ಸೈಟ್ ಹಲವು ಬೆಲೆಯ ಆಫರ್‌ ನೀಡಿರುತ್ತದೆ. ಹಣ ನೀಡಿ ಆಪ್ ಬ್ಯುಲ್ಡ್ ಮಾಡಬಹುದಾಗಿದ್ದು, ಕೆಲವು ತಿಂಗಳುಗಳು ಆಪ್‌ ಅನ್ನು ಉಚಿತವಾಗಿ ಪಡೆಯಬಹುದು. ಹಾಗಾಗಿ ಕೊನೆಯಲ್ಲಿ ಕಾಣುವ "Free" ಎನ್ನುವ ಐಕಾನ್‌ ಕ್ಲಿಕ್ ಮಾಡಿ.

#6 ಆಪ್‌ ಡೌನ್‌ಲೋಡ್‌ ಮಾಡಿ ಯೂಸ್‌ ಮಾಡಿ.!!

#6 ಆಪ್‌ ಡೌನ್‌ಲೋಡ್‌ ಮಾಡಿ ಯೂಸ್‌ ಮಾಡಿ.!!

ನಿಮ್ಮ ಸ್ವಂತ ಆಪ್ ಇದೀಗೆ ನಿಮ್ಮ ಸೇವೆಗೆ ಸಿದ್ದವಾಗಿದೆ. ಈ ಎಲ್ಲಾ ಸ್ಟೆಪ್‌ಗಳನ್ನು ಫಾಲೊ ಮಾಡಿದ 2 ಗಂಟೆಗಳಲ್ಲಿ ನಿಮ್ಮ ಆಪ್‌ ಕ್ರಿಯೇಟ್ ಆಗುತ್ತದೆ. ಆಪ್‌ ಡೌನ್‌ಲೋಡ್‌ ಮಾಡಿ ನಂತರ ಎಲ್ಲರಿಗೂ ಶೇರ್ ಮಾಡಿ!!. ಅಪ್‌ಡೇಟ್ ಮಾಡುವುದಿದ್ದರೆ ಮತ್ತೆ ಆಪಿ ಪೈ" (Appy Pie) ವೆಬ್‌ಸೈಟ್‌ಗೆ ಭೇಟಿ ನೀಡಿ.!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Building an app no longer needs coding knowledge. To Know More Visit To Kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X