ಪೇಟಿಎಂ ತೆರೆಯುತ್ತಿದೆ ಪೇಮೆಂಟ್ ಬ್ಯಾಂಕ್!.ತಿಳಿಯಬೇಕಿರುವ ಪೂರ್ಣ ಮಾಹಿತಿ!!?

ನಿಮ್ಮ ಪೇಟಿಎಂ ಅಕೌಂಟ್‌ನಲ್ಲಿನ ಎಲ್ಲಾ ಹಣವನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಉಚಿತವಾಗಿ ವರ್ಗಾಯಿಸುವ ಅವಕಾಶವನ್ನು ಪೇಟಿಎಂ ನೀಡಿದ್ದು, ಈ ಎಲ್ಲಾ ಸೇವೆಗಳು ಉಚಿತವಾಗಿರುತ್ತವೆ ಎಂದು ಹೇಳಿದೆ.

|

ಡಿಜಿಟಲ್ ಪೇಮೆಂಟ್ ದಿಕ್ಕನ್ನೆ ಬದಲಾಯಿಸಿದ ಪೇಟಿಎಂ ಇದೀಗ ತನ್ನದೇ ಪೇಟಿಎಂ ಪೇಮೆಂಟ್ ಬ್ಯಾಂಕ್ ತೆರೆದಿದೆ. ಒನ್97 ಕಮ್ಯುನಿಕೇಶನ್ ಸಹಯೋಗದೊಂದಿಗೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (PPBL) ತೆರೆದಿದ್ದು, ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್‌ ಶರ್ಮಾ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಶೇ.51 ಪರ್ಸೆಂಟ್‌ ಒಡೆತನ ಹೊಂದಿದ್ದಾರೆ.

ನಿಮ್ಮ ಪೇಟಿಎಂ ಅಕೌಂಟ್‌ನಲ್ಲಿನ ಎಲ್ಲಾ ಹಣವನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಉಚಿತವಾಗಿ ವರ್ಗಾಯಿಸುವ ಅವಕಾಶವನ್ನು ಪೇಟಿಎಂ ನೀಡಿದ್ದು, ಈ ಎಲ್ಲಾ ಸೇವೆಗಳು ಉಚಿತವಾಗಿರುತ್ತವೆ ಎಂದು ಹೇಳಿದೆ. ಜನವರಿ 31 ರ ವರೆಗೂ ನಿಮ್ಮ ಪೇಟಿಎಂ ವಾಲೆಟ್‌ ಹಣವನ್ನು ಯಾವುದೇ ಬ್ಯಾಂಕ್‌ಗೆ ವರ್ಗಾಯಿಸಬಹುದಾಗಿದ್ದು, ಈ ಪೇಟಿಎಂ ಬ್ಯಾಂಕ್‌ಗೆ ಜನವರಿ 31 ರ ನಂತರವೂ ಹಣ ವರ್ಗಾಯಿಸಬಹುದು ಎಂದು ಪೇಟಿಎಂ ತಿಳಿಸಿದೆ.

ವರ್ಷವೆಲ್ಲಾ ಉಚಿತ ಸೇವೆ ನೀಡಿದರೂ ಜಿಯೋಗೆ ಲಾಸ್ ಆಗೊಲ್ಲಾ!! ಹೇಗೆ?

ಇನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್‌ನಲ್ಲಿ ಇಟ್ಟಹಣಕ್ಕೆ ಬಡ್ಡಿಯನ್ನು ಸಹ ಪಡೆಯಬಹುದಾಗಿದ್ದು, ಆದರೆ ಏರ್‌ಟೆಲ್‌ನಂತೆ ಬಡ್ಡಿ ಹಣದ ದರವನ್ನು ಪೇಟಿಎಂ ತಿಳಿಸಿಲ್ಲ. ಆದರೆ, ಪೇಟಿಎಂ ಮತ್ತು ಪೇಟಿಎಂ ಬ್ಯಾಂಕ್ ನಡುವಿನ ವ್ಯವಹಾರದ ಬಗ್ಗೆ ಹಲವು ಪ್ರಶ್ನೆಗಳಿಗೆ ಪೇಟಿಎಂ ಉತ್ತರಿಸಿದ್ದು, ಅವುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನನ್ನ ಪ್ರಸ್ತುತ ಪೆಟಿಎಂ ವಾಲೆಟ್ ಗೆ ಏನಾಗುತ್ತದೆ??

ನನ್ನ ಪ್ರಸ್ತುತ ಪೆಟಿಎಂ ವಾಲೆಟ್ ಗೆ ಏನಾಗುತ್ತದೆ??

ಇದು Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ ವರ್ಗಾಯಿಸಲಾಗುವುದು, ಅದೆಂದರೆ KYC ವಾಲೆಟ್ ನಂತೆ KYC ವಾಲೆಟ್ ಮತ್ತು ಮಿನಿಮಮ್ KYC ವಾಲೆಟ್ ನಂತೆ ಮಿನಿಮಮ್ KYC ವಾಲೆಟ್ ಇದ್ದ ಹಾಗೆ.

ಪೆಟಿಎಂ ವಾಲೆಟ್ ನಲ್ಲಿರುವ ನನ್ನ ಹಣ ಏನಾಗುತ್ತದೆ?

ಪೆಟಿಎಂ ವಾಲೆಟ್ ನಲ್ಲಿರುವ ನನ್ನ ಹಣ ಏನಾಗುತ್ತದೆ?

ನಿಮ್ಮ ಹಣ ಪೆಟಿಎಂ ವಾಲೆಟ್ ನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ . ಇದು ಯಾವಾಗಲೂ ನಿಮ್ಮದು ಮತ್ತು ನೀವು ಎಂದಿಗೂ ಕಳೆದುಕೊಳ್ಳುವುದಿಲ್ಲ. ನಿಮ್ಮ ಪ್ರಸ್ತುತ ಪೆಟಿಎಂ ವಾಲೆಟ್ ನಲ್ಲಿ ಯಾವುದೇ ಬ್ಯಾಲೆನ್ಸ್ ಹೊಂದಿದ್ದರೆ, ಅದು ನಿಮ್ಮ ಹೊಸ ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ನಲ್ಲಿ ಪ್ರತಿಬಿಂಬಿಸುತ್ತದೆ
ನಿಮ್ಮ ವಾಲೆಟ್ ಕಳೆದ ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದು ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೆ, ನೀವು ಅಪ್ಲಿಕೇಶನ್, ವೆಬ್ ಅಥವಾ ಇಮೇಲ್ ಮೂಲಕ ಲಾಗ್ ಇನ್ ಮಾಡುವಾಗ ನಿರ್ದಿಷ್ಟವಾಗಿ ಅನುಮತಿ ನೀಡುವವರೆಗೆ ಇದು ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ಗೆ ವರ್ಗಾವಣೆ ಆಗುವುದಿಲ್ಲ.

 ಪೆಟಿಎಂ ಪೇಮೆಂಟ್ ಬ್ಯಾಂಕ್ ಜೊತೆ ನಾನು ಒಂದು ಬ್ಯಾಂಕ್ ಖಾತೆಯನ್ನು ಪಡೆಯುತ್ತೇನೆ?

ಪೆಟಿಎಂ ಪೇಮೆಂಟ್ ಬ್ಯಾಂಕ್ ಜೊತೆ ನಾನು ಒಂದು ಬ್ಯಾಂಕ್ ಖಾತೆಯನ್ನು ಪಡೆಯುತ್ತೇನೆ?

ಇಲ್ಲ. ಇದು ಪೆಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ಎಂಬ ಹೊಸ ಕಂಪನಿಗೆ ವಾಲೆಟ್ ಮಾಲೀಕತ್ವವನ್ನು ಕೇವಲ ವರ್ಗಾವಣೆ ಮಾಡುವುದು. ಒಮ್ಮೆ ನಾವು ಬ್ಯಾಂಕ್ ಬಿಡುಗಡೆಗೊಳಿಸಿದ ನಂತರ, ನೀವು ನಮ್ಮೊಂದಿಗೆ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲು ಆಯ್ಕೆಯನ್ನು ನೀಡಲಾಗುವುದು

ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ನಿಂದ ಇತರೆ ಯಾವುದೇ ಬ್ಯಾಂಕ್ ಗೆ ನನ್ನ ಹಣವನ್ನು ಕಳುಹಿಸಬಹುದಾ ?

ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ನಿಂದ ಇತರೆ ಯಾವುದೇ ಬ್ಯಾಂಕ್ ಗೆ ನನ್ನ ಹಣವನ್ನು ಕಳುಹಿಸಬಹುದಾ ?

ಹೌದು, ನಿಮ್ಮ ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ನಿಂದ ಇತರೆ ಯಾವುದೇ ಬ್ಯಾಂಕ್ ಗೆ ಹಣವನ್ನು ಕಳುಹಿಸಬಹುದು.

ವಾಲೆಟ್ ಬಳಕೆಯನ್ನು ಮುಂದುವರೆಸಲು, ಒಮ್ಮೆ ಪೆಟಿಎಂ ಪೇಮೆಂಟ್ ಬ್ಯಾಂಕ್ ಬಿಡುಗಡೆಗೊಂಡ ನಂತರ ಖಾತೆ ತೆರೆಯುವುದು ಕಡ್ಡಾಯವೇ?

ವಾಲೆಟ್ ಬಳಕೆಯನ್ನು ಮುಂದುವರೆಸಲು, ಒಮ್ಮೆ ಪೆಟಿಎಂ ಪೇಮೆಂಟ್ ಬ್ಯಾಂಕ್ ಬಿಡುಗಡೆಗೊಂಡ ನಂತರ ಖಾತೆ ತೆರೆಯುವುದು ಕಡ್ಡಾಯವೇ?

ನೀವು ವಾಲೆಟ್ ಬಳಸಲು ಪೆಟಿಎಂ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಅಗತ್ಯವಿಲ್ಲ.

 ಈ ವರ್ಗಾವಣೆಗೆ ನಾವು ಯಾವುದೇ ಶುಲ್ಕ ಪಾವತಿಸಬೇಕೇ?

ಈ ವರ್ಗಾವಣೆಗೆ ನಾವು ಯಾವುದೇ ಶುಲ್ಕ ಪಾವತಿಸಬೇಕೇ?

ನೀವು ಈ ವರ್ಗಾವಣೆಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ

Best Mobiles in India

Read more about:
English summary
The best mobile recharge, bill payments company Paytm opens Paytm bank to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X