ಹೊಸ ಚಾರ್ಜರ್‌ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್‌ ಚಾರ್ಜ್‌ ಸಾಧ್ಯ!

|

ಪ್ರತಿ ಸ್ಮಾರ್ಟ್‌ಫೋನ್‌ಗೆ ಅತ್ಯುತ್ತಮವಾದ ಹಾಗೂ ಅದಕ್ಕೆ ಪೂರಕವಾದ ಚಾರ್ಜರ್ ಅಗತ್ಯವಾಗಿದೆ. ಸದ್ಯ ಇತ್ತೀಚಿಗೆ ಫಾಸ್ಟ್‌ ಚಾರ್ಜಿಂಗ್‌ಗಳು ಹೆಚ್ಚು ಜನಪ್ರಿಯ ಆಗುತ್ತಿವೆ. ಫೋನ್‌ ಜೊತೆಗೆ ಚಾರ್ಜರ್‌ ನೀಡಿದ್ದರೂ, ಕೆಲವು ಸಂದರ್ಭಗಳಲ್ಲಿ ಚಾರ್ಜರ್ ಕಳೆದುಹೋದಾಗ ಅಥವಾ ಇತರೆ ಚಾರ್ಜರ್ ಸಿಗದ ಸನ್ನಿವೇಶಗಳಲ್ಲಿ ಪ್ರತ್ಯೇಕ ಬೇರೆ ಚಾರ್ಜರ್ ಬೇಕಿರುತ್ತದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಮಾರುಕಟ್ಟೆಗೆ ಭಿನ್ನ ಸಾಮರ್ಥ್ಯದ ಚಾರ್ಜರ್ ಲಭ್ಯ ಮಾಡಿವೆ. ಅಂತಹ ಸಂಸ್ಥೆಗಳ ಪೈಕಿ ರೇಗರ್ (RAEGR) ಸಹ ಪ್ರಮುಖವಾಗಿ ಕಾಣಿಸಿಕೊಂಡಿದೆ.
.

ಹೊಸ ಚಾರ್ಜರ್‌ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್‌ ಚಾರ್ಜ್‌ ಸಾಧ್ಯ!

ಹೌದು, ರೇಗರ್ (RAEGR) ಸಂಸ್ಥೆಯು ಭಿನ್ನ ಶ್ರೇಣಿಯ ಚಾರ್ಜರ್‌ಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಮತ್ತೆ ಹೊಸದಾಗಿ MagFix Arc M1050 3 ಇನ್‌ 1 ವೈರ್‌ಲೆಸ್‌ ಚಾರ್ಜರ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಚಾರ್ಜರ್ ಆಪಲ್‌ ಡಿವೈಸ್‌ಗಳಿಗೂ ಸಪೋರ್ಟ್‌ ಮಾಡುತ್ತದೆ. ಅಲ್ಲದೇ ಇದು 15W ಸಾಮರ್ಥ್ಯ ಪಡೆದಿದೆ.

ನೂತನ MagFix Arc M1050 ಅಲ್ಯೂಮಿನಿಯಂ ಮಿಶ್ರಲೋಹದ ಚೌಕಟ್ಟಿನಲ್ಲಿ ನಯವಾದ ಮತ್ತು ಸರಳವಾದ ವಿನ್ಯಾಸವನ್ನು ಹೊಂದಿದೆ. ಹಾಗೆಯೇ ಈ ಚಾರ್ಜರ್ 15W ನ ಚಾರ್ಜಿಂಗ್ ಔಟ್‌ಪುಟ್ ಅನ್ನು ಬೆಂಬಲಿಸುತ್ತದೆ. ಈ ಚಾರ್ಜರ್ ದೈತ್ಯದಿಂದ ಒಂದೇ ವೇಳೆಗೆ ಮೂರು ಡಿವೈಸ್‌ಗಳಿಗೆ ಚಾರ್ಜಿಂಗ್ ಮಾಡಬಹುದಾಗಿದೆ. ಅಂದರೆ, ಮ್ಯಾಗ್‌ಸೇಫ್ ಸಕ್ರಿಯಗೊಳಿಸಿದ ಐಫೋನ್, ಆಪಲ್ ವಾಚ್ ಮತ್ತು ಏರ್‌ಪಾಡ್ಸ್ ಸರಣಿಯ ಇಯರ್‌ಬಡ್‌ಗಳನ್ನು ಅದೇ ಸಮಯದಲ್ಲಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಬಹುದು.

ಹೊಸ ಚಾರ್ಜರ್‌ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್‌ ಚಾರ್ಜ್‌ ಸಾಧ್ಯ!

ಹಾಗಂತ ಇದು ಕೇವಲ ಆಪಲ್ ಉತ್ಪನ್ನಗಳನ್ನು ಮಾತ್ರ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಎಂದು ಇದರ ಅರ್ಥವಲ್ಲ. ಈ ಚಾರ್ಜರ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳನ್ನು ಸಹ ಬೆಂಬಲಿಸುತ್ತದೆ. ಆದಾಗ್ಯೂ, ಬಳಕೆದಾರರು ಐಫೋನ್‌ 12, ಐಫೋನ್ 13 ಮತ್ತು ಐಫೋನ್‌ 14 ಸರಣಿಯಂತಹ MagSafe ಹೊಂದಾಣಿಕೆಯ ಉತ್ಪನ್ನಗಳನ್ನು ಬಳಸಬೇಕೆಂದು ಸಂಸ್ತೆಯು ನಿರ್ದಿಷ್ಟವಾಗಿ ಶಿಫಾರಸು ಮಾಡುತ್ತದೆ.

ರೇಗರ್ MagFix Arc M1050 3-ಇನ್-1 ವೈರ್‌ಲೆಸ್ ಚಾರ್ಜರ್ ಅನ್ನು ಗ್ರಾಹಕರು ರೇಗರ್.ಕಾಮ್‌, ಅಮೆಜಾನ್‌.ಇನ್ ಮತ್ತು ಫ್ಲಿಪ್‌ಕಾರ್ಟ್‌.ಕಾಮ್‌ ತಾಣಗಳಲ್ಲಿ ಖರೀದಿಸಬಹುದಾಗಿದೆ. ಅಂದಾಹಗೆ ಈ ಚಾರ್ಜರ್ ಬೆಲೆಯು 2399 ರೂ. ಆಗಿದೆ. ಇತರೆ ಕೆಲವು ಚಾರ್ಜರ್‌ಗಳ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿರಿ.

ಸ್ಟಫ್‌ಕೂಲ್ ಡ್ಯುಯಲ್ ಪೋರ್ಟ್
ನ್ಯೂಟ್ರಾನ್ 33W GaN ಚಾರ್ಜರ್ ಸ್ಟಫ್‌ಕೂಲ್ ಡ್ಯುಯಲ್ ಪೋರ್ಟ್ ನ್ಯೂಟ್ರಾನ್ 33W ಚಾರ್ಜರ್, GaN (ಗ್ಯಾಲಿಯಮ್ ನೈಟ್ರೈಡ್) ಅನ್ನು ಬಳಸುತ್ತದೆ. ಇದು ಚಾರ್ಜರ್‌ಗಳು ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟ್ ಫ್ಯಾಕ್ಟರ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಡಿಮೆ ಶಾಖವನ್ನು ಉತ್ಪಾದಿಸುವಂತೆ ಮಾಡುತ್ತದೆ. ಇದರರ್ಥ ನ್ಯೂಟ್ರಾನ್ 33W ಅತ್ಯಂತ ಸಾಂದ್ರವಾಗಿರುತ್ತದೆ ಮತ್ತು ಶಕ್ತಿಯ ಸಮರ್ಥವಾಗಿದೆ.

ಹೊಸ ಚಾರ್ಜರ್‌ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್‌ ಚಾರ್ಜ್‌ ಸಾಧ್ಯ!

ಇದು USB PD 33W ಚಾರ್ಜಿಂಗ್ ವೇಗವನ್ನು ಒದಗಿಸಬಹುದು. ಇದರ ಜೊತೆಗೆ, ಅದರ USB PD PPS 25W ಸಾಮರ್ಥ್ಯವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌, ಗ್ಯಾಲಕ್ಸಿ S21/S22, ಪಿಕ್ಸಲ್‌ 6 ಮತ್ತು ಪಿಕ್ಸಲ್‌ 6 ಪ್ರೊ, ಐಫೋನ್‌ 12 ಮತ್ತು ಐಫೋನ್‌ 13 ಸರಣಿಗಳು ಡಿವೈಸ್‌ಗಳಿಗೆ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ.

ಅಂಬ್ರೇನ್ 30W ಬೂಸ್ಟೆಡ್ ಸ್ಪೀಡ್
ಅಂಬ್ರೇನ್ 30W ಬೂಸ್ಟೆಡ್‌ಸ್ಪೀಡ್ ಒಂದು ಟೈಪ್-ಸಿ ಪೋರ್ಟ್ ಮತ್ತು ಒಂದು ಯುಎಸ್‌ಬಿ-ಎ ಪೋರ್ಟ್‌ನೊಂದಿಗೆ ಬರುತ್ತದೆ ಮತ್ತು 30W ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ. ಇದಲ್ಲದೆ, ಇದು USB PD ಜೊತೆಗೆ ಕ್ವಿಕ್ ಚಾರ್ಜ್ ವೇಗದ ಚಾರ್ಜಿಂಗ್ ಮಾನದಂಡಗಳೊಂದಿಗೆ ಹೊಂದಿಕೊಳ್ಳುತ್ತದೆ.

ಇದು ಶಾರ್ಟ್-ಸರ್ಕ್ಯೂಟ್ ರಕ್ಷಣೆ, ಓವರ್-ವೋಲ್ಟೇಜ್ ರಕ್ಷಣೆ, ಓವರ್‌ಲೋಡ್ ರಕ್ಷಣೆ ಮತ್ತು ತಾಪಮಾನ ರಕ್ಷಣೆ ಸೇರಿದಂತೆ ರಕ್ಷಣೆಯ ಬಹು ಪದರಗಳನ್ನು ಒಳಗೊಂಡಿದೆ. ಆಂಬ್ರೇನ್ 30W ಬೂಸ್ಟೆಡ್‌ಸ್ಪೀಡ್ ಸಹ ತುಂಬಾ ಸಾಂದ್ರವಾಗಿರುತ್ತದೆ ಮತ್ತು ಅದರೊಂದಿಗೆ ಪ್ರಯಾಣಿಸಲು ಸುಲಭವಾಗಿದೆ.

Best Mobiles in India

English summary
RAEGR Launches new MagFix Arc M1050 wireless charger. this charger is available for purchase on RAEGR official website, Amazon India, and Flipkart. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X