ಫೇಸ್‌ಬುಕ್‌, ಗೂಗಲ್‌ನಲ್ಲಿ ಥರ್ಡ್‌ ಪಾರ್ಟಿ ಆಪ್‌ಗಳಿಗೆ ಪ್ರವೇಶ ನಿರ್ಬಂಧಿಸುವುದು ಹೇಗೆ..?

By Gizbot Bureau
|

ಡಿಜಿಟಲ್‌ ಯುಗದಲ್ಲಿ ಫೇಸ್‌ಬುಕ್‌ ಮತ್ತು ಗೂಗಲ್‌ ಮಾನವನ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಹೌದು, ದಿನನಿತ್ಯ ಗೂಗಲ್‌ ಮತ್ತು ಫೇಸ್‌ಬುಕ್‌ ಬಳಕೆ ಹೆಚ್ಚುತ್ತಲಿದ್ದು, ಗೌಪ್ಯತೆಯ ಸೂಕ್ಷ್ಮತೆಯ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಅದರಂತೆ, ಕೆಲವೊಂದು ಬಾರಿ ಫೇಸ್‌ಬುಕ್ ಅಥವಾ ಗೂಗಲ್‌ನಲ್ಲಿ ಕ್ವಿಜ್‌, ಫೋಟೋ, ಪ್ರಿಡಿಕ್ಷನ್‌ಗಳು ಹಾಗೂ ಜನರನ್ನು ಹುಡುಕಲು ಅನೇಕ ಥರ್ಡ್‌ ಪಾರ್ಟಿ ಆಪ್‌, ವೆಬ್‌ಸೈಟ್‌ಗಳನ್ನು ಬಳಸಿರುವುದು ನಿಮ್ಮ ಅರಿವಿಗೆ ಬಂದಿರುತ್ತದೆ.

ಥರ್ಡ್‌ ಪಾರ್ಟಿ ಆಪ್‌

ಥರ್ಡ್‌ ಪಾರ್ಟಿ ಆಪ್‌ ಅಥವಾ ವೆಬ್‌ಸೈಟ್‌ ಬಳಸುವಾಗ ಖಾತೆಯ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತೇವೆ. ಇದು ಶಾಶ್ವತ ಪ್ರಕ್ರಿಯೆ ಆಗಿರುವುದರಿಂದ ನಮ್ಮ ವೈಯಕ್ತಿಕ ಮಾಹಿತಿನ್ನು ಸಂಗ್ರಹಿಸಲು ಥರ್ಡ್‌ ಪಾರ್ಟಿ ಆಪ್‌ಗಳಿಗೆ ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ, ಇಲ್ಲಿ, ಗೂಗಲ್ ಮತ್ತು ಫೇಸ್‌ಬುಕ್ ಅಕೌಂಟ್‌ನಿಂದ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಪ್ರವೇಶಗಳನ್ನು ತೆಗೆದುಹಾಕುವ ಬಗ್ಗೆ ತಿಳಿಸಲಾಗುತ್ತಿದ್ದು, ಆನ್‌ಲೈನ್‌ ಸುರಕ್ಷತೆ, ಗೌಪ್ಯತೆಯ ಬಗ್ಗೆಯೂ ಒಂದಿಷ್ಟು ಸಲಹೆಗಳನ್ನು ಹಂಚಿಕೊಳ್ಳಲಾಗಿದೆ. ಮುಂದೆ ನೋಡಿ..

ಗೂಗಲ್‌ನಲ್ಲಿ ಹೇಗೆ..?

ಗೂಗಲ್‌ನಲ್ಲಿ ಹೇಗೆ..?

ಅನೇಕ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಸೈನ್‌ ಇನ್‌ ಮಾಡಲು ನಿಮ್ಮ ಗೂಗಲ್‌ ಖಾತೆಯನ್ನು ಬಳಸಿದರೆ, ಆನ್‌ಲೈನ್ ಸುರಕ್ಷತೆಯ ದಿನಚರಿಯಂತೆ ನಿಮ್ಮ ಗೂಗಲ್‌ ಖಾತೆ ಪ್ರವೇಶವನ್ನು ಹೊಂದಿರುವ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೀವು ಪರಿಶೀಲಿಸಬೇಕು. ಅದಕ್ಕಾಗಿ ಮುಂದಿನ ಹಂತಗಳನ್ನು ಅನುಸರಿಸಿ.

ಹಂತ 1

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ, ಸೆಟ್ಟಿಂಗ್ಸ್‌ಗೆ ತೆರಳಿ. ನಂತರ ಅಲ್ಲಿರುವ, ಗೂಗಲ್ ಮೆನುಗೆ ನ್ಯಾವಿಗೇಟ್ ಮಾಡಿ.

ಹಂತ 2

ಮುಂದೆ, "ಅಕೌಂಟ್‌ ಸರ್ವಿಸಸ್‌" ಟ್ಯಾಪ್ ಮಾಡಿ, ಬಳಿಕ "ಆಪ್ಸ್‌ ಕನೆಕ್ಟಡ್‌"ಗೆ ಮೂವ್‌ ಮಾಡಿ.

ಹಂತ 3

ಇಲ್ಲಿ, ನಿಮ್ಮ ಗೂಗಲ್‌ ಖಾತೆಗೆ ಸಂಪರ್ಕಗೊಂಡಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ನೀವು ಕಾಣಬಹುದು. ನಿಮ್ಮ ಗೂಗಲ್‌ ಖಾತೆಯ ಕೆಲವು ಅಥವಾ ಎಲ್ಲಾ ಭಾಗಗಳಿಗೆ ನೀವು ಶಾಶ್ವತ ಪ್ರವೇಶವನ್ನು ನೀಡಿರುವುದರಿಂದ ಈ ಅಪ್ಲಿಕೇಶನ್‌ಗಳು ನಿಮ್ಮ ಡೇಟಾವನ್ನು ಪಡೆಯುತ್ತಿರಬಹುದು. ಅನುಮಾನಾಸ್ಪದವಾಗಿ ಕಾಣುವ ಅಪ್ಲಿಕೇಶನ್‌ಗಳನ್ನು ಟ್ಯಾಪ್‌ ಮಾಡಿ ಡಿಸ್‌ಕನೆಕ್ಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4

ಆಂಡ್ರಾಯ್ಡ್ ಸಾಧನದಲ್ಲಿ ಸೆಟ್ಟಿಂಗ್ಸ್‌ ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ ಕ್ರೋಮ್ ಬ್ರೌಸರ್ ಒಪನ್‌ ಮಾಡಿ. ನಿಮ್ಮ ಗೂಗಲ್‌ ಖಾತೆ ಅನುಮತಿಗಳ ಪುಟ ತೆರೆಯಲು https://myaccount.google.com/permissions ಲಿಂಕ್‌ನ್ನು ಕ್ಲಿಕ್ ಮಾಡಿ. ನಿಮ್ಮ ಐಫೋನ್ ಅಥವಾ ಕಂಪ್ಯೂಟರ್‌ನಲ್ಲಿಯೂ ಈ ವಿಧಾನ ಬಳಸಬಹುದು. ನಿಮಗೆ ಬೇಕಿಲ್ಲದ ಅಪ್ಲಿಕೇಶನ್‌ಗಳಿಂದ ಅನುಮತಿ ಹಿಂತಗೆದುಕೊಳ್ಳಲು ರಿಮೂವ್‌ ಅಕ್ಸೆಸ್‌ ಆಯ್ಕಯನ್ನು ಟ್ಯಾಪ್‌ ಮಾಡಿ.

ಫೇಸ್‌ಬುಕ್‌ನಲ್ಲಿ ಹೇಗೆ..?

ಫೇಸ್‌ಬುಕ್‌ನಲ್ಲಿ ಹೇಗೆ..?

ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಅಕೌಂಟ್‌ ಸೈನ್-ಇನ್ ವಿಷಯಕ್ಕೆ ಬಂದರೆ, ಜನ ಗೂಗಲ್‌ ಖಾತೆಗಿಂತ ಫೇಸ್‌ಬುಕ್ ಅಕೌಂಟ್‌ನ್ನು ಹೆಚ್ಚು ಬಳಸುತ್ತಾರೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಹಲವಾರು ಹಗರಣಗಳನ್ನು ಮತ್ತು ವಿವಾದಗಳನ್ನು ಫೇಸ್‌ಬುಕ್‌ಗೆ ಸಂಬಂಧಿಸಿದಂತೆ ಕಂಡಿದ್ದೇವೆ. ಇವು, ನಿಮ್ಮ ಗೌಪ್ಯತೆಗೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಎಂಬ ಆತಂಕ ಎಲ್ಲರದ್ದು.

ಥರ್ಡ್‌ ಪಾರ್ಟಿ ಕಂಪನಿಗಳೊಂದಿಗೆ ಬಳಕೆದಾರರ ಒಪ್ಪಿಗೆಯಿಲ್ಲದೆ ಬಳಕೆದಾರರ ಡೇಟಾವನ್ನು ಫೇಸ್‌ಬುಕ್‌ ಹಂಚಿಕೊಂಡಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ನೀವು ನಿಮ್ಮ ಸೈನ್-ಇನ್ ವಿಧಾನವಾಗಿ ಫೇಸ್‌ಬುಕ್ ಬಳಸುತ್ತಿದ್ದರೆ, ಅದನ್ನು ಬಳಸದಂತೆ ಶಿಫಾರಸು ಮಾಡುತ್ತೇವೆ. ಇದಲ್ಲದೆ, ನೀವು ಈಗಾಗಲೇ ಅನೇಕ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಸೈನ್ ಇನ್ ಮಾಡಲು ಫೇಸ್‌ಬುಕ್ ಅನ್ನು ಬಳಸಿದ್ದರೆ, ನೀವು ನೀಡಿದ ಅನುಮತಿಯನ್ನು ಹೇಗೆ ಹಿಂತೆಗೆದುಕೊಳ್ಳಬಹುದು ಎಂಬುದು ಇಲ್ಲಿದೆ.

ಹಂತ 1

ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಹ್ಯಾಂಬರ್‌ಗರ್ ಮೆನುವಿನ ಮೇಲೆ ಟ್ಯಾಪ್ ಮಾಡಿ. ಬಳಿಕ, ಅಲ್ಲಿನ, "ಸೆಟ್ಟಿಂಗ್ಸ್‌ ಮತ್ತು ಪ್ರೈವಸಿ" ಕ್ಲಿಕ್ ಮಾಡಿ, ನಂತರ "ಸೆಟ್ಟಿಂಗ್ಸ್‌" ತೆರೆಯಿರಿ.

ಹಂತ 2

ಮುಂದೆ, ಭದ್ರತಾ ವಿಭಾಗದ ಅಡಿಯಲ್ಲಿ "ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು" ಟ್ಯಾಪ್ ಮಾಡಿ ಮತ್ತು "ಫೇಸ್‌ಬುಕ್‌ನೊಂದಿಗೆ ಲಾಗ್ ಇನ್ ಮಾಡಿ" ಆಯ್ಕೆ ಕ್ಲಿಕ್‌ ಮಾಡಿ.

ಹಂತ 3

ಇಲ್ಲಿ, ನೀವು ಸೈನ್-ಇನ್ ವಿಧಾನವಾಗಿ ಫೇಸ್‌ಬುಕ್‌ನ್ನು ಬಳಸಿದ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಕಾಣಬಹುದು. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು, ಅದರ ಮೇಲೆ ಟ್ಯಾಪ್ ಮಾಡಿ ಹಾಗೂ ಕೆಳಗಡೆ ಸ್ಕ್ರಾಲ್ ಮಾಡಿ. ಅಂತಿಮವಾಗಿ, ನಿಮ್ಮ ಫೇಸ್‌ಬುಕ್ ಖಾತೆಯಿಂದ ನೀಡಿದ ಅನುಮತಿಯನ್ನು ಹಿಂತೆಗೆದುಕೊಳ್ಳಲು "ರಿಮೂವ್‌" ಟ್ಯಾಪ್ ಮಾಡಿ.

ಹಂತ 4

ನೀವು ಫೇಸ್‌ಬುಕ್ ಸೈನ್-ಇನ್ ವಿಧಾನವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಮತ್ತು ನಿಮ್ಮ ಫೇಸ್‌ಬುಕ್ ಅಕೌಂಟ್‌ಗೆ ಪ್ರವೇಶ ಹೊಂದಿರುವ ಎಲ್ಲಾ ಪ್ರಸ್ತುತ ಅಪ್ಲಿಕೇಶನ್‌ಗಳನ್ನು ಅಂತ್ಯಗೊಳಿಸಬಹುದು. ಅದಕ್ಕಾಗಿ, "ಪ್ರಾಶಸ್ತ್ಯಗಳು" ವಿಭಾಗದ ಅಡಿಯಲ್ಲಿ "ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಮತ್ತು ಆಟಗಳನ್ನು" ತೆರೆಯಿರಿ. ನಂತರ, ಅಲ್ಲಿರುವ "ಟರ್ನ್ ಆಫ್" ಬಟನ್ ಟ್ಯಾಪ್ ಮಾಡಿ.

ಹಂತ 5

ಮತ್ತು ನೀವು ಫೇಸ್‌ಬುಕ್ ಅಪ್ಲಿಕೇಶನ್ ಬಳಸದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನ ವೆಬ್ ಬ್ರೌಸರ್‌ನಲ್ಲಿ https://www.facebook.com/settings?tab=applications ಈ ಲಿಂಕ್ ತೆರೆಯಿರಿ. ನಂತರ, ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ ಮತ್ತು ತೆಗೆದುಹಾಕಿ.

ಒಂದಿಷ್ಟು ಸಲಹೆ..!

ಒಂದಿಷ್ಟು ಸಲಹೆ..!

ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಅಥವಾ ವೆಬ್‌ಸೈಟ್‌ಗಳಿಗೆ ನೀಡುವ ಅನುಮತಿಗಳನ್ನು ಎಚ್ಚರಿಕೆಯಿಂದ ಓದಿ. ನಿಮ್ಮ ಮೂಲ ಮಾಹಿತಿಗಿಂತ ಹೆಚ್ಚಿನದನ್ನು ಕೇಳುವ ಅಪ್ಲಿಕೇಶನ್‌ಗಳನ್ನು ಎಂದಿಗೂ ಅನುಮತಿಸಬೇಡಿ. ನಿಮ್ಮ ಗೂಗಲ್‌ ಡ್ರೈವ್ ಅಥವಾ ಜಿಮೇಲ್‌ ಪ್ರವೇಶಿಸಲು ಅಪ್ಲಿಕೇಶನ್ ಬಯಸಿದರೆ, ಮುಂದುವರಿಯಬೇಡಿ. ಬದಲಿಗೆ ಇಮೇಲ್ ಐಡಿಯೊಂದಿಗೆ ಹಸ್ತಚಾಲಿತವಾಗಿ ಸೈನ್ ಅಪ್ ಮಾಡಿ. ಹಾಗೂ ಬಲವಾದ ಪಾಸ್‌ವರ್ಡ್ ರಚಿಸಿ, ಇದಕ್ಕಾಗಿ ಪಾಸ್‌ವರ್ಡ್ ಮ್ಯಾನೇಜರ್‌ ಬಳಸಿ.

Best Mobiles in India

English summary
Remove Third-Party App Access From Facebook And Google With This Method.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X