ಸಿಗ್ನಲ್‌ ಆಪ್‌ನಲ್ಲಿ ಗ್ರೂಪ್ ರಚಿಸಲು ಈ ಕ್ರಮ ಅನುಸರಿಸಿರಿ!

|

ಜನಪ್ರಿಯ ವಾಟ್ಸಾಪ್‌ ಆಪ್‌ನಲ್ಲಿರುವಂತೆ ಸಿಗ್ನಲ್ ಅಪ್ಲಿಕೇಶನ್‌ನಲ್ಲಿಯೂ ಗ್ರೂಪ್ ರಚಿಸುವುದಕ್ಕೆ ಅವಕಾಶ ಇದೆ. ಸಿಗ್ನಲ್ ಮೆಸೆಜಿಂಗ್ ಆಪ್‌ ಇತ್ತೀಚಿಗೆ ಮುನ್ನೆಲೆಯಲ್ಲಿ ಕಾಣಿಸಿಕೊಂಡಿದ್ದು, ವಾಟ್ಸಾಪ್‌ಗೆ ಪರ್ಯಾಯ ಆಪ್‌ ಆಗಿ ಬಿಂಬಿತವಾಗಿದೆ. ಈ ಸಿಗ್ನಲ್ ಆಪ್‌ನಲ್ಲಿನ ಬಹುತೇಕ ಫೀಚರ್ಸ್‌ಗಳು ವಾಟ್ಸಾಪ್‌ನಲ್ಲಿರುವ ಜನಪ್ರಿಯ ಫೀಚರ್ಸ್‌ಗಳನ್ನು ಹೋಲುವಂತಿವೆ. ಅದೇ ರೀತಿ ಗ್ರೂಪ್ ರಚಿಸುವಂತಹ ಆಯ್ಕೆ ಸಹ ನೀಡಲಾಗಿದೆ.

ಗ್ರೂಪ್‌ಗಳಿಂದ

ಹೌದು, ಸಿಗ್ನಲ್ ಆಪ್‌ ಅಪಡೇಟ್ ಮಾಡಿರುವ ಬಳಕೆದಾರರ ಡಿವೈಸ್‌ಗಳಲ್ಲಿ ಗ್ರೂಪ್ ರಚಿಸುವ ಸೌಲಭ್ಯ ಲಭ್ಯವಿದೆ. ಆದರೆ ಡೆಸ್ಕ್‌ಟಾಪ್‌ನಲ್ಲಿ ಹೊಸ ಗ್ರೂಪ್ ರಚನೆ ಮಾಡಲು ಸಪೋರ್ಟ್‌ ಇಲ್ಲ. ಆದಾಗ್ಯೂ, ಡೆಸ್ಕ್‌ಟಾಪ್‌ನಲ್ಲಿ ಗ್ರೂಪ್‌ಗಳಿಂದ ಮೆಸೆಜ್‌ ಸ್ವೀಕರಿಸಲು ಸಾಧ್ಯವಿದೆ. ಇನ್ನು ಸಿಗ್ನಲ್ ಆಪ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗಾಗಿ ಮೂರು ಗುಂಪು ಮಾದರಿಗಳಿವೆ ಅವುಗಳು ಕ್ರಮವಾಗಿ new group, legacy group, ಮತ್ತು insecure MMS group ಆಗಿವೆ. ಇನ್ನು ಈ MMS ಗ್ರೂಪ್‌ನಲ್ಲಿ ಚಾಟ್‌ಗಳು ಖಾಸಗಿಯಲ್ಲ, ಶುಲ್ಕ ಇರುತ್ತದೆ ಹಾಗೂ ಕೇವಲ 10 ಸದಸ್ಯರನ್ನು ಮಾತ್ರ ಸೇರಿಸಬಹುದು.

ವೈಫೈ

ಸಿಗ್ನಲ್‌ನ ಹೊಸ ಗ್ರೂಪ್‌ಗಳಲ್ಲಿ ವೈಫೈ ಅಥವಾ ಮೊಬೈಲ್ ಡೇಟಾದ ಮೂಲಕ ಸಂದೇಶಗಳನ್ನು ಕಳುಹಿಸಲು ಬಳಕೆದಾರರಿಗೆ ಅವಕಾಶ ಇರುತ್ತದೆ. ಹಾಗೆಯೇ ಬಳಕೆದಾರರಿಗೆ ಗುಂಪು ಲಿಂಕ್ ಅಥವಾ ಕ್ಯೂಆರ್ ಕೋಡ್ ಮೂಲಕ ಆಹ್ವಾನಿಸಲು ಅನುವು ಮಾಡಿಕೊಡುತ್ತದೆ. ಹಾಗಾದರೇ ಸಿಗ್ನಲ್‌ನಲ್ಲಿ ಹೊಸ ಗ್ರೂಪ್‌ ಅನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಆಂಡ್ರಾಯ್ಡ್‌ ಮತ್ತು iOS ಬಳಕೆದಾರರು ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್‌ ಮತ್ತು iOS ಬಳಕೆದಾರರು ಈ ಕ್ರಮ ಅನುಸರಿಸಿ:

- ಸಿಗ್ನಲ್‌ನಲ್ಲಿ, ಹೊಸ ಗುಂಪನ್ನು ರಚಿಸುವುದನ್ನು ಟ್ಯಾಪ್ ಮಾಡಿ.

- ಕಾಂಟ್ಯಾಕ್ಟ್‌ಗಳನ್ನು ಆಯ್ಕೆ ಮಾಡಿ ಅಥವಾ ಸಂಖ್ಯೆಗಳನ್ನು ನಮೂದಿಸಿ.

- ಹೊಸ ಗುಂಪು ಸದಸ್ಯರ ಮಿತಿಯನ್ನು 1000 ಹೊಂದಿದೆ.

- ಗುಂಪು ಪ್ರಕಾರವನ್ನು ನೋಡಲು NEXT ಟ್ಯಾಪ್ ಮಾಡಿ.

ಕಾಂಟ್ಯಾಕ್ಟ್‌ ಹೆಸರನ್ನು ತೆಗೆದುಹಾಕಲು ಬಳಕೆದಾರರು ಅದನ್ನು ಟ್ಯಾಪ್ ಮಾಡಬೇಕು.

ಕಾಂಟ್ಯಾಕ್ಟ್‌ ಹೆಸರನ್ನು ತೆಗೆದುಹಾಕಲು ಬಳಕೆದಾರರು ಅದನ್ನು ಟ್ಯಾಪ್ ಮಾಡಬೇಕು.

- ಗುಂಪಿನ ಹೆಸರನ್ನು ಆಯ್ಕೆಮಾಡಿ ಮತ್ತು ಸೇರಿಸಿ.

- Create ಟ್ಯಾಪ್ ಮಾಡಿ.

- ಹೊಸ ಗುಂಪು ಮತ್ತು legacy group ನಿಮ್ಮ ಚಾಟ್ ಪಟ್ಟಿಯಲ್ಲಿ ಮತ್ತು ಗುಂಪು ಸದಸ್ಯರ ಚಾಟ್ ಪಟ್ಟಿಯಲ್ಲಿ ಕಾಣಿಸುತ್ತದೆ.

- ಸದಸ್ಯರು ಗುಂಪಿನಲ್ಲಿ ಮೆಸೆಜ್ ಕಳುಹಿಸುವ ಮೊದಲು ಮೆಸೆಜ್ ವಿನಂತಿ ಅಥವಾ ಆಹ್ವಾನವನ್ನು ಸ್ವೀಕರಿಸಬೇಕಾಗಬಹುದು.

Most Read Articles
Best Mobiles in India

English summary
Tech Tips: Signal lets users create groups with up to 1000 members, here is how to create one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X