2017 ರಲ್ಲಿ ಎಲ್ಲರೂ ಬ್ಯುಸಿನೆಸ್‌ಮ್ಯಾನ್‌ ಆಗಲು ಬಹುದೊಡ್ಡ ವೇದಿಕೆ ಸೃಷ್ಟಿ!! ಏನದು?

Written By:

ಮಾರುಕಟ್ಟೆಯಲ್ಲಿ ತನ್ನ ವಸ್ತುಗಳನ್ನು ಹೇಗೆ ಮಾರಾಟಮಾಡಬೇಕು ಎನ್ನುವುದೇ ಬಹುತೇಕ ಬ್ಯುಸಿನೆಸ್ ಮ್ಯಾನ್‌ ಕನಸುಗಾರರ ದೊಡ್ಡ ಸಮಸ್ಯೆ.! ಈ ಸಮಸ್ಯೆಯಿಂದಲೇ ಎಷ್ಟೋ ಭವಿಷ್ಯದ ಬ್ಯುಸಿನೆಸ್‌ಮ್ಯಾನ್‌ಗಳ ಜೀವನ ನಿಂತ ನೀರಂತಾಗಿರುತ್ತದೆ.! ಹಾಗಾಗಿ, ಇಂತವರಿಗಾಗಿಯೇ ಮಾರುಕಟ್ಟೆಯನ್ನು ಒದಗಿಸುವ ಆಪ್‌ ಒಂದು ಬಂದಿದೆ!!

ಹೌದು, ಚಿತ್ರಕಲೆ, ಕರಕುಶಲ ವಸ್ತುಗಳು ಹೀಗೆ ಯಾವುದೇ ರೀತಿಯ ವಸ್ತುಗಳನ್ನಾದರೂ ಮಾರಾಟ ಮಾಡಬಹುದಾದ ಮತ್ತು ಇದಕ್ಕೆ ಯಾವುದೇ ರೀತಿಯ ಶುಲ್ಕ, ನಿರ್ವಹಣಾ ವೆಚ್ಚ ನೀಡದೇ ವ್ಯವಹಾರಮಾಡಬಹುದಾದ 'ಶಾಪ್‌ಮ್ಯಾಟಿಕ್‌ ಗೊ' ಎನ್ನುವ ಆಂಡ್ರಾಯ್ಡ್ ಆಪ್‌ ಬಿಡುಗಡೆಯಾಗಿದೆ.!

ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

ಅಮೆಜಾನ್‌, ಫ್ಲಿಪ್‌ಕಾರ್ಟ್‌ ನಂತಹ ವೇದಿಕೆ ಬಳಸಿಕೊಳ್ಳಲು ನೋಂದಣಿ ಅಗತ್ಯವಿದೆ. ವರ್ಗಾವಣೆ ಮೊತ್ತ ಶೇ 30ರವರೆಗೆ ಪಾವತಿಸಬೇಕಾಗುತ್ತದೆ. ಆದರೆ, ಈ ಆಪ್‌ನಲ್ಲಿ ಅಂತಹ ಯಾವುದೇ ನೋಂದಣಿ, ದಾಖಲೆಗಳ ಪರಿಶೀಲನೆ ಇರುವುದಿಲ್ಲ. ಕೇವಲ 2 ನಿಮಿಷದಲ್ಲಿ ಯಾರು ಬೇಕಾದರೂ ತಮ್ಮ ಆನ್‌ಲೈನ್‌ ಸ್ಟೋರ್‌ ಸೃಷ್ಟಿಸಿಕೊಂಡು ತಮ್ಮ ವಸ್ತುಗಳನ್ನು ಮಾರಾಟ ಮಾಡಬಹುದಾಗಿದೆ.!

ಹಾಗಾಗಿ, 'ಶಾಪ್‌ಮ್ಯಾಟಿಕ್‌ ಗೊ' ಜಾಲತಾಣದ ಉಪಯೋಗವೇನು? ಮತ್ತು ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಪಯೋಗ ಏನು?

ಉಪಯೋಗ ಏನು?

ಉಚಿತವಾಗಿ ಜಾಹಿರಾತು ನೀಡುವ ಜಾಲತಾಣ ಆಗಿರುವುದರಿಂದ ಸಣ್ಣ ಉದ್ಯಮದಾರರಿಗೆ ತಮ್ಮ ಮಾರುಕಟ್ಟೆಯನ್ನು ವಸ್ತರಣೆ ಮಾಡಿಕೊಳ್ಳುವ ಅವಕಾಶ ಹೆಚ್ಚಿದೆ. ಇನ್ನು ಗ್ರಾಹಕರು ಅತ್ಯುತ್ತಮ ಕರಕುಶಲ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀಧಿಸಬಹುದಾಗಿದೆ. ಇನ್ನು ಈ ಆಪ್‌ ಹೆಚ್ಚು ಬಂಡವಾಳ ಹೊಂದಿರುವುದರಿಂದ ನಿಮ್ಮ ಜಾಹಿರಾತು ಎಲ್ಲರನ್ನು ತಲುಪುತ್ತದೆ.

ಯಾವುದೇ ನೋಂದಣಿ ಶುಲ್ಕ

ಯಾವುದೇ ನೋಂದಣಿ ಶುಲ್ಕ

‘ಶಾಪ್‌ಮ್ಯಾಟಿಕ್‌ ಗೊ' ಆಪ್‌ ಹೊಸದಾಗಿ ಉದ್ಯಮ ಆರಂಭಿಸುವ ಅಥವಾ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಅನುಕೂಲವಾದ ಆಪ್‌ ಆಗಿದ್ದು, ಯಾವುದೇ ನೋಂದಣಿ ಶುಲ್ಕ, ದಾಖಲೆಪತ್ರಗಳು ಇಲ್ಲದೇ ಮಾರಾಟಗಾರ ತನ್ನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಬಹುದು

ನಾವು ಜವಾಬ್ದಾರರಲ್ಲ!!

ನಾವು ಜವಾಬ್ದಾರರಲ್ಲ!!

‘ಮಾರಾಟಗಾರರಿಗೆ ವೇದಿಕೆ ಕಲ್ಪಿಸುವುದಷ್ಟೇ ನಮ್ಮ ಉದ್ದೇಶ. ವಸ್ತುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕಂಪೆನಿಗೆ ಯಾವುದೇ ಸಂಬಂಧ ಇಲ್ಲ. ಇದು ಮಾರಾಟಗಾರ ಮತ್ತು ಗ್ರಾಹಕರಿಗೆ ಸಂಬಂಧಪಟ್ಟಿದ್ದು. ವಿಶ್ವಾಸದ ಮೇಲೆ ಮಾರಾಟ-ಖರೀದಿ ನಡೆಯುತ್ತದೆ ಈ ಬಗ್ಗೆ ಕಂಪೆನಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ' ಎಂದು ಕಂಪೆನಿ ತಿಳಿಸಿದೆ.

ಎಚ್ಚರಿಕೆ ಇರಲಿ.'

ಎಚ್ಚರಿಕೆ ಇರಲಿ.'

ಮಾರಾಟಗಾರರು ‘ಶಾಪ್‌ಮ್ಯಾಟಿಕ್‌ ಗೊ' ಆಪ್‌ ಮೂಲಕ ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಗ್ರಾಹಕರನ್ನು ಸುಲಭವಾಗಿ ವಂಚಿಸಿ, ಕಾಲ್ಕಿಳುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಖರೀದಿದಾರರು ಎಚ್ಚರಿಕೆ ವಹಿಸುವ ಅಗತ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
mobile app for small Indian businesses and solo entrepreneurs to create their own websites in just two minutes and for free. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot