ಸ್ಮಾರ್ಟ್‌ಫೋನ್ ಚಾರ್ಜರ್ ಸಮಸ್ಯೆಗೆ ಇಲ್ಲಿದೆ ಪರಿಹಾರ

By Shwetha
|

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದೇ ದೊಡ್ಡ ರಾಮಾಯಣ ಎಂದು ಭಾವಿಸುವವರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಫೋನ್‌ಗೆ ನಾವು ಚಾರ್ಜರ್ ಅನ್ನು ಸಂಪರ್ಕಪಡಿಸಿದ್ದರೂ ಅದು ಒಮ್ಮೊಮ್ಮೆ ಸಂಪರ್ಕಗೊಳ್ಳುವುದಿಲ್ಲ. ಇದಕ್ಕೆ ಏನು ಕಾರಣ ಎಂಬುದನ್ನು ಅರಿತುಕೊಂಡು ಅದನ್ನು ನಾವು ಸರಿಪಡಿಸಿದಲ್ಲಿ ಚಾರ್ಜರ್ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಒಮ್ಮೊಮ್ಮೆ ನಿಧಾನವಾಗಿ ಚಾರ್ಜ್ ಆಗುತ್ತದೆ ಇಲ್ಲವೇ ಚಾರ್ಜ್ ಆಗುವುದೇ ಇಲ್ಲ. ಇಂತಹ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಲು ನೀವು ಸರ್ವೀಸ್ ಸೆಂಟರ್‌ಗೆ ಹೋಗಬೇಕಾದ ಅಗತ್ಯವಿರುವುದಿಲ್ಲ, ನೀವೇ ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಬನ್ನಿ ಅದೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

#1

#1

ಯುಎಸ್‌ಬಿ ಪೋರ್ಟ್‌ ಒಳಗಡೆ ಮೆಟಾಲಿಕ್ ಸರ್ಫೇಸ್‌ನೊಂದಿಗೆ ಕಡಿಮೆ ಕಂಟಾಕ್ಟ್ ಇರುವುದು ಕಾರಣವಾಗಿರುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ನಿಮ್ಮ ಡಿವೈಸ್ ಪವರ್ ಆಫ್ ಮಾಡುವುದು, ಬ್ಯಾಟರಿಯನ್ನು ಹೊರತೆಗೆಯಿರಿ ಇದನ್ನು ಹೊರತೆಗೆಯಲು ಪಿನ್, ಟೂತ್‌ಪಿಕ್ ಅನ್ನು ಬಳಸಿಕೊಂಡು ಇದನ್ನು ಮಾಡಿ.

#2

#2

ನಿಮ್ಮ ಫೋನ್ ಅನ್ನು ಹೆಚ್ಚು ನೀವು ಜೀನ್ಸ್ ಪಾಕೆಟ್‌ನಲ್ಲಿ ಇರಿಸುತ್ತೀರಿ ಎಂದಾದಲ್ಲಿ, ಯುಎಸ್‌ಬಿ ಚಾರ್ಜ್ ಪೋರ್ಟ್‌ನ ಧೂಳನ್ನು ನಿವಾರಿಸಿ.

#3

#3

ನಿಮ್ಮ ಕೇಬಲ್ ಡಿವೈಸ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ. ಇದು ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಹೊಸ ಕೇಬಲ್ ಪಡೆದುಕೊಳ್ಳಿ.

#4

#4

ಒಂದೇ ರೀತಿಯ ಚಾರ್ಜರ್ ಅಥವಾ ಕೇಬಲ್ ಸಮ್ಮಿಶ್ರಣವನ್ನು ಬಳಸಿ ವಿವಿಧ ಡಿವೈಸ್‌ಗಳಲ್ಲಿ ಇದನ್ನು ಪ್ರಯೋಗಿಸಿ. ಡೀಫಾಲ್ಟ್ ಉತ್ಪನ್ನದ ಸಾಧ್ಯತೆಯನ್ನು ಇದು ಎಲಿಮಿನೇಟ್ ಮಾಡುತ್ತದೆ.

#5

#5

ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬರುವುದಿಲ್ಲ, ವರ್ಷಗಳ ನಂತರ ಚಾರ್ಜ್ ಹಿಡಿದಿಡಲು ಇವುಗಳು ಅಸಾಮರ್ಥ್ಯಗೊಳ್ಳುತ್ತವೆ. ನಿಮ್ಮ ಫೋನ್ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ.

Most Read Articles
Best Mobiles in India

English summary
Well, it is a very common complaint for many of us, so here are a few solutions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X