ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?

By Shwetha
|

ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿ ಹೆಸರುವಾಸಿಯಾಗಿರುವ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅತ್ಯುಪಯುಕ್ತ ಅಂಶಗಳನ್ನು ಹೊರತಂದಿದೆ. ಸ್ವತಂತ್ರ ವೇದಿಕೆಯಾಗಿ ಹೆಸರುವಾಸಿಯಾಗಿರುವ ಆಂಡ್ರಾಯ್ಡ್ ಮಾಲ್‌ವೇರ್ ಮತ್ತು ವೈರಸ್ ದಾಳಿಗೆ ಶೀಘ್ರವಾಗಿ ತುತ್ತಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ವೈರಸ್ ದಾಳಿಗೆ ತುತ್ತಾಗಿದೆ ಎಂದಾದಲ್ಲಿ ಚಿಂತಿಸದಿರಿ ನಮ್ಮ ಬಳಿ ಇದೆ ಅದಕ್ಕೆ ಪರಿಹಾರ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ವೈರಸ್ ಅನ್ನು ನಿವಾರಿಸುವುದು ಹೇಗೆ ಎಂಬುದನ್ನು ಕುರಿತು ಮಾಹಿತಿಯನ್ನು ನಾವು ನೀಡುತ್ತಿದ್ದು ಕೆಳಗಿನ ಸ್ಲೈಡರ್‌ನಲ್ಲಿ ಮಾಹಿತಿಯನ್ನು ನೋಡಿ.

#1

#1

ಯಾವುದೇ ಮಾಲ್‌ವೇರ್‌ನಿಂದ ಡಿವೈಸ್ ಅನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅದನ್ನು ಸೇಫ್ ಮೋಡ್‌ನಲ್ಲಿರಿಸುವುದು ಮುಖ್ಯವಾಗಿದೆ. ಸೇಫ್ ಮೋಡ್ ಅನ್ನು ಸಕ್ರಿಯಗೊಳಿಸಲು, ಪವರ್ ಆಫ್ ಆಯ್ಕೆಯನ್ನು ಪಡೆದುಕೊಳ್ಳಲು ಪವರ್ ಬಟನ್ ಒತ್ತಿರಿ ತದನಂತರ ಸೇಫ್ ಮೋಡ್ ಆಪ್ಶನ್‌ನಲ್ಲಿ ಮರುಪ್ರಾರಂಭಿಸಲು ಪವರ್ ಆಫ್ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ

#2

#2

ಡಿವೈಸ್‌ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಡೌನ್‌ಲೋಡೆಡ್ ಟ್ಯಾಬ್ ಅಡಿಯಲ್ಲಿ ಅಪ್ಲಿಕೇಶನ್ ಆರಿಸಿ. ಡಿವೈಸ್‌ನಲ್ಲಿ ಚಾಲನೆಯಾಗದೇ ಇರುವ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಕಂಡಲ್ಲಿ ಆ ಪಟ್ಟಿಗೆ ಹೋಗಿ

#3

#3

ದೋಷಪೂರಿತ ಅಪ್ಲಿಕೇಶನ್ ಮೇಲೆ ಸ್ಪರ್ಶಿಸಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ.

#4

#4

ಇದೀಗ, ಡಿವೈಸ್ ಅಡ್‌ಮಿಸ್ಟ್ರೇಟರ್‌ಗೆ ಹೋಗಿ. ಅಡ್‌ಮಿನಿಸ್ಟ್ರೇಟರ್ ಸ್ಟೇಟಸ್‌ನೊಂದಿಗೆ ಅಪ್ಲಿಕೇಶನ್‌ಗಳ ಪೂರ್ಣ ಪಟ್ಟಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನೀವು ತೆಗೆದುಹಾಕಬೇಕೆಂದಿರುವ ಅಪ್ಲಿಕೇಶನ್ ಅನ್ನು ಅನ್‌ಚೆಕ್ ಮಾಡಿ

#5

#5

ದೋಷಪೂರಿತ ಅಪ್ಲಿಕೇಶನ್‌ ಅನ್‌ಇನ್‌ಸ್ಟಾಲ್ ಮಾಡಿದ ನಂತರ, ಸೇಫ್ ಮೋಡ್‌ನಿಂದ ಹೊರತರಲು ಸ್ಮಾರ್ಟ್‌ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಯಾವುದೇ ವೈರಸ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಇದೀಗ ಸುರಕ್ಷಿತವಾಗಿರುತ್ತದೆ.

Best Mobiles in India

English summary
In this article we are giving you tips on how to remove virus on your smartphone in an easy way. these tips helps you to remove virus on your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X