ಆಂಡ್ರಾಯ್ಡ್ ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

By Shwetha
|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ವೆಬ್ ಸರ್ಫ್ ಮಾಡುವಾಗ, ಮಾಹಿತಿ ಪಡೆದುಕೊಳ್ಳುತ್ತಿರುವಾಗ ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಫೋನ್‌ನೊಳಗೆ ರೋಗವೊಂದು ಬೀಡುಬಿಡುತ್ತದೆ. ಇದು ಒಂದು ತರಹ ಗ್ಯಾಂಗ್ರಿನ್‌ನಂತೆ .ಮೊದಲು ನಿಧಾನಕ್ಕೆ ನಿಮ್ಮ ಫೋನ್‌ ಅನ್ನು ಹಂತ ಹಂತವಾಗಿ ಆಕ್ರಮಿಸಿ ನಂತರ ತನ್ನ ಇರುವಿಕೆಯನ್ನು ತಿಳಿಯಪಡಿಸುತ್ತದೆ. ಇದು ಬೇರೇನೂ ಅಲ್ಲ ಹೆಚ್ಚಿನ ಫೋನ್ ಬಳಕೆದಾರರನ್ನು ಕಾಡುವ ವೈರಸ್ ದಾಳಿ ಇದಾಗಿದೆ.

ಓದಿರಿ: ಐಫೋನ್ ಬಿಸಿಯಾಗುತ್ತಿದೆ - ಪರಿಹಾರಗಳೇನು?

ನಿಮ್ಮ ಫೋನ್‌ನಲ್ಲಿ ವೈರಸ್ ಇದೆ ಎಂದಾದಲ್ಲಿ ನೀವು ಗಾಬರಿಪಡಬೇಕಾದ ಅಗತ್ಯವೇನಿಲ್ಲ. ಅಥವಾ ಆಂಟಿವೈರಸ್ ಅನ್ನು ಫೋನ್‌ನಲ್ಲಿ ಅಳವಡಿಸಿಕೊಂಡಿಲ್ಲ ಎಂದಾದಲ್ಲಿ ಫೋನ್‌ಗೆ ಏನೋ ಸಂಭವಿಸಬಹುದೆಂದು ಹೆದರಬೇಕಾಗಿಲ್ಲ. ಈ ವೈರಸ್ ಅನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿರುವ ಟಿಪ್ಸ್‌ಗಳ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಸೇಫ್ ಮೂಡ್‌ಗೆ ಸ್ಮಾರ್ಟ್‌ಫೋನ್ ರೀಬೂಟ್ ಮಾಡಿ

ಸೇಫ್ ಮೂಡ್‌ಗೆ ಸ್ಮಾರ್ಟ್‌ಫೋನ್ ರೀಬೂಟ್ ಮಾಡಿ

ನಿಮ್ಮ ಫೋನ್ ಅನ್ನು ನೀವು ಸೇಫ್ ಮೂಡ್‌ಗೆ ಹಾಕಬೇಕು, ಇದು ಯಾವುದೇ ಮಾಲ್‌ವೇರ್ ಇರುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಚಾಲನೆಯಾಗದಂತೆ ನಿರ್ಬಂಧಿಸುತ್ತದೆ.

ಸೇಫ್ ಮೋಡ್

ಸೇಫ್ ಮೋಡ್

ಸೇಫ್ ಮೋಡ್ ಅನ್ನು ಸಕ್ರಿಯಗೊಳಿಸಲು, ಪವರ್ ಬಟನ್ ಅನ್ನು ಒತ್ತಿಹಿಡಿದು ಅದನ್ನು ಪವರ್ ಆಫ್‌ ಮೋಡ್‌ಗೆ ತನ್ನಿ. ನಂತರ ಪವರ್ ಆಫ್ ಬಟನ್ ಅನ್ನು ಒತ್ತಿಹಿಡಿದುಕೊಂಡು ಸೇಫ್ ಮೋಡ್ ಆಪ್ಶನ್‌ಗೆ ರೀಸ್ಟಾರ್ಟ್ ಆಗುವಂತೆ ಮಾಡಿ.

ಡಿವೈಸ್ ಸೆಟ್ಟಿಂಗ್ಸ್

ಡಿವೈಸ್ ಸೆಟ್ಟಿಂಗ್ಸ್

ಡಿವೈಸ್ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಡೌನ್‌ಲೋಡೆಡ್ ಟ್ಯಾಬ್ ಅಡಿಯಲ್ಲಿ ಅಪ್ಲಿಕೇಶನ್ ಆರಿಸಿ.

ಇನ್‌ಸ್ಟಾಲ್ ಆದ ಅಪ್ಲಿಕೇಶನ್‌

ಇನ್‌ಸ್ಟಾಲ್ ಆದ ಅಪ್ಲಿಕೇಶನ್‌

ಡಿವೈಸ್‌ನಲ್ಲಿ ಚಾಲನೆಯಾಗದೇ ಇರುವ ಇನ್‌ಸ್ಟಾಲ್ ಆದ ಅಪ್ಲಿಕೇಶನ್‌ಗಳ ಪಟ್ಟಿಯಿದ್ದಲ್ಲಿ ಇದಕ್ಕೆ ಅದಕ್ಕೆ ಹೋಗಿ.

 ದೋಷಪೂರಿತ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ

ದೋಷಪೂರಿತ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ

ದೋಷಪೂರಿತ ಅಪ್ಲಿಕೇಶನ್ ಸ್ಪರ್ಶಿಸಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ.

ವೈರಸ್‌ ಡಿವೈಸ್‌ನ ಸಂಪೂರ್ಣ ಆಡಳಿತ

ವೈರಸ್‌ ಡಿವೈಸ್‌ನ ಸಂಪೂರ್ಣ ಆಡಳಿತ

ಹೆಚ್ಚಿನ ಸಂದರ್ಭಗಳಲ್ಲಿ, ಅನ್‌ಇನ್‌ಸ್ಟಾಲ್ ಬಟನ್ ಕಂದು ಬಣ್ಣದ್ದಾಗಿರುತ್ತದೆ, ಏಕೆಂದರೆ ವೈರಸ್‌ ಡಿವೈಸ್‌ನ ಸಂಪೂರ್ಣ ಆಡಳಿತವನ್ನು ವಹಿಸಿಕೊಂಡಿರುತ್ತದೆ.

ಡಿವೈಸ್ ಅಡ್ಮಿನಿಸ್ಟ್ರೇಟರ್

ಡಿವೈಸ್ ಅಡ್ಮಿನಿಸ್ಟ್ರೇಟರ್

ಈಗ, ಡಿವೈಸ್ ಅಡ್ಮಿನಿಸ್ಟ್ರೇಟರ್‌ಗೆ ಹೋಗಿ. ಇಲ್ಲಿ ಅಡ್ಮಿನಿಸ್ಟ್ರೇಟರ್ ಸ್ಥಿತಿಯೊಂದಿಗೆ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೀವು ಪಡೆದುಕೊಳ್ಳುವಿರಿ.

ಅನ್‌ಚೆಕ್

ಅನ್‌ಚೆಕ್

ನೀವು ತೆಗೆದುಹಾಕಬೇಕೆಂದಿರುವ ಅಪ್ಲಿಕೇಶನ್ ಅನ್ನು ಅನ್‌ಚೆಕ್ ಮಾಡಿದರೆ ಆಯಿತು, ಮುಂದಿನ ಪರದೆಯಲ್ಲಿ ಡಿಆಕ್ಟಿವೇಟ್ ಸ್ಪರ್ಶಿಸಿ

ನಾರ್ಮಲ್ ಮೋಡ್‌ಗೆ ರೀಸ್ಟಾರ್ಟ್ ಮಾಡಿ

ನಾರ್ಮಲ್ ಮೋಡ್‌ಗೆ ರೀಸ್ಟಾರ್ಟ್ ಮಾಡಿ

ದೋಷಪೂರಿತ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ ನಂತರ, ಸೇಫ್ ಮೋಡ್‌ನಿಂದ ನಿಮ್ಮ ಫೋನ್ ಅನ್ನು ಹೊರತೆಗೆಯಲು ರೀಸ್ಟಾರ್ಟ್ ಮಾಡಿ.

ಸ್ಮಾರ್ಟ್‌ಫೋನ್ ಸುರಕ್ಷಿತ

ಸ್ಮಾರ್ಟ್‌ಫೋನ್ ಸುರಕ್ಷಿತ

ಯಾವುದೇ ವೈರಸ್‌ಗಳಿಲ್ಲದೆ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರುತ್ತದೆ.

Best Mobiles in India

English summary
Here are the steps to remove virus from Android smartphone or tablet. Take a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X