ಅಳಿಸಿ ಹೋದ ಎಸ್‌ಎಮ್‌ಎಸ್ ಮರುಪಡೆದುಕೊಳ್ಳುವುದು ಹೇಗೆ?

By Shwetha
|

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅಕಸ್ಮಾತ್ತಾಗಿ ನೀವು ಸಂದೇಶಗಳನ್ನು ಕಳೆದುಕೊಂಡಿದ್ದೀರಾ? ಹಾಗಿದ್ದರೆ ಇನ್ನೇನು ಮಾಡುವುದು ಎಂದು ಚಿಂತಿತರಾಗಿದ್ದೀರಾ? ಚಿಂತೆ ಬಿಡಿ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಅದ್ಭುತ ಉಪಾಯವೊಂದನ್ನು ಹೊರತಂದಿದ್ದೇವೆ.

ನಿಮ್ಮ ಅಳಿಸಿ ಹೋದ ಸಂದೇಶಗಳನ್ನು ಮರುಪಡೆದುಕೊಳ್ಳಲು ಹಲವಾರು ವಿಧಾನಗಳಿದ್ದು ಅವುಗಳನ್ನು ಕೆಲವೇ ಕೆಲವು ಹಂತಗಳನ್ನು ಅನುಸರಿಸುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ. ಆನ್‌ಲೈನ್ ಅಥವಾ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಇದಕ್ಕೆ ಪರಿಹಾರೋಪಾಯಗಳನ್ನು ಅನ್ವೇಷಿಸಿ ಸಂದೇಶಗಳನ್ನು ಮರುಪಡೆದುಕೊಳ್ಳಬಹುದು.

ವಂಡರ್ ಶೇರ್ ಟೂಲ್ ಅನ್ನು ಬಳಸಿಕೊಂಡು ಅಳಿಸಿ ಹೋದ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೆಳಗಿನ ವಿಧಾನಗಳಿಂದ ತಿಳಿದುಕೊಳ್ಳೋಣ.

#1

#1

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸೆಟ್ಟಿಂಗ್ಸ್ > ಅಬೌಟ್ ಫೋನ್ > ಬಿಲ್ಡ್ ನಂಬರ್‌ಗೆ ಹೋಗಿ. ಈಗ ಬಿಲ್ಡ್ ನಂಬರ್ ಮೇಲೆ ತಟ್ಟುತ್ತಲೇ ಇರಿ. ಡೆವಲಪರ್ ಆಪ್ಶನ್ಸ್ ಸಕ್ರಿಯಗೊಂಡಿದೆ ಎಂದು ಹೇಳುವಲ್ಲಿವರೆಗೆ ಈ ಕ್ರಿಯೆಯನ್ನು ನೀವು ಮಾಡಬೇಕು.

#2

#2

ಇದೀಗ ಸೆಟ್ಟಿಂಗ್‌ಗೆ ಹಿಂತಿರುಗಿ. ಮೆನುವಿನಲ್ಲಿ ಡೆವಲಪರ್ ಆಪ್ಶನ್ಸ್ ನಿಮಗೆ ದೊರೆಯುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಯುಎಸ್‌ಬಿ ಡೀಬಗ್ಗಿಂಗ್ ಅನ್ನು ಆಯ್ಕೆಮಾಡಿ.

#3

#3

ಯುಎಸ್‌ಬಿ ಡೀಬಗ್ಗಿಂಗ್ ಆಪ್ಶನ್ ಅನ್ನು ನೀವು ಸಕ್ರಿಯಗೊಳಿಸಿದ ನಂತರ ನಿಮ್ಮ ಕಂಪ್ಯೂಟರ್‌ಗೆ ಇದನ್ನು ಸಂಪರ್ಕಪಡಿಸಿ.

#4

#4

ಉಚಿತ ಆವೃತ್ತಿಯಾದ ವಂಡರ್ ಶೇರ್ ಟೂಲ್ ಅನ್ನು ನೀವು ಡೌನ್‌ಲೋಡ್ ಮಾಡಿಲ್ಲ ಎಂದಾದಲ್ಲಿ, ಅದನ್ನು ಇನ್‌ಸ್ಟಾಲ್ ಮಾಡಿ. ಡೇಟಾ ರಿಕವರಿಗಾಗಿ ನಿಮ್ಮ ಆಯ್ಕೆಯ ಟೂಲ್ ಅನ್ನು ಬಳಸಿಕೊಳ್ಳಬಹುದು.

#5

#5

ನಿಮ್ಮ ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಫೋನ್ ಅನ್ನು ಒಮ್ಮೆ ಸಂಪರ್ಕಗೊಳಿಸಿದ ನಂತರ, ಡೀಬಗ್ಗಿಂಗ್ ಆಯ್ಕೆ ಸಕ್ರಿಯಗೊಂಡಿದೆ ಎಂಬುದನ್ನು ಕಂಡುಕೊಳ್ಳಿ. ವಂಡರ್ ಶೇರ್ ಟ್ರಯಲ್ ಪ್ಯಾಕ್ ಅನ್ನು ರನ್ ಮಾಡಿ.

#6

#6

ನಿಮ್ಮ ಫೋನ್ ಅನ್ನು ಗುರುತಿಸಲು ರಿಕವರಿ ಪ್ರೊಗ್ರಾಮ್‌ನಲ್ಲಿರುವ ಹಂತಗಳನ್ನು ನಿಮಗೆ ಅನುಸರಿಸಬಹುದು, ಹಾಗೂ ನಿಮ್ಮ ಫೋನ್ ಅನ್ನು ಸ್ಕ್ಯಾನ್ ಮಾಡಲು ಟೂಲ್ ಅನ್ನು ಅನುಮತಿಸಿ.

#7

#7

ಸ್ಕ್ಯಾನಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿಮಗೆ ಬ್ರೌಸ್ ಮಾಡಬಹುದು ಮತ್ತು ನಿಮ್ಮ ಫೋನ್‌ನಲ್ಲಿ ಡಿಲೀಟ್ ಮಾಡಿ ಮತ್ತು ಮಾಡಿಲ್ಲದ ಫೈಲ್‌ಗಳನ್ನು ಪೂರ್ವವೀಕ್ಷಿಸಬಹುದಾಗಿದೆ. ಅಳಿಸಿ ಹೋದ ಸಂದೇಶಗಳು ಇದೀಗ ನಿಮಗೆ ಲಭ್ಯ ಮತ್ತು ರಿಕವರಿ ಮಾಡಲು ನೀವು ಬಯಸಿರುವ ಸಂದೇಶಗಳನ್ನು ಆಯ್ಕೆಮಾಡುವುದರ ಮೂಲಕ ಮರುಪಡೆದುಕೊಳ್ಳಿ ಹಾಗೂ ಕೆಳಭಾಗದಲ್ಲಿ ರಿಕವರಿ ಆಪ್ಶನ್ ಅನ್ನು ಚೂಸ್ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?</a> <br /><a href=10 ಟಿಪ್ಸ್ ಬಳಸಿ ಫೋನ್ ಬ್ಯಾಟರಿ ವೃದ್ಧಿಸಿ
3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?
ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ " title="ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?
10 ಟಿಪ್ಸ್ ಬಳಸಿ ಫೋನ್ ಬ್ಯಾಟರಿ ವೃದ್ಧಿಸಿ
3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?
ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ " loading="lazy" width="100" height="56" />ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?
10 ಟಿಪ್ಸ್ ಬಳಸಿ ಫೋನ್ ಬ್ಯಾಟರಿ ವೃದ್ಧಿಸಿ
3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?
ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ

Best Mobiles in India

English summary
Have you accidentally deleted an important message in your Android smartphone, and don't know what to do? Worry not! We have a way out to discover deleted or lost messages. Read on to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X