ನೀವು ಯಾರಿಗಾದರೂ ತಪ್ಪಾಗಿ ಇ-ಮೇಲ್‌ ಸೆಂಡ್‌ ಮಾಡಿದರೇ, ಹೀಗೆ ಮಾಡಿ!

|

ಗೂಗಲ್‌ ಒಡೆತನದ ಹಲವು ಅಗತ್ಯ ಮತ್ತು ಅನುಕೂಲಕರ ಸೇವೆಗಳ ಪೈಕಿ ಜಿ-ಮೇಲ್‌ ಕೂಡಾ ಒಂದಾಗಿದೆ. ಬಹು ಉಪಯುಕ್ತವಾಗಿರುವ ಈ ಜಿ-ಮೇಲ್‌ನಲ್ಲಿ, ಬಳಕೆದಾರರು ಕೆಲವು ವ್ಯವಹಾರಗಳನ್ನು ಮೇಲ್‌ ಮೂಲಕ ನಡೆಸುತ್ತಾರೆ. ಆದ್ರೆ ಕೆಲವೊಮ್ಮೆ ಗಡಿಬಿಡಿಯಲ್ಲಿ ಅಥವಾ ಆಕಸ್ಮಿಕವಾಗಿ ತಪ್ಪಾಗಿ ಇ-ಮೇಲ್‌ ಕಳುಹಿಸಿರುತ್ತಾರೆ. ಆಗ ಹೇಗಾದರೂ ಸರಿ ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ಡಿಲೀಟ್ ಮಾಡಲು ಮುಂದಾಗುತ್ತಾರೆ. ಆದರೆ ತಪ್ಪಾಗಿ ಕಳುಹಿಸಿದ ಮೇಲ್‌, ಸ್ವೀಕರಿಸುವವರಿಗೆ ತಲುಪದಂತೆ ತಡೆಯಬಹುದಾಗಿದೆ.

ನೀವು ಯಾರಿಗಾದರೂ ತಪ್ಪಾಗಿ ಇ-ಮೇಲ್‌ ಸೆಂಡ್‌ ಮಾಡಿದರೇ, ಹೀಗೆ ಮಾಡಿ!

ಹೌದು, ಗೂಗಲ್ ಮಾಲೀಕತ್ವದ ಜಿ-ಮೇಲ್ ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಪಡಿಸಲು / ಡಿಲೀಟ್ ಮಾಡಲು ಬಳಕೆದಾರರಿಗೆ 30 ಸೆಕೆಂಡುಗಳ ವರೆಗೂ ಕಾಲಾವಕಾಶ ನೀಡಿದೆ. ತಪ್ಪಾಗಿ ಕಳುಹಿಸಿದ ಇ-ಮೇಲ್ ಅನ್ನು ಮರುಪಡೆಯಲು ಇದು ಕಳುಹಿಸುವವರಿಗೆ ಸಾಕಷ್ಟು ಬಫರ್ ಸಮಯವನ್ನು ನೀಡುತ್ತದೆ. Undo Send ಎಂಬ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪೂರ್ವನಿಯೋಜಿತವಾಗಿ ಲಭ್ಯವಿದೆ. ಜಿಮೇಲ್ ಬಳಕೆದಾರರು ಬಫರ್ ಸಮಯವನ್ನು 5 ರಿಂದ 30 ಸೆಕೆಂಡುಗಳ ನಡುವೆ ಹೊಂದಿಸಬಹುದು. ಹಾಗಾದರೇ ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಗೊಳಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಪಡಿಸಲು ಈ ಕ್ರಮ ಅನುಸರಿಸಿ:
_ ಡೆಸ್ಕ್‌ಟಾಪ್‌ನಲ್ಲಿ/ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್ ತೆರೆಯಿರಿ.
- ನಂತರ ಸೆಟ್ಟಿಂಗ್ಸ್‌ಗೆ ಹೋಗಿ.
- ಬಳಿಕ ಜನರಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಕಳುಹಿಸುವಿಕೆಯನ್ನು ರದ್ದುಮಾಡು ಆಯ್ಕೆಮಾಡಿ, ಅಲ್ಲಿ ಡ್ರಾಪ್‌ಡೌನ್ ಪಟ್ಟಿ ಕಾಣಿಸುತ್ತದೆ.(UNDO)
- ಇಲ್ಲಿಂದ, ಕಳುಹಿಸಿದ ಇ-ಮೇಲ್‌ ರದ್ದುಗೊಳಿಸಲು (UNDO) ನೀವು 5, 10, 20 ಅಥವಾ 30 ಸೆಕೆಂಡುಗಳ ನಡುವಿನ ಸಮಯವನ್ನು ಆಯ್ಕೆ ಮಾಡಬಹುದು.
- ನೀವು 30 ಸೆಕೆಂಡ್‌ ಕಾಲಮಿತಿಯನ್ನು ಆಯ್ಕೆ ಮಾಡಿಕೊಳ್ಳಿರಿ.

ಡೆಸ್ಕ್‌ಟಾಪ್‌ನಲ್ಲಿರುವ ಜಿ-ಮೇಲ್‌ ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಸ್ಕ್ರೀನ್‌ನ ಕೆಳಗಿನ ಎಡಭಾಗದಲ್ಲಿ ಮತ್ತು ಮೊಬೈಲ್‌ನಲ್ಲಿ ಕೆಳಗಿನ ಬಲಭಾಗದಲ್ಲಿ ತೇಲುತ್ತಿರುವ ಕಪ್ಪು ಪೆಟ್ಟಿಗೆಯಲ್ಲಿ ರದ್ದುಗೊಳಿಸುವ (UNDO) ಲಿಂಕ್ ಕಾಣಿಸುತ್ತದೆ. 30 ಸೆಕೆಂಡ್‌ಗಳ ಸಮಯ ಮುಗಿಯುವ ಮೊದಲು ಬಳಕೆದಾರರು UNDO ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅವರ ಇ-ಮೇಲ್‌ ಹೊರಹೋಗುವುದಿಲ್ಲ. ಬಳಕೆದಾರರು ಇಮೇಲ್ ಅನ್ನು ಮರಳಿ ಎಡಿಟ್ ಮಾಡಬಹುದು ಅಥವಾ ಅದನ್ನು ಸಂಪೂರ್ಣವಾಗಿ ಅಳಿಸಬಹುದು ಮತ್ತು ತಿರಸ್ಕರಿಸಬಹುದು ಮತ್ತು ಮೊದಲಿನಿಂದ ಇ-ಮೇಲ್ ಬರೆಯಬಹುದು.

Most Read Articles
Best Mobiles in India

English summary
Tech Tips: How To Undo A Mistakenly Sent Mail.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X