Just In
- 10 min ago
ಅಲೆಕ್ಸಾದಲ್ಲಿ ಜನ ಕೇಳಿದ ಪ್ರಶ್ನೆಗಳಿಗೆ ನೀವು ಶಾಕ್ ಆಗ್ತೀರಾ?..ಇಂಥಾ ಪ್ರಶ್ನೆನೂ ಕೇಳ್ತಾರಾ!?
- 36 min ago
ಏರ್ಟೆಲ್ ಗ್ರಾಹಕರಿಗೆ ಶಾಕ್; ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ರೀಚಾರ್ಜ್ ದರ ಹೆಚ್ಚಳ!
- 1 hr ago
ಲಾವಾ ಅಗ್ನಿ 5G ಫೋನ್ಗೆ ಭಾರೀ ಡಿಸ್ಕೌಂಟ್!..ಇಷ್ಟೊಂದು ರಿಯಾಯಿತಿ ಮತ್ತೆ ಸಿಗಲ್ಲ!
- 1 hr ago
ಮೊಟೊ G73 5G, ಮೊಟೊ G53 5G ಫೋನ್ ಲಾಂಚ್: ಬೆಲೆ ಎಷ್ಟು!?
Don't Miss
- Automobiles
ಕೈಗೆಟುಕುವ ಬೆಲೆಯ ಹುಂಡೈ ಔರಾ, ಡಿಜೈರ್, ಅಮೇಜ್, ಟಿಗೋರ್ ಕಾರುಗಳು: ಯಾವುದು ಉತ್ತಮ!
- Movies
ಬ್ಯಾನ್ ಮಾಡ್ತೇವೆ ಎಂದಿದ್ದ ಹೊಸಪೇಟೆಯಲ್ಲಿ ಹೇಗಿದೆ 'ಕ್ರಾಂತಿ' ಬುಕಿಂಗ್? ಸೋಲ್ಡ್ಔಟ್ ಆಯ್ತಾ, ಇಲ್ವಾ?
- News
Republic Day Parade 2023: ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ: ಪ್ರಲ್ಹಾದ್ ಜೋಶಿ ಹೇಳಿದ್ದೇನು?
- Sports
ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಫೋನ್ ಹ್ಯಾಕ್ ಆಗಲು ವೈ-ಫೈ ಬಳಸಲಾಗುತ್ತದೆ- ಇದನ್ನು ತಡೆಯುವುದು ಹೇಗೆ?
ಹ್ಯಾಕಿಂಗ್ ಅನ್ನುವುದು ಒಂದು ದೊಡ್ಡ ತಂತ್ರಜ್ಞಾನವೇ ಸರಿ. ಪ್ರತಿ ದಿನ ಹಲವಾರು ಹ್ಯಾಕರ್ ಗಳಿಂದಾಗಿ ಹ್ಯಾಕಿಂಗ್ ಬಹಳ ವೇಗವಾಗಿ ಬೆಳೆಯುತ್ತಲೇ ಇದೆ. ನಮ್ಮ ವಯಕ್ತಿಕ ಡಾಟಾಗಳನ್ನು ಕದಿಯಲು ಹೊಸಹೊಸ ಐಡಿಯಾಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಒಂದು ಅತೀ ಹೆಚ್ಚಾಗಿ ಬಳಕೆ ಮಾಡುವ ಮಾರ್ಗವೆಂದರೆ ವೈಫೈ ಹ್ಯಾಕಿಂಗ್.

ವೈ-ಫೈ ಹ್ಯಾಕಿಂಗ್ ನ ಎರಡು ವಿಧಾನಗಳು:
ಇದರಲ್ಲಿ ಎರಡು ಪ್ರಮುಖ ವಿಧಾನಗಳಿದೆ- ಒಂದು ನಿಮ್ಮ ವೈ-ಫೈ ಯನ್ನು ಇಂಟರಪ್ಟ್ ಮಾಡಿ ಅವರು ತಮ್ಮ ಸ್ವಂತ ಡಿವೈಸ್ ನ್ನು ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವುದು. ಎರಡನೇಯದು ಬಹಳ ಡೇಂಜರಸ್ ಆಗಿರುವ ವಿಧಾನವಾಗಿದ್ದು ವೈ-ಫೈಯನ್ನು ನಿಮ್ಮ ಕನೆಕ್ಟೆಡ್ ಡಿವೈಸ್ ನ್ನು ತಲುಪಲು ಬಳಸಿ ಹ್ಯಾಕ್ ಮಾಡುವುದು.
ಹ್ಯಾಕರ್ ಹೆಚ್ಚಿನ ಸಂದರ್ಬದಲ್ಲಿ ತಮ್ಮ ವೈಫೈಯನ್ನು ಎಲ್ಲರೂ ಬಳಸಲಿ ಎಂದು ಹಾಗೆಯೇ ಬಿಟ್ಟು ಬಿಡುತ್ತಾರೆ. ಒಮ್ಮೆ ಯಾರಾದರೂ ತಮ್ಮ ಡಿವೈಸ್ ನ್ನು ಅವರ ವೈ-ಫೈ ಗೆ ಕನೆಕ್ಟ್ ಮಾಡಿದರು ಎಂದಿಟ್ಟುಕೊಳ್ಳಿ ಆಗ ಅವರ ಡಿವೈಸ್ ನ ಮ್ಯಾಕ್ ಅಡ್ರೆಸ್ ಮತ್ತು ಐಪಿ ಅಡ್ರೆಸ್ ಗಳು ರೂಟರ್ ನಲ್ಲಿ ರಿಜಿಸ್ಟರ್ ಆಗುತ್ತದೆ.
ಹ್ಯಾಕರ್ ಗಳು ಮೊದಲು ಸ್ನೈಫಿಂಗ್ ಟೂಲ್ ಗಳನ್ನು ಬಳಸಿ ಟ್ರಾಫಿಕ್ ನ್ನು ಇಂಟರ್ ಸೆಪ್ಟ್ ಮಾಡುತ್ತಾರೆ. ಆಗ ಡಾಟಾಗಳು ಪ್ಯಾಕೆಟ್ ಗಳಂತೆ ಟ್ರಾನ್ಸ್ಫರ್ ಆಗುತ್ತದೆ. ಈ ಪ್ಯಾಕೆಟ್ ಗಳನ್ನು ಹ್ಯಾಕರ್ ಗಳು ಸುಲಭದಲ್ಲಿ ಇಂಟರ್ ಸೆಪ್ಟ್ ಮಾಡುತ್ತಾರೆ ಮತ್ತು ನಿಮ್ಮ ಬ್ರೌಸಿಂಗ್ ಹಿಸ್ಟರಿಯಲ್ಲಿ ಸುಲಭದಲ್ಲಿ ಡಿಟೆಕ್ಟ್ ಮಾಡಿಕೊಳ್ಳುತ್ತಾರೆ.

WEP ಭದ್ರತೆಯ ರೂಟರ್ ಹ್ಯಾಕ್:
WEP ಭದ್ರತೆ ಇರುವ ರೂಟರ್ ನ್ನು ಸುಲಭದಲ್ಲಿ ಹ್ಯಾಕ್ ಮಾಡಬಹುದು. WEP ಅಂದರೆ ದು ರೀತಿಯ ಎನ್ಕ್ರಿಪ್ಶನ್ ಟೂಲ್ ಆಗಿದ್ದು ಅದನ್ನು ನಿಮ್ಮ ವಯರ್ ಲೆಸ್ ಕನೆಕ್ಟಿವಿಟಿಯ ಭದ್ರತೆಗಾಗಿ ಬಳಕೆ ಮಾಡಲಾಗುತ್ತದೆ.ಆದರೆ ಇತ್ತೀಚೆಗೆ ರೂಟರ್ ಗಳು WPA-PSK ಕೀಗಳಿಂದ ಭದ್ರವಾಗಿದ್ದು ಹ್ಯಾಕ್ ಮಾಡುವುದಕ್ಕೆ ಕಠಿಣವಾಗಿದೆ. ಆದರೆ ಹ್ಯಾಕ್ ಮಾಡಲು ಅಸಾಧ್ಯವಾಗಿರುವುದೇನಲ್ಲ.

ನಾವು ಮಾಡುವ ತಪ್ಪುಗಳು:
ನಾವು ಹೆಚ್ಚಿನವರು ಮಾಡುವ ದೊಡ್ಡ ತಪ್ಪೇನೆಂದರೆ ಡೀಫಾಲ್ಟ್ ವೈ-ಫೈ ಪಾಸ್ ವರ್ಡ್ ನ್ನು ಬಳಕೆ ಮಾಡುವುದು. ಹ್ಯಾಕರ್ ಗಳು ಡೀಫಾಲ್ಟ್ ಪಾಸ್ ವರ್ಡ್ ನ್ನು ಕೇವಲ ನಿಮ್ಮ ವೈ-ಫೈ ಕನೆಕ್ಷನ್ ನ ಹ್ಯಾಕಿಂಗ್ ಗೆ ಮಾತ್ರವೇ ಬಳಸುವುದಲ್ಲ ಬದಲಾಗಿ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್ ಗೆ ಆಕ್ಸಿಸ್ ಪಡೆಯಲೂ ಕೂಡ ಸಾಧ್ಯವಾಗುತ್ತದೆ.

ವೈ-ಫೈ ಭದ್ರತೆ ಹೇಗೆ ಸಾಧ್ಯ?
ನಿಮ್ಮ ವೈಫೈಯನ್ನು ಭದ್ರವಾಗಿಡುವುದಕ್ಕೆ ಹಲವು ಮಾರ್ಗಗಳಿದೆ ಮತ್ತು ದುರುದ್ದೇಶಪೂರಿತ ವ್ಯಕ್ತಿಗಳಿಂದ ನಿಮ್ಮ ಡಿವೈಸ್ ನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿದೆ.ಉದಾಹರಣೆಗೆ ನಿಮ್ಮ ವೈ-ಫೈ ಪಾಸ್ ವರ್ಡ್ ನ್ನು ಆಗಾಗ ಬದಲಿಸುತ್ತಾ ಇರಿ. ನಿಮ್ಮ ಫೋನ್ ಅಥವಾ ಲ್ಯಾಪ್ ಟಾಪ್ ನ್ನು ಅಪರಿಚಿತ ಮತ್ತು ಓಪನ್ ವೈ-ಫೈ ಗೆ ಕನೆಕ್ಟ್ ಮಾಡಬೇಡಿ ಮತ್ತು ನಿಮ್ಮ ವೈ-ಫೈ ನ್ನು ಓಪನ್ ಮಾಡಿ ಇಡಬೇಡಿ. ಇದನ್ನು ಹೊರತು ಪಡಿಸಿ ಇತರೆ ಬಳಕೆದಾರರು ನಿಮ್ಮ ರೂಟರ್ ಗೆ ಕನೆಕ್ಟ್ ಆಗದೇ ಇರುವಂತೆ ಅವರನ್ನು ನೀವು ಬ್ಲಾಕ್ ಮಾಡಬಹುದು.ಇದನ್ನು ನೀವು ಫಿಂಗ್ ಆಪ್ ಬಳಸಿ ಸಾಧಿಸಿಕೊಳ್ಳಬಹುದು.
ಫಿಂಗ್ ಆಪ್ ಬಳಸುವುದು ಹೇಗೆ?
-- ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಫಿಂಗ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ
-- ಒಮ್ಮೆ ನಿಮ್ಮ ಡಿವೈಸ್ ನಲ್ಲಿ ಇನ್ಸ್ಟಾಲ್ ಆದ ನಂತರ ಆಪ್ ನ್ನು ತೆರೆಯಿರಿ ಮತ್ತು ಹೋಮ್ ಸ್ಕ್ರೀನ್ ನಲ್ಲಿರುವ ವೈಫೈ ಕನೆಕ್ಟಿವಿಟಿಯನ್ನು ಗಮನಿಸಿ.
-- ನೀವು ರಿಫ್ರೆಶ್ ಮತ್ತು ಸೆಟ್ಟಿಂಗ್ಸ್ ಆಯ್ಕೆಯನ್ನು ವೈಫೈ ಕನೆಕ್ಟಿವಿಟಿಯನ್ನು ಒಳಗೆ ಗಮನಿಸುತ್ತೀರಿ.
-- ರಿಫ್ರೆಶ್ ನಿಮ್ಮ ರೂಟರ್ ಗೆ ಕನೆಕ್ಟ್ ಆಗಿರುವ ಡಿವೈಸ್ ಗಳ ಪಟ್ಟಿಯನ್ನು ತೋರಿಸುತ್ತದೆ. ಅಷ್ಟೇ ಇದು ಕನೆಕ್ಟ್ ಆಗಿರುವ ಡಿವೈಸ್ ಮೊಬೈಲ್ ಅಥವಾ ಲ್ಯಾಪ್ ಟಾಪ್ ಯಾವುದು ಎಂಬುದನ್ನೂ ಕೂಡ ತಿಳಿಸುತ್ತದೆ.
--ಅಷ್ಟೇ ಅಲ್ಲ ಕನೆಕ್ಟ್ ಆಗಿರುವ ಡಿವೈಸ್ ನ ಮ್ಯಾಕ್ ಅಡ್ರೆಸ್ ಕೂಡ ತಿಳಿದುಕೊಳ್ಳಬಹುದು. ನೀವು ಬ್ಲಾಕ್ ಮಾಡಬೇಕು ಎಂದುಕೊಳ್ಳುವ ಡಿವೈಸ್ ನ ಮ್ಯಾಕ್ ಅಡ್ರೆಸ್ ನ್ನು ಕಾಪಿ ಮಾಡಿಕೊಳ್ಳಿ ಮತ್ತು ಅದನ್ನು ಬ್ಲಾಕ್ ಮಾಡಬಹುದು. ನೀವು ವೆಬ್ ಸೈಟ್ ಮತ್ತು ನೆಟ್ ವರ್ಕ್ ಪಿಂಗ್ ಮಾಡುವುದಕ್ಕೆ ಕೂಡ ಈ ಆಪ್ ನ್ನು ಬಳಕೆ ಮಾಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470