ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡಲು ಟಿಪ್ಸ್

By Shwetha
|

ಅರಿತೋ ಅರಿಯದೆಯೋ ನಿಮ್ಮ ಮಗು ನಿಮ್ಮ ಫೋನ್‌ನ ಸಂಪರ್ಕಗಳೆಲ್ಲವನ್ನೂ ತೊಡೆದು ಹಾಕಿದೆಯೇ? ಇಲ್ಲಾ ಅಚಾನಕ್ಕಾಗಿ ನೀವು ನಿಮ್ಮೆಲ್ಲಾ ಫೋನ್ ಸಂಪರ್ಕಗಳನ್ನು ಅಳಿಸಿರುವಿರಾ? ನೀವು ಹೊಸ ಫೋನ್‌ ಅನ್ನು ಖರೀದಿಸಿದಾಗ, ಅಥವಾ ನಿಮ್ಮ ಫೋನ್ ಅನ್ನು ಕಳೆದುಕೊಂಡಾಗ, ನಿಮ್ಮ ಫೋನ್ ಒಮ್ಮೆಲೇ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಸಂಪರ್ಕಗಳು ಅಳಿಸಿ ಹೋಗುವುದು ಸಾಮಾನ್ಯ.

ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದು ನಿಮ್ಮ ತಲೆ ತಿನ್ನುತ್ತಿರುವ ಪ್ರಶ್ನೆಯಾಗಿದ್ದರೆ ಇಲ್ಲಿದೆ ಅದಕ್ಕೆ ಸರಳ ಪರಿಹಾರ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಹಂತ: 1

ಹಂತ: 1

ಸೆಟ್ಟಿಂಗ್ಸ್ > ಖಾತೆಗಳು > ಗೂಗಲ್

ಹಂತ: 2

ಹಂತ: 2

ಮೇಲ್ಭಾಗದಲ್ಲಿರುವ ಖಾತೆಯನ್ನು ಸ್ಪರ್ಶಿಸಿ

ಹಂತ: 3

ಹಂತ: 3

ಸಂಪರ್ಕಗಳಿಗಾಗಿ ಚೆಕ್ ಮಾರ್ಕ್ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮೆಲ್ಲಾ ಸಂಪರ್ಕಗಳನ್ನು ನಿರಂತರವಾಗಿ ಗೂಗಲ್ ಖಾತೆಗೆ ಬ್ಯಾಕಪ್ ಮಾಡಿ. ವಿಭಿನ್ನ ತಯಾರಕರು ಮತ್ತು ಆಂಡ್ರಾಯ್ಡ್ ಆವೃತ್ತಿಗಳ ನಡುವೆ ಬದಲಾವಣೆ ಆಗುತ್ತಲೇ ಇರುತ್ತದೆ.

ಹಂತ: 4

ಹಂತ: 4

ಸಂಪರ್ಕಗಳನ್ನು ತೆರೆಯಿರಿ

ಹಂತ: 5

ಹಂತ: 5

ಬಲ ಮೇಲ್ಭಾಗದಲ್ಲಿರುವ ಮೂರು ವರ್ಟಿಕಲ್ ಡಾಟ್‌ಗಳನ್ನು ಸ್ಪರ್ಶಿಸಿ

ಹಂತ: 6

ಹಂತ: 6

ಇಂಪೋರ್ಟ್/ಎಕ್ಸ್‌ಪೋರ್ಟ್ ಆರಿಸಿ

ಹಂತ: 7

ಹಂತ: 7

ಸ್ಟೋರೇಜ್‌ಗೆ ಎಕ್ಸ್‌ಪೋರ್ಟ್ ಮಾಡಲು ಸ್ಪರ್ಶಿಸಿ.

ಹಂತ: 8

ಹಂತ: 8

ನಿಮ್ಮ ಸಂಪರ್ಕಗಳನ್ನು ಎಲ್ಲಿ ಎಕ್ಸ್‌ಪೋರ್ಟ್ ಮಾಡಲಾಗಿದೆ ಎಂಬುದನ್ನು ಪಾಪ್ ಅಪ್ ನಿಮಗೆ ತಿಳಿಸುತ್ತದೆ. ಓಕೆ ಸ್ಪರ್ಶಿಸಿ.

ಹಂತ: 9

ಹಂತ: 9

ನಿಮ್ಮ ಫೋನ್‌ನಲ್ಲಿ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಅನ್ನು ತೆರೆಯಿರಿ. ಇದು ನಿಮ್ಮಲ್ಲಿ ಇಲ್ಲ ಎಂದಾದಲ್ಲಿ, ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಹಂತ: 10

ಹಂತ: 10

ಫೈಲ್ ಮ್ಯಾನೇಜರ್‌ನಲ್ಲಿ, ಸಂಪರ್ಕಗಳು ಸಂಗ್ರಹವಾಗಿರುವಲ್ಲಿ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ. ನಿಮಗಿದು ಖಾತ್ರಿ ಇಲ್ಲ ಎಂದಾದಲ್ಲಿ, ವಿಸಿಎಫ್‌ಗಾಗಿ ಹುಡುಕಿ ಮತ್ತು ಸಂಪರ್ಕಗಳು ಪ್ರದರ್ಶನಗೊಳ್ಳುತ್ತದೆ. ಇದನ್ನು ಕಾಪಿ ಮಾಡಿ ಬೇರೆ ಸುರಕ್ಷಿತ ಜಾಗದಲ್ಲಿ ಸಂಗ್ರಹಿಸಿ. ಈ ಸಂಪರ್ಕಗಳ ಸಂಪೂರ್ಣವನ್ನು ನೀವು ಪಡೆಯಬೇಕು ಎಂದಾದಲ್ಲಿ ಸಂಪರ್ಕಗಳಲ್ಲಿ ಇಂಪೋರ್ಟ್ ಫಂಕ್ಷನ್ ಅನ್ನು ನೀವು ಬಳಸಬೇಕಾಗುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು</a><br /><a href=ಮನ ಮೆಚ್ಚಿದ ಬೆಲೆಯಲ್ಲಿ ಖರೀದಿಸಿ ಟಾಪ್ 20 ಆಂಡ್ರಾಯ್ಡ್ ಫೋನ್ಸ್
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು" title="ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು
ಮನ ಮೆಚ್ಚಿದ ಬೆಲೆಯಲ್ಲಿ ಖರೀದಿಸಿ ಟಾಪ್ 20 ಆಂಡ್ರಾಯ್ಡ್ ಫೋನ್ಸ್
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು" loading="lazy" width="100" height="56" />ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು
ಮನ ಮೆಚ್ಚಿದ ಬೆಲೆಯಲ್ಲಿ ಖರೀದಿಸಿ ಟಾಪ್ 20 ಆಂಡ್ರಾಯ್ಡ್ ಫೋನ್ಸ್
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು

Best Mobiles in India

English summary
In this article we are giving some easy steps on how to back up your contacts on smartphone.. These steps are considered as one of the finest way for back uping.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X