ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ತಿಳಿಯಲೇಬೇಕಾದ 10 ಮಾಯಾ ಸೂತ್ರಗಳು!!

|

ಈ ಡಿಜಿಟಲ್ ಯುಗದ ಮಾನವನ ಬೀಗ ಮತ್ತು ಅದರ ಕೀಲೀಕೈ ಎಲ್ಲವೂ ಸ್ಮಾರ್ಟ್‌ಫೋನ್‌ ಆಗಿದೆ ಎಂದರೆ ಆಶ್ಚರ್ಯವೇನೂ ಆಗುವುದಿಲ್ಲ. ಏಕೆಂದರೆ, ನಮ್ಮ ಎಲ್ಲಾ ಮಾಹಿತಿಗಳು ಫೋನ್‌ನಲ್ಲಿಯೇ ಸೇವ್ ಆಗಿರುವುದರಿಂದ ಅದು ಕೂಡ ನಮ್ಮ ಬೀಗ ಮತ್ತು ಅದರ ಕೀಲೀಕೈ ಎರಡು ಇದ್ದಂತೆ. ಹಾಗಾಗಿ, ನಾವು ಫೋನನ್ನು ಸುರಕ್ಷಿತವಾಗಿರಿಸುವುದು ತುಂಬಾ ಮುಖ್ಯ.

ಹೊಸದಾಗಿ ಸ್ಮಾರ್ಟ್‌ಪೋನ್ ಖರಿದಿಸುವವರು ಆ ಪೋನ್ ಹಾಳಾಗಬಾರದು ಎಂದು ಅದಕ್ಕೆ ಬ್ಯಾಕ್ ಕವರ್ ಮತ್ತು ಟೆಂಪರ್ ಗ್ಲಾಸ್ ಎಲ್ಲವನ್ನೂ ಹಾಕಿಸಿ ಸುರಕ್ಷಿತವಾಗಿಟ್ಟುಕೊಳ್ಳುತ್ತಾರೆ. ಆದರೆ, ಆ ಪೋನಿನಲ್ಲಿ ತಾನು ನೀಡುವ ಖಾಸಾಗಿ ಮಾಹಿತಿಗಳನ್ನು ರಕ್ಷಿಸಲು ಮಾತ್ರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.ಇದರಿಂದ ಅವರಿಗೆ ಡಿಜಿಟಲ್ ಸುರಕ್ಷತೆ ಎಂಬುದು ಸಿಗುವುದಿಲ್ಲ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ತಿಳಿಯಲೇಬೇಕಾದ 10 ಮಾಯಾ ಸೂತ್ರಗಳು!!

ಹಾಗಾಗಿ, ಇಂದಿನ ಲೇಖನದಲ್ಲಿ ನಮ್ಮ ಎಲ್ಲಾ ಮಾಹಿತಿಗಳು ಸ್ಮಾರ್ಟ್‌ಫೋನ್‌ನಲ್ಲಿಯೇ ಸೇವ್ ಆಗಿರುವುದರಿಂದ ಆ ಫೋನನ್ನು ಸುರಕ್ಷಿತವಾಗಿರಿಸುವುದು ಹೇಗೆ? ಇದಕ್ಕೆ ನಾವು ಅನುಸರಿಸಬೇಕಾದ ಕ್ರಮಗಳು ಯಾವುವು?, ನೀವು ಈ ಕೆಳಗಿನ ಯಾವ ತಪ್ಪನ್ನು ಮಾಡುತ್ತಿರಬಹುದು ಎಂಬೆಲ್ಲಾ ಅಂಶಗಳನ್ನು ಈ ಕೆಳಗಿನ ಸ್ಲೈಡರ್‌ಗಳ ಮೂಲಕ ಓದಿ ತಿಳಿಯಿರಿ.

ಆಯಂಟಿ ವೈರಸ್ ಇನ್ ಸ್ಟಾಲ್ ಮಾಡಿ

ಆಯಂಟಿ ವೈರಸ್ ಇನ್ ಸ್ಟಾಲ್ ಮಾಡಿ

ನಾವು ಫೋನ್‌ನಲ್ಲಿರುವ ಮಾಹಿತಿಗಳನ್ನು ಸುರಕ್ಷಿತವಾಗಿರಿಸಲು ಹೆಚ್ಚು ಗಮನ ಹರಿಸಿ, ಫೋನ್ ಸುರಕ್ಷೆಗಾಗಿ ಆಯಂಟಿ ವೈರಸ್ ಇನ್ ಸ್ಟಾಲ್ ಮಾಡಿದರೆ ಒಳ್ಳೆಯದು. ಒಂದು ಅತ್ಯುತ್ತಮ ಗುಣಮಟ್ಟದ ( ಉತ್ತಮ ಕಂಪೆನಿ) ಆಯಂಟಿ ವೈರಸ್ ನಿಮ್ಮ ಫೋನನ್ನು ಕಾಪಾಡುತ್ತದೆ. ಆಯಂಟಿ ವೈರಸ್ ಜೊತೆಗೆ ಫೋನ್‌ನನ್ನು ಸುರಕ್ಷಿತವಾಗಿರಿಸುವ ಇತರೆ ವಿಧಾನಗಳು ಸಹ ಇವೆ.

ಪಾಸ್ ವರ್ಡ್ ಸ್ಚ್ರಾಂಗ್ ಇರಲಿ

ಪಾಸ್ ವರ್ಡ್ ಸ್ಚ್ರಾಂಗ್ ಇರಲಿ

ಸ್ಮಾರ್ಟ್‌ಪೋನ್ ಬಳಕೆದಾರರು ಮಾಡುತ್ತಿರುವ ಅತಿ ದೊಡ್ಡ ತಪ್ಪುಗೊಳಲ್ಲಿ ಒಂದು ಈ ಪಾಸ್‌ವರ್ಡ್ ಬಳಕೆ. ಏಕೆಂದರೆ, ಫೋನ್ ಬಳಕೆದಾರರು ನೆನಪುಳಿಯುವಂತಹ ಸುಲಭ ಪಾಸ್‌ವರ್ಡ್‌ ಗಳನ್ನು ಮಾತ್ರ ಇಡುತ್ತಾರೆ. ಅವರಿಡುವ ಪಾಸ್‌ವರ್ಡ್‌ ಸ್ಟ್ರಾಂಗ್ ಇರುವುದಿಲ್ಲ. ನೆನಪಿಡಲು ಸುಲಭ ಎಂದು ಒಂದೇ ಪಾಸ್‌ವರ್ಡ್‌ ಕೊಡುವುದರಿಂದ ನೀವು ಹ್ಯಾಕರ್ ದಾಳಿಗೆ ಸಿಲುಕಬಹುದು.

ಗೂಗಲ್ ಪ್ಲೇ ಪ್ರೊಟೆಕ್ಟ್

ಗೂಗಲ್ ಪ್ಲೇ ಪ್ರೊಟೆಕ್ಟ್

ನಿಮ್ಮ ಪೋನಿನಲ್ಲಿ ಗೂಗಲ್ ಪ್ಲೇ ಪ್ರೊಟೆಕ್ಟ್ ಎನೇಬಲ್ ಮಾಡಿದರೆ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್ ಡೌನ್ಲೋಡ್ ಮಾಡುವ ಮುನ್ನ ಅದು ಆಪ್‌ ಅನ್ನು ಸ್ಕ್ಯಾನ್ ಮಾಡುತ್ತದೆ. ಇದರಿಂದ ನೀವು ಡೌನ್‌ಲೋಡ್ ಮಾಡುವ ಆಪ್ ಬಗ್ಗೆ ನಿಮಗೆ ತಿಳಿಯುತ್ತದೆ. ಇದನ್ನು ಎನೇಬಲ್ ಮಾಡಲು ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಸೆಕ್ಯುರಿಟಿ ಅಡಿಯಲ್ಲಿ ಆಯ್ಕೆ ಇರುತ್ತದೆ.

ಆಪ್ ಪರ್ಮಿಷನ್ ಗಮನಿಸಿ

ಆಪ್ ಪರ್ಮಿಷನ್ ಗಮನಿಸಿ

ನಿಮ್ಮ ಸ್ಮಾರ್ಟ್‌ಫೋನಿಗೆ ಯಾವುದಾದರೊಂದು ಆ್ಪ್ ಡೌನ್ ಲೋಡ್ ಮಾಡಿದಾಗ ಆ ಆಪ್ ನಿಮ್ಮ ಮಾಹಿತಿಗಳನ್ನು ಪಡೆಯಲು ಅನುಮತಿ ಕೇಳುತ್ತದೆ. ಆ ಸಮಯದಲ್ಲಿ ನೀವು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆ ಆಪ್ ಕೇಳುವ ಮಾಹಿತಿ ಅಗತ್ಯ ಎಂದು ಅನಿಸಿದರೆ ಮಾತ್ರ ಅನುಮತಿ ನೀಡಿ. ಯಾವುದಾದರೂ ಆಪ್ ಸಂದೇಹಾಸ್ಪದವಾಗಿದ್ದರೆ ಅನುಮತಿ ನಿರಾಕರಿಸಿ.

ಆಪ್ ಡೌನ್‌ಲೋಡ್ ಮುನ್ನ

ಆಪ್ ಡೌನ್‌ಲೋಡ್ ಮುನ್ನ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಪ್ಲೇ ಸ್ಟೋರ್‌ನಿಂದ ಯಾವುದಾದರೂ ಆಪ್ ಡೌನ್‌ಲೋಡ್ ಮಾಡುವ ಮುನ್ನ ಹುಷಾರಾಗಿರಿ. ಆ ಆಪ್ ಸುರಕ್ಷಿತವಾಗಿದೆಯೇ ಎಂಬುದನ್ನು ಗಮನಿಸಿ. ಪ್ಲೇ ಸ್ಟೋರ್‌ನಲ್ಲಿ ಆಪ್ ಬಗ್ಗೆ ಇರುವ ಮಾಹಿತಿ, ಮೂಲ ಯಾವುದು ಮತ್ತು ಬಳಕೆದಾರರರು ಅಲ್ಲಿ ನೀಡಿರುವ ರಿವ್ಯೂ ಓದಿದ ನಂತರವೇ ಆ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್

ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್

ನಿಮ್ಮ ಸ್ಮಾರ್ಟ್‌ಫೋನಿನ ಆಪರೇಟಿಂಗ್ ಸಿಸ್ಟಂ ಹೊಸ ಆವೃತ್ತಿ ಬಂದಾಗ ಅದನ್ನು ಅಪ್‌ಡೇಟ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ತಿಂಗಳಿಗೊಮ್ಮೆಯಾದರೂ ಫೋನನ್ನು ಅಪ್‌ಡೇಟ್ ಮಾಡುತ್ತಾ ಇರಿ. ಒಂದು ವೇಳೆ ನಿಮ್ಮ ಫೋನ್‌ನಲ್ಲಿರುವ ಆಪರೇಟಿಂಗ್ ಸಿಸ್ಟಂ 'ಔಟ್ ಡೇಟೆಡ್' ಆಗಿದ್ದರೆ ಮಾಲ್‌ವೇರ್ ದಾಳಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದಿರಿ.

ಆಪ್ ಲಾಗ್ ಓಟ್ ಮಾಡಿ

ಆಪ್ ಲಾಗ್ ಓಟ್ ಮಾಡಿ

ಫೋನ್‌ನಲ್ಲಿ ನೀವು ಯಾವುದೇ ಆಪ್‌ಗೆ ಸದಾ ಲಾಗಿನ್ ಆಗಿರಬೇಡಿ. ಅಗತ್ಯ ಬಂದಾಗ ಲಾಗಿನ್ ಆಗಿ. ನತರ ಲಾಗ್ ಔಟ್ ಆಗಿ. ನಿಮ್ಮ ಫೋನ್‌ನ್ನು ಬೇರೆಯವರ ಕೈಗೆ ನೀಡುವಾಗಲೂ ಈ ರೀತಿ ಮಾಡಿ. ರಿಪೇರಿಗೆ ನೀಡುವುದಾದರೆ ಎಲ್ಲ ಆಪ್‌ಗಳಿಂದ ಲಾಗ್ ಔಟ್ ಆಗಿ. ಇಲ್ಲವಾದರೆ, ನಿಮ್ಮೆಲ್ಲಾ ಖಾಸಗಿ ಮಾಹಿತಿಗಳನ್ನು ಡಿಲೀಟ್ ಮಾಡಿದ ನಂತರವೇ ರಿಪೇರಿಗೆ ನೀಡಿ.

ವೈಫೈ ಕನೆಕ್ಟ್ ಮುನ್ನ ಎಚ್ಚರ

ವೈಫೈ ಕನೆಕ್ಟ್ ಮುನ್ನ ಎಚ್ಚರ

ಬಿಟ್ಟ ವೈಫೈ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ, ನಿಮಗೆ ಗೊತ್ತಾ? ಹ್ಯಾಕರ್‌ಗಳು ಹೀಗೆ ಬಿಟ್ಟಿ ವೈಫೈ ಆಸೆಯನ್ನು ತೋರಿಸಿ ನಿಮ್ಮಿಂದ ಮಾಹಿತಿಗಳನ್ನು ದೋಚುತ್ತಾರೆ. ನಂತರ ನಿಮ್ಮ ಹಣ ಕೂಡ ಅವರ ಕೈಸೇರಬಹುದು. ಫ್ರೀ ವೈಫೈ ಬಳಸುವಾಗ ಎಚ್ಚರವಿರಲಿ. ಫೋನ್‌ನಲ್ಲಿ ವೈಫೈ ಸೆಟ್ಟಿಂಗ್ ಆಫ್ ಮಾಡಿ. ಗೊತ್ತಿರುವ ವೈಫೈ ಬಳಸುವುದು ಅತ್ಯುತ್ತಮ.

ಲಿಂಕ್ ಕ್ಲಿಕ್ ಮುನ್ನ ಎಚ್ಚರ

ಲಿಂಕ್ ಕ್ಲಿಕ್ ಮುನ್ನ ಎಚ್ಚರ

ಆನ್‌ಲೈನಿನಲ್ಲಿ ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚಿಸುವುದು ಒಳ್ಳೆಯದು. ಏಕೆಂದರೆ, ಆನ್‌ಲೈನಿನಲ್ಲಿ ಒಂದು ಕ್ಲಿಕ್ ಕೂಡ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ, ಯಾವತ್ತೂ ಸಂದೇಹಾಸ್ಪದ ಲಿಂಕ್ ಅಥವಾ ಮೇಲ್ ಕ್ಲಿಕ್ ಮಾಡಬೇಡಿ. ಈ ರೀತಿಯ ಲಿಂಕ್ ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಸೋರಿಕೆ/ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಸಂದೇಹಾಸ್ಪದ ವೆಬ್‌ಸೈಟ್‌

ಸಂದೇಹಾಸ್ಪದ ವೆಬ್‌ಸೈಟ್‌

ಆನ್‌ಲೈನಿನಲ್ಲಿ ಯಾವುದೇ ಲಿಂಕ್ ಕ್ಲಿಕ್ ಮಾಡುವುದು ಮತ್ತು ಸಂದೇಹಾಸ್ಪದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅತ್ಯುತ್ತಮವಾಗಿ ಕಾಣುವ ಆಕರ್ಷಿತವಾಗಿರುವ ಸಂದೇಹಾಸ್ಪದವಾಗಿರುವ ವೆಬ್ ಸೈಟ್‌ಗಳಿಗೆ ಭೇಟಿ ನೀಡುವುದು ಕೂಡ ಆಘಾತಕಾರಿಯೇ. ಹಾಗಾಗಿ, ಆಕರ್ಷಿತವಾಗಿರುವ ಅನ್ಯ ವೆಬ್ ಸೈಟ್‌ಗಳಿಗೆ ಭೇಟಿ ನೀಡಬೇಡಿ.

Best Mobiles in India

English summary
ten ways to keep your smartphone safe. What is the best way to protect your smartphone from hackers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X