ಕಿರಿಕ್ ಇಲ್ಲದ ಲಾಲಿಪಪ್ ಮೊಬೈಲ್‌ಗಳು

By Suneel
|

ಆಂಡ್ರಾಯ್ಡ್‌ ಲಾಲಿಪಪ್ ಬಳಕೆದಾರರು ಇಂದು ಬಹುಸಂಖ್ಯಾತರು ಹೊಸಬರಾಗಿರುತ್ತೀರಿ. ಲಾಲಿಪಪ್‌ನ ಹೊಸ ಫೀಚರ್‌ ನೋಡುವ ನಿಮಗೆ ಆ ಸ್ಮಾರ್ಟ್‌ಫೋನ್‌ ಬಳಸಲು ಸ್ವಲ್ಪ ಕಿರಿ ಕಿರಿ ಎನಿಸಬಹುದು. ಆ ಚಿಂತೆ ಬಿಟ್ಟುಬಿಡಿ. ಕಾರಣ ಗಿಜ್‌ಬಾಟ್‌ ಆಂಡ್ರಾಯ್ಡ್‌ ಲಾಲಿಪಪ್‌ ಬಳಕೆದಾರರಿಗೆ ಅನುಕೂಲವಾಗುವ ಅತ್ಯುತ್ತಮ ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ನೀಡುತ್ತಿದೆ.

ಓದಿರಿ:ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಆಂಡ್ರಾಯ್ಡ್ ಲಾಲಿಪಪ್‌ ಬಳಸಲು ಅತ್ಯುತ್ತಮ ಸಲಹೆಗಳು

ಸ್ಕ್ರೀನ್‌ ಪೈನಿಂಗ್

ಸ್ಕ್ರೀನ್‌ ಪೈನಿಂಗ್

ನಿಮ್ಮ ಸ್ಮಾರ್ಟ್‌ಫೋನ್‌ಗಳು ಸಂಪೂರ್ಣ ವೈಯಕ್ತಿಕ ಮಾಹಿತಿಗಳನ್ನು ಹೊಂದಿದ್ದು, ಇವುಗಳನ್ನು ರಕ್ಷಿಸಲು ಸ್ಕ್ರೀನ್ ಪೈನಿಂಗ್‌ ಬಳಸಬಹುದಾಗಿದೆ.
ಉದಾಹರಣೆಗೆ: ಇತರರು ಮೊಬೈಲ್‌ ಅನ್ನು ಕಾಲ್‌ ಮಾಡಲು ಕೇಳಿದರೆ ಅವರು ಕಾಲ್‌ ಸೆಟ್ಟಿಂಗ್‌ ಮಾತ್ರ ಬಳಕೆ ಮಾಡುವಂತೆ ಪಿನ್ ನೀಡಬಹುದಾಗಿದೆ.
ಸೆಟ್ಟಿಂಗ್ಸ್>>ಸೆಕ್ಯುರಿಟಿ>>ಸ್ಕ್ರೀನ್‌ ಪೈನಿಂಗ್.

 ಕಸ್ಟಮೈಜ್‌ ನೋಟಿಫಿಕೇಶನ್‌

ಕಸ್ಟಮೈಜ್‌ ನೋಟಿಫಿಕೇಶನ್‌

ಲಾಲಿಪಪ್‌ ಬಳಕೆದಾರರು ನೋಟಿಫಿಕೇಶನ್‌ ಹೊಂದುವ ಅವಕಾಶ ನೀಡಿದ್ದು,ಎಲ್ಲಾ ಆಪ್‌ಗಳು ನಿಮಗೆ ನೋಟಿಫಿಕೇಶನ್‌ ನೀಡಬಲ್ಲವು. ಎಲ್ಲಾ ಆಪ್‌ಗಳು ನಿಮಗೆ Block, Priority, Sensitive ಎಂಬ ಸಾಮಾನ್ಯ ಆಪ್‌ಗಳನ್ನು ಹೊಂದಿರುತ್ತವೆ.

ಸೂಕ್ಷ್ಮ ವಿಷಯಗಳನ್ನು ಹೈಡ್‌ ಮಾಡಿ.

ಸೂಕ್ಷ್ಮ ವಿಷಯಗಳನ್ನು ಹೈಡ್‌ ಮಾಡಿ.

ನೋಟಿಫಿಕೇಶನ್‌ ಸಹಾಯದಿಂದ ನಿಮ್ಮ ಮೊಬೈಲ್‌ನಲ್ಲಿನ ಸೂಕ್ಷ್ಮ ವಿಷಯಗಳನ್ನು 'ಸೆಟ್ಟಿಂಗ್ಸ್>>ಸೌಂಡ್‌ &ನೋಟಿಫಿಕೇಶನ್‌>> ವೆನ್‌ ಡಿವೈಸ್‌ ಇಸ್ ಲಾಕ್ಡ್'' ಎಂದು ನೀಡುವ ಮೂಲಕ ಹೈಡ್‌ ಮಾಡಬಹುದಾಗಿದೆ.

ಸೆಟ್ಟಿಂಗ್ಸ್‌ಗಾಗಿ ಹುಡುಕಾಟ.

ಸೆಟ್ಟಿಂಗ್ಸ್‌ಗಾಗಿ ಹುಡುಕಾಟ.

ಆಂಡ್ರಾಯ್ಡ್‌ ಲಾಲಿಪಾಟ್‌ ಹೆಚ್ಚು ಉತ್ತಮ ಫೀಚರ್‌ಗಳನ್ನು ಹೊಂದಿದ್ದು, ಸೆಟ್ಟಿಂಗ್‌ ಆಪ್‌ ಓಪೆನ್‌ ಮಾಡಿದಾಗ ಬಲಭಾಗದಲ್ಲಿ ಮೇಲೆ ಕಾಣುವ ಸರ್ಚ್‌ಬಾರ್‌ನಲ್ಲಿ ನಿಮಗೆ ಬೇಕಾದ ಹಲವು ಫೀಚರ್‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಬಹುದಾಗಿದೆ.

ಬ್ಯಾಟರಿ ಸೇವರ್

ಬ್ಯಾಟರಿ ಸೇವರ್

ಲಾಲಿಪಪ್‌ ಬ್ಯಾಟರಿ ಉಳಿತಾಯಕ್ಕೆ ಉತ್ತಮ ಫೀಚರ್ ಹೊಂದಿದ್ದು, ಕಡಿಮೆ ಬ್ಯಾಟರಿ ಪವರ್ ಇದ್ದಾಗ ವೈಬ್ರೇಟ್ ಆಫ್‌ ಮಾಡಿ ಮತ್ತು ಬ್ಯಾಗ್‌ಗ್ರೌಂಡ್‌ ಡಾಟಾ ಬ್ಲಾಕ್‌ಮಾಡಿ. ಅಥವಾ ಬ್ಯಾಟರಿ ಶೇಕಡ 15 ಅಥವಾ ಶೇಕಡ 5 ಇದ್ದಾಗ ಸ್ವಯಂಚಾಲಿತವಾಗಿ ಬ್ಯಾಟರಿ ಸೇವರ್ ಮೋಡ್‌ ಚೇಂಚ್ ಮಾಡಿ.

ಸ್ಮಾರ್ಟ್‌ ಲಾಕ್‌

ಸ್ಮಾರ್ಟ್‌ ಲಾಕ್‌

ನೀವು ಸೆಟ್‌ ಮಾಡಿರುವ ಪಾಸ್‌ವರ್ಡ್‌ ಮತ್ತು ಪ್ಯಾಟರ್ನ್‌ ಲಾಕ್ ತಪ್ಪಾಗಿ ನೀಡಿದಾಗ ನಿಮ್ಮ ಮೊಬೈಲ್‌ ಕೆಲವು ವೇಳೆ ನಿಧಾನವಾಗುತ್ತದೆ. ಇದರಿಂದ ಹೊರಬರಲು ಲಾಲಿಪಪ್‌ ಸ್ಮಾರ್ಟ್‌ ಲಾಕ್‌ ಎಂಬ ಹೊಸ ಫೀಚರ್ ನಿಮಗೆ ಲಭ್ಯವಿದ್ದು, ಫೋನ್‌ ಸುರಕ್ಷಿತ ಗೊಂಡ ನಂತರ ನಿಮಗೆ ತಿಳಿಸುತ್ತದೆ. ಅಥವಾ ಇತರ ಬ್ಲೂಟೂತ್ ಅಥವಾ ಎನ್‌ಎಫ್‌ಸಿಗಳು ನಿಮ್ಮ ಮೊಬೈಲ್‌ಗೆ ಸಂಪರ್ಕಿಸಿದಾಗ ಫೋನ್‌ಲಾಕ್‌ ಡಿಸೇಬಲ್‌ ಆಗುತ್ತದೆ.

ಯಾವುದೇ ತೊಂದರೆ ಬೇಡ

ಯಾವುದೇ ತೊಂದರೆ ಬೇಡ

ನೀವು ನಿಮ್ಮ ಮೊಬೈಲ್‌ನಿಂದ ಯಾವುದೇ ರೀತಿಯಿಂದಲೂ ತೊಂದರೆ ಬೇಡವಾದಲ್ಲಿ ಲಾಲಿಪಪ್‌ ಅಲಾರಾಂ ಧ್ವನಿ ಸಹ ನೀಡುವುದಿಲ್ಲ. ಸೌಂಡ್‌ ಬಟನ್‌ ಪ್ರೆಸ್‌ ಮಾಡಿ ದಾಗ NONE ಫೀಚರ್‌ ಮೇಲೆ ಕ್ಲಿಕ್ ಮಾಡಿದರಾಯಿತು.

ಕ್ವಿಕ್‌ ಫ್ಲ್ಯಾಶ್‌ಲೈಟ್‌

ಕ್ವಿಕ್‌ ಫ್ಲ್ಯಾಶ್‌ಲೈಟ್‌

ಇತರ ಮೊಬೈಲ್‌ಗಳಲ್ಲಿ ನೀವು ಫ್ಲ್ಯಾಶ್‌ಲೈಟ್‌ ಆನ್‌ ಮಾಡಬೇಕಾಗುತ್ತದೆ. ಆದರೆ ಲಾಲಿಪಪರ್ ನಲ್ಲಿ ಗೂಗಲ್‌ ಇನ್‌ಬಿಲ್ಟ್‌ ಫ್ಲ್ಯಾಶ್‌ಲೈಟ್‌ ನೀಡಿದ್ದು, ಡಿಸ್‌ಪ್ಲೇನ ಟಾಪ್‌ನಿಂದ ಬೆರಳನ್ನು ಸ್ವೈಪ್‌ ಮಾಡಿದರೆ ಫ್ಲ್ಯಾಶ್‌ಲೈಟ್‌ ನೇರವಾಗಿ ಆನ್‌ ಮಾಡಬಹುದಾಗಿದೆ.

ರೀಸ್ಟೋರ್‌ ಪ್ರೀವಿಯಸ್‌ ಆಂಡ್ರಾಯ್ಡ್‌ ಡಿವೈಸ್‌.

ರೀಸ್ಟೋರ್‌ ಪ್ರೀವಿಯಸ್‌ ಆಂಡ್ರಾಯ್ಡ್‌ ಡಿವೈಸ್‌.

ನಿಮ್ಮ ಹಿಂದಿನ ಆಂಡ್ರಾಯ್ಡ್‌ ಆಪ್‌ಗಳು ಬೇಕಾದಲ್ಲಿ ಗೂಗಲ್‌ ಖಾತೆಗೆ ಲಾಗಿನ್‌ ಆದಲ್ಲಿ ಹಿಂದಿನ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಕ್ವಿಕ್‌ ಸೆಟ್ಟಿಂಗ್ಸ್‌ನಿಂದ ಡಾಟಾ ಬಳಕೆ ತಿಳಿಯಿರಿ.

ಕ್ವಿಕ್‌ ಸೆಟ್ಟಿಂಗ್ಸ್‌ನಿಂದ ಡಾಟಾ ಬಳಕೆ ತಿಳಿಯಿರಿ.

ಕ್ವಿಕ್‌ ಸೆಟ್ಟಿಂಗ್ಸ್‌ನಿಂದ ಡಾಟಾ ಕನೆಕ್ಷನ್‌ ಮೇಲೆ ಟ್ಯಾಪ್‌ ಮಾಡಿ ಹಿಂದಿನ ದಿನಗಳ ಅಥವಾ ತಿಂಗಳಲ್ಲಿ ಎಷ್ಟು ಡಾಟಾ ಬಳಕೆ ಮಾಡಿದ್ದೀರಿ ಎಂಬ ಮಾಹಿತಿ ತಿಳಿಯಿರಿ.

Best Mobiles in India

English summary
So you have Android 5.0 Lollipop on your Nexus. You might be feeling a little overwhelmed by all the changes and new features. We don’t blame you; the Lollipop changelog is longer than some short stories.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X