ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!

By Shwetha
|

ದುಬಾರಿ ಐಫೋನ್‌ನಲ್ಲೂ ಮೋಸ ನಡೆಯುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಓದುಗರೇ ನೀವು ಖರೀದಿಸುತ್ತಿರುವ ಐಫೋನ್ ನಕಲಿ ಕೂಡ ಆಗಿರಬಹುದೆಂಬ ಸತ್ಯತೆಯನ್ನು ನೀವು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಹೆಚ್ಚಿನ ಮೊತ್ತ ಕೊಟ್ಟ ನೀವು ಖರೀದಿಸಿ ಐಫೋನ್ ನಕಲಿ ಎಂಬುದು ಅರಿವಾದರೆ ಯಾರ ಗುಂಡಿಗೆ ಒಡೆಯೋಲ್ಲ ಹೇಳಿ...ಆದರೆ ತಪ್ಪಾಗುವ ಮುನ್ನ ಎಚ್ಚೆತ್ತುಕೊಂಡರೆ ನಾವು ಬೀಸುವ ದೊಣ್ಣೆಯಿಂದ ತಪ್ಪಿಕೊಳ್ಳಬಹುದು.

ಹಾಗಿದ್ದರೆ ನೀವು ಖರೀದಿ ಮಾಡುತ್ತಿರುವ ಅಥವಾ ಖರೀದಿ ಮಾಡಿರುವ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಕೆಳಗಿನ ಅಂಶಗಳಿಂದ ಪತ್ತೆಹಚ್ಚೋಣ ಬನ್ನಿ.

#1

#1

11 ಡಿಜಿಟ್ ಸೀರಿಯಲ್ ಸಂಖ್ಯೆ ನಿಮ್ಮ ಫೋನ್ ಅನ್ನು ಪಡೆದುಕೊಂಡ ನಂತರ ಸೆಟ್ಟಿಂಗ್‌ಗೆ ಹೋಗಿ, ಜನರಲ್‌ಗೆ ಹೋಗಿ ಮತ್ತು ಅಬೌಟ್ ಬಟನ್ ಸ್ಪರ್ಶಿಸಿ. ಇದೀಗ ನಿಮಗೆ ಸ್ಕ್ರಾಲ್ ಡೌನ್ ಮಾಡಬಹುದು ಇಲ್ಲಿ ಡಿವೈಸ್‌ನ 11 ಡಿಜಿಟ್ ಸೀರಿಯಲ್ ಸಂಖ್ಯೆ ನೋಡಬಹುದು. AABCCDDDEEF ಈ ಸ್ವರೂಪದಲ್ಲಿ ನಿಮಗೆ ದೊರೆಯುತ್ತದೆ.

#2

#2

ಮೂಲ ಐಫೋನ್ ಮೆಮೊರಿ ಸಾಮರ್ಥ್ಯ 16ಜಿಬಿ/32ಜಿಬಿ ಅಥವಾ 64ಜಿಬಿ ಇರುತ್ತದೆ. ಆದರೆ ನಕಲಿ ಫೋನ್ ಮೆಮೊರಿ ಕಾರ್ಡ್ ವಿಸ್ತರಿಸಲು ಎಸ್‌ಡಿ ಕಾರ್ಡ್ ಇರುತ್ತದೆ. ಇದರಿಂದ ನಿಮ್ಮ ಐಫೋನ್ ನಕಲಿ ಎಂಬುದು ಗೊತ್ತಾಗಿಬಿಡುತ್ತದೆ.

#3

#3

ನೈಜ ಐಫೋನ್ ಆಪಲ್ ಲೋಗೋದೊಂದಿಗೆ ಸ್ಟೋರ್ ಲಿಂಕ್ ಅನ್ನು ಒಳಗೊಂಡಿರುತ್ತದೆ ಇದು ವೆಲ್‌ಕಮ್ ಸ್ಕ್ರೀನ್‌ನಲ್ಲಿ ಕಾಣುತ್ತದೆ. ನಿಮ್ಮ ಐಫೋನ್ ಅನ್ನು ನೀವು ಪವರ್ ಆನ್ ಮಾಡಿದಾಗ ಲೋಗೋವನ್ನು ಪರಿಶೀಲಿಸಿ. ಕೆಲವೊಮ್ಮೆ ಫೇಕ್ ಲೋಗೋವನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಲಾಗುತ್ತದೆ. ಆಗ ನೀವು ಲೋಗೋದ ಮೇಲೆ ಕ್ಲಿಕ್ ಮಾಡಿ ಇದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಪರಿಶೀಲಿಸಿ ಈ ಲಿಂಕ್ ಗೂಗಲ್ ಪ್ಲೇ ಸ್ಟೋರ್ ಅಥವಾ ಇತರ ಅಪ್ಲಿಕೇಶನ್‌ಗಳಿಗೆ ಹೋದಲ್ಲಿ ಇದು ನಕಲಿ ಎಂದೆನಿಸುತ್ತದೆ.

#4

#4

ನಿಮ್ಮ ಐಫೋನ್‌ನಿಂದ ಸಿರಿ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ನಿಮಗೆ ಇದು ಕಾಣದಿದ್ದಲ್ಲಿ ಅಥವಾ ಸಿರಿ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗದಿದ್ದಲ್ಲಿ ನೀವು ನಕಲಿ ಐಫೋನ್ ಬಳಸುತ್ತಿದ್ದೀರಿ ಎಂಬುದು ನಿಜ. ಸಿರಿ ಅಪ್ಲಿಕೇಶನ್ ಲಾಂಚ್ ಮಾಡಲು ನಕಲಿ ಐಫೋನ್ ಡಿಜಿಟಲ್ ದೃಢೀಕರಣವನ್ನು ಹೊಂದಿರುವುದಿಲ್ಲ.

#5

#5

ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಐಓಎಸ್ ಅಲ್ಲದೆ ಬೇರೆ ಓಎಸ್ ನಿಮಗೆ ಕಂಡುಬಂದಲ್ಲಿ ನಿಮ್ಮ ಐಫೋನ್ ನಕಲಿ.

#6

#6

ನಿಮ್ಮ ಐಫೋನ್ ತೆರೆಯಿರಿ ಮತ್ತು ಅದನ್ನು ಐಟ್ಯೂನ್ಸ್‌ಗೆ ನಿಮ್ಮ ಪಿಸಿಯನ್ನು ಬಳಸಿಕೊಂಡು ಸಂಪರ್ಕಪಡಿಸಿ, ನಿಮಗೆ ಐಟ್ಯೂನ್ಸ್ ಲಾಂಚ್ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ನಿಮ್ಮ ಐಫೋನ್ ನಕಲಿ ಎಂಬುದು ದಿಟ.

#7

#7

ಹೊಸ ಐಫೋನ್ ಅನ್ನು ಬೂಟ್ ಮಾಡುವಾಗ ಚೈನೀಸ್ ಭಾಷೆ ಕಂಡುಬಂದಲ್ಲಿ ಅಥವಾ ಚೀನಾ ಇಲ್ಲವೇ ಇಂಗ್ಲೀಷ್ ಅಕ್ಷರದ ಭಾಷೆಯನ್ನು ಹೊಂದಿಸಲು ಕೇಳಿತೆಂದರೆ ಖಂಡಿತ ಇದು ನಕಲಿ ಐಫೋನ್.

#8

#8

ಐಫೋನ್‌ನಲ್ಲಿ ಎರಡು ಅಥವಾ ಹೆಚ್ಚಿನ ಸಿಮ್ ಇತ್ತೆಂದಲ್ಲಿ ಅದು ನಕಲಿಯೇ. ಅಸಲಿ ಐಫೋನ್ ಒಂದೇ ಸಿಮ್ ಕಾರ್ಡ್ ಅನ್ನು ಬಳಸುವಂತಿರುತ್ತದೆ.

#9

#9

ಕೆಲವೊಂದು ಸಾಮಾನ್ಯ ಅಪ್ಲಿಕೇಶನ್‌ಗಳಾದ ಕಾಂಪ್ಯಾಕ್ಟ್, ಕಂಪಾಸ್, ಸೆಟ್ಟಿಂಗ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಫೋಟೋಗಳನ್ನು ನೈಜ ಐಫೋನ್ ಹೊಂದಿರುತ್ತದೆ. ಯಾವುದೇ ಅಪ್ಲಿಕೇಶನ್ ಮಿಸ್ ಆಗಿದ್ದಲ್ಲಿ ಇದು ನಕಲಿ ಎಂಬುದು ಖಾತ್ರಿಯಾಗುತ್ತದೆ.

#10

#10

ಸರ್ವೀಸ್ ಸೆಂಟರ್‌ ನಕಲಿ ಐಫೋನ್‌ಗಳ ಮಾರಾಟಗಾರರು ನಿಮಗೆ ಪ್ರಮಾಣೀಕೃತ ಐಫೋನ್ ಸರ್ವೀಸ್ ಸೆಂಟರ್‌ನ ವಾರಂಟಿಯನ್ನು ನೀಡುವುದಿಲ್ಲ.

#11

#11

ದೈನಂದಿನ ಐಫೋನ್‌ಗಿಂತಲೂ ಐಫೋನ್ ಡೀಲರ್ ಬೆಲೆಯಲ್ಲಿ ಸಾಕಷ್ಟು ವಿನಾಯಿತಿಯನ್ನು ನೀಡಿದಲ್ಲಿ ಅದಕ್ಕೆ ಗಮನ ಹರಿಸಿ. ಮೋಸದ ಜಾಲ ಇಲ್ಲೇ ನಿಮಗೆ ಪತ್ತೆಯಾಗಬಹುದು.

#12

#12

ನೀವು ಖರೀದಿಸಿರುವ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಈ ಸ್ಟೋರ್‌ಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಐಫೋನ್ ಪರಿಣಿತರಲ್ಲಿ ನಿಮ್ಮ ಫೋನ್ ಅನ್ನು ನೀಡಿ ಅದನ್ನು ದೃಢೀಕೃತ ಟೂಲ್ ಬಳಸಿ ಪರಿಶೀಲಿಸಲು ತಿಳಿಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಐಫೋನ್ ಖರೀದಿಸುವ ನಿಮ್ಮ ಕನಸು ಐಫೋನ್ ಎಸ್ಇಯಿಂದ ಸಾಧ್ಯ</a><br /><a href=ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?
ಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳು " title="ಐಫೋನ್ ಖರೀದಿಸುವ ನಿಮ್ಮ ಕನಸು ಐಫೋನ್ ಎಸ್ಇಯಿಂದ ಸಾಧ್ಯ
ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?
ಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳು " loading="lazy" width="100" height="56" />ಐಫೋನ್ ಖರೀದಿಸುವ ನಿಮ್ಮ ಕನಸು ಐಫೋನ್ ಎಸ್ಇಯಿಂದ ಸಾಧ್ಯ
ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?
ಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳು

Best Mobiles in India

English summary
Unfortunately, bogus iPhones aren’t always so obvious. Sometimes they appear in seemingly legit online ads or real-world stores. Regardless of where they appear, they’re out there, and the people who buy them are being ripped off.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X