TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾವನ್ನು ಈಗ ಡ್ರೈವ್ ನಲ್ಲಿ ಸೇವ್ ಮಾಡುವ ರೂಢಿ ಹೆಚ್ಚಾಗಿದೆ. ಬ್ಯಾಕ್ಅಪ್ ವಿಷಯಕ್ಕೆ ಬಂದಾಗ ಗೂಗಲ್ ಕ್ಲೌಡ್‌ನಲ್ಲಿ ಆಟೊ ಸೇವ್ ಮಾಡಿಕೊಳ್ಳುವವರೇ ಹೆಚ್ಚು. ಹಾಗಾಗಿ, ಈ ಕ್ಲೌಡ್‌ನಲ್ಲಿ ಬೇಕಿರುವುದು, ಬೇಕಿಲ್ಲದ್ದು ಎಲ್ಲವೂ ತುಂಬಿಕೊಂಡು ಗೂಗಲ್ ಡ್ರೈವ್ ಎಂಬುದು ಕಸದ ರಾಶಿಯಾಗಿರುವುದನ್ನು ನೋಡಬಹುದು.
ಸ್ಮಾರ್ಟ್‌ಫೋನ್ ನಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ರಿನೇಮ್ ಮಾಡಿ ಡ್ರೈವ್‌ಗೆ ಸೇವ್ ಮಾಡುವ ಅಭ್ಯಾಸ ಕೆಲವರದ್ದು ಮಾತ್ರ. ಇನ್ನುಳಿದ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರರು ಆಟೊ ಸಿಂಕ್ ಎನೆಬಲ್ ಮಾಡುವುದು ಈಗ ಸಾಮಾನ್ಯ. ಇದರಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಅವರು ಕ್ಲಿಕ್ಕಿಸಿದ ಎಲ್ಲಾ ಫೋಟೊ, ವಿಡಿಯೊಗಳೂ ಡ್ರೈವ್‌ನಲ್ಲಿ ತುಂಬಿಕೊಂಡಿರುತ್ತವೆ.
ಹಾಗಾಗಿ, ಇಂತಹ ತಪ್ಪನ್ನು ನೀವು ಮಾಡಬೇಡಿ. ಅನಗತ್ಯವಾಗಿ ಎಲ್ಲಾ ಫೈಲ್‌ಗಳನ್ನೂ ಡ್ರೈವ್‌ಗೆ ಸೇವ್ ಮಾಡಿಕೊಳ್ಳುವುದನ್ನು ಬಿಟ್ಟುಬಿಡಿ. ಕಾಲಕಾಲಕ್ಕೆ ಡ್ರೈವ್ ಕ್ಲೀನ್ ಮಾಡುವ, ಇಲ್ಲವೇ ಅತಿ ಮುಖ್ಯ ಫೈಲ್‌ಗಳನ್ನು ಮಾತ್ರ ಡ್ರೈವ್‌ಗೆ ಸೇವ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲವಾದಲ್ಲಿ ಡ್ರೈವ್‌ನಲ್ಲಿ ನೀವು ಹುಡುಕುವ ಫೈಲ್ ಅನ್ನು ಕಸದ ರಾಶಿಯಲ್ಲಿ ಹುಡುಕಿದಂತತಾಗುತ್ತದೆ.
ಡಿವೈಸ್ ಮೆಮೊರಿ ಉಳಿಸಿಕೊಂಡ ನೆಮ್ಮದಿಯಲ್ಲಿ ನಿವು ಸುಮ್ಮನಿದ್ದರೆ, ಡ್ರೈವ್‌ನಲ್ಲಿ ತುಂಬಿರುವ ಫೈಲ್ಸ್ ರಾಶಿಯನ್ನು ಅಳಿಸುವುದು ಕೂಡ ತಲೆನೋವಿನ ಕೆಲಸ. ಅಪ್ ಲೋಡ್ ಆಗಿರುವ ಎಲ್ಲಾ ಫೈಲ್‌ಗಳನ್ನು ತೆರೆದು ನೋಡಿ, ಬೇಕಿರುವುದನ್ನು ಉಳಿಸಿಕೊಂಡು ಬೇಡವಾದ್ದನ್ನು ಡಿಲೀಟ್ ಮಾಡಲು ಸಾಕಷ್ಟು ಸಮಯವೂ ಕೂಡ ವ್ಯರ್ಥವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಡಿವೈಸ್ ಗಳಲ್ಲಿ ಕ್ಲಿಕ್ಕಿಸಿದ ಫೋಟೊ, ಸೆರೆಹಿಡಿದ ವಿಡಿಯೊ, ಸೇವ್ ಮಾಡಿಕೊಂಡ ಫೈಲ್ ಗಳ ಪೈಕಿ ಅತಿ ಮುಖ್ಯವಾದ ಫೈಲ್ ಗಳನ್ನು ಮಾತ್ರ ಉಳಿಸಿಕೊಂಡು ಉಳಿದವನ್ನು ಡಿಲೀಟ್ ಮಾಡಿ. ಡ್ರೈವ್ ಮತ್ತು ನಿಮ್ಮ ಡಿವೈಸ್ ಎರಡರ ಯೋಗಕ್ಷೇಮಕ್ಕಾಗಿ ಆಟೊ ಬ್ಯಾಕ್ ಅಪ್ ಮೂಲಕ ಲ್ಲವೂ ಡ್ರೈವ್ ಗೆ ತುಂಬಿಕೊಳ್ಳಲು ಬಿಡಬೇಡಿ. ಬಿಟ್ಟರೆ ನಿಮಗೆ ಕಷ್ಟ.!