ನೀವು ತಿಳಿದಿರಲೇಬೇಕಾದ ಟಾಪ್ 10 ವಾಟ್ಸಾಪ್ ಟ್ರಿಕ್ಸ್

By Shwetha
|

800 ಕ್ಕಿಂತಲೂ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಬಹು ಪ್ಲಾಟ್‌ಫಾರ್ಮ್‌ಗಳಲ್ಲೂ ಬಳಕೆದಾರರನ್ನು ಪಡೆದುಕೊಂಡಿದೆ. ಈ ಅಪ್ಲಿಕೇಶನ್ ಬಳಸಿಕೊಂಡು ಸಂದೇಶ ಕಳುಹಿಸುವುದು, ವೀಡಿಯೊ ಶೇರ್ ಮಾಡುವುದು, ಆಡಿಯೊ ಹಂಚಿಕೆ ಹೀಗೆ ಯಾವುದೇ ಪಾವತಿಗಳಿಲ್ಲದೆ ಈ ಅಪ್ಲಿಕೇಶನ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ.

ಓದಿರಿ: ಫೋನ್ ರೂಟಿಂಗ್: ಪ್ರಯೋಜನ ಮತ್ತು ಅಪಾಯ

ಬಳಕೆದಾರರಿಗೆ ಉತ್ತಮ ಬಳಕೆ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಅಪ್ಲಿಕೇಶನ್ ಹಲವಾರು ವಿಧದದಲ್ಲಿ ತನ್ನ ಫೀಚರ್‌ಗಳನ್ನು ಅತ್ಯತ್ತಮಗೊಳಿಸುತ್ತಿದ್ದು ಇಂದಿನ ಲೇಖನದಲ್ಲಿ ಈ ತಂತ್ರಗಳನ್ನು ಬಳಸಿಕೊಂಡು ನಿಮ್ಮ ಮೆಸೇಜಿಂಗ್ ಅನುಭವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ವಾಟ್ಸಾಪ್‌ಗಾಗಿ ಸಿಮ್

ವಾಟ್ಸಾಪ್‌ಗಾಗಿ ಸಿಮ್

ಚಾಟ್‌ಸಿಮ್ ವಿಶ್ವದ ಪ್ರಥಮ ಸಿಮ್ ಕಾರ್ಡ್ ಆಗಿದ್ದು ಉಚಿತವಾಗಿ ಇದರಲ್ಲಿ ನಿಮಗೆ ಚಾಟ್ ಮಾಡಬಹುದಾಗಿದೆ. ಯಾವುದೇ ಶುಲ್ಕವಿಲ್ಲದೆ, ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಚಾಟ್ ಮಾಡಲು ಈ ಸಿಮ್ ಕಾರ್ಡ್ ನಿಮ್ಮನ್ನು ಅನುಮತಿಸುತ್ತದೆ. ಈ ಸಿಮ್, ವಾಟ್ಸಾಪ್, ಟೆಲಿಗ್ರಾಮ್, ಫೇಸ್‌ಬುಕ್ ಮೆಸೆಂಜರ್, ವಿಚಾಟ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್

ಅಧಿಕೃತ ವೆಬ್ ಕ್ಲೈಂಟ್ ಅನ್ನು ವಾಟ್ಸಾಪ್ ಹೊಂದಿದ್ದು ತಮ್ಮ ಕಂಪ್ಯೂಟರ್‌ನಿಂದ ಬಳಕೆದಾರರಿಗೆ ಮೆಸೇಜ್ ಮಾಡಲು ಇದು ಅನುಮತಿಸುತ್ತದೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಲ್ಲಿರುವ ಎಲ್ಲಾ ಫಂಕ್ಶನ್ ಫೀಚರ್‌ಗಳನ್ನು ವೆಬ್ ಕ್ಲೈಂಟ್ ಒಳಗೊಂಡಿದೆ. ಪ್ರಸ್ತುತ ವೆಬ್ ಕ್ಲೈಂಟ್ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಬ್ಲ್ಯಾಕ್‌ಬೆರ್ರಿ 10 ರನ್ನಿಂಗ್ ವಿಂಡೋಸ್‌ಗೆ ಬೆಂಬಲವನ್ನು ನೀಡುತ್ತಿದೆ.

ವಾಟ್ಸಾಪ್ ಮೆಸೇಜ್ ಸ್ಟೇಟ್ಸ್

ವಾಟ್ಸಾಪ್ ಮೆಸೇಜ್ ಸ್ಟೇಟ್ಸ್

ವಾಟ್ ಸ್ಟಾಟ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಸಂದೇಶದ ಸ್ಥಿತಿಯ ಬಗ್ಗೆ ಅರಿತುಕೊಳ್ಳಬಹುದಾಗಿದೆ. ನಿಮ್ಮ ಮುಖ್ಯ ಗೆಳೆಯರು, ಸಮೂಹಗಳು ಮತ್ತು ಹೆಚ್ಚು ಸಕ್ರಿಯ ಚಟುವಟಿಕೆಗಳನ್ನು ಕುರಿತು ಇದು ಮಾಹಿತಿಯನ್ನು ನೀಡುತ್ತದೆ.

ವಾಟ್ಸಾಪ್ ಚಾಟ್ ಹೆಡ್

ವಾಟ್ಸಾಪ್ ಚಾಟ್ ಹೆಡ್

ಫೇಸ್‌ಬುಕ್‌ನಂತೆಯೇ, ವಾಟ್ಸಾಪ್‌ನಲ್ಲೂ ಚಾಟ್ ಹೆಡ್ ಅನ್ನು ನಿಮಗೆ ಹೊಂದಬಹುದಾಗಿದೆ. ಡ್ಯಾಶ್‌ಡೋ ವಾಟ್ ಆಪ್ ಅನ್ನು ಬಳಸಿಕೊಂಡು, ನಿಮ್ಮ ಸಂವಾದಗಳಿಗೆ ಚಾಟ್ ಹೆಡ್ ಅನ್ನು ಸೇರಿಸಿಕೊಳ್ಳಬಹುದಾಗಿದೆ.

ಗ್ಯಾಲರಿಯಲ್ಲಿ ವಾಟ್ಸಾಪ್ ಇಮೇಜ್ ಬರದಂತೆ ಮಾಡುವುದು ಹೇಗೆ

ಗ್ಯಾಲರಿಯಲ್ಲಿ ವಾಟ್ಸಾಪ್ ಇಮೇಜ್ ಬರದಂತೆ ಮಾಡುವುದು ಹೇಗೆ

ಬೇಡದೇ ಇರುವ ಇಮೇಜ್‌ಗಳಿಂದ ಗ್ಯಾಲರಿ ತುಂಬಿದೆಯೇ? ಈ ಪರಿಸ್ಥಿತಿಯನ್ನು ನಿವಾರಿಸಲು, ವಾಟ್ಸಾಪ್ ಇಮೇಜಸ್‌ನಲ್ಲಿ ಅಥವಾ ವೀಡಿಯೊ ಡೈರೆಕ್ಟರೀಸ್‌ನಲ್ಲಿ .ನೊಮೀಡಿಯಾ ಫೈಲ್ ಅನ್ನು ರಚಿಸಿಕೊಳ್ಳಿ. ಇದನ್ನು ಮಾಡಲು, ಇಎಸ್ ಫೈಲ್ ಎಕ್ಸ್‌ಪ್ಲೋರರ್‌ನಂತಹ ಫೈಲ್ ಎಕ್ಸ್‌ಪ್ಲೋರರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

ಮೀಡಿಯಾ ಆಟೊ ಡೌನ್‌ಲೋಡ್ ನಿಲ್ಲಿಸುವುದು ಹೇಗೆ

ಮೀಡಿಯಾ ಆಟೊ ಡೌನ್‌ಲೋಡ್ ನಿಲ್ಲಿಸುವುದು ಹೇಗೆ

ಬೇಡದೇ ಇರುವ ಫೈಲ್ಸ್ ಅಂದರೆ ಇಮೇಜ್‌ಗಳು, ವೀಡಿಯೊ ಕ್ಲಿಪ್ಸ್ ಮತ್ತು ಆಡಿಯೊ ಫೈಲ್‌ಗಳು ನಿಮ್ಮ ಫೋನ್‌ಗೆ ಡೌನ್‌ಲೋಡ್ ಆಗುತ್ತಿರುತ್ತದೆ ಇದು ಸಮಸ್ಯೆಯನ್ನು ಉಂಟುಮಾಡುವುದು ಸಹಜವೇ ಆಗಿದೆ. ಈಗ ಸೆಟ್ಟಿಂಗ್ ಅನ್ನು ನಿಮಗೆ ಬದಲಾಯಿಸಿಕೊಂಡು ನಿಮಗೆ ಬೇಕಾದ ಚಿತ್ರವನ್ನು ಆರಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಲಾಸ್ಟ್ ಸೀನ್ ನಿಷ್ಕ್ರಿಯ

ಲಾಸ್ಟ್ ಸೀನ್ ನಿಷ್ಕ್ರಿಯ

ಆಪಲ್ ಐಓಎಸ್ ಮತ್ತು ಆಂಡ್ರಾಯ್ಡ್ ಓಎಸ್‌ಗಳಲ್ಲಿ ನೀವು ಸಂದೇಶ ಮಾಡುತ್ತಿರುವ ವ್ಯಕ್ತಿಗೆ ನೀವು ಕೊನೆಯ ಬಾರಿ ಆನ್‌ಲೈನ್‌ನಲ್ಲಿ ಯಾವಾಗ ಇದ್ದಿರಿ ಎಂಬುದನ್ನು ಹೇಳಲು ಆಗುವುದಿಲ್ಲ.

 ಹಳೆಯ ಸಂದೇಶಗಳನ್ನು ರೀಸ್ಟೋರ್ ಮಾಡುವುದು

ಹಳೆಯ ಸಂದೇಶಗಳನ್ನು ರೀಸ್ಟೋರ್ ಮಾಡುವುದು

ವಾಟ್ಸಾಪ್ ಬಳಸುತ್ತಿರುವ ಬಳಕೆದಾರರು ತಮ್ಮ ಹಳೆಯ ಸಂದೇಶಗಳನ್ನು ಅಳಿಸಿ ಹೋಗಿದ್ದನ್ನು ಮರುಸಂಗ್ರಹಿಸಬಹುದಾಗಿದೆ. ವಾಟ್ಸಾಪ್ ಪ್ರತೀ ದಿನ ಸಂಜೆ 4 ಗಂಟೆಗೆ ಬ್ಯಾಕಪ್ ಮಾಡುತ್ತದೆ.

ನಿಮ್ಮ ಪ್ರೊಫೈಲ್ ಚಿತ್ರ ಮರೆಮಾಡಿಕೊಳ್ಳಿ

ನಿಮ್ಮ ಪ್ರೊಫೈಲ್ ಚಿತ್ರ ಮರೆಮಾಡಿಕೊಳ್ಳಿ

ಈಗ, ನಿಮ್ಮ ಸಂಖ್ಯೆಯನ್ನು ಹೊಂದಿರುವ ಯಾರು ಬೇಕಾದರೂ ನಿಮ್ಮ ಸ್ಕ್ರೀನ್ ಹೆಸರು ಮತ್ತು ಪ್ರೊಫೈಲ್ ಚಿತ್ರವನ್ನು ಕಾಣಬಹುದಾಗಿದೆ. ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವವರಿಗೆ ಮಾತ್ರವೇ ಪ್ರೊಫೈಲ್ ಚಿತ್ರವನ್ನು ಕಾಣಬಹುದಾದ ಸರಳ ವಿಧಾನವಿದೆ. ಪ್ರೈವಸಿ ಮೆನುವಿನಲ್ಲಿ ನಿಮ್ಮ 'ಪ್ರೊಫೈಲ್ ಪಿಕ್ಚರ್ ಶೇರಿಂಗ್" ಅನ್ನು "ಕಾಂಟಾಕ್ಟ್ಸ್ ಆನ್ಲೀ" ಗೆ ಬದಲಾಯಿಸಬಹುದಾಗಿದೆ.

ಬ್ರಾಡ್‌ಕಾಸ್ಟ್ ಮೆಸೇಜ್

ಬ್ರಾಡ್‌ಕಾಸ್ಟ್ ಮೆಸೇಜ್

ವಾಟ್ಸಾಪ್‌ನಲ್ಲಿ ಒಬ್ಬನಿಗಿಂತ ಹೆಚ್ಚಿನವರಿಗೆ ಸಂದೇಶಗಳನ್ನು ಕಳುಹಿಸಲು "ಮೋರ್" ಮೆನುವಿನಲ್ಲಿ "ಬ್ರಾಡ್‌ಕಾಸ್ಟ್ ಮೆಸೇಜ" ಆಪ್ಶನ್ ಅನ್ನು ಆಯ್ಕೆಮಾಡಿ. ಸಂಪರ್ಕವನ್ನು ಆರಿಸಿ. ಈಗ ಸಂದೇಶ ಟೈಪ್ ಮಾಡಿ ಸೆಂಡ್ ಮಾಡಿ.

Best Mobiles in India

English summary
Take a look at the slider below to know the tips on how to use and activate the WhatsApp new features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X