ಫೋನ್ ರೂಟಿಂಗ್: ಪ್ರಯೋಜನ ಮತ್ತು ಅಪಾಯ

By Shwetha
|

ಸ್ಮಾರ್ಟ್‌ಫೋನ್‌ನ ಇಂದಿನ ಜಮಾನಾದಲ್ಲಿ ನವೀಕರಣಗಳು ಹೆಚ್ಚೆಚ್ಚು ಬಳಕೆದಾರರಿಗೆ ಪ್ರಯೋಜನಕಾರಿಯಾಗುತ್ತಿದೆ. ನೀವು ನಿಮ್ಮ ಫೋನ್‌ನ ಅದ್ಭುತ ಗುಣಗಳನ್ನು ತಿಳಿದುಕೊಳ್ಳಬೇಕು ಎಂದಾದಲ್ಲಿ ಅಪ್‌ಡೇಟ್ ಅನ್ನು ಮಾಡುತ್ತಲೇ ಇರಬೇಕು. ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಫೀಚರ್ ಅನ್ನು ಪಡೆದುಕೊಂಡಿರುತ್ತವೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ಸೇವ್ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

ಆದರೆ ಹೊಸ ಡಿವೈಸ್ ಅನ್ನು ತಮ್ಮ ಬಳಿ ಇರಿಸಿಕೊಳ್ಳದೆಯೇ ಹಳೆಯದರಲ್ಲೇ ಅಪ್‌ಡೇಟ್ ಬಯಸುವವರಿಗೂ ವ್ಯವಸ್ಥೆ ಇದ್ದು ಇದನ್ನು ರೂಟಿಂಗ್ ಎಂಬುದಾಗಿ ಕರೆಯಲಾಗುತ್ತದೆ. ಆದರೆ ರೂಟಿಂಗ್ ಮಾಡುವುದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯ ಮತ್ತು ಹಾನಿ ಕೂಡ ಇದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಅದೇನು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ಓದಿರಿ: ಆಂಡ್ರಾಯ್ಡ್ ಬಳಕೆದಾರರಿಗೆ ಅತ್ಯಗತ್ಯವಾಗಿರುವ ಟಾಪ್ ಟಿಪ್ಸ್

ಸಿಸ್ಟಮ್ ಕೋಡ್

ಸಿಸ್ಟಮ್ ಕೋಡ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಕೋಡ್ ಅನ್ನು ಪ್ರವೇಶಿಸುವ ಪ್ರಕ್ರಿಯೆಗೆ ರೂಟಿಂಗ್ ಎಂದು ಕರೆಯುತ್ತಾರೆ. ನಿಮ್ಮ ಡಿವೈಸ್‌ನಲ್ಲಿ ಸಾಫ್ಟ್‌ವೇರ್ ಕೋಡ್ ಅನ್ನು ಮಾರ್ಪಡಿಸುವ ಸೌಲಭ್ಯಗಳು ಇದರಲ್ಲಿ ದೊರೆಯಲಿದೆ.

ಡೌನ್‌ಲೋಡ್

ಡೌನ್‌ಲೋಡ್

ಯಾವುದೇ ಅಪ್ಲಿಕೇಶನ್ ಅನ್ನು ರೂಟಿಂಗ್ ಮುಖಾಂತರ ನಿಮಗೆ ಡೌನ್‌ಲೋಡ್ ಮಾಡಬಹುದು.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

ವಿಸ್ತರಿತ ಬ್ಯಾಟರಿ ಲೈಫ್ ಮತ್ತು ಸುಧಾರಿತ ಕಾರ್ಯಕ್ಷಮತೆ

ನವೀಕರಣ

ನವೀಕರಣ

ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ನವೀಕರಣ ನಿಮಗೆ ದೊರೆಯುತ್ತದೆ.

ಸಾಫ್ಟ್‌ವೇರ್‌ಗೆ ಹಾನಿ

ಸಾಫ್ಟ್‌ವೇರ್‌ಗೆ ಹಾನಿ

ನಿಮ್ಮ ಫೋನ್‌ನ ಕೋಡ್ ಮಾರ್ಪಡಿಸುವಿಕೆ ಎಂದರೆ ಸಾಫ್ಟ್‌ವೇರ್‌ಗೆ ಹಾನಿಯಾಗುತ್ತದೆ ಇದರಿಂದ ಫೋನ್ ನಿಷ್ಪ್ರಯೋಜಕ ಎಂದೆನಿಸುತ್ತದೆ.

ವಿಶೇಷ ಅಪ್ಲಿಕೇಶನ್‌ಗಳ ಸ್ಥಾಪನೆ ಮತ್ತು ಚಾಲನೆ

ವಿಶೇಷ ಅಪ್ಲಿಕೇಶನ್‌ಗಳ ಸ್ಥಾಪನೆ ಮತ್ತು ಚಾಲನೆ

ನಿಮ್ಮ ಫೋನ್ ಅನ್ನು ನೀವು ರೂಟ್ ಮಾಡಿಕೊಂಡ ನಂತರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮ್ಮ ಫೋನ್‌ಗೆ ಲಭ್ಯವಿರದಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಜಾಹೀರಾತುಗಳನ್ನು ನಿರ್ಬಂಧಿಸಬಹುದು

ಜಾಹೀರಾತುಗಳನ್ನು ನಿರ್ಬಂಧಿಸಬಹುದು

ಈ ವಿಷಯಕ್ಕಾಗಿ ನಿಮ್ಮ ಆಂಡ್ರಾಯ್ಡ್ ಫೋನ್ ರೂಟಿಂಗ್ ನಿಮಗೆ ಹೆಚ್ಚು ಅಪ್ಯಾಯಮಾನವಾಗಬಹುದು. ಬೇಡದೇ ಇರುವ ಜಾಹೀರಾತುಗಳನ್ನು ನಿರ್ಬಂಧಿಸುವ ಲಭ್ಯತೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಕಸ್ಟಮೈಸೇಶನ್

ಆಂಡ್ರಾಯ್ಡ್ ಕಸ್ಟಮೈಸೇಶನ್

ಆಂಡ್ರಾಯ್ಡ್ ತನ್ನ ಸಾಫ್ಟ್‌ವೇರ್ ಅನ್ನು ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ. ಕಸ್ಟಮ್ ಬಿಲ್ಟ್ ROM ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬಹುದಾಗಿದೆ.

ಉಚಿತ ಆಂತರಿಕ ಸ್ಟೋರೇಜ್

ಉಚಿತ ಆಂತರಿಕ ಸ್ಟೋರೇಜ್

ಕಡಿಮೆ ಆಂತರಿಕ ಮೆಮೊರಿ ವ್ಯವಸ್ಥೆಯನ್ನು ಹೊಂದಿರುವ ಫೋನ್ ಬಳಕೆದಾರರು ಎಸ್‌ಡಿ ಕಾರ್ಡ್ ವಿಸ್ತರಣಾ ಸೌಲಭ್ಯವನ್ನು ರೂಟಿಂಗ್ ನಂತರ ಪಡೆದುಕೊಳ್ಳಬಹುದಾಗಿದೆ. ಕೆಲವು ಅಪ್ಲಿಕೇಶನ್‌ಗಳು ಡೀಫಾಲ್ಟ್ ಆಗಿ ಆಯ್ಕೆಯನ್ನು ಒದಗಿಸುತ್ತವೆ.

ಆಂಡ್ರಾಯ್ಡ್ ಬ್ಯಾಕಪ್

ಆಂಡ್ರಾಯ್ಡ್ ಬ್ಯಾಕಪ್

ಮ್ಯೂಸಿಕ್, ಫೋಟೋಸ್, ವೀಡಿಯೊ, ಡಾಕ್ಯುಮೆಂಟ್‌ಗಳ ಬ್ಯಾಕಪ್ ಅನ್ನು ಸುಲಭವಾಗಿ ಫೋನ್‌ನಲ್ಲಿ ಮಾಡಿಕೊಳ್ಳಬಹುದಾಗಿದೆ. ರೂಟಿಂಗ್ ಈ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒದಗಿಸಲಿದೆ.

ಉತ್ತಮ ಬ್ಯಾಟರಿ ಜೀವನ

ಉತ್ತಮ ಬ್ಯಾಟರಿ ಜೀವನ

ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್ ಕೂಡ ಉತ್ತಮಗೊಳ್ಳಲಿದ್ದು ರೂಟಿಂಗ್ ಈ ವ್ಯವಸ್ಥೆಯನ್ನು ನಿಮಗೆ ಒದಗಿಸಿಕೊಡಲಿದೆ.

ಫೋನ್ ವಾರಂಟಿ

ಫೋನ್ ವಾರಂಟಿ

ಫೋನ್ ವಾರಂಟಿಗೆ ಇದು ಹಾನಿಯನ್ನುಂಟು ಮಾಡುವುದರಿಂದ ಹಾರ್ಡ್‌ವೇರ್ ಇಲ್ಲವೇ ಸಾಫ್ಟ್‌ವೇರ್ ದೋಷಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಅಪಾಯ

ಅಪಾಯ

ಮಾಲ್‌ವೇರ್‌ಗಳು ನಿಮ್ಮ ಫೋನ್‌ಗೆ ಹಾನಿ ಮಾಡುವ ಸಂಭವ ಹೆಚ್ಚು ಇದ್ದು ನಿಮ್ಮ ಫೋನ್‌ಗೆ ಯಾವುದೇ ಭದ್ರತೆ ದೊರೆಯುವುದಿಲ್ಲ. ನಿಮ್ಮ ಇಮೇಲ್, ಸಂದೇಶಗಳಿಗೆ ಹಾನಿಯಾಗುವುದು, ಫೋನ್‌ನಲ್ಲಿನ ಮಾಹಿತಿಗಳಿಗೆ ದೋಷವಾಗುವುದು ಮೊದಲಾದ ಅಪಾಯಗಳು ಸಂಭವಿಸುತ್ತಲೇ ಇರುತ್ತದೆ.

ಅತ್ಯಗತ್ಯ

ಅತ್ಯಗತ್ಯ

ನಿಮ್ಮ ಫೋನ್‌ಗೆ ರೂಟ್ ಮಾಡುವುದು ಅತ್ಯಗತ್ಯವೆಂದಾದಲ್ಲಿ, ಪ್ರೊಸೆಸ್ ಅನ್ನು ಚೆನ್ನಾಗಿ ಪರಿಶೀಲಿಸಿಕೊಳ್ಳಿ. ಸ್ಮಾರ್ಟ್‌ಫೋನ್ ವಿಧ ಮತ್ತು ಬ್ರ್ಯಾಂಡ್ ಅನ್ನು ಅನುಸರಿಸಿ ಇದು ಬೇರೆಯಾಗಿರುತ್ತದೆ.

ಆಂಟಿವೈರಸ್

ಆಂಟಿವೈರಸ್

ನಿಮ್ಮ ಫೋನ್‌ಗೆ ಸೂಕ್ತವಾದ ಆಂಟಿವೈರಸ್ ಭದ್ರತೆಯನ್ನು ಅಳವಡಿಸಿ.

ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ

ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ

ಆದಷ್ಟು ಫೋನ್ ಅನ್ನು ರೂಟಿಂಗ್ ಮಾಡಿಕೊಳ್ಳದೇ ನಿಮ್ಮ ಫೋನ್‌ನಲ್ಲಿ ಪ್ರಸ್ತುತ ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ.

Best Mobiles in India

English summary
every coin has two sides. Rooting gives more right for you to access and manage your Android devices, as well as change settings, but that power can be misused if you’re not careful.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X