ಕಂಪ್ಯೂಟರ್‌ ಖರೀದಿಗೂ ಮುನ್ನ್ ಈ ಮಾಹಿತಿ ನಿಮಗೆ ತಿಳಿದಿರಲಿ

Posted By: Vijeth
ಕಂಪ್ಯೂಟರ್‌ ಖರೀದಿಗೂ ಮುನ್ನ್ ಈ ಮಾಹಿತಿ ನಿಮಗೆ ತಿಳಿದಿರಲಿ

ನೀವೂ ಹೊಸ ಕಂಪ್ಯೂಟರ್‌ ಕೊಳ್ಳುವ ಆಲೋಚನೆಯಲ್ಲಿದ್ದಲ್ಲಿ ಮೊದಲಿಗೆ ನಿಮ್ಮ ಸ್ನೇಹಿತರನ್ನೋ ಅಥವಾ ಇನ್ಯಾರನ್ನೋ ಖಂಡಿತವಾಗಿಯೂ ಯಾವ ಕಂಪ್ಯೂಟರ್‌ ಖರೀದಿಸಲಿ ಎಂದು ಕೇಳಿಯೇ ಇರುತ್ತೀರಾ. ಇದಕ್ಕೆ ಉತ್ತರವಾಗಿ ಒಬ್ಬೊಬ್ಬರೂ ಕೂಡಾ ಒಂದೊಂದು ಬ್ರಾಂಡ್‌ ಹಾಗೂ ಮಾಡೆಲ್‌ಗಳನ್ನು ಹೇಳಿ ನಿಮ್ಮನ್ನು ಮತ್ತಷ್ಟು ಗೊಂದಲಕ್ಕೆ ತಂದು ನಿಲ್ಲಿಸಿ ಬಿಡುತ್ತಾರೆ. ಈ ರೀತಿ ಕೇವಲ ನಿಮ್ಮ ಬಳಿಮಾತ್ರವಲ್ಲ ಕಂಪ್ಯೂಟರ್‌ ಖರೀದಿಸಲಿಚ್ಚಿಸುವ ಬಹುತೇಕ ಎಲ್ಲಾ ಮಂದಿಗೂ ಈ ರೀತಿಯ ಅನುಭವ ಆಗಿಯೇ ಇರುತ್ತದೆ.

ಅದಕ್ಕಾಗಿ ಖರೀದಿಗೂ ಮುನ್ನ ಸ್ವತಃ ನಾವೇ ಕಂಪ್ಯೂಟರ್‌ನ ಮಾಹಿತಿ ಕುರಿತಾಗಿ ಕೆಲ ಸರಳ ವಿಚಾರಗಳನ್ನು ತಿಳಿದುಕೊಳ್ಳುವುದು ಸೂಕ್ತ ಅಲ್ಲವೆ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಕಂಪ್ಯೂಟರ್‌ ಖರೀದಿಗು ಮುನ್ನ ಗಮನದಲ್ಲಿ ಇಡಬೇಕಾದ ಅಂಶಗಳ ಕುರಿತಾಗಿ ಕೆಲ ಸರಳ ಸಲಹೆಗಳನ್ನು ತಂದಿದೆ ಒಮ್ಮೆ ಓದಿ ನೋಡಿ. ನಂತರ ಯಾವ ರೀತಿಯ ಕಂಪ್ಯೂಟರ್‌ ಖರೀದಿಸ ಬೇಕು ಎಂಬುದು ನಿಮಗೇ ತಿಳಿಯುತ್ತದೆ.

1- ಯಾವುದೇ ಕಂಪ್ಯೂಟರ್‌ ಆಗಿರಲಿ ಅದರಲ್ಲಿನ ಸೆಂಟ್ರಲ್‌ ಪ್ರೊಸೆಸಿಂಗ್‌ ಯೂನಿಟ್‌ (ಸಿಪಿಯು) ಅತ್ಯಂತ ಪ್ರಮುಖ ಭಾಗವಾಗಿರುತ್ತದೆ. ಇದನ್ನು ಕಂಪ್ಯೂಟರ್‌ನ ಹೃದಯ ಭಾಗ ಎಂದೇ ಕರೆಯಲಾಗುತ್ತದೆ. ಆದ್ದರಿಂದಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಎಷ್ಟು ಉತ್ತಮವಾದ ಹಾಗೂ ಫಾಸ್ಟರ್‌ ಸಿಪಿಯು ಅಳವಡಿಸುತ್ತೀರೋ ಅಷ್ಟೇ ಸರಾಗವಾಗಿ ನಿಮ್ಮ ಕಂಪ್ಯೂಟರ್‌ ಕಾರ್ಯನಿರ್ವಹಿಸುತ್ತದೆ.

2- ಕಂಪ್ಯೂಟರ್‌ನ ಮತ್ತೊಂದು ಪ್ರಮುಖವಾದ ಭಾಗವೆಂದರೆ ಅದರಲ್ಲಿನ ರಾಂ ಅಂದರೆ ರಾಂಡೆಮ್‌ ಆಕ್ಸೆಸ್‌ ಮೆಮೊರಿ. ಸಾಮಾನ್ಯವಾಗಿ ಕಂಪ್ಯೂಟರ್‌ನಲ್ಲಿ 1.2 ನಿಂದ 4ಜಿಬಿ ವರೆಗಿನ ಶಾರ್ಟರ್ಮ್‌ ಮೆಮೊರಿ ನೀಡಲಾಗುತ್ತದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಹೆಚ್ಚಿನ ಸಾಮರ್ತ್ಯದ ರಾಂ ಇದ್ದಲ್ಲಿ ಮಾತ್ರವಷ್ಟೇ ನೀವು ಹೆಚ್ಚು ಹೆಚ್ಚು ಅಪ್ಲಿಕೇಷನ್‌ ಹಾಗೂ ಪ್ರೊಗ್ರಾಂಗಳನ್ನು ರನ್‌ ಮಾಡಲು ಸಾಧ್ಯವಾಗುತ್ತದೆ.

3- ನಿಮ್ಮ ಕಂಪ್ಯೂಟರ್‌ನಲ್ಲಿರುವ ಹಾರ್ಡ್‌ ಡ್ರೈವ್‌ ಕಂಪ್ಯೂಟರ್‌ನ ಲಾಂಗ್‌ ಟರ್ಮ್‌ ಮೆಮೊರಿಯಾಗಿರುತ್ತದೆ. ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಮಾಹಿತಿಯನ್ನು ಸೇವ್‌ ಮಾಡಿದಲ್ಲಿ ಅದು ಹಾರ್ಡ್‌ ಡ್ರೈನಲ್ಲಿಯೆ ಸೇವ್‌ ಆಗಿರುತ್ತದೆ. ಅಂದಹಾಗೆ ನೀವೂ ಗೇಮಿಂಗ್‌ ಸಲುವಾಗಿ ಕಂಪ್ಯೂಟರ್‌ ಖರೀದಿಸ ಬೇಕೆಂದಿದ್ದಲ್ಲಿ ಹೆಚ್ಚಿನ ಹಾರ್ಡ್‌ಡಿಸ್ಕ್‌ ಸಾಮರ್ತ್ಯ ಹೊಂದಿರುವ ಕಂಪ್ಯೂಟರ್‌ ಮೇಲೆ ನಿಮ್ಮ ಹಣ ತೊಡಗಿಸುವುದು ಸೂಕ್ತ.

4- ಕಂಪ್ಯೂಟರ್‌ ಖರೀದಿಗೂ ಮುನ್ನ ಅದರಲ್ಲಿ ನೀಡಲಾಗಿರುವ ಯುಎಸ್‌ಬಿ ಪೋರ್ಟ್‌ಗಳ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳಿ. ಏಕೆಂದರೆ ಈಗಂತೂ ಪೆನ್‌ಡ್ರೈವ್‌ ಅಲ್ಲದೆ ಸ್ಪೀಕರ್ಸ್‌, ಮೌಸ್‌, ಇಂಟರ್‌ನೆಟ್‌ ಡಾಂಗಲ್‌ ಹಾಗೂ ಬ್ಲೂಟೂತ್‌ಗಳಂತಹ ಸಾಧನಗಳನ್ನು ಯುಎಸ್‌ಬಿ ಮೂಲಕವೇ ಕನೆಕ್ಟ್‌ ಮಾಡಲಾಗುತ್ತದೆ. ಆದ್ದರಿಂದಲೇ ಹೆಚ್ಚಿ ಯುಎಸ್‌ಬಿ ಪೋರ್ಟ್‌ಗಳಿದ್ದಷ್ಟೂ ಒಳ್ಳೆಯದು.

5- ಅಂದಹಾಗೆ ನೀವೂ ಕಂಪ್ಯೂಟರ್‌ನಲ್ಲಿ ಹೈ ಡೆಫೆನಿಷನ್ ಗೇಮ್‌ಗಳನ್ನು ಆಡಲು ಬಯಸುವುದಾದರೆ ನಿಮ್ಮ ಕಂಪ್ಯೂಟರ್‌ನಲ್ಲಿ ಗ್ರಾಫಿಕ್‌ಕಾರ್ಡ್‌ ಅಗತ್ಯವಾಗಿ ಇರಲೇಬೇಕು ಇಲ್ಲವಾದಲ್ಲಿ ನಿಮ್ಮ ಕಂಪ್ಯೂಟರ್‌ ಇಂತಹ ಗೇಮ್ಸ್‌ಗಳಿಗೆ ಸಹಕರಿಸುವುದಿಲ್ಲ. ಗೇಮಿಂಗ್‌ ಬೇಕೆಂದು ಬಯಸುವವರು ಗ್ರಾಫೀಕ್‌ ಕಾರ್ಡ್‌ಹೊಂದಿರುವ ಕಂಪ್ಯೂಟರ್‌ ಖರೀದಿಗೆ ಮುಂದಾಗಿ.

ಈರೀತಿ ಕಂಪ್ಯೂಟರ್‌ ಖರೀದಿಗೂ ಮುನ್ನ ಇಂತಹ ಕೆಲ ಅಗತ್ಯ ಮಾಹಿತಿಗಳ ಕುರಿತಾಗಿ ತಿಳಿದು ಕೊಳ್ಳುವುದು ಅತ್ಯವಶ್ಯಕವಾಗಿದೆ. ಅಂದಹಾಗೆ ನಿಮ್ಮ ಅಭಿಪ್ರಾಯಗಳನ್ನು ಹಾಗೂ ತಂತ್ರಜ್ಞಾನ ಕುರಿತಾದ ಯಾವುದೇ ವಿಚಾರದ ಕುರಿತಾಗಿ ಮಾಹಿತಿ ಅಥವಾ ಸಲಹೆ ಬೇಕಿದ್ದಲ್ಲಿ ಕಮೆಂಟ್‌ ಮೂಲಕ ನಮಗೆ ತಿಳಿಸಿ.

ಕಂಪ್ಯೂಟರ್‌ನಲ್ಲಿ ವೈರಸ್‌ ಪತ್ತೆಹಚ್ಚುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot