Subscribe to Gizbot

ಈ ಟಿಪ್ಸ್ ಅನುಸರಿಸದೇ ಫೋನ್ ಚಾರ್ಜ್ ಮಾಡದಿರಿ

Written By:

ನಮಗೆಲ್ಲಾ ತಿಳಿದಿರುವಂತೆ, ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುವುದು ಅತ್ಯವಶ್ಯಕವಾಗಿದೆ ಇವುಗಳು ಬ್ಯಾಟರಿಗಳನ್ನು ಹೊಂದಿರುವುದರಿಂದ ಏಕೈಕ ಚಾರ್ಜ್‌ನಲ್ಲಿ ನಾವು ಡಿವೈಸ್‌ನಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತೇವೆ. ಆದರೆ ಫೋನ್ ಚಾರ್ಜ್ ಮಾಡುವ ವಿಧಾನಗಳಲ್ಲಿ ಕೆಲವೊಂದು ಹಂತಗಳನ್ನು ನಾವು ಅನುಸರಿಸಿದಾಗ ಇನ್ನಷ್ಟು ಫೋನ್‌ನಲ್ಲಿ ಚಾರ್ಜ್ ಅನ್ನು ಉಳಿಸಿಕೊಳ್ಳಬಹುದಾಗಿದೆ.

ಓದಿರಿ: ಮೈಕ್ರೊ ಸಿಮ್ ತಯಾರಿಗೆ ಅನುಸರಿಸಿ ನಾಲ್ಕೇ ನಾಲ್ಕು ಹಂತ!

ಆ ವಿಧಾನಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ನಿಮ್ಮ ದೋಷಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಸ್ವಿಚ್ ಆಫ್ ಮಾಡಿ

#1

ನಿಮ್ಮ ಫೋನ್ ಕಡಿಮೆ ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಮಾಡಿ ಮತ್ತು ಬೇಕೆಂದಾಗ ಮಾತ್ರವೇ ಅದನ್ನು ಬಳಸಿಕೊಳ್ಳಿ.

ನೆಟ್‌ವರ್ಕ್ ಕನೆಕ್ಟಿವಿಟಿಯಿಂದ ಪವರ್ ಅನ್ನು ಉಳಿಸುತ್ತದೆ

#2

ಫೋನ್ ಸ್ವಿಚ್ ಆಫ್ ಮಾಡುವುದು ನೆಟ್‌ವರ್ಕ್ ಕನೆಕ್ಟಿವಿಟಿಯಿಂದ ಪವರ್ ಅನ್ನು ಉಳಿಸುತ್ತದೆ ಅಂತೆಯೇ ಬ್ಲ್ಯೂಟೂತ್, ವೈಫೈಯಿಂದ ಕೂಡ ಚಾರ್ಜ್ ಅನ್ನು ಉಳಿಸುವಂತೆ ಮಾಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಮೋಡ್ ಅನ್ನು ಏರ್‌ಪ್ಲೇನ್‌ಗೆ ಬದಲಾಯಿಸಿ, ಇಲ್ಲೂ ಕೂಡ ಸ್ವಲ್ಪ ಚಾರ್ಜ್ ಅನ್ನು ನಿಮಗೆ ಉಳಿಸಿಕೊಳ್ಳಬಹುದಾಗಿದೆ.

ಅಡಾಪ್ಟರ್ ಬಳಸಿ

#3

ಉತ್ತಮ ರೇಟಿಂಗ್ ಉಳ್ಳ ಅಡಾಪ್ಟರ್ ಅನ್ನು ಬಳಸಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 1 ಏಂಪ್‌ನಷ್ಟು ಕರೆಂಟ್ ಅನ್ನು ಮಾತ್ರ ಬಳಸಿಕೊಳ್ಳುತ್ತವೆ.

ಅಡಾಪ್ಟರ್

#4

ನಿಮ್ಮ ಚಾರ್ಜರ್ ಹೆಚ್ಚು ಆಂಪರ್ ರೇಟ್ ಅನ್ನು ಪಡೆದುಕೊಳ್ಳುತ್ತಿದೆ ಎಂದಾದಲ್ಲಿ ಇದು ಹೆಚ್ಚು ವೇಗದಲ್ಲಿ ಚಾರ್ಜ್ ಆಗುತ್ತದೆ ಆಗ ಅಡಾಪ್ಟರ್ ನಿಮಗೆ ಬೇಕಾಗಿಲ್ಲ. ಸರಿಹೊಂದುವ ಅಡಾಪ್ಟರ್‌ನೊಂದಿಗೆ ಸೂಕ್ತ ಕೇಬಲ್ ಬಳಸಿ ನಿಮಗೆ ಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ.

ಪ್ಲಗ್ ಪಾಯಿಂಟ್‌ಗೆ ಆದ್ಯತೆ ನೀಡಿ ಯುಎಸ್‌ಬಿ ಪೋರ್ಟ್‌ಗಲ್ಲ

#5

ನೀವು ಪ್ಲಗ್ ಪಾಯಿಂಟ್‌ಗೆ ಆದ್ಯತೆ ನೀಡಿದಲ್ಲಿ, ಯುಎಸ್‌ಬಿ ಪೋರ್ಟ್‌ಗಿಂತಲೂ ವೇಗವಾಗಿ ಇದು ಚಾರ್ಜ್ ಮಾಡುತ್ತದೆ. ಯುಎಸ್‌ಬಿ ಪೋರ್ಟ್ 0.5A ನಲ್ಲಿ ಚಾರ್ಜ್ ಮಾಡಿದರೆ, ಪ್ಲಗ್ ಚಾರ್ಜ್ 1A ನಲ್ಲಿ ಮಾಡುತ್ತದೆ.

ಕೇಸ್ ಮತ್ತು ಕವರ್‌ಗಳನ್ನು ರಿಮೂವ್ ಮಾಡಿ

#6

ಸ್ಮಾರ್ಟ್‌ಫೋನ್ ಬ್ಯಾಟರಿಗಳು ಸರಳ ರೀತಿಯನ್ನು ಅನುಸರಿಸಿಕೊಂಡಿವೆ ಬ್ಯಾಟರಿ ತಣ್ಣಗಿದ್ದಷ್ಟೂ ಫೋನ್ ಬಾಳ್ವಿಕೆ ದೀರ್ಘವಾಗಿರುತ್ತದೆ. ಎಲ್ಲಾ ಸ್ಮಾರ್ಟ್‌ಫೋನ್‌ಗಳು ಲಿಥಿಯಮ್-ಐಯಾನ್ ಬ್ಯಾಟರಿಗಳನ್ನು ಬಳಸಿಕೊಳ್ಳುತ್ತವೆ, ಇದು ಚಾರ್ಜ್ ಆಗುವಾಗ ಬಿಸಿಯಾಗುತ್ತದೆ. ಇದರಿಂದ ಫೋನ್ ಕೂಡ ಬಿಸಿಯಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
With lots of quick charging technologies emerging in the market, it would be an easy task to charge your device completely in less than an hour. If you own one with quick charging, you are good to go.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot