ವೈಫೈ ಡಿಸ್‌ಕನೆಕ್ಟಿಂಗ್ ಸಮಸ್ಯೆಗಳಿದ್ದರೇ ಈ ಹಂತಗಳನ್ನು ಫಾಲೋ ಮಾಡಿ

By Suneel
|

ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆಂಡ್ರಾಯ್ಡ್, ಐಓಎಸ್ ಅಥವಾ ವಿಂಡೋಸ್‌, ಮತ್ತು ಲ್ಯಾಪ್‌ಟಾಪ್‌/ಪಿಸಿ ಯಾವುದೇ ಬಳಕೆದಾರರಿಗೂ ಸಹ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಇದ್ದೇ ಇರುತ್ತದೆ.

ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಯಾವುದೇ ಚಟುವಟಿಕೆ ಮಾಡಲಿ, ಎಲ್ಲೇ ಹೋಗಲಿ, ಇಂದು ವೆಬ್‌ ಅಥವಾ ಇಂಟರ್ನೆಟ್‌ ಇಂದು ಮುಖ್ಯವಾಗಿದೆ. ಈ ಚಟುವಟಿಕೆಗಳಿಗೆಲ್ಲಾ ವೈಫೈ ಕನೆಕ್ಟ್ ಉತ್ತಮ ಆಪ್ಶನ್ ಆಗಿದೆ.

ಅಂದಹಾಗೆ ವೈಫೈ(Wifi) ಕೆನೆಕ್ಷನ್‌ ಸಮಸ್ಯೆ ಮತ್ತು ಡಿಸ್‌ಕನೆಕ್ಷನ್‌ ಸಮಸ್ಯೆಯನ್ನು ಎಲ್ಲರೂ ಎದುರಿಸುತ್ತಿರುತ್ತೇವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಲೇಖನದಲ್ಲಿನ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ.

ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಆಂಡ್ರಾಯ್ಡ್‌ನಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ  ಪರಿಹರಿಸಿ

ಆಂಡ್ರಾಯ್ಡ್‌ನಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹರಿಸಿ

ಆಂಡ್ರಾಯ್ಡ್‌ನಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹರಿಸಿ
ಆಂಡ್ರಾಯ್ಡ್‌ನಲ್ಲಿ ನಿರಂತರವಾಗಿ ವೈಫೈ ಡಿಸ್‌ಕನೆಕ್ಟ್‌ ಆಗುತ್ತಿದ್ದಲ್ಲಿ ಚೆಕ್‌ ಮಾಡಿ

- Forget ಕ್ಲಿಕ್‌ ಮಾಡಿ ಮತ್ತು ಮತ್ತೊಮ್ಮೆ ಪಾಸ್‌ವರ್ಡ್‌ ಎಂಟರ್‌ ಮಾಡಿ

- ಹೆಸರು ಟೈಪಿಸಿರುವುದು ಸರಿಯಾಗಿದೆಯೇ ಚೆಕ್‌ ಮಾಡಿ

- ಡಿಸ್‌ಕನೆಕ್ಟ್ ಮಾಡಿ ಮೊತ್ತೊಮ್ಮೆ ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡಿ

- ಏರ್‌ಪ್ಲೇನ್‌ ಮೋಡ್‌ಗೆ ಸ್ವಿಚ್‌ ಮಾಡಿ ಮತ್ತು ನಂತರ ಆಫ್‌ ಮಾಡಿ ನೆಟ್‌ವರ್ಕ್‌ಗೆ ಬನ್ನಿ. ವೈಫೈ ಈಗ ಕನೆಕ್ಟ್ ಆಗಿರುತ್ತದೆ.

ಐಓಎಸ್'ಗಳಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹಾರ ಹೇಗೆ?

ಐಓಎಸ್'ಗಳಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹಾರ ಹೇಗೆ?

ಆಂಡ್ರಾಯ್ಡ್ ಬಳಕೆದಾರರು ಮಾತ್ರವಲ್ಲದೇ ಐಓಎಸ್‌ ಬಳಕೆದಾರರಿಗೂ ಸಹ ವೈಫೈ ಡಿಸ್‌ಕನೆಕ್ಟ್‌ ಸಮಸ್ಯೆ ಇದ್ದದ್ದೇ. ಕೆಳಗಿನ ಹಂತಗಳನ್ನು ಫಾಲೋ ಮಾಡಿ

- ನಿಮ್ಮ ಐಫೋನ್‌ ರೀಬೂಟ್ ಮಾಡಿ

- Forget ಕ್ಲಿಕ್‌ ಮಾಡಿ ಮತ್ತು ಮತ್ತೊಮ್ಮೆ ಪಾಸ್‌ವರ್ಡ್‌ ಎಂಟರ್‌ ಮಾಡಿ

- ವೈಫೈ ಟಾಗ್ಲಿಂಗ್‌ ಅನ್ನು ಆನ್‌ ಮಾಡಿ ಆಫ್‌ ಮಾಡಿ

- ನೆಟ್‌ವರ್ಕ್‌ ರೀಸೆಟ್‌ ಮಾಡಿ

- ಓಪನ್‌ಡಿಎನ್‌ಎಸ್‌ ಅಥವಾ ಗೂಗಲ್‌ ಡಿಎನ್‌ಎಸ್‌ ಪ್ರಯತ್ನಿಸಿ

ವಿಂಡೋಸ್‌ನಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹರಿಸಿ

ವಿಂಡೋಸ್‌ನಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹರಿಸಿ

ವಿಂಡೋಸ್‌ ಫೋನ್‌'ಗಳಲ್ಲೂ ಸಹ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಆಗಾಗ ಎದುರಾಗುತ್ತಿರುತ್ತದೆ. ನೀವೆ ಹೇಗೆ ಈ ಸಮಸ್ಯೆ ಬಗೆಹರಿಸಿಕೊಳ್ಳುವುದು ಎಂದು ತಿಳಿಯಿರಿ

- ವೈಫೈ ರೂಟರ್‌ಗೆ ಹಲವು ಡಿವೈಸ್‌ಗಳು ಕನೆಕ್ಟ್ ಆಗುವುದನ್ನು ತಪ್ಪಿಸಿ

- ಸೂಕ್ತ ವೈಫೈ ಸೆಕ್ಯುರಿಟಿ ವಿಧಾನ ಬಳಸಿ. WPA2-PSK ಜೊತೆಗೆ AES ಅಥವಾ 32 ಬಿಟ್‌ TKIP ಎನ್‌ಕ್ರಿಪ್ಶನ್ ಬಳಸಿ.

- ನೆಟ್‌ವರ್ಕ್‌ ರೀಸೆಟ್‌ ಮಾಡಿ

- ವೈಫೈ ಟಾಗ್ಲಿಂಗ್‌ ಅನ್ನು ಆನ್‌ ಮತ್ತು ಆಫ್‌ ಮಾಡಿ

- Forget ಕ್ಲಿಕ್‌ ಮಾಡಿ ಮತ್ತು ಮತ್ತೊಮ್ಮೆ ಪಾಸ್‌ವರ್ಡ್‌ ಎಂಟರ್‌ ಮಾಡಿ

ಲ್ಯಾಪ್‌ಟಾಪ್‌/ಪಿಸಿ'ಗಳಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಬಗೆಹರಿಸುವುದು ಹೇಗೆ?

ಲ್ಯಾಪ್‌ಟಾಪ್‌/ಪಿಸಿ'ಗಳಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಬಗೆಹರಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್ ಮತ್ತು ಪಿಸಿ ಬಳಕೆದಾರರು ವೈಫೈ ಡಿಸ್‌ಕನೆಕ್ಟ್‌ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲ್ಯಾಪ್‌ಟಾಪ್‌/ಪಿಸಿ'ಗಳಲ್ಲಿ ವೈಫೈ ಡಿಸ್‌ಕನೆಕ್ಟ್ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ

- ವೈಫೈ ಆಪ್ಶನ್‌ ಆನ್‌ ಆಗಿದೆಯೇ ಚೆಕ್‌ ಮಾಡಿ

- ರೂಟರ್‌ನಲ್ಲಿ ವೈಫೈ ಚಾನೆಲ್ ಬದಲಿಸಿ

- ನಿಮ್ಮ ಡಿವೈಸ್‌ ಅನ್ನು ರೀಬೂಟ್ ಮಾಡಿ

- ಫ್ಯಾಕ್ಟರಿ ಡೀಫಾಲ್ಟ್‌ಗೆ ರೂಟರ್‌ ಸೆಟ್ಟಿಂಗ್ಸ್ ಅನ್ನು ರೀಸ್ಟೋರ್‌ ಮಾಡಿ

- ವೈರ್‌ಲೆಸ್ ಅಡಾಪ್ಟರ್‌ ಡ್ರೈವ್‌ ಅನ್ನು ಮತ್ತೊಮ್ಮೆ ರೀ ಇನ್‌ಸ್ಟಾಲ್ ಮಾಡಿ

- ರೂಟರ್ ಫರ್ಮ್‌ ವೇರ್‌ ಅಪ್‌ಗ್ರೇಡ್‌ ಮಾಡಿ

Best Mobiles in India

English summary
Try These Tricks to Fix the 'WiFi Disconnecting Issue'. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X