4ಜಿ ಸಿಮ್ ಅನ್ನು 2ಜಿ/3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ?

By Shwetha
|

ಭಾರತದಲ್ಲಿ 4ಜಿ ನೆಟ್‌ವರ್ಕ್ ಹೆಚ್ಚಳವನ್ನು ಕಂಡುಕೊಂಡಿದ್ದು ಈ ಅಂಶವನ್ನು ಬೆಂಬಲಿಸುವ ಸಾಕಷ್ಟು ಸುದ್ದಿಗಳು ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸರ್ವೀಸ್ ಪ್ರೊವೈಡರ್‌ಗಳು 4ಜಿ ಟಾರಿಫ್‌ಗಳನ್ನು 3ಜಿ ಬೆಲೆಯಲ್ಲಿ ನೀಡುತ್ತಿದ್ದಾರೆ. ಇದು 4ಜಿ ಬಳಕೆಯನ್ನು ಹೆಚ್ಚಿಸಿದ ಅಂಶವಂತೂ ನಿಜ. ಇನ್ನೊಂದು 4ಜಿ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದು.

ಓದಿರಿ: ರೂ 500 ಕ್ಕೆ 600 ಜಿಬಿ ಡೇಟಾ ಜಿಯೋ ಆಫರ್

ಇಂದು ಮಾರುಕಟ್ಟೆಯಲ್ಲಿ ಹೆಚ್ಚಿನ 4ಜಿ ಸ್ಮಾರ್ಟ್‌ಫೋನ್‌ಗಳಿವೆ ಹೆಚ್ಚಿನ ಫೋನ್ ಬಳಕೆದಾರರಿಗೆ ಇರುವ ಗೊಂದಲವೆಂದರೆ 2ಜಿ ಅಥವಾ 3ಜಿ ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸಬಹುದೇ ಇಲ್ಲವೇ ಎಂದಾಗಿದೆ. ಇಂದಿನ ಲೇಖನದಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ನಾವು ತಂದಿದ್ದು ನಿಮಗಿದು ಉತ್ತಮ ಅಂಶ ಎಂದೆನಿಸಲಿದೆ.

ಯಾವುದೇ ಸಿಮ್ ಯಾವುದೇ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸಲಿದೆ

ಯಾವುದೇ ಸಿಮ್ ಯಾವುದೇ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸಲಿದೆ

ಯಾವುದೇ ಸಿಮ್ ಆಗಿರಲಿ 2ಜಿ, 3ಜಿ ಅಥವಾ 4ಜಿ ಯಾವುದೇ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು 4ಜಿ ಸಿಮ್ ಕಾರ್ಡ್ ಅನ್ನು 3ಜಿ ಅಥವಾ 2ಜಿ ಇಲ್ಲವೇ 3ಜಿ ಫೋನ್‌ಗಳಲ್ಲಿ ಅಥವಾ 2ಜಿ ಇಲ್ಲವೇ 3ಜಿ ಸಿಮ್ ಕಾರ್ಡ್ ಅನ್ನು 4ಜಿ ಫೋನ್‌ನಲ್ಲಿ ಬಳಸಬಹುದಾಗಿದೆ. ಎಲ್ಲವೂ ಸಾಧ್ಯವಿದೆ.

ಡಿವೈಸ್ ಆಧರಿಸಿ ಡೇಟಾ ವೇಗ ಬದಲಾಗುತ್ತದೆ

ಡಿವೈಸ್ ಆಧರಿಸಿ ಡೇಟಾ ವೇಗ ಬದಲಾಗುತ್ತದೆ

ಸಿಮ್ ಕಾರ್ಡ್ ಮತ್ತು ನೀವು ಬಳಸುತ್ತಿರುವ ಡಿವೈಸ್ ಆಧರಿಸಿ ಡೇಟಾ ವೇಗ ಬದಲಾಗುತ್ತಿರುತ್ತದೆ. ನೀವು 4ಜಿ ಸಿಮ್ ಅನ್ನು 4ಜಿ ಸಕ್ರಿಯಗೊಂಡಿರುವ ಡಿವೈಸ್‌ನಲ್ಲಿ ಬಳಸದ ಹೊರತು 4ಜಿ ನೆಟ್‌ವರ್ಕ್‌ನಲ್ಲಿರುವ ಹೆಚ್ಚು ಡೇಟಾವನ್ನು ನಿಮಗೆ ಆನಂದಿಸಲು ಸಾಧ್ಯವಿಲ್ಲ.

4ಜಿ ಸಿಮ್ ಎಲ್ಲಾ ಸಿಗ್ನಲ್‌ಗಳನ್ನು ಸ್ವೀಕರಿಸಬಹುದು

4ಜಿ ಸಿಮ್ ಎಲ್ಲಾ ಸಿಗ್ನಲ್‌ಗಳನ್ನು ಸ್ವೀಕರಿಸಬಹುದು

4ಜಿ ಸಿಮ್ ಕಾರ್ಡ್ ಎಲ್ಲಾ ಸಿಗ್ನಲ್‌ಗಳು ಅಂದರೆ 2ಜಿ, 3ಜಿ ಮತ್ತು 4ಜಿ ಯನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ನೀವು 2ಜಿ ಅಥವಾ 3ಜಿ ಫೋನ್‌ನಲ್ಲಿ 4ಜಿ ಸಿಮ್ ಕಾರ್ಡ್ ಅನ್ನು ಬಳಸಿದಲ್ಲಿ ನಿಮಗೆ 2ಜಿ ಅಥವಾ 3ಜಿ ವೇಗವನ್ನು ಪಡೆದುಕೊಳ್ಳಲು ಸಾಧ್ಯ. 4ಜಿ ದೊರೆಯದೇ ಇದ್ದಾಗ 4ಜಿ ಸ್ಮಾರ್ಟ್‌ಫೋನ್‌ನಲ್ಲಿ 3ಜಿ ಅಥವಾ 2ಜಿ ನಲ್ಲಿ ಸಿಗ್ನಲ್ ವೇಗ ಇಳಿಕೆಯಾಗುವುದು ನೀವು ಗಮನಿಸಿರಬಹುದು.

ಕರೆಗಳನ್ನು ಮಾಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ

ಕರೆಗಳನ್ನು ಮಾಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ

2ಜಿ ಅಥವಾ 3ಜಿ ಬೆಂಬಲಿಸುವ ಡಿವೈಸ್‌ನಲ್ಲಿ 4ಜಿ ಸಿಮ್ ಬಳಸಿಕೊಂಡು ಕರೆ ಮಾಡುವುದು ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಡಿವೈಸ್‌ನಲ್ಲಿ ಸಿಮ್ ಕಾರ್ಡ್ ಉತ್ತಮವಾಗಿ ಕೆಲಸ ಮಾಡಿದಂತೆ, ವಾಯ್ಸ್ ಕಾಲ್ ಮಾಡುವುದೂ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

4ಜಿ ವೇಗವನ್ನು ಆನಂದಿಸಲು 4ಜಿ ಫೋನ್ ಬಳಸಿ

4ಜಿ ವೇಗವನ್ನು ಆನಂದಿಸಲು 4ಜಿ ಫೋನ್ ಬಳಸಿ

4ಜಿ ವೇಗವನ್ನು ನೀವು ಆನಂದಿಸಬೇಕು ಎಂದಾದಲ್ಲಿ, ನಿಮ್ಮ ಡಿವೈಸ್ ಅನ್ನು 4ಜಿ ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಿ. ಇದರೊಂದಿಗೆ ನಿಮ್ಮ ವಲಯ ಕೂಡ 4ಜಿ ನೆಟ್‌ವರ್ಕ್ ಅನ್ನು ಹೊಂದಿರಬೇಕು. ನೀವು 4ಜಿ ಸಕ್ರಿಯವಲ್ಲದ ಸ್ಮಾರ್ಟ್‌ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸುತ್ತೀರಿ ಎಂದಾದಲ್ಲಿ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ.

4ಜಿ ಸಿಗ್ನಲ್ ಇಳಿಕೆ

4ಜಿ ಸಿಗ್ನಲ್ ಇಳಿಕೆ

4ಜಿ ಸಿಗ್ನಲ್ ಇಳಿಕೆಯಾಗಿರುವ ಸಂದರ್ಭದಲ್ಲಿ 3ಜಿ ಅಥವಾ 2ಜಿಗೆ ಇದು ಸಂಪರ್ಕವನ್ನು ಪಡೆದುಕೊಳ್ಳುತ್ತದೆ. ನಿಮ್ಮ ಡಿವೈಸ್ 4ಜಿಗೆ ಬೆಂಬಲವನ್ನು ನೀಡದೇ ಇದ್ದ ಸಂದರ್ಭದಲ್ಲಿ 2ಜಿ ಸಿಗ್ನಲ್‌ಗೆ ಇದು ಸಂಪರ್ಕವನ್ನು ಹೊಂದುತ್ತದೆ.

ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಬಳಸಿ

ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಬಳಸಿ

4ಜಿ ಸಿಮ್ ಕೂಡ ಸಾಮಾನ್ಯ ಸಿಮ್ ಆಗಿದೆ. ನೀವು ಈ ಸಿಮ್ ಅನ್ನು ಯಾವುದೇ 2ಜಿ/3ಜಿ ಫೋನ್‌ನಲ್ಲಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಬಳಸಿಕೊಳ್ಳಬಹುದಾಗಿದೆ.

4ಜಿ ಇಂಟರ್ನೆಟ್

4ಜಿ ಇಂಟರ್ನೆಟ್

ನೀವು 4ಜಿ ಇಂಟರ್ನೆಟ್ ಅನ್ನು ಬಳಸಬೇಕು ಎಂದಾದಲ್ಲಿ ನೀವು 3 ಅಂಶಗಳನ್ನು ಹೊಂದಿರಲೇಬೇಕು

4ಜಿ ನೆಟ್‌ವರ್ಕ್

4ಜಿ ನೆಟ್‌ವರ್ಕ್

4ಜಿ ಫೋನ್, 4ಜಿ ಸಿಮ್ ಮತ್ತು ನಿಮ್ಮ ಪ್ರದೇಶದಲ್ಲಿ 4ಜಿ ನೆಟ್‌ವರ್ಕ್

Best Mobiles in India

English summary
Here, we have come up with a solution to this confusion and we also offer more clarity on the same. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X