Subscribe to Gizbot

ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ನಲ್ಲಿ ಬಳಸುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಭಾರತದಲ್ಲಿ ಇದೀಗ ಹೆಚ್ಚು ಸುದ್ದಿಯನ್ನು ಮಾಡುತ್ತಿದೆ. 4ಜಿ ಸಿಮ್ ಅನ್ನು ಬಳಸಿಕೊಂಡು ಅದು ನೀಡುತ್ತಿರುವ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಎಲ್ಲಾ ಫೋನ್ ಬಳಕೆದಾರರು ನಿರತರಾಗಿದ್ದಾರೆ. 4ಜಿ ಸ್ಮಾರ್ಟ್‌ಫೋನ್‌ನಲ್ಲಿ ಈ ಸಿಮ್ ಅನ್ನು ಬಳಸಿಕೊಂಡು ಬಳಕೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನಾವು ಅರಿತುಕೊಂಡಿದ್ದರೂ ಇದೇ ಸಿಮ್ ಅನ್ನು 3ಜಿ ಬಳಸಿ ಪ್ರಯೋಜನ ಪಡೆಯುವುದು ಹೇಗೆ ಎಂಬುದನ್ನು ಅರಿಯಲಿದ್ದೇವೆ.

ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3 ಜಿ ಸ್ಮಾರ್ಟ್‌ಫೋನ್‌ಗೆ ಈ ಎಲ್ಲಾ ಅಗತ್ಯತೆಗಳು ಬೇಕು

3 ಜಿ ಸ್ಮಾರ್ಟ್‌ಫೋನ್‌ಗೆ ಈ ಎಲ್ಲಾ ಅಗತ್ಯತೆಗಳು ಬೇಕು

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮತ್ತು ಮೇಲ್ಮಟ್ಟದ ಆವೃತ್ತಿ
ಮೀಡಿಯಾಟೆಕ್ ಚಿಪ್‌ಸೆಟ್

3ಜಿ ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸುವುದು ಹೇಗೆ?

3ಜಿ ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸುವುದು ಹೇಗೆ?

ನಿಮ್ಮ 3ಜಿ ಫೋನ್‌ನಲ್ಲಿ ಈ ಸಿಮ್ ಕಾರ್ಡ್ ಅನ್ನು ಬಳಸಿಕೊಳ್ಳಲು, ಈ ಸಲಹೆಗಳನ್ನು ಅರಿತುಕೊಳ್ಳಿ. ಈ ಹಂತಗಳನ್ನು ನೀವು ಅನುಸರಿಸಲೇಬೇಕಾಗಿದೆ.

ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್

ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್

ಮೊದಲಿಗೆ ಈ ಲಿಂಕ್ ಬಳಸಿಕೊಂಡು ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಿ

ಅಪ್ಲಿಕೇಶನ್

ಅಪ್ಲಿಕೇಶನ್

ಈ ಅಪ್ಲಿಕೇಶನ್ ಸುಧಾರಿತ ಸೆಟಪ್ ಅನ್ನು ಎಮ್‌ಟಿಕೆ ಫೋನ್‌ಗಳಿಂದ ಚಾಲನೆ ಮಾಡಲು ಅನುಮತಿಸುತ್ತದೆ. ಇದನ್ನು ಸರ್ವೀಸ್ ಮೋಡ್ ಎಂಬುದಾಗಿ ಕೂಡ ಕರೆಯಲಾಗಿದೆ.

ನಿರ್ದಿಷ್ಟ ಕೋಡ್

ನಿರ್ದಿಷ್ಟ ಕೋಡ್

ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್ ತೆರೆಯಿರಿ, ಇಂಜಿನಿಯರಿಂಗ್ ಮೋಡ್‌ಗಾಗಿ ಮೊಬೈಲ್ ನಿರ್ದಿಷ್ಟ ಕೋಡ್ ಅನ್ನು ನಮೂದಿಸಿ

ಎಮ್‌ಟಿಕೆ ಸೆಟ್ಟಿಂಗ್ಸ್

ಎಮ್‌ಟಿಕೆ ಸೆಟ್ಟಿಂಗ್ಸ್

ಎಮ್‌ಟಿಕೆ ಸೆಟ್ಟಿಂಗ್ಸ್ ಸ್ಪರ್ಶಿಸಿ ಮತ್ತು ಪ್ರಿಫರ್ಡ್ ನೆಟ್‌ವರ್ಕ್ ಆಪ್ಶನ್ ಅನ್ನು ಆಯ್ಕೆಮಾಡಿ.

ರೀಸ್ಟಾರ್ಟ್ ಮಾಡಿಕೊಳ್ಳಿ

ರೀಸ್ಟಾರ್ಟ್ ಮಾಡಿಕೊಳ್ಳಿ

ನಂತರ, 4ಜಿ ಎಲ್‌ಟಿಇ, WCDMA ಅಥವಾ GSM ಮೋಡ್‌ನಿಂದ ನೆಟ್‌ವರ್ಕ್ ಆರಿಸಬೇಕು. ಇದನ್ನು ಸೇವ್ ಮಾಡಿಕೊಂಡು ಫೋನ್ ಅನ್ನು ರೀಸ್ಟಾರ್ಟ್ ಮಾಡಿಕೊಳ್ಳಿ.
ಗಮನಿಸಿ: ಏನಾದರೂ ದೋಷ ಸಂಭವಿಸಿದಲ್ಲಿ ಗಿಜ್‌ಬಾಟ್ ಇದಕ್ಕೆ ಹೊಣೆಯಾಗಿರುವುದಿಲ್ಲ. ಬಳಕೆದಾರರು ತಮ್ಮದೇ ಜವಬ್ದಾರಿಯಲ್ಲಿ ಈ ಕಾರ್ಯವನ್ನು ಮಾಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Take a look at the new update on the Preview Offer to know how easy it has become to get one and enjoy the superfast 4G connectivity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot