ಉಪ್ಪು ಮತ್ತು ನೀರನ್ನು ಬಳಸಿಕೊಂಡು ಫೋನ್ ಚಾರ್ಜ್ ಮಾಡುವುದು ಹೇಗೆ?
ಫೋನ್ ಚಾರ್ಜ್ ಮಾಡಲು ಉಪ್ಪು ಮತ್ತು ನೀರನ್ನು ಬಳಸುವ ಕ್ರಮವನ್ನು ನೀವು ಕೇಳಿದ್ದೀರಾ? ತುರ್ತು ಪರಿಸ್ಥಿತಿಗಳಲ್ಲಿ ಚಾರ್ಜ್ ಮಾಡಲು ಈ ಉಪಕರಣಗಳನ್ನು ನೀವು ಬಳಸಬಹುದಾಗಿದ್ದು ಇದು ನಿಜಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ಸ್ವೀಡಿಶ್ ಸಾಧನವೊಂದು ಉಪ್ಪು ಮತ್ತು ನೀರಿನಿಂದ ವಿದ್ಯುತ್ ಅನ್ನು ಉತ್ಪಾದಿಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲಿದೆ. ಇದು ಹೆಚ್ಚು ಸರಳ ವಿಧಾನ ಎಂದೆನಿಸಿದ್ದು ಜಾಕ್ ಎಂಬುದಾಗಿ ಈ ಉಪಕರಣದ ಹೆಸರಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ತ್ವರಿತ ಮತ್ತು ಪರಿಣಾಮಕಾರಿಯಾಗಿ ಚಾರ್ಜ್ ಮಾಡುತ್ತದೆ. ಅಂತೆಯೇ ನೀವು ಹೋಗುವಲ್ಲೆಲ್ಲಾ ಈ ಸಾಧನವನ್ನು ತೆಗೆದುಕೊಂಡು ಹೋಗಬಹುದಾಗಿದೆ. ಬನ್ನಿ ಜಾಕ್ ಕುರಿತು ಮತ್ತಷ್ಟು ವಿವರಗಳನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

#1
ಎಮ್‌ವೈಎಫ್‌ಸಿ ಸ್ವೀಡಿಶ್ ಕಂಪೆನಿಯು ಜಾಕ್ ಅನ್ನು ತಯಾರಿಸಿದ್ದು, ಉಪ್ಪು ಮತ್ತು ನೀರನ್ನು ಬಳಸಿಕೊಂಡು ಫೋನ್ ಚಾರ್ಜ್ ಮಾಡುತ್ತದೆ. ಕೆಮಿಕಲ್ ಎನರ್ಜಿಯನ್ನು ಇದು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ನಂತರ ಮೈಕ್ರೊ ಯುಎಸ್‌ಬಿಯನ್ನು ಬಳಸಿಕೊಂಡು ಫೋನ್‌ಗೆ ಇದನ್ನು ವರ್ಗಾಯಿಸಲಾಗುತ್ತದೆ.

#2
ಮೈಕ್ರೋ ಯುಎಸ್‌ಬಿಯ ಯುನಿವರ್ಸಲ್ ಸ್ವರೂಪವನ್ನು ಸ್ಮಾರ್ಟ್‌ಫೋನ್ ಬಳಸಿದ್ದು ಇದನ್ನು ಬಳಸಿ ಹೆಚ್ಚಿನ ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದು. ಕ್ಯಾಮೆರಾ ಮತ್ತು ಟ್ಯಾಬ್ಲೆಟ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

#3
ಉಪ್ಪು ಮತ್ತು ನೀರು ಈ ವಿಧಾನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಜಾಕ್‌ನಲ್ಲಿರುವ ಪವರ್ ಕಾರ್ಡ್ ಕಾರಣವಾಗಿದೆ. ಉಪ್ಪು ಮತ್ತು ನೀರಿನ ಮಿಶ್ರಣವನ್ನು ಈ ಕಾರ್ಡ್ ಒಳಗೊಂಡಿದ್ದು ಇದು 1800mAh ವಿದ್ಯುತ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

#4
ಈ ವಿಧಾನವನ್ನು ಬಳಸಿಕೊಂಡು ಸಿಂಗಲ್ ಚಾರ್ಜ್ ಮಾಡಬಹುದು. ಏಕೆಂದರೆ ಈ ಕಾರ್ಡ್ ಸಾಮರ್ಥ್ಯ ಅಷ್ಟೇ ಇದೆ. ಟ್ಯಾಬ್ಲೆಟ್‌ನಂತಹ ಡಿವೈಸ್ ಅನ್ನು ನೀವು ಚಾರ್ಜ್ ಮಾಡುವುದು ಎಂದಾದಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಡ್ ಅನ್ನು ನೀವು ಬಳಸಬೇಕು. ಈ ಕಾರ್ಡ್ ಅನ್ನು ನೀವು ಬಳಸಿದ ನಂತರ ಅದನ್ನು ಬಿಸಾಡಬೇಕಾಗುತ್ತದೆ.

#5
ಡಿವೈಸ್ ಆಮ್ಲಜನಕ ಮತ್ತು ಹೈಡ್ರೋಜನ್ ಅನ್ನು ಒಳಗೊಂಡಿದ್ದು ಎರಡು ಪ್ರತಿಕ್ರಿಯಾಕಾರಿಗಳು ಉಪ್ಪು ನೀರಿನ ಭಾಗವಾದ ಹೈಡ್ರೋಜನ್ ಪರಮಾಣುಗಳು ಇರುವ ಗೊತ್ತುಪಡಿಸಿದ ಪ್ರದೇಶದಲ್ಲಿ ಉಪ್ಪು ನೀರನ್ನು ಇಂಧನವನ್ನಾಗಿ ಪರಿಚಯಿಸುತ್ತದೆ.

#6
ಹೈಡ್ರೋಜನ್ ಅಣುಗಳು ಅನೋಡ್ನನಲ್ಲಿ ಕೋಶವನ್ನು ಪ್ರವೇಶಿಸಲಿದ್ದು ರಾಸಾಯನಿಕ ಕ್ರಿಯೆಗಳಲ್ಲಿ ಎಲೆಕ್ಟ್ರಾನ್‌ಗಳಿಂದ ವಿಭಜನೆಗೊಳ್ಳುತ್ತವೆ.

#7
ಈ ಸಮಯದಲ್ಲಿ ಎಲೆಕ್ಟ್ರಾನ್ಸ್ ತಮ್ಮ ಋಣಾತ್ಮಕ ಚಾರ್ಜ್‌ನಿಂದ ಬಾಹ್ಯ ಸರ್ಕ್ಯೂಟ್ ಮೂಲಕ ವಿದ್ಯುತ್ ಲಭಿಸುವಂತೆ ಮಾಡುತ್ತದೆ.

#8
ಈ ಸಮಯದಲ್ಲಿ ಎಲೆಕ್ಟ್ರಾನ್‌ಗಳಿಂದ ಅವುಗಳು ವಿಭಜನೆಗೊಂಡಾಗ ಹೈಡ್ರೋಜನ್ ಅಣುಗಳು ಧನಾತ್ಮಕ ಚಾರ್ಜ್‌ನೊಂದಿಗೆ ಹೈಡ್ರೋಜನ್ ಅಯಾನ್ಸ್ ಆಗುತ್ತವೆ. ಫಲಿತಾಂಶವಾಗಿ ಫ್ಯುಯೆಲ್ ಸೆಲ್‌ನ ಎಲೆಕ್ಟ್ರೊಲೈಟ್‌ನಾದ್ಯಂತ ಪ್ರವಹಿಸುತ್ತದೆ.

#9
ಆಮ್ಲಜನಕವು ಹೈಡ್ರೋಜನ್ ಅಣುಗಳನ್ನು ಸಂಧಿಸಿದಾಗ ವಿದ್ಯುತ್ ರಚನೆಯಾಗುತ್ತದೆ.

#10
ಈ ವಿಧಾನದಲ್ಲಿ ಉಪ್ಪು ಮತ್ತು ನೀರು ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್
ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








