ಇಂಟರ್‌ನೆಟ್‌ನಲ್ಲಿನ ಎಲ್ಲಾ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

|

ಇಂಟರ್‌ನೆಟ್ ಪ್ರಪಂಚದಲ್ಲಿ ನೀವು ಏನೇ ಹುಡುಕಿದರೂ ಕೂಡ ಅದು ದಾಖಲಾಗಿ ಉಳಿಯುತ್ತದೆ. ಯಾವುದಾರೂ ಒಂದು ವಸ್ತುವನ್ನು ಸರ್ಚ್ ಮಾಡುವುದರಿಂದ ಹಿಡಿದು, ನಾವು ನೋಡಿದ ವಿಡಿಯೋ, ಆಡಿಯೋ ಜೊತೆಗೆ ನಾವು ಡೌನ್‌ಲೋಡ್ ಮಾಡಿದ ಎಲ್ಲಾ ಮಾಹಿತಿಗಳು ಗೂಗಲ್‌ನಂತಹ ಸರ್ಚ್ ಎಂಜಿನ್ ಸೌಲಭ್ಯದಾತರ ಕಿಸೆಯಲ್ಲಿ ಕುಳಿತುಕೊಂಡಿರುತ್ತದೆ.

ಈಗೆಲ್ಲಾ ಇಂಟರ್‌ನೆಟ್ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡಿಡುವುದು ಸಾಮಾನ್ಯವಾದ ಸಂಗತಿಯಾದರೂ ಕೂಡ ಎಷ್ಟೋ ಜನರಿಗೆ ಇಂಟರ್‌ನೆಟ್ ಪ್ರಪಂಚದಲ್ಲಿ ನಮ್ಮ ಮಾಹಿತಿ ಅಳಿಸುವುದು ಹೇಗೆ ಎಂಬುದು ತಿಳಿದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಇಂಟರ್‌ನೆಟ್ ಪ್ರಪಂಚದಲ್ಲಿ ದಾಖಲಾದ ಮಾಹಿತಿಗಳನ್ನು ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಇಂಟರ್‌ನೆಟ್‌ನಲ್ಲಿನ ಎಲ್ಲಾ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

ಈಗ ಹೆಚ್ಚು ಬಳಕೆಯಲ್ಲಿರುವ ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಕಂಪ್ಯೂಟರ್‌ನಲ್ಲಿ ದಾಖಲಾಗಿರುವ ನಿಮ್ಮ ಇಂಟರ್‌ನೆಟ್ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡುವುದನ್ನು ನಾವಿಂದು ತಿಳಿಸುತ್ತಿದ್ದೇವೆ. ಹಾಗಾದರೆ, ಇನ್ನೇಕೆ ತಡ? ಇಂಟರ್‌ನೆಟ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದನ್ನು ಈಗಲೇ ತಿಳಿದುಕೊಳ್ಳಿ.

ಗೂಗಲ್ ಕ್ರೋಮ್‌ನಲ್ಲಿ

ಗೂಗಲ್ ಕ್ರೋಮ್‌ನಲ್ಲಿ

ಗೂಗಲ್ ಕ್ರೋಮ್‌ ತೆರೆದಿದ್ದಾಗಲೇ Ctrl + H ಪ್ರೆಸ್‌ ಮಾಡಿದರೆ ಸಾಕು browsing history delete ಮಾಡೋ ಆಪ್ಷನ್‌ ಬರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ ನಿಮಗೆ ಬೇಡವಾಗಿದ್ದು ಡಿಲೀಟ್‌ ಮಾಡಬಹುದು. ಮೊಬೈಲ್ ಆದರೆ, ಕ್ರೋಮ್‌ ಹೋಮ್ ಬಟನ್ ಕ್ಲಿಕ್ ಮಾಡಿದರೆ 'ಹಿಸ್ಟರಿ' ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡಬಹುದು.

ಇಂಟರ್‌ನೆಟ್ ಎಕ್ಸ್‌ಪ್ಲೋರರ್

ಇಂಟರ್‌ನೆಟ್ ಎಕ್ಸ್‌ಪ್ಲೋರರ್

ಇಂಟರ್‌ನೆಟ್ ಎಕ್ಸ್‌ಪ್ಲೋರರ್ ತೆರೆದು ಟೂಲ್ಸ್ ಮೆನುಗೆ ಹೋಗಿ. ಅದರಲ್ಲಿ ಸೆಕ್ಯೂರಿಟಿ ಕ್ಲಿಕ್‌ ಮಾಡಿ. ನಂತರ delete browsing history ಕ್ಲಿಕ್‌ ಮಾಡಿ. ನಂತರ ಯಾವ ಬಾಕ್ಸ್‌ನ್ನು ಡಿಲೀಟ್‌ ಮಾಡಬೇಕೋ ಅಲ್ಲಿಗೆ ಹೋಗಿ ಡಿಲೀಟ್‌ ಬಟನ್ ಕ್ಲಿಕ್‌ ಮಾಡಿ.ಮೊಬೈಲ್‌ಗಳಲ್ಲಿ ಎಕ್ಸ್‌ಪ್ಲೋರರ್ ಬಳಕೆ ಇಲ್ಲದಿದ್ದರೂ ಸಹ ಕ್ರೋಮ್‌ನಂತೆಯೇಇಲ್ಲಿಯೂ ಹಿಸ್ಟರಿ ಡಿಲೀಟ್ ಮಾಡಬಹುದು.

ಮೋಜಿಲ್ಲಾ ಫೈರ್‌ಫಾಕ್ಸ್

ಮೋಜಿಲ್ಲಾ ಫೈರ್‌ಫಾಕ್ಸ್

ಮೋಜಿಲ್ಲಾ ಫೈರ್‌ಫಾಕ್ಸ್ ತೆರೆದ ನಂತರ ಬ್ರೌಜರ್ ಟೂಲ್‌ಗೆ ತೆರೆದು ಪ್ರೈವಿಸಿ ಟ್ಯಾಬ್‌ ಕ್ಲಿಕ್‌ ಮಾಡಿ. ನಂತರ new window ಬರುತ್ತದೆ. ನಂತರ recent history ಕ್ಲಿಕ್‌ ಮಾಡಿ. ನಂತರ ಬಾಕ್ಸ್‌ ಬರುತ್ತದೆ. ಆ ಬಾಕ್ಸ್‌ನಲ್ಲಿ Delete Now ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿದ್ರೆ ನಿಮಗೆ ಬೇಡವಾದದ್ದೆಲ್ಲಾ ಡಿಲೀಟ್‌ ಆಗುತ್ತದೆ.

ಒಪೆರಾ

ಒಪೆರಾ

ಒಪೆರಾ ಬ್ರೌಸರ್ ವಿಂಡೋ ತೆರೆದು, ಒಪೆರಾ ಮೆನು ಬಟನ್ ವಿಂಡೋದ ಮೇಲ್ಬಾಗದ ಎಡ ಮೂಲೆಯಲ್ಲಿರುವ ಒಪೆರಾ ಮೆನು ಬಟನ್ ಕ್ಲಿಕ್ ಮಾಡಿ ಮತ್ತು ಇತಿಹಾಸ ಟ್ಯಾಬ್ ಅನ್ನು ತೆರೆಯಲು ಇತಿಹಾಸವನ್ನು ಆಯ್ಕೆ ಮಾಡಿ. ನಂತರ ಅಲ್ಲಿ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆ ನಿಮಗೆ ಸಿಗಲಿದೆ.

ಹಾರ್ಡ್‌ ಡ್ರೈವ್‌ ಕ್ಲೀನ್ ಮಾಡಿ.

ಹಾರ್ಡ್‌ ಡ್ರೈವ್‌ ಕ್ಲೀನ್ ಮಾಡಿ.

ಕಂಪ್ಯೂಟರ್‌ನಲ್ಲಿ Start > Accessories > System tools ಗೆ ಹೋಗಿ. ನಂತರ Cleaning the hard drive (c:") ನಲ್ಲಿ ಟೈಪ್‌ ಮಾಡಿ. ನಂತರ ಡಿಲೀಟ್‌ ಮಾಡಿ. ಇದನ್ನು ಹೊರತುಪಡಿಸಿ ಬಹಳಷ್ಟು ಆನ್‌ಲೈನ್‌ ಸಾಫ್ಟ್‌ವೇರ್‌ಗಳಿರುತ್ತವೆ. ಅವು ತನ್ನಷ್ಟಕ್ಕೆ ಅವುಗಳನ್ನ ಡಿಲೀಟ್‌ ಮಾಡಿಬಿಡುತ್ತದೆ. ಉದಾ: CCleaner

Best Mobiles in India

English summary
How do you clear all Google search history?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X