ವೈರಸ್ ದಾಳಿಯಿಂದ ನಿಮ್ಮ ಕಂಪ್ಯೂಟರ್ ಸೇವ್ ಮಾಡುವುದು ಹೇಗೆ..? ಇಲ್ಲಿದೇ ನೋಡಿ ಮಾಹಿತಿ..!!!

ಈ ವೈರಸ್ ದಾಳಿಯಿಂದ ನಿಮ್ಮ ಕಂಪ್ಯೂಟರ್ ಗಳನ್ನು ಸೇವ್ ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

By Precilla Dias
|

ಭಾರತ ಸೇರಿದಂತೆ ವಿಶ್ವದ 150 ದೇಶಗಳಲ್ಲಿನ 3ಲಕ್ಷಕ್ಕೂ ಅಧಿಕ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿರುವ ವಾನ್ನಾಕೈ ರಾಮ್ಸ್ ವೇರ್ ವೈರಸ್ ದಾಳಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಮಂದಿ ತಮ್ಮ ಕಂಪ್ಯೂಟರ್ ಗಳಲ್ಲಿದ್ದ ಮಾಹಿತಿಯನ್ನು ಕಳೆದುಕೊಂಡರೆ ಇನ್ನು ಹಲವರು ಹ್ಯಾಕರ್ಸ್ ಕೇಳಿದಷ್ಟು ಹಣವನ್ನು ನೀಡಿ ತಮ್ಮ ಕಂಪ್ಯೂಟರ್ ಗಳನ್ನು ಡಿಸ್ಕ್ರಿಪ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

ವೈರಸ್ ದಾಳಿಯಿಂದ ನಿಮ್ಮ ಕಂಪ್ಯೂಟರ್ ಸೇವ್ ಮಾಡುವುದು ಹೇಗೆ..?

ಇದೇ ಮಾದರಿಯಲ್ಲಿ ಸಾವಿರಾರು ವೈರಸ್ ಗಳು ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡಲು ಹೊಚು ಹಾಕುತ್ತಿವೆ. ಹಾಗಾಗಿ ಈ ವೈರಸ್ ದಾಳಿಯಿಂದ ನಿಮ್ಮ ಕಂಪ್ಯೂಟರ್ ಗಳನ್ನು ಸೇವ್ ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ರಾಮ್ಸ್ ವೇರ್ ನಿಂದ ಸುರಕ್ಷತೆ ಪಡೆಯಿರಿ:

ರಾಮ್ಸ್ ವೇರ್ ನಿಂದ ಸುರಕ್ಷತೆ ಪಡೆಯಿರಿ:

ಸದ್ಯ ಜಾಗತಿಕವಾಗಿ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ವೈರಸ್ ದಾಳಿಯಿಂದ ನಿಮ್ಮ ಕಂಪ್ಯೂಟರ್ ಅನ್ನು ಸುಕ್ಷಿತವಾಗಿಸಲು ಮೊದಲಿಗೆ ಈ ಕೆಳಗಿನ ಅಂಶಗಳ ಬಗ್ಗೆ ಮೊದಲು ಗಮನ ಹರಿಸಿ.

- ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ ಇರುವ ಅತ್ಯಮೂಲ್ಯ ಡೇಟಾಗಳನ್ನು ಶೀಘ್ರವೇ ಬ್ಯಾಕಪ್ ಮಾಡಿಕೊಳ್ಳಿ.

- ಈಗಾಗಲೇ ಮೈಕ್ರೋ ಸಾಫ್ಟ್ ತನ್ನ ಬಳಕೆದಾರರಿಗೆ ಈ ವೈರಸ್ ದಾಳಿಯಿಂದ ದೂರ ಉಳಿಯಲು ಪ್ಯಾಚ್ ವೊಂದನ್ನು ಬಿಡುಗಡೆ ಮಾಡಿದೆ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

- ನಿಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

- ನಿಮ್ಮ ಮೇಲ್ ಬಾಕ್ಸ್ ನಲ್ಲಿರುವ ಅಪರಿಚಿತ ಇ-ಮೇಲ್ ಗಳನ್ನು ಕ್ಲಿಯರ್ ಮಾಡಿ.

- ಫೈರ್ ವಾಲ್ ಗಳನ್ನು ಬಳಕೆ ಮಾಡಿಕೊಳ್ಳಿ.

- ಅಪರಿಚಿತ ರಿಂದ ಬರುವಂತಹ ಮೇಲ್ ಗಳನ್ನು ಓಪನ್ ಮಾಡಬೇಡಿರಿ.

- ಹ್ಯಾಕರ್ಸ್ ಗಳಿಗೆ ಹಣವನ್ನು ಪಾವತಿ ಮಾಡಬೇಡಿರಿ.

ನಿಮ್ಮ ಕಂಪ್ಯೂಟರ್ ನಿಂದ ವಾನ್ನಾಕ್ರೈ ವೈರಸ್ ಅನ್ನು ತೆಗೆಯುವುದು ಹೇಗೆ..?

ನಿಮ್ಮ ಕಂಪ್ಯೂಟರ್ ನಿಂದ ವಾನ್ನಾಕ್ರೈ ವೈರಸ್ ಅನ್ನು ತೆಗೆಯುವುದು ಹೇಗೆ..?

ನಿಮ್ಮ ಕಂಪ್ಯೂಟರ್ ನಲ್ಲಿ ಬಂದಿರುವ ವಾನ್ನಾಕ್ರೈ ವೈರಸ್ ಅನ್ನು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ತಡೆಯಬಹುದಾಗಿದೆ. ಅದು ಹೇಗೆ ಎಂದರೆ ಇದಕ್ಕಾಗಿ ನೀವು ಮೊದಲು ನಿಮ್ಮ ಕಂಪ್ಯೂಟರ್ ನ ಸೆಫ್ ಮೋಡಿಗೆ ಹೋಗಬೇಕಾಗಿದೆ.

ಪ್ರೋಸೆಸರ್ ಅನ್ನು ಗುರುತಿಸಿ:

ಪ್ರೋಸೆಸರ್ ಅನ್ನು ಗುರುತಿಸಿ:

ನಂತರ ನಿಮ್ಮ ಟಾಸ್ಕ್ ಬಾರ್ ನಲ್ಲಿ ಹೋಗಿ ಕಟ್ರೋಲ್+ಶಿಫ್ಟ್+ಎಸ್ಕೆಪ್ ಕೀಗನ್ನು ಒಮ್ಮೆಗೆ ಒತ್ತುವ ಮೂಲ ಪ್ರೋಸೆಸರ್ ಟಾಬಿಗೆ ಹೋಗಿ ಅಲ್ಲಿ ಹೋಗಿ ಪ್ರೋಸೆಸ್ ಆಗುತ್ತಿರುವ ಟಾಸ್ಕ್ ಗಳನ್ನು ಗಮನಿಸಿ, ಅಲ್ಲಿ ಯಾವ ಟಾಸ್ಕ್ ಹೆಚ್ಚಿನ ಮೊತ್ತದಲ್ಲಿ ಇರುತ್ತದೆ ಮತ್ತು ಯಾವುದು ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ ಆ ಟಾಸ್ಕ್ ವೈರಸ್ ಆಗಿರುತ್ತದೆ. ನಂತರ ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಫೈಲ್ ಲೋಕೆಷನ್ ಪತ್ತೆ ಹಚ್ಚಿ. ಅದು ಓಪನ್ ಆಗಲಿಲ್ಲ ಎಂದರೆ ಆ ಟಾಸ್ಕ್ ಅನ್ನು ಅಲ್ಲಿಯೇ ಎಂಡ್ ಮಾಡಿರಿ.

 ಸಿಸ್ಟಮ್ ಕಾನ್ಫಿಗಿರೇಷನ್ ಸ್ಟ್ರಾಟ್ ಆಪ್ ಪ್ರೋಗ್ರಾಮ್:

ಸಿಸ್ಟಮ್ ಕಾನ್ಫಿಗಿರೇಷನ್ ಸ್ಟ್ರಾಟ್ ಆಪ್ ಪ್ರೋಗ್ರಾಮ್:

ನಂತರ ವಿಂಡೋಸ್ ಸರ್ಚ್ ಬಾರಿನಲ್ಲಿ System Configuration ಎಂದು ಟೈಪ್ ಮಾಡಿರಿ. ನಂತರ ಸರ್ಚ್ ಬಾರಿನಲ್ಲಿ ಬರುವ ಮೊದಲ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿರಿ. ನಂತರ ಅಲ್ಲಿ ಸ್ಟ್ರಾಟ್ ಆಪ್ ಟ್ಯಾಬ್ ಓಪನ್ ಮಾಡಿ ಅಲ್ಲಿ ಇರುವ ಅನ್ ನೌನ್ ಪ್ರೋಗ್ರಮ್ ಗಳನ್ನು ಅನ್ ಚೆಕ್ ಮಾಡಿರಿ ನಂತರ ಕ್ಲಿಕ್ ಓಕೆ.

ರಿಜಸ್ಟರಿ:

ರಿಜಸ್ಟರಿ:

ಇದರೊಂದಿಗೆ ಮುಂದಿನ ಹಂತದಲ್ಲಿ ರನ್ ಓಪನ್ ಮಾಡಿಕೊಳ್ಳಿ, ನಂತರ ಅಲ್ಲಿ regedit ಎಂದು ಟೈಪ್ ಮಾಡಿರಿ. ನಂತರ ಅದು ಓಪನ್ ಆದ ನಂತರ ಕಂಟ್ರೋಲ್ + ಎಫ್ ಪ್ರೆಸ್ ಮಾಡಿ ನಂತರ ವೈರಸ್ ಹೆಸರನ್ನು ಟೈಪ್ ಮಾಡಿರಿ. ನಂತರ ಅದನ್ನು ಸೆಲೆಕ್ಟ್ ಮಾಡಿ ಅದನ್ನು ಡಿಲಿಟ್ ಮಾಡಿರಿ.

ವೈರಸ್ ಫೈಲ್ ಗಳನ್ನು ಡಿಲಿಟ್ ಮಾಡಿರಿ:

ವೈರಸ್ ಫೈಲ್ ಗಳನ್ನು ಡಿಲಿಟ್ ಮಾಡಿರಿ:

ಇದಾದ ನಂತರ ನಿಮ್ಮ ಸ್ಟಾರ್ಟ್ ಮೆನುವನ್ನು ಒಪನ್ ಮಾಡಿ %AppData% %LocalAppData% %ProgramData% %WinDir% %Temp% ಎಂದು ಟೈಪ್ ಮಾಡಿರಿ. ನಂತರಲ್ಲಿ ಓಪನ್ ಆಗುವ ಫೊಲ್ಡರ್ ಗಳನ್ನು ಡಿಲಿಟ್ ಮಾಡಿರಿ. ಟೆಂಪ್ ಫೋಲ್ಡರ್ ಅನ್ನು ಡಿಲಿಟ್ ಮಾಡಿರಿ. ಈ ಮೂಲಕ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತಗೊಳಿಸಿಕೊಳ್ಳಿ.

Best Mobiles in India

English summary
WannaCry ransomware is a major ransomware attack that has hit thousands of computer systems across 100 countries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X