ನಿಮ್ಮ ಮೊಬೈಲ್‌ ನಂಬರ್ ಪೋರ್ಟ್‌ ಮಾಡಬೇಕೆ?..ಹಾಗಿದ್ರೆ ಈ ಕ್ರಮ ಅನುಸರಿಸಿ!

|

ಟ್ರಾಯ್‌ (ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಸಂಸ್ಥೆಯು ಇತ್ತೀಚಿಗೆ ಸಿಮ್‌ ಪೋರ್ಟೆಬಲ್‌ (MNP ) ಹೊಸ ನಿಯಮ ಜಾರಿ ಮಾಡಿದ್ದು, ಮೊಬೈಲ್‌ ನಂಬರ್ ಪೋರ್ಟ್ ಕಾರ್ಯ ತ್ವರಿತವಾಗಿದೆ. ನಿಧಾನಗತಿಯ ವೇಗ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್‌ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್‌ ನಂಬರ್ ಪೋರ್ಟ್‌ ಮಾಡಲು ಮುಂದಾಗುತ್ತಾರೆ.

ಮೊಬೈಲ್

ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟವರ್ಕ್‌ನಿಂದ ಇನ್ನೊಂದು ನೆಟವರ್ಕ್‌ಗೆ ಸೇವೆಯನ್ನು ಬದಲಾಯಿಸುವ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೌಲಭ್ಯ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಬಳಕೆದಾರರನ್ನು ಸೆಳೆಯಲು ಟೆಲಿಕಾಂ ಪೂರೈಕೆದಾರರು ಸಹ ಆಕರ್ಷಕ ಎಂಎನ್‌ಪಿ ಯೋಜನೆಗಳನ್ನು ನೀಡುತ್ತಿವೆ. ಇನ್ನು ಬಳಕೆದಾರರು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಒಂದು ಟೆಲಿಕಾಂ ಸಂಸ್ಥೆಯಿಂದ ಇನ್ನೊಂದು ಟೆಲಿಕಾಂ ಸಂಸ್ಥೆಗೆ ಮೊಬೈಲ್‌ ನಂಬರ್ ಪೋರ್ಟ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ಮೊಬೈಲ್‌ ನಂಬರ್ ಪೋರ್ಟ್ ಮಾಡುವ ಹಂತಗಳ ಬಗೆಗಿನ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಪೋರ್ಟ್

ಸಿಮ್ ಪೋರ್ಟ್ ಸೇವೆ ಪ್ರಾರಂಭಿಸಲು, ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯಿಂದ, ಫೋನ್‌ನಲ್ಲಿರುವ ನಾರ್ಮಲ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಎಸ್‌ಎಮ್‌ಎಸ್‌ ಕಳುಹಿಸಬೇಕು. ಮೆಸೆಜ್‌ನಲ್ಲಿ ‘PORT' ಎಂದು ಬರೆಯುವುದು ನಂತರ ಸ್ಪೇಸ್ ‘ಮೊಬೈಲ್ ಸಂಖ್ಯೆ' ನಮೂದಿಸುವುದು ಬಳಿಕ 1900 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸುವುದು. ಎಸ್‌ಎಮ್‌ಎಸ್‌ ಸೆಂಡ್ ಆದ ಬಳಿಕ ಬಳಕೆದಾರರ ಇನ್‌ಬಾಕ್ಸ್‌ಗೆ ಸಿಮ್ ಪೋರ್ಟಿಂಗ್ ಕೋಡ್ ಲಭ್ಯವಾಗುವುದು.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.

* ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡುವುದು.

* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡುವುದು.

* ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.

* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡುವುದು.

* Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.

* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು

ಎಮ್‌ಎನ್‌ಪಿ

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತಿತ್ತು. ಆದ್ರೆ ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಈಗ ಐದು ದಿನಗಳ ಬಳಗಾಗಿ ಸಿಮ್‌ ಫೋರ್ಟ್ ಆಗಲಿದೆ.

Best Mobiles in India

English summary
Mobile Number Portability (MNP) offers telecom users services to shift their network provider with ease without changing their primary mobile number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X