ಸೈಬರ್ ಕ್ರಿಮಿನಲ್‌ಗಳ ಭಯವೇ ನಿಮಗೆ? ಹೀಗೆ ಮಾಡಿ ಬಚಾವ್ ಆಗಿ!!

|

ಇಂದಿನ ದಿನದಲ್ಲಿ ಏನೇ ನಡೆದರೂ ಅದು ಆನ್‌ಲೈನ್ ಮೂಲಕವೇ ನಡೆಯುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಜನರಿಗೆ ಹಲವಾರು ರೀತಿಯಲ್ಲಿ ಮೋಸ ಮಾಡುತ್ತಲೇ ಇದ್ದಾರೆ. ಈಗಾಗಲೇ ಇಂತಹ ಹಲವಾರು ಸಮಸ್ಯೆಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೂ ಸಹ ನಾವು ಮಾತ್ರ ಎಚ್ಚರಿಕೆಯಿಂದ ಹೇಗಿರಬೇಕು ಎಂಬುದನ್ನು ನಿರ್ಲಕ್ಷಿಸಿದ್ದೇವೆ.

ಹೌದು, ಇಂದು ಯಾವುದಕ್ಕೂ ಭದ್ರತೆ ಎಂಬುದಿಲ್ಲ. ಭದ್ರತೆ ಕಾಣುವುದು ಕನಸು ಎನ್ನುವ ಮಟ್ಟಿಗೆ ನಾವು ಬಂದು ನಿಂತಿದೇವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಮ್ಮ ಹಣಕ್ಕೆ ಮೂರು ಪಂಗನಾಮ ಬೀಳುತ್ತದೆ. ರಾಜ್ಯದಲ್ಲಿ ಕಳೆದ ವರ್ಷ ಸುಮಾರು 221 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, 9.16 ಕೋಟಿ ರೂ. ವಂಚನೆಯಾಗಿರುವುದು ಇದಕ್ಕೆ ಉದಾಹಣೆಯಾಗಿದೆ.

ಸೈಬರ್ ಕ್ರಿಮಿನಲ್‌ಗಳ ಭಯವೇ ನಿಮಗೆ? ಹೀಗೆ ಮಾಡಿ ಬಚಾವ್ ಆಗಿ!!

ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ವಂಚಕರಿಂದ ಹಣಕಾಸು ಸಂಗತಿಗಳ ರಕ್ಷಣೆ ಹೇಗೆ ಎಂಬುದನ್ನು ನಾವು ತಿಳಿಯೋಣ. ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ತಂತ್ರಜ್ಞಾನ ಬಳಕೆಯಲ್ಲಿ ನಾವು ಹೇಗೆ ಸುರಕ್ಷಿತರಾಗಿರಬೇಕು ಎಂಬುದನ್ನು ತಿಳಿಯೋಣ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಸೈಬರ್ ವಂಚಕರಿಂದ ಪಾರಾಗಬಹುದಾದ ಹಲವು ಮುನ್ನೆಚ್ಚರಿಕೆಗಳನ್ನು ನಾವು ನೀಡಿದ್ದೇವೆ.

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು.

ಇ-ಮೇಲ್ ಭದ್ರತೆ

ಇ-ಮೇಲ್ ಭದ್ರತೆ

ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು.

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಆಯಂಟಿ ವೈರಸ್(Anti Virus Software ) ಬಳಸಿ

ಆಯಂಟಿ ವೈರಸ್(Anti Virus Software ) ಬಳಸಿ

ಉತ್ತಮವಾದ ವೈರಸ್(Anti Virus Software ) ಸಾಪ್ಟವೇರ್ ಖರೀದಿಸಿ. ಇದೊಂದು ಸಮಗ್ರವಾದ ಉತ್ತಮ ತಂತ್ರಾಂಶವಾಗಿದ್ದು ಕೇವಲ ಅಂತರ್ಜಾಲ ವಿರೋಧಿ ತಂತ್ರಾಂಶ ಮಾತ್ರ ಅಲ್ಲ. ಬದಲಾಗಿ ಸಂಪೂರ್ಣವಾದ ಫೈರ್ ವಾಲ್ ರಕ್ಷಣೆಯನ್ನು ಹೊಂದಿರಬೆಕು.ಇದು ಎಲ್ಲ ಅಂಕಿಅಂಶಗಳನ್ನು ಸುರಕ್ಷಿತವಾಗಿಡಬೇಕು. ಜತೆಗೆ ವಂಚಕರು/ಕಳ್ಳರು ದುರುಪಯೋಗ ಮಾಡದಂತೆ ರಕ್ಷಿಸುವಂತಿರಬೇಕು.

Best Mobiles in India

English summary
ways to help protect yourself against cybercrime And Top Techniques Cyber Criminals Use to Hack You. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X