Home
ಟೆಕ್ ನೌಕರಿ

ನಿಮ್ಮ ಬಗ್ಗೆ ಗೂಗಲ್‌ಗೆ ಎಷ್ಟು ಗೊತ್ತು ಎಂಬ ಅರಿವು ನಿಮಗಿದೆಯೇ?

ಎಲ್ಲಾ ಅಂತರ್ಜಾಲ ಕಂಪೆನಿಗಳು ಕೂಡ ಬಳಕೆದಾರರ ಬಹುತೇಕ ವಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಗೂಗಲ್ ಸಹ ಹೊರತಾಗಿಲ್ಲ. ಆದರೆ, ನೀವು ಗೂಗಲ್ ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾವನ್ನು ಗೂಗಲ್ ಹೇಗೆ ಸಂಗ್ರಹಿಸುತ್ತದೆ ಎಂಬುದನ್ನು ಮಾತ್ರ ಗೂಗಲ್ ಬಳಕೆದಾರರಿಗೆ ತಿಳಿಸುತ್ತದೆ.

ನೀವು ಗೂಗಲ್ ಸೇವೆಗಳನ್ನು ಬಳಸುವಾಗ ನಿಮ್ಮ ಮಾಹಿತಿಗಳನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ನಿಮ್ಮನ್ನು ಸ್ಪಷ್ಟವಾಗಿರುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಗೂಗಲ್ ಹೇಳಿದೆ. ಮತ್ತು ಗೂಗಲ್ ಸಂಗ್ರಹಿಸುವ ಡೇಟಾದ ಮುಖ್ಯ ಪ್ರಕಾರಗಳು ಯಾವುದು ಎಂಬುದನ್ನು ಸಹ ಬಳಕೆದಾರರಿಗೆ ನೀಡಿದೆ.

ನಿಮ್ಮ ಬಗ್ಗೆ ಗೂಗಲ್‌ಗೆ ಎಷ್ಟು ಗೊತ್ತು ಎಂಬ ಅರಿವು ನಿಮಗಿದೆಯೇ?

ಗೂಗಲ್ ಸೇವೆಗಳನ್ನು ನೀವು ಬಳಸುವಾಗ, ಉದಾಹರಣೆಗೆ ಗೂಗಲ್‌ನಲ್ಲಿ ಹುಡುಕಾಟ ಮಾಡುವುದು, ಗೂಗಲ್ ನಕ್ಷೆ ಬಳಕೆ ಅಥವಾ ಯೂಟ್ಯೂಬ್ ವೀಡಿಯೊ ವೀಕ್ಷಿಣೆಯ ಡೇಟಾವನ್ನು ಗೂಗಲ್ ಸಂಗ್ರಹಿಸುತ್ತದೆ. ಅದರ ಜೊತೆಗೆ ಗೂಗಲ್ ಮತ್ತೆ ಬೇರೆ ಏನೆಲ್ಲಾ ನಿಮ್ಮ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂಬ ಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ನೀವು ಹುಡುಕುವಂತಹ ವಿಷಯಗಳು!!

ನೀವು ಹುಡುಕುವಂತಹ ವಿಷಯಗಳು!!

ಗೂಗಲ್‌ನಲ್ಲಿ ನೀವು ಹುಡುಕಾಟ ನಡೆಸುವ ಎಲ್ಲಾ ದಾಖಲೆಗಳನ್ನು ಗೂಗಲ್ ತನ್ನಲ್ಲಿ ಸಂಗ್ರಹಿಸಿಟ್ಟಿಕೊಳ್ಳುತ್ತದೆ. ನಿಮ್ಮಅಭಿರುಚಿ, ಕುತೋಹಲವನ್ನೆಲ್ಲವನ್ನು ಗೂಗಲ್ ತನ್ನಲ್ಲಿ ಸಂಗ್ರಹಿಸಿಕೊಂಡು ಅಂತರ್ಜಾಲದಲ್ಲಿ ಹೆಚ್ಚು ಸೇವೆ ನೀಡಲು ಬಳಸಿಕೊಳ್ಳುತ್ತದೆ. ಇದು ಗೂಗಲ್‌ನ ಜಾಹಿರಾತು ವಿಭಾಗಕ್ಕೂ ಅನ್ವಯವಾಗಿದೆ.

ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು!!

ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು!!

ಗೂಗಲ್‌ನಲ್ಲಿ ನೀವು ಹುಡುಕಾಟ ನಡೆಸುವ ಎಲ್ಲಾ ವೆಬ್‌ಸೈಟ್‌ಗಳ ಮಾಹಿತಿಯನ್ನು ಗೂಗಲ್ ಸಂಗ್ರಹಿಸಿಡುತ್ತದೆ. ನಿಮ್ಮ ಅಭಿರುಚಿಗೆ ತಕ್ಕಂತೆ ಸೇವೆ ನೀಡುವ ಉದ್ದೇಶವನ್ನು ಗೂಗಲ್ ಇಲ್ಲಿ ಹೇಳುತ್ತದೆ. ಆದರೆ, ಗೂಗಲ್‌ಗೆ ಮತ್ತು ನೀವು ಹುಡುಕಾಟ ನಡೆಸಿದ ವೆಬ್‌ಸೈಟ್‌ಗಳಿಗೆ ಈ ಮಾಹಿತಿ ಸಹಕಾರಿಯಾಗಲಿದೆ.

ನೀವು ವೀಕ್ಷಿಸುವ ವೀಡಿಯೊಗಳು!!

ನೀವು ವೀಕ್ಷಿಸುವ ವೀಡಿಯೊಗಳು!!

ಗೂಗಲ್ ಅಥವಾ ಯೂಟ್ಯೂಬ್‌ನಲ್ಲಿ ನೀವು ವೀಕ್ಷಿಸುವ ಪ್ರತಿಯೊಂದು ವಿಡಿಯೋಗಳ ಮಾಹಿತಿಯನ್ನು ಗೂಗಲ್ ಸಂಗ್ರಹಿಸಿಡುತ್ತದೆ. ಇಲ್ಲಿಯೂ ಸಹ ನಿಮ್ಮ ಅಭಿರುಚಿಗೆ ತಕ್ಕಂತೆ ಸೇವೆ ನೀಡುವ ಉದ್ದೇಶವನ್ನು ಗೂಗಲ್ ಹೊಂದಿದ್ದರೂ, ಜಾಹಿರಾತು ಮತ್ತು ಆದಾಯದ ಸೃಷ್ಟಿಯನ್ನು ಗೂಗಲ್ ಹೊಂದಿರುತ್ತದೆ ಎಂಬುದು ಸ್ಪಷ್ಟವಾಗಿದೆ.

ನೀವು ಕ್ಲಿಕ್ ಮಾಡುವ ಜಾಹೀರಾತುಗಳು!!

ನೀವು ಕ್ಲಿಕ್ ಮಾಡುವ ಜಾಹೀರಾತುಗಳು!!

ನೀವು ಗೂಗಲ್‌ ಮೂಲಕ ಕ್ಲಿಕ್ ಮಾಡುವ ಯಾವುದೇ ಜಾಹಿರಾತುಗಳನ್ನು ಗೂಗಲ್ ಸಂಗ್ರಹಿಸಿಕೊಳ್ಳುತ್ತದೆ. ಆನ್‌ಲೈನ್ ಜಾಹಿರಾತು ಮಧ್ಯಸ್ಥಿಕೆ ಗೂಗಲ್ ಆಡ್‌ಸೆನ್ಸ್ ಅನ್ನು ಸಹ ಗೂಗಲ್ ಹೊಂದಿರುವುದರಿಂದ ಗೂಗಲ್‌ಗೆ ಇದು ಸಹಾಯಕವಾಗಲಿದೆ. ಗ್ರಾಹಕರ ವಿಷಯದಲ್ಲಿ ಇದು ಲಾಭವೇನು ಇಲ್ಲ ಎಂಬುದು ನಮ್ಮ ಅಭಿಮತ.

ನಿಮ್ಮ ಸ್ಥಳದ ಮಾಹಿತಿ!

ನಿಮ್ಮ ಸ್ಥಳದ ಮಾಹಿತಿ!

ನೀವು ಗೂಗಲ್‌ನ ಸೇವೆಗಳನ್ನು ಯಾವ ಸ್ಥಳದಲ್ಲಿ ಬಳಸುತ್ತಿದ್ದೀರಾ ಎಂಬುದನ್ನು ಗೂಗಲ್ ಸಂಗ್ರಹಿಸುತ್ತದೆ. ಸ್ಥಳದ ಮಾಹಿತಿಯನ್ನು ಸಂಗ್ರಹಿಸಿ ನಿಮಗೆ ಹೆಚ್ಚು ಸೇವೆ ನೀಡುವ ಉದ್ದೇಶವನ್ನು ಗೂಗಲ್ ಹೊಂದಿರುತ್ತದೆ. ನಿಮ್ಮ ಹತ್ತಿರದ ಸ್ಥಳಗಳು ಮತ್ತು ಹತ್ತಿರದವರನ್ನು ತಿಳಿಸಲು ಇದು ಸಹಾಯ ಮಾಡುತ್ತದೆ.! ಇದಕ್ಕಿಂತ ಹೆಚ್ಚಾಗಿ ಗೂಗಲ್ ಜಾಹಿರಾತುವಿಗೂ ಇದು ಮುಖ್ಯ.

ನೀವು ಬಳಸುವ ಡಿವೈಸ್ ಮಾಹಿತಿ!!

ನೀವು ಬಳಸುವ ಡಿವೈಸ್ ಮಾಹಿತಿ!!

ನಿಮಗೆ ಗೊತ್ತಾ?. ನೀವು ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಳಸುತ್ತಿದ್ದೀರಾ ಅಥವಾ ಐಫೋನ್ ಬಳಸುತ್ತಿದ್ದೀರಾ ಎಂಬುದನ್ನು ಗೂಗಲ್ ಹೇಳುತ್ತದೆ. ಇದೆಲ್ಲಾ ಬಿಡಿ, ಗೂಗಲ್ ನೀವು ಯಾವ ಕಂಪೆನಿಯ, ಯಾವ ಬ್ರ್ಯಾಂಡ್ ಸ್ಮಾರ್ಟ್‌ಪೋನ್ ಬಳಸುತ್ತಿದ್ದೀರಾ ಎಂಬುದನ್ನು ಹೇಳುತ್ತದೆ. ನನ್ನ ಪೋನ್ ಯಾವುದು ಎಂಬುದು ಗೂಗಲ್‌ಗೆ ನಿಖರವಾಗಿ ತಿಳಿದಿರುತ್ತದೆ.

ಐಪಿ ವಿಳಾಸ ಮತ್ತು ಕುಕೀ ಡೇಟಾ!!

ಐಪಿ ವಿಳಾಸ ಮತ್ತು ಕುಕೀ ಡೇಟಾ!!

ನೀವು ಬಳಸುವ ಕಂಪ್ಯೂಟರ್ ಐಪಿ ವಿಳಾಸವನ್ನು ಗೂಗಲ್ ಸಂಗ್ರಹಿಸುತ್ತದೆ. ಇದರಿಂದಲೇ ಅನೇಕ ಹ್ಯಾಕರ್‌ಗಳು ಸಿಕ್ಕಿ ಬಿದ್ದಿದ್ದಾರೆ. ಯಾವ ಕಂಪ್ಯೂಟರ್‌ನಿಂದ, ಯಾವ ಸ್ಥಳದಲ್ಲಿ ಏನು ಕಾರ್ಯ ನಿರ್ವಹಣೆ ನಡೆದಿದೆ ಎಂಬುದನ್ನು ಗೂಗಲ್ ಸಂಗ್ರಹಿಸುತ್ತದೆ. ನಮ್ಮ ಕುಕೀ ಡೇಟಾವನ್ನು ಸಂಗ್ರಹಿಸುವುದು ಗೂಗಲ್‌ಗೆ ಪ್ರಮುಖ ಅಂಶಗಳಲ್ಲಿ ಒಂದು.

How to send WhatsApp Payments invitation to others - GIZBOT KANNADA
ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು

ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು

ಜಿ-ಮೇಲ್‌ನಲ್ಲಿ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಎಲ್ಲಾ ಇಮೇಲ್‌ಗಳನ್ನು ಗೂಗಲ್ ಸಂಗ್ರಹಿಸಿಡುತ್ತದೆ. ನೀವು ಯಾರಿಗೆ ಮೆಲೆ ಮಾಡಿದ್ದೀರಾ, ನೀವು ಮೇಲ್ ಮಾಡಿದ ಸ್ಥಳ ಯಾವುದು ಎಂಬೆಲ್ಲಾ ವಿಷಯಗಳನ್ನು ಗೂಗಲ್ ಸಂಗ್ರಹಿಸಿಡುತ್ತದೆ. ಜಿ ಮೇಲ್‌ ಮೂಲಕ ಉತ್ತಮ ಸೇವೆಯನ್ನು ಒದಗಿಸಲು ಮಾಹಿತಿಗಳನ್ನು ಸಂಗ್ರಹಿಸುವುದಾಗಿ ಗೂಗಲ್ ಹೇಳಿಕೊಂಡಿದೆ.

ಅಪ್‌ಲೋಡ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು!!

ಅಪ್‌ಲೋಡ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು!!

ಗೂಗಲ್ ಅಥವಾ ಗೂಗಲ್‌ನ ಯಾವ ಸೇವೆಗಳಲ್ಲಾದರೂ ಸಹ ನೀವು ಅಪ್‌ಲೋಡ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳೆಲ್ಲವನ್ನು ಗೂಗಲ್ ಸಂಗ್ರಹಿಸುತ್ತದೆ ಎಂಬುದನ್ನು ತಿಳಿದಿರಿ. ಯೂಟ್ಯೂಬ್‌ನಲ್ಲಾದರೆ ವಿಡಿಯೋ ಚಾನೆಲ್ ಹೊಂದಿರಬೇಕು. ಗೂಗಲ್ ಸರ್ಚ್‌ನಲ್ಲಿ ನೀವು ಫೋಟೋಗಳು ಮತ್ತು ವೀಡಿಯೊ ಹಾಕಿದರೆ ಅದು ಕೂಡ ಸಂಗ್ರಹವಾಗುತ್ತದೆ.

ನಿಮ್ಮೆಲ್ಲಾ ಸಂಪರ್ಕಗಳು!!

ನಿಮ್ಮೆಲ್ಲಾ ಸಂಪರ್ಕಗಳು!!

ಗೂಗಲ್ ನಿಮ್ಮ ಇ ಮೇಲ್‌ಗಳನ್ನು ಮಾತ್ರ ಸಂಗ್ರಹಿಸದೇ, ಮೊಬೈಲ್‌ನಲ್ಲಿ ನೀವು ಸೇರಿಸುವ ಎಲ್ಲಾ ಸಂಪರ್ಕಗಳನ್ನು ಸಮಗ್ರಹಿಸಿಟ್ಟುಕೊಳ್ಳುತ್ತದೆ. ಡ್ರೈವ್‌ನಲ್ಲಿ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳ ಜೊತೆಗೆ ಕ್ಯಾಲೆಂಡರ್ ಈವೆಂಟ್‌ಗಳನ್ನು ಸಂಗ್ರಹಿಟ್ಟುಕೊಳ್ಳುವುದಾಗಿ ಗೂಗಲ್ ತಿಳಿಸಿದೆ.

ಹೆಸರು ಮತ್ತು ವಿಳಾಸ ಮಾಹಿತಿ!!

ಹೆಸರು ಮತ್ತು ವಿಳಾಸ ಮಾಹಿತಿ!!

ನಿಮ್ಮ ಹೆಸರು ಮತ್ತು ವಿಳಾಸ ಮಾಹಿತಿಗಳೆಲ್ಲವನ್ನೂ ಸಹ ಗೂಗಲ್ ಸಂಗ್ರಹಿಸುತ್ತದೆ. ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್, ನಿಮ್ಮ ಹುಟ್ಟಿದ ದಿನಾಂಕ, ನೀವು ಗಂಡು/ಹೆಣ್ಣು ಎಂಬ ಮಾಹಿತಿ, ನಿಮ್ಮ ಫೋನ್ ಸಂಖ್ಯೆ, ನಿಮ್ಮ ದೇಶ ಯಾವುದು ಎಂಬುದು ಗೂಗಲ್‌ನಲ್ಲಿ ಸಂಗ್ರಹವಾಗಿರುತ್ತದೆ.

Best Mobiles in India

English summary
When you use Google services, you trust with your data. It is google responsibility to be clear about what we collect and how we use it to make our services work better. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+