ಫೋನ್ ಬ್ಯಾಟರಿ ಉಳಿಸಬೇಕೇ? ಈ ತಪ್ಪುಗಳನ್ನು ಮರೆತೂ ಮಾಡದಿರಿ

By Shwetha
|

ನೀವು ದುಬಾರಿ ಬೆಲೆ ತೆತ್ತು ಸ್ಮಾರ್ಟ್‌ಫೋನ್ ಖರೀದಿಸಿ ಅದರ ಬ್ಯಾಟರಿ ಬಾಳ್ವಿಕೆ ನಿಮ್ಮ ಮನಸ್ಸಿಗೆ ಸಂತಸವನ್ನು ನೀಡುತ್ತಿಲ್ಲ ಎಂದಾದಲ್ಲಿ ಎಲ್ಲೋ ಏನೋ ತಪ್ಪಾಗಿದೆ ಎಂದೇ ಅರ್ಥವಾಗಿದೆ. ನಿಮ್ಮ ಫೋನ್‌ನಲ್ಲಿ ದೋಷವಿದೆ ಎಂದೇನೂ ನಾವು ಹೇಳುತ್ತಿಲ್ಲ. ಫೋನ್ ಬಳಕೆ ಮಾಡುತ್ತಿರುವಾಗ ನೀವು ಮಾಡುವ ಸಣ್ಣ ತಪ್ಪುಗಳಿಂದ ಬ್ಯಾಟರಿ ನಷ್ಟದಂತಹ ದೊಡ್ಡ ಸಮಸ್ಯೆಗೆ ನೀವು ಸಿಕ್ಕಿ ಹಾಕಿಕೊಂಡಿರಬಹುದಾಗಿದೆ.

ಓದಿರಿ: ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವಿನ ಸಣ್ಣ ಬ್ಲಾಕ್‌ ಹೋಲ್‌ ರಹಸ್ಯ ಏನು ಗೊತ್ತೇ?

ಇಂದಿನ ಲೇಖನದಲ್ಲಿ ಅತಿ ಸಿಂಪಲ್ ಆಗಿಯೇ ನಿಮ್ಮ ಬ್ಯಾಟರಿ ಕಾಪಾಡಲು ನೀವು ಅನುಸರಿಸಬೇಕಾದ ಕ್ರಮಗಳನ್ನು ನಾವು ತಿಳಿಸುತ್ತಿದ್ದೇವೆ. ನಿತ್ಯದ ಫೋನ್ ಬಳಕೆಯಲ್ಲಿ ನೀವು ಈ ಸಂಗತಿಗಳನ್ನು ಅರಿತುಕೊಂಡರೆ ಸಾಕು ನೀವು ಫೋನ್ ಬಳಕೆಯಲ್ಲಿ ಎಲ್ಲಿ ಎಡವುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ಆಫ್ ಮಾಡಿ

ಫೋನ್‌ನಲ್ಲಿ ವೈಬ್ರೇಶನ್ ಬೇಕಾಗುವುದು ನೀವು ಡಿವೈಸ್ ಅನ್ನು ಸೈಲೆಂಡ್ ಮೋಡ್‌ನಲ್ಲಿರಿಸಿದಾಗ ಮಾತ್ರ. ಆದ್ದರಿಂದ ಮಿಕ್ಕೆಲ್ಲಾ ಸಮಯದಲ್ಲಿ ವೈಬ್ರೇಶನ್ ಆಫ್ ಮಾಡಿಟ್ಟುಕೊಳ್ಳಿ. ವೈಬ್ರೇಶನ್ ಆನ್ ಇದ್ದಂತಹ ಸಂದರ್ಭದಲ್ಲಿ ಬ್ಯಾಟರಿ ಬೇಗನೇ ಖರ್ಚಾಗಬಹುದಾಗಿದೆ.

ಡಾರ್ಕ್ ವಾಲ್‌ಪೇಪರ್ ಬಳಸಿ

ಡಾರ್ಕ್ ವಾಲ್‌ಪೇಪರ್ ಬಳಸಿ

ನಿಮ್ಮ ಫೋನ್ ಅನ್ನು ಅನುಸರಿಸಿ ಆದಷ್ಟು ಡಾರ್ಕ್ ವಾಲ್‌ಪೇಪರ್ ಅನ್ನು ಇರಿಸಿಕೊಳ್ಳಿ. ಅಮೋಲೆಡ್ ಸ್ಕ್ರೀನ್ ಕೆಲವೊಂದು ಬ್ಯಾಟರಿ ಉಳಿಕೆ ತತ್ವಕ್ಕೆ ಅನುಗುಣವಾಗಿ ಬರಲಿವೆ ಇದರ ಪ್ರಯೋಜವನ್ನು ಪಡೆದುಕೊಳ್ಳಿ.

ಬೇಡದೇ ಇರುವ ಅಪ್ಲಿಕೇಶನ್ ತ್ಯಜಿಸಿ

ಬೇಡದೇ ಇರುವ ಅಪ್ಲಿಕೇಶನ್ ತ್ಯಜಿಸಿ

ನೀವು ನಿಮ್ಮ ಫೋನ್‌ನಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ಬಳಸುತ್ತಿಲ್ಲ ಎಂದಾದಲ್ಲಿ ಅವಕ್ಕೆ ಮುಕ್ತಿ ಹಾಡಿ. ಹಿನ್ನಲೆಯಲ್ಲಿ ಅಪ್ಲಿಕೇಶನ್ ಚಾಲನೆಗೊಳ್ಳುತ್ತಿದೆ ಎಂದಾದಲ್ಲಿ ಅದನ್ನು ಆಫ್ ಮಾಡಿ.

ಸೂರ್ಯನ ಬೆಳಕಿನಿಂದ ದೂರವಿರಿಸಿ

ಸೂರ್ಯನ ಬೆಳಕಿನಿಂದ ದೂರವಿರಿಸಿ

ಲಿಥಿಯಮ್ ಐಯಾನ್ ಬ್ಯಾಟರಿಗಳನ್ನು ಕೊಠಡಿಯ ತಾಪಮಾನಕ್ಕೆ ಇರಿಸಬಹುದಾಗಿದೆ. ನಿಮ್ಮ ಫೋನ್ ಅನ್ನು ಸೂರ್ಯನ ಬೆಳಕಿನಲ್ಲಿ ಇರಿಸುವುದರಿಂದ ಅದು ಹೀಟ್ ಆಗುತ್ತಿದೆ ಎಂದಾದಲ್ಲಿ ಹೀಗೆ ಮಾಡದಿರಿ.

ಸ್ವಯಂಚಾಲಿತ ಲಾಕ್ ಹೊಂದಿಸಿ

ಸ್ವಯಂಚಾಲಿತ ಲಾಕ್ ಹೊಂದಿಸಿ

ನಿಮ್ಮ ಫೋನ್ ಅನ್ನು 30 ಸೆಕೆಂಡ್‌ಗೆ ಲಾಕ್ ಆಗಿರುವಂತೆ ಇರಿಸಿಕೊಳ್ಳಿ. ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸ್ಕ್ರೀನ್ ಟೈಮ್ ಔಟ್‌ಗೆ ಪ್ರಾಮುಖ್ಯತೆ ನೀಡಿ.

ಅಧಿಸೂಚನೆಗಳನ್ನು ಕನಿಷ್ಟಗೊಳಿಸಿ

ಅಧಿಸೂಚನೆಗಳನ್ನು ಕನಿಷ್ಟಗೊಳಿಸಿ

ಇಂಟರ್ನೆಟ್ ಅನ್ನು ನಿರಂತರವಾಗಿ ಬಳಸುವುದು ಎಲ್ಲಾ ಸಮಯದಲ್ಲೂ ಸ್ಮಾರ್ಟ್‌ಫೋನ್‌ಗೆ ಅಧಿಸೂಚನೆಗಳನ್ನು ನೀಡುತ್ತಿರಬಹುದು. ಆದ್ದರಿಂದ ಯಾವ ಅಧಿಸೂಚನೆಗಳು ನಿಮಗೆ ಅಗತ್ಯವೋ ಅವಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿ.

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ಚಾರ್ಜ್‌ನಲ್ಲಿರುವಾಗ ನೀವು ಫೋನ್ ಅನ್ನು ಬಳಸುವುದು ಡಿವೈಸ್‌ನ ಜೀವಿತಾವಧಿಯನ್ನು ಕನಿಷ್ಟಗೊಳಿಸಬಹುದಾಗಿದೆ. ಆದ್ದರಿಂದ ಈ ಕ್ರಿಯೆಯನ್ನು ಆದಷ್ಟು ನಿಲ್ಲಿಸಿ.

ಆಟೊ ಬ್ರೈಟ್‌ನೆಸ್ ಬಳಸಬೇಡಿ

ಆಟೊ ಬ್ರೈಟ್‌ನೆಸ್ ಬಳಸಬೇಡಿ

ಆಟೊ ಬ್ರೈಟ್‌ನೆಸ್‌ನಿಂದಾಗಿ ನಿಮ್ಮ ಬ್ಯಾಟರಿ ಹೆಚ್ಚು ಸಮಯ ವಿನಿಯೋಗಗೊಳ್ಳಬಹುದಾಗಿದೆ. ಆಟೊ ಬ್ರೈಟ್‌ನೆಸ್‌ಗಿಂತಲೂ ನಿಮಗೆ ಬೇಕಾದಾಗ ಮಾತ್ರವೇ ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಹೊಂದಿಸಿ.

Best Mobiles in India

English summary
In this article we are giving you tips on What are some good hacks to save Smartphone battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X