ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಎಲ್ಲವನ್ನು ಉಪಯೋಗಿಸುವ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯವಾಗಿದೆ.

|

ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಎಲ್ಲವನ್ನು ಉಪಯೋಗಿಸುವ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯವಾಗಿದೆ. ಇತ್ತೀಚಿಗೆ ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್‌ಗೆ ಜೋಡಿಸಲು ಪ್ರಯತ್ನಿಸುವ 'ಸಿಮ್ ಸ್ವಾಪ್' ಹಗರಣ ಭಯಹುಟ್ಟಿಸುತ್ತಿದೆ.

ಹೌದು, ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ಗ್ರಾಹಕರ ಸಿಮ್ ಅನ್ನೇ ನಕಲು ಮಾಡಿ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿರುವ ಪ್ರಕರಣಗಳು ಇತ್ತೀಚಿಗೆ ಬಹಳಷ್ಟು ಹೆಚ್ಚಾಗುತ್ತಿರುವುದು ಸಹ ಆತಂಕಕ್ಕೆ ಕಾರಣವಾಗಿದೆ.

ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ನಿಮ್ಮ ಸಿಮ್ ಮೇಲಿರುವ ಇಪ್ಪತ್ತು ಅಂಕಿಯ ಸಂಖ್ಯೆಯೊಂದನ್ನು ನಮಗೆ ಎಸ್ಸೆಮ್ಮೆಸ್ ಮೂಲಕ ಕಳುಹಿಸಿ. ಇಲ್ಲವಾದರೆ, ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದು ಹೆದರಿಸಿ ಆ ನಂಬರ್ ಪಡೆಯವ ಕ್ರಿಮಿನಲ್‌ಗಳು, ಆ ಸಿಮ್ ನಂಬರ್ ಮೂಲಕವೇ ಸಿಮ್ ಅನ್ನೇ ನಕಲು ಮಾಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡದ ಪ್ರಖ್ಯಾತ ತಂತ್ರಜ್ಞಾನ ಲೇಖಕರಾದ ಟಿ.ಜಿ ಶ್ರೀನಿಧಿ ಅವರು ತಮ್ಮ ಇಜ್ಞಾನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿಸ್ಕೃತ ವರದಿಯನ್ನೇ ಪ್ರಕಟಿಸಿದ್ದಾರೆ. ಅವರು ಲೇಖನದಲ್ಲಿ ಉಲ್ಲೆಖಿಸಿರುವಂತೆ, ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?

ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

What is Jio Cricket Gold Pass? How to Buy it

ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸುವುದು ಒಳ್ಳೆಯದು ಎಂದು ಟಿ.ಜಿ ಶ್ರೀನಿಧಿ ಅವರು ಅವರು ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ಶಾಕಿಂಗ್ ವರದಿ!..ಕೂಡಲೇ ವಾಟ್ಸ್ಆಪ್ ಡಿಲೀಟ್ ಮಾಡಲು ಹೇಳುತ್ತಿದ್ದಾರೆ ತಜ್ಞರು!!

Best Mobiles in India

English summary
The question is simple. If someone has access to my sim card can he clone the card (i have no idea how that works) I have sim pin but its the standart one for most telecoms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X