Subscribe to Gizbot

ಹಳೆಯ ಫೋನ್ ಮಾರುವ ಮುನ್ನ ಆಲಿಸಬೇಕಾದ ಕಿವಿಮಾತುಗಳು

Written By:

ನಿಮ್ಮ ಸ್ಮಾರ್ಟ್‌ಫೋನ್ ಹಳತಾಯಿತು ಎಂಬ ಭಾವನೆ ನಿಮಗೆ ಬಂದಿರಬಹುದು ಅಲ್ಲವೇ? ಹೊಸ ಫೋನ್ ಖರೀದಿಸುವ ನಿರ್ಧಾರವನ್ನು ತಳೆದಿದ್ದೀರಾ? ಹಾಗಿದ್ದರೆ ನಿಮ್ಮ ಬಳಿ ಇರುವ ಫೋನ್ ಅನ್ನು ಮಾರಾಟ ಮಾಡುತ್ತೀರಿ ಫೋನ್ ಮಾರಾಟ ಮಾಡುವ ಸೈಟ್‌ಗಳಲ್ಲಿ ನಿಮ್ಮ ಫೋನ್‌ನ ವಿವರ ಮತ್ತು ಫೋಟೋ ಹಾಕುವುದು ಇಲ್ಲವೇ ನಿಮ್ಮ ಸ್ನೇಹಿತರ ಬಳಿ ಫೋನ್ ಅನ್ನು ಮಾರಾಟ ಮಾಡುವ ವಿವರಗಳನ್ನು ನೀಡುವುದು ಮೊದಲಾದ ಕಾರ್ಯಗಳನ್ನು ನೀವು ಮಾಡುತ್ತೀರಿ ಅಲ್ಲವೇ?

ಆದರೆ ಇಂದಿನ ಲೇಖನದಲ್ಲಿ ನಿಮ್ಮ ಹಳೆಯ ಫೋನ್ ಅನ್ನು ಮಾರುವ ಮುನ್ನ ನಿಮಗೆ ಕೆಲವೊಂದು ಕಿವಿಮಾತನ್ನು ಹೇಳಲು ನಾವು ತಯಾರಾಗಿದ್ದೇವೆ. ಹಾಗಿದ್ದರೆ ಬನ್ನಿ ಅವುಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಮ್ ಕಾರ್ಡ್ ಹೊರತೆಗೆಯಿರಿ

#1

ನಿಮ್ಮ ಹಳೆಯ ಫೋನ್‌ನಲ್ಲಿರುವ ಹಳೆ ಸಿಮ್ ಕಾರ್ಡ್ ಅನ್ನು ಹೊರತೆಗೆಯಿರಿ. ಅತ್ಯಮೂಲ್ಯ ಸಂಪರ್ಕಗಳು ಮತ್ತು ದಾಖಲೆಗಳನ್ನು ಹಳೆಯ ಸಿಮ್ ಕಾರ್ಡ್ ಒಳಗೊಂಡಿರಬಹುದು ಆದ್ದರಿಂದ ಅದನ್ನು ಹಳೆಯ ಫೋನ್‌ನಲ್ಲಿ ಹಾಗೆಯೇ ಬಿಡಬೇಡಿ.

ಮೆಮೊರಿ ಕಾರ್ಡ್ ಅನ್‌ಮೌಂಟ್/ರಿಮೂವ್ ಮಾಡಿ

#2

ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಹೊಂದಿರುವ ಫೋನ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ಎಸ್‌ಡಿ ಕಾರ್ಡ್ ರಿಮೂವ್ ಮಾಡಿ. ಕಾರ್ಡ್ ರಿಮೂವ್ ಮಾಡುವ ಮುನ್ನ ಆದಷ್ಟು ಫೋಟೋಗಳು, ಅಪ್ಲಿಕೇಶನ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಕಾಪಿ ಮಾಡಿ. ನಿಮ್ಮ ಹೊಸ ಫೋನ್‌ಗೆ ಇದನ್ನು ತೆಗೆದುಕೊಳ್ಳಬಹುದಾಗಿದೆ.

ಡೇಟಾ ಅಳಿಸಿ

#3

ಫೋನ್‌ನಿಂದ ಡೇಟಾವನ್ನು ಅಳಿಸಿ. ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಬ್ಯಾಕಪ್/ರೀಸ್ಟೋರ್ ಸೆಕ್ಶನ್‌ಗಾಗಿ ನೋಡಿ, ಅಥವಾ ಹಾರ್ಡ್‌ವೇರ್ ಬಟನ್‌ಗಳೊಂದಿಗೆ ಅದನ್ನು ಹಸ್ತಚಾಲಿತವಾಗಿ ನಿರ್ವಹಿಸಿ.

ಕ್ಲೀನ್ ಮಾಡಿ

#4

ಫೋನ್‌ನ ಒಳಭಾಗ ಮತ್ತು ಹೊರಭಾಗವನ್ನು ಚೆನ್ನಾಗಿ ಸ್ವಚ್ಛಮಾಡಿಕೊಳ್ಳಿ. ಡಿಸ್‌ಪ್ಲೇನಲ್ಲಿ ಫಿಂಗರ್ ಪ್ರಿಂಟ್ ಕಲೆಗಳನ್ನು ನಿವಾರಿಸಿ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡಿ.

ರೀಬಾಕ್ಸ್ ಮಾಡಿ

#5

ನೀವು ಉತ್ತಮ ಆಂಡ್ರಾಯ್ಡ್ ಮಾಲೀಕರು ಎಂದಾದಲ್ಲಿ ನಿಮ್ಮ ಹಳೆಯ ಫೋನ್‌ನ ಬಾಕ್ಸ್ ಮತ್ತು ಇತರ ಸಂಬಂಧಿತ ಅಂಶಗಳನ್ನು ನಿಮ್ಮೊಂದಿಗೆ ತೆಗೆದಿರಿಸಿಕೊಳ್ಳಿ. ಯುಎಸ್‌ಬಿ ಚಾರ್ಜ್‌ಗಳು ಕೇಬಲ್‌ಗಳು ಹೆಡ್‌ಫೋನ್‌ಗಳು ಸಿಮ್ ಟೂಲ್ಸ್ ಮೊದಲಾದವುಗಳನ್ನು ಎತ್ತಿಡಿ.

ಹಳೆಯ ಫೋನ್‌ನಿಂದ ನೀವು ಮಾಡಬಹುದಾದ ಕೆಲಸಗಳು

#6

ನಿಮ್ಮ ಹಳೆಯ ಫೋನ್‌ನೊಂದಿಗೆ ನೀವು ಹೆಚ್ಚಿನ ಕೆಲಸಗಳನ್ನು ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರಿಗೆ ಫೋನ್ ಅನ್ನು ನೀಡಬಹುದು, ಚಾರಿಟಿಗೆ ಡಿವೈಸ್ ಅನ್ನು ದಾನ ಮಾಡಬಹುದಾಗಿದೆ.

ಹಳೆಯ ಫೋನ್ ಅನ್ನು ಎಲ್ಲಿ ಮಾರಾಟ ಮಾಡಬೇಕು?

#7

ನಿಮ್ಮ ಫೋನ್ ಅನ್ನು ಮಾರಾಟ ಮಾಡಬೇಕು ಎಂಬುದಾಗಿ ನೀವು ನಿರ್ಧರಿಸಿದ್ದೀರಿ ಎಂದಾದಲ್ಲಿ, ಕೆಲವೊಂದು ಆಯ್ಕೆಗಳಿವೆ. ಇಬೇ, ಓಎಲ್‌ಎಕ್ಸ್ ಮೊದಲಾದ ತಾಣಗಳಲ್ಲಿ ಜಾಹೀರಾತನ್ನು ನೀಡಿ ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ.

ಇನ್ನೂ ಓದಿ

ಗಿಜ್‌ಬಾಟ್ ಲೇಖನಗಳು

ವಾಟ್ಸಾಪ್ ಪ್ರೇಮಿಗಳಿಗಾಗಿ 12 ಅತ್ಯಗತ್ಯ ಟಿಪ್ಸ್
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?
ಫೋನ್ ಬಿಸಿಯಾಗುತ್ತಿದೆಯೇ? ಈ ಟಿಪ್ಸ್ ಅನುಸರಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
No matter who your old phone or tablet goes to, you should always wipe it before you give it to them. The main reason for this is to protect your privacy, but it will also make it easier for them to set it up afresh.There are several important things to do when removing your data, which are detailed below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot