ಜಿಪಿಎಸ್‌ ಎಂದರೇನು? ಅದನ್ನು ಬಳಸುವುದೆ ಹೇಗೆ?

By Super
|
ಜಿಪಿಎಸ್‌ ಎಂದರೇನು? ಅದನ್ನು ಬಳಸುವುದೆ ಹೇಗೆ?

ಈಗಂತೂ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಜಿಪಿಎಸ್‌ ತಂತ್ರಜ್ಞಾನವನ್ನು ನೀಡಲಾಗುತ್ತದೆ. ಆದರೆ ಬಹುತೇಕ ಮಂದಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಜಿಪಿಎಸ್‌ ಎಂದರೇನು ಎಂಬುದೇ ತಿಳಿದಿರುವುದಿಲ್ಲ. ಹೀಗಿದ್ದಲ್ಲಿ ಅದನ್ನು ಹೇಗೆ ತಾನೇ ಬಳಸುತ್ತಾರೆ. ಅಂದಹಾಗೆ ಜಿಪಿಎಸ್‌ ಎಂದರೆ ಗ್ಲೂಬಲ್ ಪೊಸಿಷನಿಂಗ್‌ ಸಿಸ್ಟಂ ಎಂದರ್ಥ, ಈ ತಂತ್ರಜ್ಞಾನವು ಉಪಗ್ರಹದಿಂದ ಕಳುಹಿಸಲಾದ ಮಾಹಿತಿ ಅನುಸಾರ ಕಾರ್ಯನಿರ್ವಹಿಸುತ್ತದೆ.

ಮೊಬೈಲ್‌ ಫೋನ್‌ನಲ್ಲಿ ಜಿಪಿಎಸ್‌ ತಂತ್ರಜ್ಞಾನ ಬಳಸುವ ಮೂಲಕ ಬಳಕೆದಾರರು ತಾವಿರುವ ಸ್ಥಳ ಯಾವುದೆಂದು ಸುಲಭವಾಗಿ ಪತ್ತೆಹಚ್ಚ ಬಹುದಾಗಿದೆ ಅಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕೆ ತೆಳಬೇಕಾಗಿದ್ದು ಮಾರ್ಗ ಗೊತ್ತಿಲ್ಲದೇ ಇದ್ದಲ್ಲಿ ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಮಾರ್ಗ ತಿಳಿದುಕೊಳ್ಳ ಬಹುದಾಗಿದೆ. ಉದಾಗರಣೆಗೆ : ನೀವು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಇದ್ದೀರ ಎಂದುಕೊಳ್ಳಿ ಅಲ್ಲಿಂದ ನೀವು ವಿಧಾನಸೌಧಕ್ಕೆ ಹೋಗಬೇಕೆಂದಿದ್ದರೆ ಜಿಪಿಎಸ್‌ ಸಹಾಯದ ಮೂಲಕ ನೀವು ಸುಲಭವಾಗಿ ಮಾರ್ಗವನ್ನು ತಿಳಿದುಕೊಳ್ಳ ಬಹುದಾಗಿದೆ.

ಜಿಪಿಎಸ್‌ ತಂತ್ರಜ್ಞಾನವು ಉಪಗ್ರಹದಿಂದ ರವಾನಿಸಲಾದ ಸಿಗ್ನಲ್‌ಗಳನ್ನು ಸೆರೆ ಹಿಡಿದು ನೀವು ತಲುಪಬೇಕಾದ ಸ್ಥಳಕ್ಕೆ ಮ್ಯಾಪ್‌ ಸಿದ್ಧಪಡಿಸುತ್ತದೆ. ಅಂದಹಾಗೆ ಈ ಜಿಪಿಎಸ್‌ ತಂತ್ರಜ್ಞಾನವನ್ನು ರೈಲು, ಹಡಗುಗಳ ಸ್ಥಿತಿ, ಭೂಮಿ ಸರ್ವೇ ಮಾಡಲು, ವೈಜ್ಞಾನಿಕ ಪ್ರಯೋಗಗಳಲ್ಲಿ ಹಾಗೂ ಸೇನೆಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ. ಆದರೆ ಇದೀಗ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿರಿಸಿದ ಮೇಲೆ ಈ ತಂತ್ರಜ್ಞಾನವನ್ನು ಜನ ಸಾಮಾನ್ಯರ ಕೈಗೂ ತಲುಪುವಂತೆ ಮಾಡಲಾಗಿದೆ.

ಜಿಪಿಎಸ್‌ ಬಳಸುವುದು ಹೇಗೆ

ಜಿಪಿಎಸ್‌ ಉಪಯೋಗಿಸುವುದು ಬಹಳಾ ಸುಲಭವಾಗಿದೆ, ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್‌ ಅಪ್ಲಿಕೇಷನ್‌ ಆನ್‌ ಮಾಡಿಕೊಳ್ಳ ಬೇಕಾಗುತ್ತದೆ. ಅಂದಹಾಗೆ ಜಿಪಿಎಸ್‌ ಆನ್‌ ಮಾಡುವ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಉಪಗ್ರಹದೊಂದಿಗೆ ನೇರಸಂಪರ್ಕ ಪಡೆದು ಕೊಳ್ಳುವುದರಿಂದ ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಬ್ಯಾಟರಿ ಖರ್ಚಾಗುತ್ತದೆ ಎಂಬುದನ್ನು ತಿಳಿದಿರುವುದು ಸೂಕ್ತ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X