ಗೂಗಲ್ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್ ಮಾಡುವುದು ಹೇಗೆ?

|

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಗೂಗಲ್‌ ಅಕೌಂಟ್‌ ಹೊಂದಿರುವುದು ಸಾಮಾನ್ಯ. ಇನ್ನು ಗೂಗಲ್‌ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಗೂಗಲ್ ಡ್ರೈವ್‌ಗೆ ಪ್ರವೇಶ ಸಿಗಲಿದೆ. ಗೂಗಲ್ ಡ್ರೈವ್ ಕ್ಲೌಡ್ ಆಧಾರಿತ ಸ್ಟೋರೇಜ್ ಆಗಿದ್ದು, ಬಳಕೆದಾರರು ಆನ್‌ಲೈನ್‌ನಲ್ಲಿ ಫೈಲ್‌ಗಳನ್ನು ಸೇವ್‌ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಪಿಸಿಗಳು, ಐಫೋನ್‌ಗಳು ಮತ್ತು ಐಪ್ಯಾಡ್‌ಗಳು ಸೇರಿದಂತೆ ತಮ್ಮ ಆಯ್ಕೆಯ ಡಿವೈಸ್‌ನಿಂದ ಪ್ರವೇಶಿಸಲು ಅನುಮತಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಡ್ರೈವ್‌ ಆಂಡ್ರಾಯ್ಡ್‌ ಡಿವೈಸ್‌ ಬಳಸುವ ಪ್ರತಿಯೊಬ್ಬರಿಗೂ ತಿಳಿದೆ ಇರುತ್ತದೆ. ಇನ್ನು ಗೂಗಲ್‌ ತನ್ನ ಎಲ್ಲಾ ಬಳಕೆದಾರರಿಗೆ 15 GB ಉಚಿತ ಸ್ಟೋರೇಜ್‌ ಅನ್ನು ಗೂಗಲ್‌ ಡ್ರೈವ್‌ನಲ್ಲಿ ನೀಡುತ್ತದೆ. ಗೂಗಲ್ ಇತ್ತೀಚೆಗೆ ತನ್ನ ಉಚಿತ ಸಂಗ್ರಹಣಾ ನೀತಿಯನ್ನು ಈ ವರ್ಷದ ಆರಂಭದಲ್ಲಿ ಬದಲಾಯಿಸಿದೆ. ಇದರಿಂದ ನೀವು ಬ್ಯಾಕಪ್ ಮಾಡುವ ಯಾವುದೇ ಹೊಸ ಫೋಟೋಗಳು ಮತ್ತು ವೀಡಿಯೊಗಳು ಪ್ರತಿ ಗೂಗಲ್ ಖಾತೆಯೊಂದಿಗೆ ಬರುವ ಉಚಿತ 15GB ಸ್ಟೋರೇಜ್‌ನಲ್ಲಿ ಉಳಿದುಕೊಳ್ಳಲಿದೆ. ಹಾಗಾದ್ರೆ ಗೂಗಲ್ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್ ಮಾಡುವುದು ಹೇಗೆ? ಗೂಗಲ್‌ ಡ್ರೈವ್‌ ಅನ್ನು ಬಳಸುವುದು ಹೇಗೆ ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್ ಮಾಡುವುದು ಹೇಗೆ?(ಆಂಡ್ರಾಯ್ಡ್‌)

ಗೂಗಲ್ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್ ಮಾಡುವುದು ಹೇಗೆ?(ಆಂಡ್ರಾಯ್ಡ್‌)

ಹಂತ:1 ನಿಮ್ಮ ಡಿವೈಸ್‌ನಲ್ಲಿ ಅಪ್ಲಿಕೇಶನ್ ತೆರೆಯಲು ಗೂಗಲ್‌ ಡ್ರೈವ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:2 ನಿಮ್ಮ ಗೂಗಲ್‌ ಖಾತೆಗೆ ಲಾಗಿನ್ ಮಾಡಿ.
ಹಂತ:3 ನಿಮ್ಮ ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ + ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:4 ಮೆನುವಿನಿಂದ ಅಪ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:5 ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್‌ಗಳನ್ನು ಆಯ್ಕೆ ಮಾಡಿ.
ಹಂತ:6 ಫೈಲ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ ನೀವು ಆಯ್ಕೆ ಮಾಡಿದ ಸಾಧನದಿಂದ ಫೈಲ್‌ಗಳನ್ನು ಪ್ರವೇಶಿಸಬಹುದು.

ನಿಮ್ಮ ಲ್ಯಾಪ್‌ಟಾಪ್‌ನಿಂದ ಗೂಗಲ್‌ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್‌ ಮಾಡುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್‌ನಿಂದ ಗೂಗಲ್‌ ಡ್ರೈವ್‌ನಲ್ಲಿ ಫೈಲ್‌ಗಳನ್ನು ಸೇವ್‌ ಮಾಡುವುದು ಹೇಗೆ?

ಹಂತ:1 drive.google.com ಗೆ ಭೇಟಿ ನೀಡಿ.
ಹಂತ:2 ನಿಮ್ಮ ಗೂಗಲ್‌ ಖಾತೆಗೆ ಲಾಗಿನ್ ಮಾಡಿ
ಹಂತ:3 ಪರದೆಯ ಮೇಲಿನ ಎಡ ಮೂಲೆಯಲ್ಲಿರುವ +ಹೊಸ ಐಕಾನ್ ಮೇಲೆ ಕ್ಲಿಕ್ ಮಾಡಿ
ಹಂತ:4 ಅಪ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ:5 ನಿಮ್ಮ PC ಯಿಂದ ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್‌ಗಳನ್ನು ಆಯ್ಕೆ ಮಾಡಿ
ಹಂತ:6 ಫೈಲ್ ಅನ್ನು ಅಪ್ಲೋಡ್ ಮಾಡಿದ ನಂತರ ನೀವು ನಿಮ್ಮ ಆಯ್ಕೆಯ ಸಾಧನದಿಂದ ಫೈಲ್‌ಗಳನ್ನು ಪ್ರವೇಶಿಸಬಹುದು.

ಕ್ಲೌಡ್‌ ಸ್ಟೋರೇಜ್‌ ಅನ್ನು ವಿಸ್ತರಿಸುವುದು ಹೇಗೆ?

ಕ್ಲೌಡ್‌ ಸ್ಟೋರೇಜ್‌ ಅನ್ನು ವಿಸ್ತರಿಸುವುದು ಹೇಗೆ?

ನೀವು ನಿಮ್ಮ ಗೂಗಲ್‌ 15GB ಫ್ರೀ ಸ್ಟೋರೇಜ್‌ ಅನ್ನು ನೀವು ಮುಗಿಸಿದ್ದರೆ, ಗೂಗಲ್‌ ಡ್ರೈವ್‌ನಲ್ಲಿ ವಿಷಯವನ್ನು ಬ್ಯಾಕಪ್ ಮಾಡುವುದನ್ನು ಮುಂದುವರಿಸಲು ನೀವು ಹೆಚ್ಚುವರಿ ಸ್ಟೋರೇಜ್‌ ಅನ್ನು ಖರೀದಿಸಬಹುದು. ಭಾರತದಲ್ಲಿ, ಬಳಕೆದಾರರು ಮಾಸಿಕ ಮತ್ತು ವಾರ್ಷಿಕ ಯೋಜನೆಗಳನ್ನು ಆಯ್ಕೆ ಮಾಡಬಹುದು. ಗೂಗಲ್‌ ತಿಂಗಳಿಗೆ 130ರೂ ಗಳಿಗೆ 100GB ಸ್ಟೋರೇಜ್‌ ಅನ್ನು ನೀಡುತ್ತದೆ. ನಿಮಗೆ ಇನ್ನೂ ಹೆಚ್ಚಿನ ಸ್ಥಳ ಬೇಕಾದರೆ, ಗೂಗಲ್ 2TB ಶೇಖರಣಾ ಸ್ಥಳವನ್ನು ತಿಂಗಳಿಗೆ ರೂ 650 ಕ್ಕೆ ನೀಡುವ ಯೋಜನೆಯನ್ನು ಹೊಂದಿದೆ. ಹೆಚ್ಚುವರಿಯಾಗಿ Google ನಿಮಗೆ 200 GB ಡೇಟಾವನ್ನು ತಿಂಗಳಿಗೆ 200 ರೂ.ಗೆ ಪಡೆಯುವ ಯೋಜನೆಯನ್ನು ನೀಡುತ್ತದೆ. ವಾರ್ಷಿಕ ಯೋಜನೆಗಳನ್ನು ಆಯ್ಕೆ ಮಾಡಲು ಬಯಸುವ ಬಳಕೆದಾರರು ತಿಂಗಳಿಗೆ 100 GB ಯನ್ನು ಒಂದು ವರ್ಷಕ್ಕೆ 1,300 ರೂಗಳಲ್ಲಿ ಪಡೆಯಬಹುದು. ನೀವು ತಿಂಗಳಿಗೆ 2TB ಅನ್ನು ರೂ. 6,500 ಕ್ಕೆ ಪಡೆಯಬಹುದು. ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಗೆ ಸೂಚನೆ ನೀಡುವುದಾಗಿ ಗೂಗಲ್ ಹೇಳಿದೆ ಮತ್ತು ತದನಂತರ ಇಮೇಲ್ ಮೂಲಕ ಅವರ 15GB ಉಚಿತ ಸಂಗ್ರಹಣೆ ಮುಗಿಯಲಿದೆ.

Best Mobiles in India

English summary
Google Drive is a cloud-based storage which allows users to save files online. Here is all you need to know about Google Drive.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X