ಏನಿದು ಗೂಗಲ್ ಮ್ಯಾಪ್ಸ್ ಟೈಮ್ಲೈನ್..ಬಳಸುವುದು ಹೇಗೆ?

By Tejaswini P G
|

ಗೂಗಲ್ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಟ್ರ್ಯಾಕ್ ಮಾಡುತ್ತದೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ನಮ್ಮ ಬ್ರೌಸಿಂಗ್ ಹಿಸ್ಟರಿ ಇರಬಹುದು ಅಥವಾ ನಾವು ಭೇಟಿ ಮಾಡಿದ ಸ್ಥಳಗಳಿರಬಹುದು ಅಥವಾ ಇನ್ನಿತರ ಚಟುವಟಿಕೆಗಳಿರಹುದು, ಪ್ರತಿಯೊಂದನ್ನೂ ಗೂಗಲ್ ಟ್ರ್ಯಾಕ್ ಮಾಡುತ್ತಿರುತ್ತದೆ. ಇನ್ನು ಗೂಗಲ್ ಮ್ಯಾಪ್ಸ್ ಬಗ್ಗೆ ಹೇಳವುದಾದರೆ ಅದರಲ್ಲಿದೆ "ಯುವರ್ ಟೈಮ್ಲೈನ್" ಎಂಬ ಆಯ್ಕೆ. ಈ ಆಯ್ಕೆ ಮೂಲಕ ಬಳಕೆದಾರರು ಅವರು ಭೇಟಿ ಮಾಡಿದ ಸ್ಥಳಗಳನ್ನೆಲ್ಲಾ ನೋಡಬಹುದು.

ಏನಿದು ಗೂಗಲ್ ಮ್ಯಾಪ್ಸ್ ಟೈಮ್ಲೈನ್..ಬಳಸುವುದು ಹೇಗೆ?

ಬಳಕೆದಾರರು ಭೇಟಿ ಮಾಡಿರುವ ಸ್ಥಳಗಳನ್ನು ದಿನಾಂಕ, ಅಥವ ಪ್ರಯಾಣಿಸಲು ಬಳಸಿದ ವಾಹನ ಅಥವ ಚಟುವಟಿಕೆಯ ವಿಧ ಇವುಗಳ ಆಧಾರದ ಮೇಲೆ ವರ್ಗೀಕರಿಸಿ ನೋಡಬಹುದು. ನಿಮ್ಮ ಟೈಮ್ಲೈನ್ ಅನ್ನು ನೋಡಲು ನಿಮ್ಮ ಮೊಬೈಲ್ನಲ್ಲಿ ಲೊಕೇಶನ್ ಮತ್ತು ಲೊಕೇಶನ್ ಹಿಸ್ಟರಿ ಆನ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ. ಅದು ಆನ್ ಅಗಿರದಿದ್ದಲ್ಲಿ ಅದನ್ನು ಆನ್ ಮಾಡಲು ಕೆಳಗೆ ಹೇಳಿದ ಸೂಚನೆಗಳನ್ನು ಅನುಸರಿಸಿ.

ಹಂತ 1: ಮ್ಯಾಪ್ಸ್ ನ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ "ಯುವರ್ ಟೈಮ್ಲೈನ್" ಅನ್ನು ಆಯ್ಕೆ ಮಾಡಿ.

ಹಂತ 2:
ಮೋರ್-> ಸೆಟ್ಟಿಂಗ್ಸ್ ಕ್ಲಿಕ್ ಮಾಡಿ

ಹಂತ 3:
ಈಗ ಲೊಕೇಶನ್ ಮತ್ತು ಲೊಕೇಶನ್ ಹಿಸ್ಟರಿ ಆನ್ ಆಗಿದೆಯೇ ಎಂದು ಪರಿಶೀಲಿಸಿ. ಆನ್ ಇಲ್ಲದಿದ್ದಲ್ಲಿ ಅದನ್ನು ಆನ್ ಮಾಡಿ

ನೀವು ಪ್ರಯಾಣಿಸಿರುವ ಸ್ಥಳಗಳನ್ನು ನೋಡಲು ಹೀಗೆ ಮಾಡಿ

ನೀವು ಪ್ರಯಾಣಿಸಿರುವ ಸ್ಥಳಗಳನ್ನು ನೋಡಲು ಹೀಗೆ ಮಾಡಿ

ಹಂತ 1: ಗೂಗಲ್ ಮ್ಯಾಪ್ಸ್ ಗೆ ಹೋಗಿ

ಹಂತ 2: ಮ್ಯಾಪ್ಸ್ ನ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ "ಯುವರ್ ಟೈಮ್ಲೈನ್" ಅನ್ನು ಆಯ್ಕೆ ಮಾಡಿ.

ಹಂತ 3: ಯಾವದೇ ನಿರ್ದಿಷ್ಟ ದಿನ ಅಥವ ತಿಂಗಳನ್ನು ಆಯ್ಕೆ ಮಾಡಲು, ಶೋ ಕ್ಯಾಲೆಂಡರ್ ಮೇಲೆ ಕ್ಲಿಕ್ ಮಾಡಿ, ಮತ್ತೆ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ ಬೇಕಾದ ದಿನವನ್ನು ಆಯ್ಕೆ ಮಾಡಿ

ನೀವು ನಿಮ್ಮ ಟೈಮ್ಲೈನ್ ಅನ್ನು ಎಡಿಟ್ ಮಾಡಬಹುದು. ಸ್ಥಳಗಳನ್ನು ಬದಲಿಸಬಹುದು , ಒಂದು ದಿನ ಅಥವಾ ಲೊಕೇಶನ್ ಹಿಸ್ಟರಿಯನ್ನು ಡಿಲೀಟ್ ಕೂಡ ಮಾಡಬಹುದು

ನೀವು ಭೇಟಿ ಮಾಡಿದ ಸ್ಥಳಗಳನ್ನು ಬದಲಾಯಿಸಲು ಹೀಗೆ ಮಾಡಿ

ನೀವು ಭೇಟಿ ಮಾಡಿದ ಸ್ಥಳಗಳನ್ನು ಬದಲಾಯಿಸಲು ಹೀಗೆ ಮಾಡಿ

ಹಂತ 1: ಗೂಗಲ್ ಮ್ಯಾಪ್ಸ್ ಗೆ ಹೋಗಿ

ಹಂತ 2: ಮ್ಯಾಪ್ಸ್ ನ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ "ಯುವರ್ ಟೈಮ್ಲೈನ್" ಅನ್ನು ಆಯ್ಕೆ ಮಾಡಿ

ಹಂತ 3: ಎಡಿಟ್ ಮೇಲೆ ಕ್ಲಿಕ್ ಮಾಡಿ ಸರಿಯಾದ ಸ್ಥಳವನ್ನು ಆಯ್ಕೆ ಮಾಡಿ. ಟೈಮ್ ಮೇಲೆ ಟ್ಯಾಪ್ ಮಾಡುವ ಮೂಲಕ ಭೇಟಿ ಮಾಡಿದ ಸಮಯವನ್ನೂ ಬದಲಾಯಿಸಬಹುದು.

ಹೊಸ ಮೊಬೈಲ್ ಖರೀದಿಸಿದರೆ 8 ಗಂಟೆ ಚಾರ್ಜ್ ಮಾಡಿ ಬಳಸಲು ಹೇಳುವುದೇಕೆ?..ಇಲ್ಲಿದೆ ಉತ್ತರ!!ಹೊಸ ಮೊಬೈಲ್ ಖರೀದಿಸಿದರೆ 8 ಗಂಟೆ ಚಾರ್ಜ್ ಮಾಡಿ ಬಳಸಲು ಹೇಳುವುದೇಕೆ?..ಇಲ್ಲಿದೆ ಉತ್ತರ!!

ಒಂದು ದಿನವನ್ನು ಡಿಲೀಟ್ ಮಾಡಲು ಹೀಗೆ ಮಾಡಿ

ಒಂದು ದಿನವನ್ನು ಡಿಲೀಟ್ ಮಾಡಲು ಹೀಗೆ ಮಾಡಿ

ಹಂತ 1: ಗೂಗಲ್ ಮ್ಯಾಪ್ಸ್ ಗೆ ಹೋಗಿ

ಹಂತ 2: ಮ್ಯಾಪ್ಸ್ ನ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ "ಯುವರ್ ಟೈಮ್ಲೈನ್" ಅನ್ನು ಆಯ್ಕೆ ಮಾಡಿ

ಹಂತ 3: ಈಗ ಶೋ ಕ್ಯಾಲೆಂಡರ್ ಮೇಲೆ ಟ್ಯಾಪ್ ಮಾಡಿ ನೀವು ಡಿಲೀಟ್ ಮಾಡಲು ಬಯಸುವ ದಿನವನ್ನು ಆಯ್ಕೆ ಮಾಡಿ

ಹಂತ 4: ಮೋರ್ ಮೇಲೆ ಟ್ಯಾಪ್ ಮಾಡಿ ಡಿಲೀಟ್ ಡೇ ಕ್ಲಿಕ್ ಮಾಡಿ

ಲೊಕೇಶನ್ ಮತ್ತು ಲೊಕೇಶನ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ

ಲೊಕೇಶನ್ ಮತ್ತು ಲೊಕೇಶನ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ

ಹಂತ 1: ಗೂಗಲ್ ಮ್ಯಾಪ್ಸ್ ಗೆ ಹೋಗಿ

ಹಂತ 2: ಮ್ಯಾಪ್ಸ್ ನ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ "ಯುವರ್ ಟೈಮ್ಲೈನ್" ಅನ್ನು ಆಯ್ಕೆ ಮಾಡಿ

ಹಂತ 3: ಈಗ ಸೆಟ್ಟಿಂಗ್ಸ್ ಗೆ ಹೋಗಿ ಲೊಕೇಶನ್ ಸೆಟ್ಟಿಂಗ್ಸ್ ಗೆ ಹೋಗಿ

ಹಂತ 4: ಕೆಲವು ಹಿಸ್ಟರಿ ಡಿಲೀಟ್ ಮಾಡಲು "ಡಿಲೀಟ್ ಲೊಕೇಶನ್ ಹಿಸ್ಟರಿ ರೇಂಜ್" ಮೇಲೆ ಟ್ಯಾಪ್ ಮಾಡಿ

ಹಂತ 5: ಎಲ್ಲವನ್ನೂ ಡಿಲೀಟ್ ಮಾಡಲು " ಡಿಲೀಟ್ ಆಲ್ ಲೊಕೇಶನ್ ಹಿಸ್ಟರಿ" ಮೇಲೆ ಟ್ಯಾಪ್ ಮಾಡಿ

Best Mobiles in India

Read more about:
English summary
It's a known fact that Google tracks each and every activity of ours including the browsing history, places we've been and much more. Check out on how to see Google Timeline.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X