ಊದಿಕೊಂಡಿರುವ ಫೋನ್ ಬ್ಯಾಟರಿ ಅಪಾಯ ಖಂಡಿತ

By Shwetha
|

ಲಿಥಿಯಮ್ ಐಯಾನ್ ಬ್ಯಾಟರಿ ವಿಫಲಗೊಂಡಾಗ, ಇದು ತೀವ್ರವಾಗಿ ಫೋನ್‌ಗೆ ಬಾಧೆಯನ್ನು ಉಂಟುಮಾಡುತ್ತದೆ. ಫೋನ್ ಬ್ಯಾಟರಿ ಅದರ ಗಾತ್ರಕ್ಕಿಂತ ಹೆಚ್ಚು ಉಬ್ಬಿದೆ ಎಂದಾದಲ್ಲಿ ನಿಮ್ಮ ಮತ್ತು ಇತರರ ಸುರಕ್ಷತೆಗಾಗಿ ಸೂಕ್ತ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್ಸ್, ಇಬುಕ್ ರೀಡರ್ಸ್, ಫಿಟ್‌ನೆಸ್ ಟ್ರ್ಯಾಕ್ಟರ್ಸ್ ಲಿಥಿಯಮ್ ಇಯಾನ್ ಬ್ಯಾಟರಿಗಳಿಂದ ಬಂದಿವೆ. ಇವುಗಳು ಹೆಚ್ಚು ಪ್ರಬಲವಾಗಿದ್ದು, ಕಡಿಮೆ ಸೆಲ್ಫ್ ಡಿಸ್‌ಚಾರ್ಜ್ ಅಂಶಗಳನ್ನು ಪಡೆದುಕೊಂಡು ಬಂದಿವೆ. ಅಂತೆಯೇ ಸಣ್ಣ ಮೆಮೊರಿ ಪರಿಣಾಮವನ್ನು ಪಡೆದುಕೊಂಡಿವೆ.

ಓದಿರಿ: ಬರೇ ಒಂದೇ ಟ್ರಿಕ್‌ನಿಂದ ಫೋನ್‌ನ ವೇಗ ಹೆಚ್ಚಿಸಿ

ಬ್ಯಾಟರಿ ಊದುವಿಕೆ ಸಣ್ಣದಾಗಿದ್ದರೆ, ನಿಮ್ಮ ಡಿವೈಸ್‌ಗೆ ಸಣ್ಣ ಪರಿಣಾಮ ಉಂಟಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹಿಂಭಾಗ ವಿಕೃತವಾಗಿ ಕಂಡುಬರುತ್ತದೆ. ಕಿಂಡಲ್‌ನಲ್ಲಿ ಅಸಾಮಾನ್ಯ ಅಂತರವನ್ನು ಕಂಡುಕೊಳ್ಳಬಹುದು ಇಲ್ಲವೇ ನಿಮ್ಮ ಲ್ಯಾಪ್‌ಟಾಪ್‌ನ ಟ್ರ್ಯಾಕ್‌ಪ್ಯಾಡ್ ಸ್ಟಿಫ್ ಆಗಿರುತ್ತದೆ.

#1

#1

ಲಿಥಿಯಮ್ ಐಯಾನ್ ಬ್ಯಾಟರಿಗಳು ಯಾರೊಬ್ಬರಿಗೂ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ಅದು ಸ್ಫೋಟಗೊಳ್ಳುವ ಮುನ್ನ ಶೀಘ್ರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

#2

#2

ಬ್ಯಾಟರಿ ಊದಿಕೊಂಡಿದೆ ಎಂದಾದಲ್ಲಿ ಡಿವೈಸ್ ಬಳಕೆಯನ್ನು ಶೀಘ್ರವೇ ನಿಲ್ಲಿಸಿ. ಪವರ್ ಆಫ್ ಮಾಡಿ, ಡಿವೈಸ್ ಚಾರ್ಜ್ ಮಾಡಬೇಡಿ. ಊದಿದ ಬ್ಯಾಟರಿಯನ್ನು ಚಾರ್ಜ್ ಮಾಡುವುದರಿಂದ ಬ್ಯಾಟರಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

#3

#3

ಬ್ಯಾಟರಿಯನ್ನು ಹೊರತೆಗೆಯುವ ಸಂದರ್ಭ ಬಂದಾಗ ಹೊರಗಿನ ಕವಚವನ್ನು ಕುಗ್ಗಿಸುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ನಿಮ್ಮ ಬಲಪ್ರಯೋಗವನ್ನು ಈ ಬ್ಯಾಟರಿಗಳ ಮೇಲೆ ಮಾಡಿದಲ್ಲಿ ನೀವು ಕೆಟ್ಟ ಪ್ರತಿರೋಧವನ್ನು ಅನುಭವಿಸಬಹುದು ಒಳಗಿನ ಬಿಡಿಭಾಗಗಳು ಆಕ್ಸಿಜನ್‌ ಹಾಗೂ ವಾತಾವರಣದ ಮಾಯಿಶ್ಚರೈಸರ್‌ನೊಂದಿಗೆ ಸ್ಪಂದಿಸಬಹುದು

#4

#4

ನಿಮ್ಮ ಡಿವೈಸ್ ಯೂಸರ್ ಸರ್ವೀಸೇಬಲ್ ಎಂದಾದಲ್ಲಿ ಕೇಸ್ ಅನ್ನು ಸುಲಭವಾಗಿ ನಿಮಗೆ ತೆರೆಯಬಹುದಾಗಿದೆ. ಬ್ಯಾಟರಿಯನ್ನು ಹೊರತೆಗೆಯುವುದು ನಿಮ್ಮ ಡಿವೈಸ್‌ಗೆ ಯಾವುದೇ ಹಾನಿಯನ್ನು ಉಂಟುಮಾಡಲಾರದು. ಸ್ಫೋಟವನ್ನೂ ತಪ್ಪಿಸಬಹುದು.

#5

#5

ಬ್ಯಾಟರಿಯನ್ನು ಒಮ್ಮೆ ನೀವು ಹೊರತೆಗೆದ ನಂತರ ಎರಡು ಕೆಲಸಗಳನ್ನು ನೀವು ಕೂಡಲೇ ಮಾಡಬೇಕು ಅಂದರೆ ಇಲೆಕ್ಟ್ರಿಕ್ ಟೇಪ್ ಬಳಸಿ ಬ್ಯಾಟರಿಯ ಸಂಪರ್ಕಗಳನ್ನು ವಿಯೋಜಿಸುವುದು. ಎರಡನೆಯದು ಬ್ಯಾಟರಿಯನ್ನು ತಂಪಾದ ಸ್ಥಳದಲ್ಲಿ ಇರಿಸುವುದು

#6

#6

ನಿಮ್ಮ ಬ್ಯಾಟರಿ ಯೂಸರ್ ಸರ್ವೀಸೇಬಲ್ ಆಗಿಲ್ಲ ಎಂದಾದಲ್ಲಿ, ನಿಮಗೆ ಬ್ಯಾಟರಿಯನ್ನು ಸುಲಭವಾಗಿ ರಿಮೂವ್ ಮಾಡಲಾಗುವುದಿಲ್ಲ. ಆಗ ಡಿವೈಸ್ ಅನ್ನು ಸರ್ವೀಸ್ ಲೊಕೇಶನ್‌ಗೆ ತೆಗೆದುಕೊಂಡು ಹೋಗಬೇಕು. ಅಂದರೆ ಬ್ಯಾಟರಿ ಶಾಪ್‌ಗೆ. ನಿಮ್ಮ ಡಿವೈಸ್‌ನಿಂದ ಬ್ಯಾಟರಿಯನ್ನು ಹೊರತೆಗೆಯುವ ಪರಿಕರಗಳು ಇಲ್ಲಿ ದೊರೆಯುತ್ತದೆ ಮತ್ತು ಹಾನಿಗೊಂಡ ಬ್ಯಾಟರಿಯನ್ನು ಹೊರತೆಗೆಯಬಹುದಾಗಿದೆ.

#7

#7

ಲಿಥಿಯಮ್ ಐಯಾನ್ ಬ್ಯಾಟರಿಗಳನ್ನು ಬಿಸಾಡುವುದು ಒಳ್ಳೆಯದಲ್ಲ. ಇದರಲ್ಲಿ ಸಣ್ಣ ಬೆಂಕಿಕಿಡಿ ಹತ್ತಿಕೊಳ್ಳುವ ಸಾಧ್ಯತೆ ಇದ್ದು ನಿಮ್ಮ ಮನೆಯ ಸಮೀಪ ಅಥವಾ ಬೇರೆಲ್ಲಾದರೂ ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು. ಇದನ್ನು ಅಧಿಕೃತ ಶಾಪ್‌ಗೆ ತೆಗೆದುಕೊಂಡು ಹೋಗಿ ಅವರಲ್ಲಿ ವಿಚಾರಿಸಿಕೊಳ್ಳಿ.

#8

#8

ನಿಮ್ಮ ಬ್ಯಾಟರಿ ಊದಿಕೊಳ್ಳದಂತೆ ಕಾಪಾಡಿಕೊಳ್ಳುವ ಜವಬ್ದಾರಿ ನಿಮ್ಮ ಮೇಲೆಯೇ ಇದ್ದು ಆದಷ್ಟು ಬ್ಯಾಟರಿ ಹಾನಿಗೊಳ್ಳದಂತೆ ಕಾಪಾಡಿಕೊಳ್ಳಿ.

#9

#9

ಲಿಥಿಯಮ್ ಬ್ಯಾಟರಿಗಳಿಗೆ ಉಷ್ಣತೆ ತಕ್ಕುದಾದುದಲ್ಲ. ಯಾವಾಗಲೂ ತಂಪಾಗಿರಿಸುವುದು ಸಾಧ್ಯವಿಲ್ಲದ ಮಾತಾಗಿದ್ದರೂ ಅವುಗಳು ಸುಟ್ಟು ಹೋಗದಂತೆ ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಿದೆ. ನಿಮ್ಮ ಲ್ಯಾಪ್‌ಟಾಪ್ ಅನ್ನು ಕಾರಿನಲ್ಲಿ ಬಿಸಿಯಾದ ಸ್ಥಳದಲ್ಲಿ ಇರಿಸಬೇಡಿ ಅಂತೆಯೇ ಅಡುಗೆ ಕೋಣೆಯಲ್ಲಿ ಬಿಸಿಲು ಬೀಳುವಲ್ಲಿ ಫೋನ್ ಅನ್ನು ಚಾರ್ಜ್‌ಗೆ ಇಡದಿರಿ.

#10

#10

ಬ್ಯಾಟರಿಯನ್ನು ಓವರ್ ಚಾರ್ಜ್ ಮಾಡುವುದು ನಿಜಕ್ಕೂ ಗಂಭೀರ ಅಪಾಯವಾಗಿದೆ. ಆದ್ದರಿಂದ ಹಣಕ್ಕೆ ನೀವು ಮಹತ್ವ ನೀಡದೇ ಗುಣಮಟ್ಟದ ಚಾರ್ಜರ್ ಅನ್ನು ಬಳಸಿ ಫೋನ್, ಲ್ಯಾಪ್‌ಟಾಪ್ ಚಾರ್ಜ್ ಮಾಡಿಕೊಳ್ಳಿ.

#11

#11

ನಿಮ್ಮ ಬ್ಯಾಟರಿ ಚಾರ್ಜ್ ಅನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದಾದಲ್ಲಿ ಅದನ್ನು ಬದಲಾಯಿಸುವ ಸಮಯ ಬಂದೊದಗಿದೆ ಎಂದೇ ಅರ್ಥ. ಮುಂಚೆ 5 ಗಂಟೆಗಳವರೆಗೆ ಬರುತ್ತಿದ್ದ ಚಾರ್ಜ್ ಈಗ ಬೇರೆ 30 ನಿಮಿಷಗಳವರೆಗೆ ಮಾತ್ರ ಲಭ್ಯವಾಗುತ್ತಿದೆ ಎಂದಾದಲ್ಲಿ ಎಚ್ಚರಿಕೆ ವಹಿಸಲೇ ಬೇಕು.

#12

#12

ನಿಮ್ಮ ಬ್ಯಾಟರಿಯನ್ನು ನಿರಂತರವಾಗಿ ಚಾರ್ಜ್ ಮಾಡಬೇಡಿ. ಇದು ಬ್ಯಾಟರಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೆಚ್ಚುವರಿ ಬಿಸಿಯನ್ನು ಪ್ರಸ್ತುತಪಡಿಸಬಹುದು. ನಿರಂತರವಾಗಿ ಸಾಕೆಟ್‌ನಲ್ಲೇ ಫೋನ್ ಇಲ್ಲವೇ ಲ್ಯಾಪ್‌ಟಾಪ್ ಅನ್ನು ಹಾಗೆಯೇ ಬಿಡುವುದು ಬ್ಯಾಟರಿಯ ಆರೋಗ್ಯಕ್ಕೆ ಮಾರಕವಾಗಿದೆ.

Best Mobiles in India

English summary
When a lithium ion battery fails, things can go south very quickly. If you open up your phone to find a battery swollen to twice its size, proper care and handling is critical for both your safety and the safety of others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X