Subscribe to Gizbot

ವಾಟ್ಸ್‌ಅಪ್‌ನಲ್ಲಿ ಬೋಲ್ಡ್ ಟೆಕ್ಸ್ಟ ಆಯ್ಕೆ ಹೇಗೆ? ಖಂಡಿತಾ ಗೊತ್ತಿರೊಲ್ಲಾ!!!

Written By:

ಪ್ರಪಂಚದ ನಂಬರ್ ಒನ್ ಮೆಸೆಂಜರ್ ವಾಟ್ಸ್ಆಪ್ ದಿನದಿನಕ್ಕೆ ಅಪ್‌ಡೇಟ್ ಆಗುತ್ತಲೇ ಇದೆ. ಹಾಗಾಗಿ, ಅಪ್‌ಡೇಟ್ ಆದ ವಾಟ್ಸ್‌ಆಪ್ ಜತೆಗೆ ಅದರ ಬಳಕೆದಾರರೂ ಅಪ್‌ಡೇಟ್‌ ಆಗುತ್ತಿರಬೇಕಾದ್ದು ಅಗತ್ಯ. ಏಕೆಂದರೆ ವಾಟ್ಸ್ಆಪ್‌ನ ಇನ್ನು ಉತ್ತಮ ಸೇವೆಗಳು ನಿಮಗೆ ದೊರೆಯುತ್ತವೆ.!!

ವಾಟ್ಸ್ಆಪ್ ಆಪ್‌ ಅನ್ನು ಬಹುತೇಕ ಎಲ್ಲರೂ ಬಳಕೆ ಮಾಡುವುದರಿಂದ ಆಪ್‌ನಲ್ಲಿನ ಬಹುತೇಕ ಆಯ್ಕೆಗಳು ಎಲ್ಲರಿಗೂ ತಿಳಿದಿರುತ್ತವೆ. ಆದರೆ, ಕೆಲವು ಸಣ್ಣ ಸಂಗತಿಗಳು ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.!! ಅಂಥ ಒಂದು ಸಣ್ಣ ಫೀಚರ್ ಎಂದರೆ ವಾಟ್ಸ್ಆಪ್ ನಲ್ಲಿ ಅಕ್ಷರ ದಪ್ಪ (ಬೋಲ್ಡ್ ಟೆಕ್ಸ್ಟ) ಮಾಡುವುದು.!!

ಓದಿರಿ: ಬೆಂಗಳೂರಿನಲ್ಲಿ ತಯಾರಾಗುವ ಐಫೋನ್ ಬೆಲೆ ಕೇವಲ 10,000!! ಏಕೆ ಗೊತ್ತಾ?

ಹಾಗಾಗಿ, ವಾಟ್ಸ್ಆಪ್ ನಲ್ಲಿ ಅಕ್ಷರ ದಪ್ಪ (ಬೋಲ್ಡ್ ಟೆಕ್ಸ್ಟ) ಮಾಡುವುದು ನಿಮಗೆ ತಿಳಿಯದೇ ಇದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸ್ಆಪ್ ನಲ್ಲಿ ಅಕ್ಷರ ದಪ್ಪ (ಬೋಲ್ಡ್ ಟೆಕ್ಸ್ಟ) ಮಾಡುವುದು ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಷ್ಟೋಂದು ಸುಲಭ ಅಂತಿರಾ!!

ಇಷ್ಟೋಂದು ಸುಲಭ ಅಂತಿರಾ!!

ವಾಟ್ಸ್‌ಆಪ್‌ ಅಕ್ಷರಗಳನ್ನು ದಪ್ಪ ಮಾಡುವುದು ತುಂಬಾ ಸುಲಭ. ಏಕೆಂದರೆ ವಾಟ್ಸ್‌ಆಪ್‌ ಬಳಸುವ ಬಹುತೇಕರಿಗೆ ಈ ಬಗ್ಗೆ ಗೊತ್ತಿರಬಹುದು, ಅನೇಕರಿಗೆ ಗೊತ್ತಿಲ್ಲದೆಯೂ ಇರಬಹುದು. ತಿಳಿದಮೇಲೆ ಇದು ಇಷ್ಟೊಂದು ಸುಲಭನಾ ಅಂತಾ ನೀವೆ ನಗಾಡ್ತೀರಾ!!

 ಎರಡು ಸ್ಟಾರ್‌ಗಳಿದ್ದರೆ ಸಾಕು!!

ಎರಡು ಸ್ಟಾರ್‌ಗಳಿದ್ದರೆ ಸಾಕು!!

ವಾಟ್ಸ್‌ಅಪ್‌ನಲ್ಲಿ ಟೆಕ್ಸ್ಟ್ ಟೈಪ್ ಮಾಡಿದ ನಂತರ ಯಾವುದೇ ಭಾಷೆಯ ಅಕ್ಷರಗಳನ್ನು ಬೋಲ್ಡ್‌ ಮಾಡಲು ಬರಹದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಎರಡು ಸ್ಟಾರ್‌ ಸೇರಿಸಿದರೆ ಸಾಕು ಎಲ್ಲಾ ಅಕ್ಷರಗಳೂ ಬೋಲ್ಡ್ ಆಗುತ್ತವೆ.!! ನಿಮಗಿದು ಗೊತ್ತಿತ್ತಾ?

ಉದಾಹರಣೆಗೆ!!

ಉದಾಹರಣೆಗೆ!!

'ಗಿಜ್‌ಬಾಟ್' ಎಂದು ದಪ್ಪ ಅಕ್ಷರಗಳಲ್ಲಿ ಬರೆಯಬೇಕಿದ್ದರೆ ಮೊದಲು * ಟೈಪ್‌ ಮಾಡಿ ಬಳಿಕ ಸ್ಪೇಸ್‌ ಕೊಡದೆ ಗಿಜ್‌ಬಾಟ್ ಎಂದು ಟೈಪ್‌ ಮಾಡಿ ಕೊನೆಗೆ ಮತ್ತೆ ಸ್ಪೇಸ್‌ ಕೊಡದೆ * ಟೈಪ್‌ ಮಾಡಿ. ಈಗ ನೀವು ಟೈಪಿಸಿದ ಅಕ್ಷರಗಳೆಲ್ಲವೂ ಬೋಲ್ಡ್‌ ಆಗಿರುತ್ತವೆ.!!

ವಾಕ್ಯಗಳನ್ನು ಸಹ ಬೋಲ್ಡ್‌ ಮಾಡಬಹುದು.

ವಾಕ್ಯಗಳನ್ನು ಸಹ ಬೋಲ್ಡ್‌ ಮಾಡಬಹುದು.

ಪದಗಳಿಗೆ ಹೇಗೆ ಸ್ಟಾರ್‌ಗಳನ್ನು ಟೈಪ್ ಮಾಡುತ್ತಿರೋ ಅದೇ ರೀತಿಯಲ್ಲಿ ವಾಕ್ಯದ ಮೊದಲಲ್ಲಿ ಮತ್ತು ಕೊನೆಗೆ ಸ್ಟಾರ್‌ ಸೇರಿಸಿದರೆ ವಾಕ್ಯ ಬೋಲ್ಡ್‌ ಆಗುತ್ತದೆ.!! ಇದುವರೆಗೂ ನೀವು ಅಕ್ಷರ ದಪ್ಪ ಮಾಡಿಲ್ಲವಾದರೆ ಪ್ರಯತ್ನಿಸಿ ನೋಡಿ. ಈ ಸಿಂಪಲ್ ಟ್ರಿಕ್ಸ್ ಮತ್ತು ಶೇರ್ ಮಾಡಿ.!!

ಓದಿರಿ:ಏರ್‌ಟೆಲ್‌ನಿಂದ ಮತ್ತೊಂದು ಇತಿಹಾಸದ ಆಫರ್!..ನಂಬೋಕೆ ಆಗ್ತಿಲ್ಲಾ!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WHATSAPP has pushed-out an update for its hugely-successful messenger. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot