ಅತ್ಯಂತ ಆಧುನಿಕ ವಾಟ್ಸಾಪ್ ಫೀಚರ್ಸ್

By Shwetha
|

ವಾಟ್ಸಾಪ್ ಎಂಬ ಸಾಮಾಜಿಕ ತಾಣವು ಬಳಕೆದಾರರಿಗೆ ಹತ್ತು ಹಲವು ವಿಶೇಷ ಫೀಚರ್‌ಗಳನ್ನು ಒದಗಿಸುತ್ತಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಇನ್ನಷ್ಟು ಹೊಸ ನವೀನ ಫೀಚರ್‌ಗಳನ್ನು ವಾಟ್ಸಾಪ್ ಪಡೆದುಕೊಳ್ಳುತ್ತಿದ್ದು ಇಂದಿನ ಲೇಖನದಲ್ಲಿ ಆ ವಿಶೇಷ ಫೀಚರ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ವಾಟ್ಸಾಪ್‌ನ ಟಾಪ್ 15 ಫೀಚರ್ಸ್: ನೀವು ಬಳಸುತ್ತಿದ್ದೀರಿ ತಾನೇ?

ಕಾಲ್ ಬ್ಯಾಕ್

ಕಾಲ್ ಬ್ಯಾಕ್

ಒಂದು ವರದಿಯ ಪ್ರಕಾರ ವಾಟ್ಸಾಪ್ 100 ಮಿಲಿಯನ್ ಕರೆಗಳನ್ನು ಪಡೆದುಕೊಳ್ಳುತ್ತಿದೆ. ನೀವು ವಾಟ್ಸಾಪ್‌ನಲ್ಲಿ ವಾಯ್ಸ್ ಕರೆನ್ನು ಮಿಸ್ ಮಾಡಿಕೊಂಡಿದ್ದಲ್ಲಿ, ನೀವು ಅದನ್ನು ಗಮನಿಸಿಕೊಳ್ಳಬಹುದಾಗಿದೆ. ಕಾಲ್ ಬ್ಯಾಕ್ ಆಪ್ಶನ್ ಅನ್ನು ವಾಟ್ಸಾಪ್ ಪಡೆದುಕೊಂಡಿದ್ದು ಅಪ್ಲಿಕೇಶನ್ ಸ್ಕ್ರೀನ್‌ನಲ್ಲಿ ಇದು ಕಾಣಿಸಿಕೊಳ್ಳುತ್ತದೆ.

 ವಾಯ್ಸ್ ಮೇಲ್

ವಾಯ್ಸ್ ಮೇಲ್

ಸಂದೇಶಗಳನ್ನು ರೆಕಾರ್ಡ್ ಮಾಡುವ ವ್ಯವಸ್ಥೆಯನ್ನು ವಾಟ್ಸಾಪ್ ಬಳಕೆದಾರರಿಗೆ ಒದಗಿಸುತ್ತಿದ್ದು ಚಾಟ್ ಬಾಕ್ಸ್ ಪಕ್ಕದಲ್ಲಿ ಮಿಕ್ ಐಕಾನ್ ಅನ್ನು ಸ್ಪರ್ಶಿಸುವ ಮೂಲಕ ಈ ಫೀಚರ್ ಅನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಕರೆಮಾಡಿದ ಬಳಕೆದಾರರಿಗೆ ವಾಯ್ಸ್ ಮೇಲ್ ಅನ್ನು ಕಳುಹಿಸಬಹುದಾಗಿದೆ.

ಜಿಫ್ ಬೆಂಬಲ

ಜಿಫ್ ಬೆಂಬಲ

ಜಿಫ್ ಫೈಲ್‌ಗಳನ್ನು ವರ್ಗಾಯಿಸುವ ಸಾಮರ್ಥ್ಯವನ್ನು ವಾಟ್ಸಾಪ್ ಸದ್ಯದಲ್ಲೇ ಹೊರತರಲಿದೆ. ಇದು ಹೆಚ್ಚು ರೂಮರ್ ಪಡೆದುಕೊಂಡ ಫೀಚರ್ ಎಂದೆನಿಸಿದ್ದು ಆದಷ್ಟು ಬೇಗನೇ ನಿಮ್ಮ ಅಪ್ಲಿಕೇಶನ್‌ನಲ್ಲಿ ಬರಲಿದೆ.

ವೀಡಿಯೊ ಕಾಲ್ಸ್

ವೀಡಿಯೊ ಕಾಲ್ಸ್

ವಾಟ್ಸಾಪ್‌ನಲ್ಲಿ ವೀಡಿಯೊ ಕಾಲ್ ಬೀಟಾ ಆವೃತ್ತಿಯಲ್ಲಿ ಬಂದಿದ್ದು ಕೆಲವೇ ತಿಂಗಳುಗಳಲ್ಲಿ ಈ ಫೀಚರ್ ಅನ್ನು ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಮೆನ್ಶನ್ಸ್

ಮೆನ್ಶನ್ಸ್

ಫೇಸ್‌ಬುಕ್‌ನಲ್ಲಿರುವಂತೆ, ವಾಟ್ಸಾಪ್ ಕೂಡ ಮೆನ್ಶನ್ ಫೀಚರ್ ಅನ್ನು ಪಡೆದುಕೊಳ್ಳಲಿದೆ. ಗ್ರೂಪ್ ಸಂವಾದದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಗುಂಪಿನಲ್ಲಿರುವ ಇತರರ ಗಮನವನ್ನು ಪಡೆದುಕೊಂಡು ಅವರ ಮನಸ್ಸನ್ನು ಬೇರೆ ಕಡೆ ಹರಿಸುತ್ತದೆ.

ಹೊಸ ಫಾಂಟ್

ಹೊಸ ಫಾಂಟ್

ವಾಟ್ಸಾಪ್ ಬಳಕೆದಾರರಿಗೆ ಹೊಸ ಫಾಂಟ್ ಅನ್ನು ಒದಗಿಸಿದ್ದು ವಿಂಡೋಸ್‌ನಲ್ಲಿ ಇದು ಸೂಕ್ತವಾದುದಾಗಿದೆ. ಈವರೆಗೆ, ಇದೊಂದು ಫಾಂಟ್ ಆಯ್ಕೆ ಎಂದೆನಿಸಿದ್ದು ಇನ್ನೊಂದು ಡೀಫಾಲ್ಟ್ ಆಗಿದೆ. ಈ ಹೊಸ ಫಾಂಟ್‌ನಲ್ಲಿ ನೀವು ಟೈಪ್ ಮಾಡಬೇಕು ಎಂದಾದಲ್ಲಿ, (`) ಮೂರು ಬಾರಿ ಇದನ್ನು ಹಾಕಬೇಕು ಮತ್ತು ಹೊಸ ಫಾಂಟ್ ನಿಮಗೆ ನಂತರ ದೊರೆಯುತ್ತದೆ.

Best Mobiles in India

English summary
The beta versions of WhatsApp have started tipping that the application will come with many new features and this includes the following. Some of these features have been rolled out and some others are in the beta version.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X