ವಾಟ್ಸಾಪ್ ಪ್ರೇಮಿಗಳಿಗಾಗಿ 12 ಅತ್ಯಗತ್ಯ ಟಿಪ್ಸ್

Written By:

ವಿಶ್ವದ ಹೆಚ್ಚು ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ 1 ಬಿಲಿಯನ್ ಡೌನ್‌ಲೋಡ್‌ಗಳನ್ನು ಪಡೆದುಕೊಂಡು ಬಳಕೆದಾರರ ಪ್ರೀತಿ ಪಾತ್ರ ಎಂದೆನಿಸಿದೆ. ಆದರೆ ವಾಟ್ಸಾಪ್‌ನಲ್ಲೂ ಕೆಲವೊಂದು ಸಲಹೆಗಳನ್ನು ಪಾಲಿಸುವುದರ ಮೂಲಕ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಇನ್ನಷ್ಟನ್ನು ಪಡೆದುಕೊಳ್ಳಬಹುದಾಗಿದೆ.

ಅದು ಹೇಗೆ ಎಂಬ ಗೊಂದಲ ನಿಮ್ಮಲ್ಲಿದೆ ಎಂದಾದಲ್ಲಿ ಇಂದಿನ ಲೇಖನದಲ್ಲಿ ಆ ಸಲಹೆಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ವಾಟ್ಸಾಪ್‌ನಲ್ಲಿ ಇರುವ ಕೆಲವೊಂದು ದೋಷಗಳನ್ನು ಈ ಸಲಹೆಗಳು ನಿಮಗೆ ಎತ್ತಿ ತೋರಿಸಲಿದ್ದು ಅವುಗಳ ನಿವಾರಣೆಯ ಮಾಹಿತಿಯನ್ನು ನಾವು ಇಲ್ಲಿ ನೀಡಿರುವೆವು. ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ ರೋಲ್‌‌ನಲ್ಲಿ ವಾಟ್ಸಾಪ್ ಚಿತ್ರಗಳ ಪ್ರದರ್ಶನ

ಕ್ಯಾಮೆರಾ ರೋಲ್‌‌ನಲ್ಲಿ ವಾಟ್ಸಾಪ್ ಚಿತ್ರಗಳ ಪ್ರದರ್ಶನ

ಸಲಹೆ:1

ಫೈಲ್ ಎಕ್ಸ್‌ಪ್ಲೋರರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ES File Explorer
ಎಸ್‌ಡಿ ಕಾರ್ಡ್/ವಾಟ್ಸಾಪ್/ಮೀಡಿಯಾಗೆ ನ್ಯಾವಿಗೇಟ್ ಮಾಡಿ
ನೀವು ಹಂಚಿಕೊಳ್ಳಬೇಡವೆಂದಿರುವ ಫೋಲ್ಡರ್ ನಮೂದಿಸಿ
ಸ್ಕ್ರೀನ್‌ನ ಕೆಳಭಾಗದಲ್ಲಿ ಪ್ಲಸ್ ಬಟನ್ ಸ್ಪರ್ಶಿಸಿ

ವಾಟ್ಸಾಪ್ ಲಾಕ್ ಮಾಡಲು

ವಾಟ್ಸಾಪ್ ಲಾಕ್ ಮಾಡಲು

ಸಲಹೆ:2

ನಿಮ್ಮ ವಾಟ್ಸಾಪ್ ಅನ್ನು ಗೌಪ್ಯವಾಗಿರಿಸಲು ಆಪ್ ಲಾಕ್ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ.

ವಾಟ್ಸಾಪ್ ಚಾಟ್ ಇತಿಹಾಸವನ್ನು ಫೋನ್‌ಗಳ ನಡುವೆ ಬದಲಾಯಿಸುವುದು

ವಾಟ್ಸಾಪ್ ಚಾಟ್ ಇತಿಹಾಸವನ್ನು ಫೋನ್‌ಗಳ ನಡುವೆ ಬದಲಾಯಿಸುವುದು

ಸಲಹೆ:3

ವಾಟ್ಸಾಪ್ ಇರುವ ಡಿವೈಸ್‌ಗೆ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಸೇರಿಸಿ
ವಾಟ್ಸಾಪ್‌ನಲ್ಲಿ ಸೆಟ್ಟಿಂಗ್ಸ್ > ಚಾಟ್ಸ್ ಏಂಡ್ ಕಾಲ್ಸ್ > ಬ್ಯಾಕಪ್ ಚಾಟ್ಸ್ ಮಾಡಿ
ಎಸ್‌ಡಿ ಕಾರ್ಡ್ ರಿಮೂವ್ ಮಾಡಿ ಮತ್ತು ಇನ್ನೊಂದು ಡಿವೈಸ್‌ಗೆ ಹಾಕಿ
ಇನ್ನೊಂದು ಡಿವೈಸ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿ
ಬ್ಯಾಕಪ್ ಅನ್ನು ವಾಟ್ಸಾಪ್ ಡಿಟೆಕ್ಟ್ ಮಾಡಬೇಕು ಮತ್ತು ಅದನ್ನು ರೀಸ್ಟೋರ್ ಮಾಡಲು ನಿಮ್ಮಲ್ಲಿ ಹೇಳಬೇಕು

ವಾಟ್ಸಾಪ್ ಚಾಟ್‌ಗಳಿಗಾಗಿ ಡೆಸ್ಕ್‌ಟಾಪ್ ಅಧಿಸೂಚನೆಗಳು

ವಾಟ್ಸಾಪ್ ಚಾಟ್‌ಗಳಿಗಾಗಿ ಡೆಸ್ಕ್‌ಟಾಪ್ ಅಧಿಸೂಚನೆಗಳು

ಸಲಹೆ:4

ಪಿಸಿಯಲ್ಲಿ ವಾಟ್ಸಾಪ್ ವೆಬ್ ಇನ್‌ಸ್ಟಾಲ್ ಮಾಡಿ
ವಾಟ್ಸಾಪ್ ವೆಬ್ ಬ್ರೌಸರ್ ವಿಂಡೋದಲ್ಲಿ ಆಪ್ಶನ್ಸ್> ನೋಟಿಫಿಕೇಶನ್ಸ್ ಮತ್ತು ಡೆಸ್ಕ್‌ಟಾಪ್ ಅಲರ್ಟ್ ಟಿಕ್ ಆಗಿದೆ ಎಂಬುದನ್ನು ಖಾತ್ರಿಪಡಿಸಿ
ಕ್ರೋಮ್ ವೆಬ್ ಬ್ರೌಸರ್ WAToolkit ಎಕ್ಸ್‌ಟೆನ್ಶನ್ ಇನ್‌ಸ್ಟಾಲ್ ಮಾಡಿ
ಹಿನ್ನಲೆ ಅಧಿಸೂಚನೆಗಳ ಬಾಕ್ಸ್ ಟಿಕ್ ಮಾಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ಖಾಸಗಿ ಸಂದೇಶಗಳನ್ನು ಬಲ್ಕ್ ಆಗಿ ಕಳುಹಿಸುವುದು

ಖಾಸಗಿ ಸಂದೇಶಗಳನ್ನು ಬಲ್ಕ್ ಆಗಿ ಕಳುಹಿಸುವುದು

ಸಲಹೆ:5

ಬಲ ಮೇಲ್ಭಾಗದಲ್ಲಿರುವ ಆಪ್ಶನ್ ಐಕಾನ್ ಸ್ಪರ್ಶಿಸಿ
ನ್ಯೂ ಬ್ರಾಡ್‌ಕಾಸ್ಟ್ ಸ್ಪರ್ಶಿಸಿ
ನೀವು ಸಂದೇಶ ಕಳುಹಿಸಬೇಕೆಂದಿರುವ ಸಂಪರ್ಕಗಳ ಎಲ್ಲಾ ಹೆಸರನ್ನು ನಮೂದಿಸಿ
ರಚಿಸಿ ಸ್ಪರ್ಶಿಸಿ, ಸಂದೇಶ ಬರೆಯಿರಿ, ಕಳುಹಿಸಿ

ಲಾಸ್ಟ್ ಸೀನ್ ಪ್ರೊಫೈಲ್ ಫೋಟೋ ಸ್ಟೇಟಸ್ ಮರೆಮಾಡಿ

ಲಾಸ್ಟ್ ಸೀನ್ ಪ್ರೊಫೈಲ್ ಫೋಟೋ ಸ್ಟೇಟಸ್ ಮರೆಮಾಡಿ

ಸಲಹೆ:6

ವಾಟ್ಸಾಪ್‌ನ ಬಲಮೇಲ್ಭಾಗದಲ್ಲಿರುವ ಆಪ್ಶನ್ಸ್ ಸ್ಪರ್ಶಿಸಿ
ಸೆಟ್ಟಿಂಗ್ಸ್ > ಅಕೌಂಟ್ > ಪ್ರೈವಸಿ ಗೆ ಹೋಗಿ
ಲಾಸ್ಟ್ ಸೀನ್‌, ಪ್ರೊಫೈಲ್ ಫೋಟೋ ಮತ್ತು ಸ್ಟೇಟಸ್‌ಗೆ ಹೋಗಿ, ನಂತರ ಅವರ ವಿಸಿಬಲಿಟಿಯನ್ನು ಎವ್ರಿಒನ್, ಮೈ ಕಾಂಟಾಕ್ಟ್ಸ್, ಅಥವಾ ನೋಬಡಿ ಗೆ ಹೊಂದಿಸಿಕೊಳ್ಳಿ.

ಕಿರಿಕಿರಿ ಮಾಡುವ ವಾಟ್ಸಾಪ್ ಗ್ರೂಪ್ ಚಾಟ್ಸ್ ಮ್ಯೂಟ್ ಮಾಡಿ

ಕಿರಿಕಿರಿ ಮಾಡುವ ವಾಟ್ಸಾಪ್ ಗ್ರೂಪ್ ಚಾಟ್ಸ್ ಮ್ಯೂಟ್ ಮಾಡಿ

ಸಲಹೆ:7

ವಾಟ್ಸಾಪ್‌ನಲ್ಲಿ, ಚಾಟ್ಸ್ ಟ್ಯಾಬ್ ಸ್ಪರ್ಶಿಸಿ
ನೀವು ಮ್ಯೂಟ್ ಮಾಡಬೇಕೆಂದಿರುವ ಗ್ರೂಪ್ ಸ್ಪರ್ಶಿಸಿ
ಗ್ರೂಪ್ ಓಪನ್‌ನೊಂದಿಗೆ, ಬಲ ಮೇಲ್ಭಾಗದಲ್ಲಿ ಆಪ್ಶನ್ಸ್ ಐಕಾನ್ ಸ್ಪರ್ಶಿಸಿ
ಮ್ಯೂಟ್ ಸ್ಪರ್ಶಿಸಿ, ನೀವು ಎಷ್ಟು ಹೊತ್ತಿನವರೆಗೆ ಗುಂಪನ್ನು ಮ್ಯೂಟ್ ಮಾಡಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳಿ. ಶೋ ನೋಟಿಫಿಕೇಶನ್ ಬಾಕ್ಸ್ ಅನ್ನು ಅನ್‌ಟಿಕ್ ಮಾಡಬಹುದು

ನಿಮ್ಮ ಮೆಚ್ಚಿನ ಚಾಟ್‌ಗಳಿಗೆ ಹೋಮ್ ಸ್ಕ್ರೀನ್ ಶಾರ್ಟ್‌ ಕಟ್ ರಚಿಸಿ

ನಿಮ್ಮ ಮೆಚ್ಚಿನ ಚಾಟ್‌ಗಳಿಗೆ ಹೋಮ್ ಸ್ಕ್ರೀನ್ ಶಾರ್ಟ್‌ ಕಟ್ ರಚಿಸಿ

ಸಲಹೆ:8

ವಾಟ್ಸಾಪ್‌ನಲ್ಲಿ ಚಾಟ್ಸ್ ಟ್ಯಾಬ್ ಸ್ಪರ್ಶಿಸಿ
ಶಾರ್ಟ್‌ಕಟ್ ರಚಿಸಿಬೇಕೆಂದಿರುವ ಸಂವಾದವನ್ನು ಒತ್ತಿಹಿಡಿದುಕೊಳ್ಳಿ
ಆಪ್ಶನ್‌ಗಳ ಪಟ್ಟಿ ತೆರೆಯುತ್ತಿದ್ದಂತೆ ಏಡ್ ಕಾನ್‌ವರ್ಸೇಶನ್ ಶಾರ್ಟ್‌ಕಟ್ ಸ್ಪರ್ಶಿಸಿ
ಸಂಪರ್ಕಗಳ ಪ್ರೊಫೈಲ್ ಚಿತ್ರವನ್ನು ಶಾರ್ಟ್‌ಕಟ್ ಪ್ರದರ್ಶಿಸುತ್ತದೆ ಇದು ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳುತ್ತದೆ.

ಅಳಿಸಿ ಹೋದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ಅಳಿಸಿ ಹೋದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ಸಲಹೆ:9

ನಿಮ್ಮ ಡಿವೈಸ್‌ನಿಂದ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿ
ವಾಟ್ಸಾಪ್ ರೀಇನ್‌ಸ್ಟಾಲ್ ಮಾಡಿ
ವಾಟ್ಸಾಪ್‌ನಲ್ಲಿ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ, ಆಗ ಚಾಟ್‌ಗಳ ಬ್ಯಾಕಪ್ ಆಪ್ಶನ್ ಅನ್ನು ಅದು ನಿಮಗೆ ತೋರಿಸುತ್ತದೆ
ಅಳಿಸಿ ಹೋದ ಸಂದೇಶಗಳನ್ನು ಮರುಪಡೆದುಕೊಳ್ಳಲು ರೀಸ್ಟೋರ್ ಸ್ಪರ್ಶಿಸಿ

ವಾಟ್ಸಾಪ್ ಬ್ಯಾಕ್‌ಗ್ರೌಂಡ್ ಬದಲಾಯಿಸುವುದು ಹೇಗೆ

ವಾಟ್ಸಾಪ್ ಬ್ಯಾಕ್‌ಗ್ರೌಂಡ್ ಬದಲಾಯಿಸುವುದು ಹೇಗೆ

ಸಲಹೆ:10

ವಾಟ್ಸಾಪ್‌ನಲ್ಲಿ, ಆಪ್ಶನ್ಸ್ ಬಟನ್ ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್ ಒತ್ತಿರಿ
ಚಾಟ್ಸ್ ಮತ್ತು ಕಾಲ್ಸ್ ಸ್ಪರ್ಶಿಸಿ
ವಾಲ್‌ಪೇಪರ್ ಸ್ಪರ್ಶಿಸಿ
ವಾಟ್ಸಾಪ್ ಸ್ಪರ್ಶಿಸಿ, ವಾಲ್‌ಪೇಪರ್, ಡಾಕ್ಯುಮೆಂಟ್ಸ್ ಡೌನ್‌ಲೋಡ್ ಮಾಡಲು ಅಂತೆಯೇ ನಿಮ್ಮದೇ ಚಿತ್ರಗಳನ್ನು ವೀಕ್ಷಿಸಲು ಈಗ ಸಾಧ್ಯ.
ಇಮೇಜ್ ಆಯ್ಕೆಮಾಡಿ ಮತ್ತು ವಾಲ್‌ಪೇಪರ್ ಹೊಂದಿಸಿ

ಫಾಂಟ್ ಗಾತ್ರ ಬದಲಾವಣೆ

ಫಾಂಟ್ ಗಾತ್ರ ಬದಲಾವಣೆ

ಸಲಹೆ:11

ವಾಟ್ಸಾಪ್‌ನಲ್ಲಿ, ಆಪ್ಶನ್ ಬಟನ್‌ಗಳನ್ನು ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್ ಟ್ಯಾಪ್ ಮಾಡಿ
ಚಾಟ್ಸ್ ಮತ್ತು ಕಾಲ್ಸ್ ಟ್ಯಾಪ್ ಮಾಡಿ
ಫಾಂಟ್ ಗಾತ್ರ ಸ್ಪರ್ಶಿಸಿ
ಬೇಕಾದ ಫಾಂಟ್ ಗಾತ್ರವನ್ನು ಆಯ್ಕೆಮಾಡಿ

ಬ್ಲ್ಯೂಟಿಕ್ಸ್ ಮರೆಮಾಡಿ

ಬ್ಲ್ಯೂಟಿಕ್ಸ್ ಮರೆಮಾಡಿ

ಸಲಹೆ:12

ವಾಟ್ಸಾಪ್‌ನಲ್ಲಿ, ಆಪ್ಶನ್‌ಗಳನ್ನು ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ
ಖಾತೆ ಸ್ಪರ್ಶಿಸಿ
ಪ್ರೈವಸಿ ಸ್ಪರ್ಶಿಸಿ
ರೀಡ್ ರಿಸಿಪ್ಟ್ ಬಾಕ್ಸ್ ಅನ್‌ಟಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
we've decided to chalk up a list of WhatsApp tips and tricks to help our Gizbot readers get the most out of it.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot